ಬ್ಯಾರಿ ಭಾಷೆಗ್ ‘ಮಲಾಮೆ’ ಮಲಾಮತ್ತವಾ.?

ಕೊಡಗನ ಕೋಳಿ ನುಂಗಿತ್ತಾ.. ಬ್ಯಾರಿ ಭಾಷೆಯ ಮಲಾಮೆ ನುಂಗುತ್ತಾ.!! ಕೊಡಗನ ಕೋಳಿ ನುಂಗಿತ್ತಾ ಅನ್ನುವ ಗಾದೆ ಮಾತಿನಂತೆ ಬ್ಯಾರಿ ಭಾಷೆಯನ್ನು ಮಲಾಮೆ ನುಂಗಬಹುದಾ ಅನ್ನುವ ಆತಂಕ ಇದೀಗ ಬ್ಯಾರಿ ಸಮುದಾಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಬ್ಯಾರಿಗಳು ತುಳುನಾಡು ಎಂದು ಹಿಂದೆ ಕರೆಯಲಾಗುತ್ತಿದ್ದ ಕರ್ನಾಟಕದ ಈಗಿನ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ವಾಸವಾಗಿರುವ ಒಂದು ಮುಸ್ಲಿಮ್ ಜನಾಂಗ. ಅವರು ತಮ್ಮದೇ ಆದ ವಿಶಿಷ್ಟ ಸಂಪ್ರದಾಯ ಮತ್ತು ಸಾಂಸ್ಕೃತಿಕ ಅನನ್ಯತೆಯನ್ನು ಹೊಂದಿರುವ ಒಂದು ಸಾಮಾಜಿಕ ಪಂಗಡ. ಬ್ಯಾರಿಗಳಿಗೆ ಕೊಂಕಣ […]

Continue Reading

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರಿಂದ ಕಿರುಕುಳ; ಗೃಹಿಣಿ ಮಹಾಲಕ್ಷ್ಮೀ ನೇಣು ಬಿಗಿದು ಆತ್ಮಹತ್ಯೆ, ದೂರು ದಾಖಲು

ಮಳವಳ್ಳಿ ಮಲಿಯೂರಿನ ಗೃಹಿಣಿ ಮಹಾಲಕ್ಷ್ಮಿ ಎಂಬವರು ಬುಧವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಲದ ಕಂತಿನ ಹಣ ತುಂಬುವಂತೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು ನೀಡಿದ ಕಿರುಕುಳವೇ ಕಾರಣ ಎಂದು ಅವರ ಗಂಡ ಮಲ್ಲು ಕಿರುಗಾವಲು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತ್ನಿಯು ಐದು ತಿಂಗಳ ಹಿಂದೆ ಧರ್ಮಸ್ಥಳ ಸಂಘದಲ್ಲಿ ರೂಪಾಯಿ ಎರಡು ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಪ್ರತಿ ಬುಧವಾರ ರೂಪಾಯಿ 1,700 ರಂತೆ ಕಂತು ತುಂಬಬೇಕಿತ್ತು. ಸಂಸ್ಥೆಯ ಪ್ರತಿನಿಧಿಯೊಬ್ಬರು ಮನೆಯ ಬಳಿ ಬಂದು ಕೂಡಲೇ ಕಂತಿನ ಹಣ […]

Continue Reading

ಮಂಗಳೂರು ಮೂಡಕ್ಕೆ ಹೋದವರು ‘ಮೂಢರು’

