ಅನಿವಾಸಿ ಉದ್ಯಮಿ ಬಿ. ಆರ್ ಶೆಟ್ಟಿಗೆ ಸಂಕಷ್ಟದ ಮೇಲೆ ಸಂಕಷ್ಟ; 106 ಮಿಲಿಯನ್ ಡಾಲರ್ ಸಾಲ ಪಾವತಿಸಲು ದುಬೈ ನ್ಯಾಯಾಲಯ ಆದೇಶ

ಭಾರತದ ಅನಿವಾಸಿ ಉದ್ಯಮಿ, ಯುಎಇ ಕಂಪನಿ ಎನ್ ಎಂ ಸಿ ಹೆಲ್ತ್ ಸಂಸ್ಥಾಪಕ ಬಿ ಆರ್ ಶೆಟ್ಟಿಗೆ ಭಾರತದ ಐಸಿಐಸಿಐ ಬ್ಯಾಂಕ್ ಗೆ 106 ಮಿಲಿಯನ್ ಡಾಲರ್ ಪಾವತಿಸುವಂತೆ ದುಬೈ ನ್ಯಾಯಾಲಯ ಆದೇಶ ನೀಡಿದೆ. ಯುಎಇಯಾದ್ಯಂತ 85 ವೈದ್ಯಕೀಯ ಸೌಲಭ್ಯಗಳನ್ನು ನಿರ್ವಹಿಸುತ್ತಿರುವ ಎನ್ ಎಂ ಸಿ 2022 ರಲ್ಲಿ ಅಬುಧಾಬಿ ಕಮರ್ಷಿಯಲ್ ಬ್ಯಾಂಕ್ ನೇತೃತ್ವದ $4 ಬಿಲಿಯನ್ ಸಾಲ ಪುನರ್ರಚನೆ ನಂತರ ಆಡಳಿತದಿಂದ ಹೊರಬಂದಿತ್ತು. $963 ಮಿಲಿಯನ್ ಬಾಕಿ ಇತ್ತು. ಎನ್ ಎಂ ಸಿ ಹೆಲ್ತ್ ಕೇರ್ […]

Continue Reading

ಹಣಕ್ಕಾಗಿ ದೈವನರ್ತಕನಿಗೆ ಪೀಡನೆ, ಬೆದರಿಕೆ, ಖಾಲಿ ಚೆಕ್ ಪಡೆದು ಬ್ಲ್ಯಾಕ್ ಮೇಲ್, ಅತ್ಯಾಚಾರ ಕೇಸು ದಾಖಲಿಸಿ ಜೈಲಿಗೆ ಹಾಕಿಸುವ ಆರೋಪ.

ವಿಟ್ಲದ ದಲಿತ ಮುಖಂಡ ಸೇಸಪ್ಪ ಬೆದ್ರಕಾಡು ವಿರುದ್ಧ ಪ್ರಕರಣ ದಾಖಲಿಸುವಂತೆ ವಿಟ್ಲ ಪೊಲೀಸರಿಗೆ ಬಂಟ್ವಾಳ ನ್ಯಾಯಾಲಯ ಆದೇಶ. ವಿಟ್ಲದ ದಲಿತ ಸೇವಾ ಸಮಿತಿಯ ಮುಖಂಡ ಸೇಸಪ್ಪ ಬೆದ್ರಕಾಡು ವಿರುದ್ಧ ಕಸಬಾ ಗ್ರಾಮದ ಸುರುಳಿಮೂಲೆ ನಿವಾಸಿ ದೈವನರ್ತಕ ಆನಂದ ಎಸ್.ಎಂಬವರು ಬಂಟ್ವಾಳ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು‌. ನಾಟಿ ವೈದ್ಯ, ಜ್ಯೋತಿಷ್ಯದ ಜೊತೆಗೆ ದೈವನರ್ತಕರಾಗಿರುವ ಆನಂದ ಅವರು ವಿಟ್ಲದ ನೆಕ್ಕರೆ ಕಾಡು ನಿವಾಸಿ ಕಮಲ ಎಂಬವರ ಮನೆಯಲ್ಲಿ ಕೋರಿಕೆಯ ಮೇರೆಗೆ ಮಾನಸಿಕ ಶಾಂತಿ ಹಾಗೂ ಅಭಿವೃದ್ಧಿಗಾಗಿ ಧಾರ್ಮಿಕ ಕಾರ್ಯ […]