ಮುಡಾ.. ಡೀಲ್.. ದರ್ಬಾರ್! ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಲಂಚ ಮುಕ್ತ ಪ್ರಾಧಿಕಾರ ಅನ್ನುವುದು ಕನಸಿನ ಮಾತು. ಮಂಗಳೂರು ಮೂಡಕ್ಕೆ ಹೋದವರು ‘ಮೂಢರು’ ಅನ್ನುವ ಪರಿಸ್ಥಿತಿ ಇದೆ. ಮಂಗಳೂರು ಮೂಡಕ್ಕೆ ಯಾವುದೇ ಒಂದು ಫೈಲ್ ಹೋದ್ರೆ ಸಾಕು, ಆ ಫೈಲ್ ಕ್ಲಿಯರ್ ಆಗಬೇಕಾದರೆ ಅದಕ್ಕೆ ಸಂಬಂಧಪಟ್ಟವರಿಗೆ ಇಂತಿಷ್ಟು ಕಾಣಿಕೆ ಕೊಟ್ಟ ಮೇಲೆಯೇ, ಆ ಫೈಲ್ ಕ್ಲಿಯರ್ ಆಗುವುದು ಅನ್ನುವುದು ಸತ್ಯವಾದ ಮಾತು. ದಲ್ಲಾಳಿಗಳು ಇಲ್ಲದೆ ಮೂಡಾದಲ್ಲಿ ಯಾವುದೇ ಫೈಲ್ ಕ್ಲಿಯರ್ ಆಗುವುದಿಲ್ಲ. ಮೂಡಾದ ಆಯುಕ್ತರಿಂದ ಹಿಡಿದು ಅವರ ಕೈ […]

Continue Reading

ವಿನಾಶದತ್ತ ಭಜರಂಗದಳ: ಈದ್ ಮಿಲಾದ್ ಊರುಗೋಲು !

2013 ರಿಂದ ಮಕಾಡೆ ಮಲಗಿರುವ ಭಜರಂಗದಳವನ್ನು ಎದ್ದು ಕೂರಿಸಲು ಸಂಘಪರಿವಾರ ಪ್ರಯತ್ನಿಸುತ್ತಿದೆ. ✍️. ನವೀನ್ ಸೂರಿಂಜೆ, ಪತ್ರಕರ್ತರು “ಈದ್ ಮಿಲಾದ್ ಅನ್ನು ಮುಸ್ಲಿಂ ಮೂಲಭೂತವಾದಿಗಳೂ ವಿರೋಧ ಮಾಡುತ್ತಾರೆ. ಹಾಗಾಗಿ ನಾವು ಈದ್ ಮಿಲಾದ್ ವಿಷಯವನ್ನು ಕೈಗೆತ್ತಿಕೊಳ್ಳಬಾರದಿತ್ತು” ಎಂದು ಭಜರಂಗದಳದ ಒಳಗಡೆ ಆಂತರಿಕ ಚರ್ಚೆ ನಡೆಯುತ್ತಿದೆ. ‘ಸಂಘಟನೆಗೆ ಹುಮ್ಮಸ್ಸು ಕೊಡುವ ದೃಷ್ಟಿಯಿಂದ ಮುಸ್ಲೀಮರ ಮುಖಾಮುಖಿ ಆಗಬೇಕಿತ್ತು. ಆ ಕಾರಣಕ್ಕಾಗಿ ನಾವು ಈದ್ ಮಿಲಾದ್ ಟಾರ್ಗೆಟ್ ಮಾಡಬೇಕಾಯಿತು’ ಎಂದು ಹಿಂದುತ್ವದ ನಾಯಕರು ಭಜರಂಗದಳದ ಸಾಮಾನ್ಯ ಕಾರ್ಯಕರ್ತರನ್ನು ಸಮಾಧಾನ ಮಾಡಿದ್ದಾರೆ. ಈವರೆಗೆ […]