Continue Reading

ಸುಂದರ ಮಲೆಕುಡಿಯ ಕೈ ಕಡಿದ ಪ್ರಕರಣ; ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿದ ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ

ಸುಮಾರು ಹತ್ತು ವರ್ಷಗಳ ಹಿಂದೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ನೆರಿಯ ಗ್ರಾಮದ ಕಾಟಾಜೆ ಎಂಬಲ್ಲಿ ನಡೆದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಬುಧವಾರ ನಾಲ್ಕು ಮಂದಿ ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗೋಪಾಲ ಗೌಡ ಯಾನೆ ಗೋಪಾಲಕೃಷ್ಣ ಗೌಡ, ಮಂಗಳೂರಿನ ಕುಡುಪು ಪಾಲ್ಡನೆಯ ಎ.ದಮಯಂತಿ, ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ವಸಂತ ಗೌಡ ಯಾನೆ ರಾಮಣ್ಣ ಗೌಡ, ನೆರಿಯ ಗ್ರಾಮದ […]

Continue Reading

ಡ್ರೈನೇಜ್ ಅವ್ಯವಸ್ಥೆ ಹಾಗೂ ತಡೆಗೋಡೆ ಭೀತಿಯಿಂದ ಬೆಳ್ಮ ಗ್ರಾಮಸ್ಥರಿಂದ ಪಂಚಾಯತ್ ಕಚೇರಿಯೆದುರು ಪ್ರತಿಭಟನೆ

ಕುಸಿತದ ಭೀತಿಯಲ್ಲಿರುವ ಪೆಟ್ರೋಲ್ ಪಂಪ್ ನ ತಡೆಗೋಡೆ ಹಾಗೂ ಅನುಮತಿಯಿಲ್ಲದ ಬಹುಮಹಡಿ ಕಟ್ಟಡಗಳಿಂದ ಬಹಿರಂಗವಾಗಿ ಹರಿಯುತ್ತಿರುವ ಡ್ರೈನೇಜ್ ನೀರಿನಿಂದಾಗಿ ತೊಂದರೆಗೀಡಾಗಿರುವ ಬೆಳ್ಮ ಗ್ರಾಮದ ಕಾನೆಕೆರೆ ನಾಗರಿಕರಿಂದ ಬೆಳ್ಮ ಗ್ರಾಮ ಪಂಚಾಯತ್ ಕಚೇರಿಯೆದುರು ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಗ್ರಾಮಸ್ಥರು ಹೋರಾಟ ಸಮಿತಿಯ ನೇತ್ರತ್ವದಲ್ಲಿ ಜನವಿರೋಧಿಯಾಗಿ ವರ್ತಿಸುತ್ತಿರುವ ಬೆಳ್ಮ ಗ್ರಾಮ ಪಂಚಾಯತ್, PWD ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು. ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲೆಯ ಕಾರ್ಮಿಕ ಮುಖಂಡರೂ, ಹೋರಾಟ ಸಮಿತಿಯ […]

Continue Reading

ಮಹಿಳಾ ಯಕ್ಷಗಾನ ತಂಡಗಳು ಪ್ರಾರಂಭವಾಗುತ್ತಿರುವುದು ಕಲೆಗೆ ಹೆಚ್ಚಿನ ಶಕ್ತಿ ತುಂಬಿದೆ : ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಅಭಿಮತ

ಉಡುಪಿ : ಯಕ್ಷಗಾನ ಕರಾವಳಿಯ ಮಣ್ಣಿನ ಕಲೆ. ಇದರ ಬಗ್ಗೆ ಕೀಳರಿಮೆ ಬಿಟ್ಟು, ಅಬಾಲವೃದ್ಧರಾಗಿ ಯಕ್ಷಗಾನವನ್ನು ಆರಾಧಿಸುವ ಲಕ್ಷಾಂತರ ಮಂದಿ ಯಕ್ಷಗಾನ ಪ್ರೇಮಿಗಳಿದ್ದಾರೆ. ಅದರಲ್ಲೂ ಮಹಿಳಾ ಯಕ್ಷಗಾನ ತಂಡಗಳು ಪ್ರಾರಂಭಗೊಳ್ಳುತ್ತಿರುವುದು ಯಕ್ಷಗಾನ ಕಲೆಗೆ ಹೆಚ್ಚಿನ ಶಕ್ತಿ ತುಂಬಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಮಂಗಳವಾರ ಮಂಗಳೂರಿನ ಸಮತಾ ಮಹಿಳಾ ಬಳಗದ ಆಶ್ರಯದಲ್ಲಿ ಮಂಗಳೂರು ಜೈಲ್ ರೋಡ್‌ನ ಸುಬ್ರಹ್ಮಣ್ಯ ಸಭಾ ಭವನದಲ್ಲಿ ಯಕ್ಷ ಮಂಜುಳಾ ಕದ್ರಿ ಬಳಗದಿಂದ ಮಹಿಳಾ ಯಕ್ಷಗಾನ […]

Continue Reading

ಉಳಾಯಿಬೆಟ್ಟು, ನಾರ್ಶ ದರೋಡೆ ಪ್ರಕರಣ ‘ಆಪ್ತರೇ’ ಆರೋಪಿಗಳು.! ಕೋಟೆಕಾರ್ ದರೋಡೆ ಪ್ರಕರಣ ಭೇದಿಸಲು ಪೊಲೀಸರು ವಿಫಲರಾದ್ರ.?

ಮನೆಮಗನಂತೆ ನೋಡಿಕೊಂಡವರಿಗೆ ‘ವಿಶ್ವಾಸಘಾತುಕ’ ರಾದರು.! ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರಿಗೆ ಎಲ್ಲ ಕಡೆಯಿಂದಲೂ ಶಹಬ್ಬಾಸ್ ಗಿರಿ ಸಿಗುತ್ತಿದೆ. ಅದಕ್ಕೆ ಕಾರಣ ಅವರು ಹಿಡಿದಿರುವ ಮಿಕವೊಂದು! ಅದು ಅಂತಿಂಥ ಮಿಕವಲ್ಲ. ಪೊಲೀಸ್ ಸಮವಸ್ತ್ರದಲ್ಲಿದ್ದ ‘ಕೇಡಿ’ ಪೊಲೀಸ್. ಬಂಟ್ವಾಳ ನಾರ್ಶ ಸಿಂಗಾರಿ ಬೀಡಿ ಮಾಲಿಕರ ಮನೆ ದರೋಡೆ ಪ್ರಕರಣಕ್ಕೆ ಜಿಲ್ಲಾ ಪೊಲೀಸರು ತಾರ್ಕಿಕ ಅಂತ್ಯ ಕಾಣಿಸಿದ್ದಾರೆ. ದರೋಡೆಯ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದ ಮಲಯಾಳಿ ಎಎಸ್ ಐ ಕೈಗೆ ಕೋಳ ತೊಡಿಸಿದ್ದಾರೆ. ಜೊತೆಗೆ ದರೋಡೆಯ ಹಿಂದಿದ್ದ ಎಲ್ಲಾ ಸೂತ್ರಧಾರಿಗಳನ್ನು ಒದ್ದು ಒಳಗೆ […]

Continue Reading

ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯನಿಂದಲೇ ಸರ್ಕಾರಿ ಜಮೀನು ಅತಿಕ್ರಮಣ. ಎಗ್ಗಿಲ್ಲದೇ ನಡೆಯುತ್ತಿದೆ ಪಂ.ಸದಸ್ಯನ ಆಟಾಟೋಪ.

ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಸ.ನಂ.327ರ ಸರ್ಕಾರಿ ಜಮೀನನ್ನು ಕೈ ನಾಯಕನೆಂದು ತನ್ನ ಬೆನ್ನು ತಾನೇ ತಟ್ಟಿಕೊಳ್ಳುವ ಪಂಚಾಯತ್ ಸದಸ್ಯ ಬಾರೆಬೆಟ್ಟು ರಾಜೇಶ್ ಗೌಡ ಎಂಬಾತ ಕಾನೂನಿನ ಮುಲಾಜಿಲ್ಲದೇ ಸರ್ಕಾರಿ ಜಮೀನು ಅತಿಕ್ರಮಣವಾಗಿದೆ. ಈ ಬಗ್ಗೆ ಸಾರ್ವಜನಿಕರು ನೀಡಿದ ದೂರಿಗೆ ಸಂಬಂಧಿಸಿದಂತೆ ವಿಟ್ಲ ಕಂದಾಯ ಅಧಿಕಾರಿಗಳು ಸ್ಥಳಕ್ಕಾಗಮಿಸಿದಾಗ ಸರ್ಕಾರಿ ಜಮೀನಿನಲ್ಲಿ ಹಿಟಾಚಿ ಯಂತ್ರದಿಂದ ಅತಿಕ್ರಮಣ ಮಾಡಿರುವುದು ಸ್ಪಷ್ಟವಾಗಿದೆ. ಕಂದಾಯ ನಿರೀಕ್ಷಕರು ಮತ್ತು ಪೊಲೀಸರು ಪಂ.ಸದಸ್ಯ ರಾಜೇಶ್ ಗೌಡನ ಅತಿಕ್ರಮಣ ತಡೆದು ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಬಂಟ್ವಾಳ […]

Continue Reading

ಮೂಡ ಕಮೀಷನರ್ ಖಡಕ್ ರಿಯಾಕ್ಷನ್.! ಶಿಕ್ಷಣ ಉದ್ಯಮಿಯ 5 ಲಕ್ಷ ಗೋವಿಂದ.?

ಮೂಪ, ಚೇಲಾಗಳು ಹಂಚಿ ತಿಂದರು. ಗಡದ್ದಾಗಿ ನಿದ್ರೆಗೆ ಜಾರಿದರು..! ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡ) ದ ಸ್ವಾಹಾ ಪುರಾಣ ಬಗೆದಷ್ಟು ಬಿಚ್ಚಿಡುತ್ತಿದೆ! ಮೂಡ ಅಧಿಕಾರಿಗಳ ಅಮೇಧ್ಯ ತಿನ್ನುವ ಕಥೆ ಒಂದೆಡೆಯಾದರೆ, ಮೂಡಕ್ಕೆ ಸರಕಾರದಿಂದಲೇ ಆಯ್ಕೆಯಾಗಿ ಬಂದ ಮೂಪ, ಚೇಲಾ ಗಳದ್ದು ಇನ್ನೊಂದು ಕಥೆ.!ಅಬ್ಬಬ್ಬಾ..ಮೂಡ ರಣಹಸಿವಿಗೆ ಪುಲಿಸ್ಟಾಪ್ ಬೀಳುವಂತೆ ಕಾಣುತ್ತಿಲ್ಲ. ಮೂಡ ಕಮೀಷನರ್ ಆಗಿ ಬಂದಿರುವ ಗಟ್ಟಿಗಿತ್ತಿ ಮಹಿಳೆ ಇತ್ತೀಚಿನ ದಿನಗಳಲ್ಲಿ ಮೂಡಕ್ಕೆ ಖಡಕ್ ಸರ್ಜರಿ ಮಾಡುತ್ತಿದ್ದಾರೆ. ಮೂಡದಲ್ಲಿ ಹಲವಾರು ಪ್ರಕರಣಗಳು ನಡೆದ ನಂತರ ಎಚ್ಚೆತ್ತುಕೊಂಡ ಆಯುಕ್ತೆ ಬ್ರೋಕರ್ […]