Continue Reading

ಈದ್ ಮಿಲಾದ್ ಮೆರವಣಿಗೆಗೆ ಮುತ್ತಿಗೆ ಹಾಕುವ ಸಂಘಪರಿವಾರದ “ಬಿ. ಸಿ ರೋಡ್ ಚಲೋ” ಕೋಮು ಪ್ರಚೋದಕ

ಮತೀಯ ಕೊಲೆ, ಹಲ್ಲೆ ಪ್ರಕರಣದ ಅಪಾಯಕಾರಿ ವ್ಯಕ್ತಿಗಳು ಇದ್ದರೂ, ಪೊಲೀಸ್ ಇಲಾಖೆ ಪ್ರತಿಭಟನಾ ಸಭೆ ಎಂದು ಸ್ಥಳದಲ್ಲೇ ಪರಿಗಣಿಸಿ ಅವಕಾಶ ಒದಗಿಸಿದ್ದು ನಿಜಕ್ಕೂ ಆಘಾತಕಾರಿ ಸಂಗತಿ. ಕಾಮ್ರೇಡ್ ಮುನೀರ್ ಕಾಟಿಪಳ್ಳ ಬಿ ಸಿ ರೋಡ್ ನಲ್ಲಿ ಈದ್ ಮಿಲಾದ್ ಮೆರವಣಿಗೆಗೆ ಮುತ್ತಿಗೆ ಹಾಕುವ ಸಂಘಪರಿವಾರದ “ಬಿ ಸಿ ರೋಡ್ ಚಲೋ” ಕೋಮು ಪ್ರಚೋದಕ ಗುಂಪಿನಲ್ಲಿ ವರ್ಷಗಳ ಹಿಂದೆ ಬಂಟ್ವಾಳದ ಕಲಾಯಿ ಎಂಬಲ್ಲಿ ನಡೆದ ಮುಸ್ಲಿಂ ಯುವಕನ ಕೊಲೆ ಪ್ರಕರಣದ ಆರೋಪಿಗಳು ಮತ್ತು ಹಲವು ಕ್ರಿಮಿನಲ್ ಪ್ರಕರಣಗಳ ಆರೋಪಿಗಳು […]

Continue Reading

ಹಾಡಹಗಲೇ ಮನೆಗೆ ನುಗ್ಗಿದ ಚೋರರಿಂದ ಚಿನ್ನಾಭರಣ ಕಳ್ಳತನ; ವಿಟ್ಲ ಠಾಣಾ ವ್ಯಾಪ್ತಿಯ ಕುಂಟುಕುಡೇಲು ಎಂಬಲ್ಲಿ ಕಳ್ಳರ ಕರಾಮತ್ತು.

ವಿಟ್ಲ ಠಾಣಾ ವ್ಯಾಪ್ತಿಯ ವಿಟ್ಲ ಪಡ್ನೂರು ಗ್ರಾಮದ ಕುಂಟುಕುಡೇಲು ಎಂಬಲ್ಲಿ ತೀರಾ ಬಡಕುಟುಂಬದ ದಿ. ಸದಾಶಿವ ನಾಯ್ಕರ ಪತ್ನಿ ಲೀಲಾ ಮತ್ತು ಪುತ್ರಿ ಪೇಟೆಗೆ ಹೋಗಿದ್ದ ಸಂದರ್ಭ ಹಿಂಬದಿಯ ಬಾಗಿಲು ಮುರಿದು ಚೋರರು ಒಳನುಗ್ಗಿದ್ದಾರೆ.ಮಧ್ಯಾಹ್ನ ಪೇಟೆಯಿಂದ ಹಿಂತಿರುಗುವಷ್ಟರಲ್ಲಿ ಬ್ಯಾಗಲ್ಲಿಟ್ಟಿದ್ದ ಮೂರು ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ಪತಿ ಮರಣಾನಂತರ ಬಡಕುಟುಂಬದ ಲೀಲಾ ನಾಯ್ಕ ಅವರ ಪುತ್ರಿ ಚೈತ್ರಾ ಟೈಲರಿಂಗ್ ವೃತ್ತಿ ಮಾಡುತ್ತಾ ಬದುಕುತ್ತಿದ್ಜರು. ಚೈತ್ರಾ ಅವರಿಗೆ ಕೆಲದಿನಗಳ ಹಿಂದಷ್ಟೇ ವಿವಾಹ ನಿಶ್ಚಿತಾರ್ಥವಾಗಿದ್ದು ಇದ್ದ ಚಿನ್ನಾಭರಣವೂ ಕಳ್ಳರು ಹೊತ್ತೊಯ್ದಿದ್ದಾರೆ. […]

Continue Reading

ಕಾಂಗ್ರೆಸ್ ನಾಯಕರಾರ ಹಸೈನಾರ್, ಶೆರೀಫ್ ರನ್ನು FIR ದಾಖಲಿಸಿ ಬಂಧಿಸಿದಿರಿ. ಶರಣ್ ಪಂಪ್ ವೆಲ್, ಪುನೀತ್ ಅತ್ತಾವರರನ್ನು ಯಾಕೆ ಬಂಧಿಸಲಿಲ್ಲ ?