Continue Reading

ಮಂಗಳೂರು: ಸೇತುವೆ, ಡ್ಯಾಂಗಳನ್ನು ಅಪಾಯಕ್ಕೆ ಒಡ್ಡಿರುವ ಅಕ್ರಮ ಮರಳು ದಂಧೆ

ಎಡ-ಬಲ ಇರುವವರ ಮೇಲೆ ಮೊದಲು ಕಣ್ಣಿಡಿ, ಯೋಗ್ಯರನ್ನು ಎಡ-ಬಲದಲ್ಲಿ ಇಟ್ಟುಕೊಳ್ಳಿ ಉಸ್ತುವಾರಿ ಸಚಿವರೇ : ಮುನೀರ್ ಕಾಟಿಪಳ್ಳ ಮಂಗಳೂರಿನಲ್ಲಿ ಉತ್ತುಂಗ ತಲುಪಿರುವ, ಸೇತುವೆ, ಡ್ಯಾಂಗಳನ್ನು ಅಪಾಯಕ್ಕೆ ಒಡ್ಡಿರುವ ಅಕ್ರಮ ಮರಳು ದಂಧೆಯ ಕುರಿತು ಜಿಲ್ಲಾ ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು “ಗಣಿ ಮತ್ತು ಭೂ ವಿಜ್ಞಾನ ಇಲಾಖೆ” ಯ ಮಹಿಳಾ ಅಧಿಕಾರಿಯನ್ನು ಹೊಣೆಯಾಗಿಸಿ ತರಾಟೆಗೆ ತೆಗೆದುಕೊಂಡದ್ದನ್ನು ಕಂಡು ಅಚ್ಚರಿಯಾಯ್ತು. ಸಚಿವರು ಗಣಿ ಇಲಾಖೆಯ ಮಹಿಳಾ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳುವಾಗ ಮಂಗಳೂರು ನಗರ ಪೊಲೀಸ್ […]

Continue Reading

ಕುಂದಾಪುರ ಪುರಸಭೆ: ಕಂಸಾಸುರರು.!

ಉಡುಪಿ ಜಿಲ್ಲೆಯಲ್ಲಿ ಕುಂದಾಪುರಕ್ಕೊಂದು ಅಗ್ರಗಣ್ಯ ಸ್ಥಾನವಿದೆ. ಬ್ರಹ್ಮಾವರ, ಕಾರ್ಕಳ, ಹೆಬ್ರಿ, ಬೈಂದೂರು, ಕಾಪು ತಾಲೂಕಿಗಿಂತ ಕುಂದಾಪುರ ತಾಲೂಕು ಹೆಚ್ಚು ಪ್ರಸಿದ್ಧಿ ಪಡೆದ ತಾಲೂಕು. ಕುಂದಾಪುರದ ಶಾಸ್ತ್ರೀ ಸರ್ಕಲ್ ರಾಜ್ಯದಲ್ಲೇ ಹೆಸರುವಾಸಿ. ಹಲವಾರು ಉದ್ದಿಮೆಗಳು, ಪ್ರವಾಸೋದ್ಯಮ ತಾಣಗಳು, ತಲೆ ಎತ್ತುತ್ತಿರುವ ಅಪಾರ್ಟ್ ಮೆಂಟ್ ಗಳು ಒಳ್ಳೆಯ ಆದಾಯವನ್ನು ತಂದಿಡುತ್ತಿದೆ. ರಕ್ಷಕರೆ ಭಕ್ಷಕರಾದರೆ ಏನಾಗಬಹುದು? ಅದೆಲ್ಲವೂ ಇಲ್ಲಿ ಮಾಮೂಲಿಯಾಗಿಬಿಟ್ಟಿದೆ. ಕುಂದಾಪುರ ಪುರಸಭೆ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆಯಂತಾಗಿದೆ. ಇಲ್ಲಿಗೆ ಬಂದಿರುವ ಆನಂದನೆಂಬ ಮುಖ್ಯಾಧಿಕಾರಿ ಕುಂದಾಪುರದ ಜನತೆಗೆ ಪರಮಾನಂದವೇನೂ ಕೊಟ್ಟಿಲ್ಲ. ಬರೀ […]

Continue Reading