ಪೊಲೀಸ್ ಇಲಾಖೆ ಉತ್ತರಿಸಬೇಕು. ಮುಸ್ಲಿಮರು ಈ ರೀತಿ ವರ್ತಿಸಿದ್ದರೆ ನಿಮ್ಮ (ಪೊಲೀಸರ) ಪ್ರತಿಕ್ರಿಯೆ ಹೀಗೆಯೆ ಇರುತ್ತಿತ್ತೆ ? ಮುನೀರ್ ಕಾಟಿಪಳ್ಳ ಈದ್ ಮಿಲಾದ್ ತಡೆಯುತ್ತೇನೆ ಅಂದ ಶರಣ್ ಪಂಪ್ ವೆಲ್ ಗೆ ಸವಾಲಿನ ಸಂದೇಶ ಕಳುಹಿಸಿದ ಕಾಂಗ್ರೆಸ್ ನಾಯಕರಾರ ಹಸೈನಾರ್, ಶೆರೀಫ್ ರನ್ನು FIR ದಾಖಲಿಸಿ ಬಂಧಿಸಿದಿರಿ. ಅದೇ ಸಂದರ್ಭ ಮತೀಯ ದ್ವೇಷದ ಸವಾಲಿನ ಹೇಳಿಕೆಗಾಗಿ FIR ದಾಖಲಾಗಿರುವ ಶರಣ್ ಪಂಪ್ ವೆಲ್, ಪುನೀತ್ ಅತ್ತಾವರರನ್ನು ಯಾಕೆ ಬಂಧಿಸಲಿಲ್ಲ ? ಈದ್ ಮಿಲಾದ್ ಮೆರವಣಿಗೆ ತಡೆಯಲು ಗುಂಪು […]

Continue Reading

ಪೈಪ್ ಲೈನ್ ಎಡವಟ್ಟಿನಿಂದ ರಸ್ತೆಯಲ್ಲಿ ಗುಂಡಿ; ಗುಂಡಿಯಿಂದಾಗಿ ರಸ್ತೆಗೆ ಬಿದ್ದ ಆಕ್ಟಿವಾ.. ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವು.

ವಿಟ್ಲ-ಸಾಲೆತ್ತೂರು ರಸ್ತೆಯ ಕೊಳ್ನಾಡು ಪಂ.ವ್ಯಾಪ್ತಿಯ ತಾಮರಾಜೆ ಮಸೀದಿ ಮುಂಭಾಗದಲ್ಲಿ ಇದೇ 10ರಂದು ಮಂಗಳವಾರ ರಾತ್ರಿ ನಡೆದಿದ್ದ ರಸ್ತೆ ಅಪಘಾತ. ಸಾಲೆತ್ತೂರಿನಲ್ಲಿರುವ ಪ್ರಸಿದ್ಧ ವೈದ್ಯರ ಬಳಿ ಪುತ್ತೂರಿನಿಂದ ಸಂಬಂಧಿಕನ ಜೊತೆ ಆಕ್ಟಿವಾದಲ್ಲಿ ಬರುತ್ತಿದ್ದ ಕೋಡಿಂಬಾಡಿ ದಾರಂದಕುಕ್ಕು ನಿವಾಸಿ ಧರ್ಮಪಾಲ ಗೌಡರ ಪತ್ನಿ ಸುಂದರಿ(48) ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಸ್ಥಳೀಯರು ಅಂಬ್ಯುಲೆನ್ಸ್ ಮೂಲಕ ಗಾಯಾಳುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಪ್ರಜ್ಞಾಹೀನರಾಗಿದ್ದ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಐದು ದಿನಗಳ ಕಾಲ […]

Continue Reading

ಕಾಟಿಪಳ್ಳ ಮಸೀದಿಗೆ ಕಲ್ಲು ತೂರಾಟ ಮಾಡಿದ ಕೈಗಳಿಗೆ ತಿಳಿದಿರಬೇಕಿರೋದು…

ಯಾವ ಬೀದಿಯಲ್ಲಿ ಇಂದು ಕೋಮುವಾದಿಗಳು ಕಲ್ಲು ಹಿಡಿದುಕೊಂಡು ಓಡಾಡುತ್ತಿದ್ದಾರೋ ಅದೇ ಬೀದಿಯಲ್ಲಿ ಅಂದು ಮುಸ್ಲೀಮರು ಅಕ್ಕಿ ಚೀಲ ಹಿಡಿದುಕೊಂಡು ಓಡಾಡುತ್ತಿದ್ದರು ✍️. ನವೀನ್ ಸೂರಿಂಜೆ.ಪತ್ರಕರ್ತರು ಕೋಮುವಾದಿಗಳ ಸವಾಲು-ಪ್ರತಿಸವಾಲಿನ ನಂತರ ಕಾಟಿಪಳ್ಳ ಮಸೀದಿಗೆ ದುರ್ಷರ್ಮಿಗಳು ಕಲ್ಲು ತೂರಾಟ ಮಾಡಿದ್ದಾರೆ. ಈ ಸವಾಲಿನ ಸಂಘರ್ಷಕ್ಕೂ ಕಾಟಿಪಳ್ಳಕ್ಕೂ ಸಂಬಂಧವಿಲ್ಲ. ಆದರೂ ಕೋಮುವಾದಿಗಳು ಕಾಟಿಪಳ್ಳ ಮಸೀದಿಯನ್ನು ಯಾಕೆ ಟಾರ್ಗೆಟ್ ಮಾಡಿದರು ? ಕಾಟಿಪಳ್ಳ ಮಸೀದಿಗೆ ಕಲ್ಲು ತೂರಾಟ ಮಾಡಿದ ಕೋಮುವಾದಿ ಕೈಗಳ ರಟ್ಟೆಗಳಿಗೆ ಬಲ ಬಂದಿರೋದು ಎಲ್ಲಿಂದ ಎಂಬುದು ಅವರಿಗೆ ಗೊತ್ತಿರಬೇಕಿತ್ತು. 1918 […]

Continue Reading

ಕಾಟಿಪಳ್ಳ ಮಸೀದಿಗೆ ಕಲ್ಲೆಸೆದ ಪ್ರಕರಣ.. ಐವರು ಕಿಡಿಗೇಡಿಗಳ ಬಂಧಿಸಿದ ಸುರತ್ಕಲ್ ಪೊಲೀಸರು.

ಸುರತ್ಕಲ್ ಕಾಟಿಪಳ್ಳ ಮಸೀದಿಗೆ ಬೈಕಿನಲ್ಲಿ ಬಂದು ಕಲ್ಲೆಸೆದ ಪ್ರಕರಣದಐವರು ಕಿರಾತಕರನ್ನು ಸುರತ್ಕಲ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.ಸುರತ್ಕಲ್ ಆಶ್ರಯ ಕಾಲನಿ ನಿವಾಸಿ ಭರತ್, ಕಟ್ಲ ಆಶ್ರಯ ಕಾಲೋನಿ ನಿವಾಸಿ ಚೆನ್ನಪ್ಪ, ಹಳೆಯಂಗಡಿ ಚೇಳಾಯರು ಖಂಡಿಗೆ ಪಾಡಿ ನಿವಾಸಿ ನಿತಿನ್, ಈಶ್ವರ ನಗರದ ಮನು ಮತ್ತು ಮುಂಚೂರು ನಿವಾಸಿ ಸುಜಿತ್ ಬಂಧಿತ ದುಷ್ಕರ್ಮಿಗಳು.ಆರೋಪಿಗಳ ಪೈಕಿ ಭರತ್ ಎಂಬಾತನ ವಿರುದ್ಧ ಹೊಡೆದಾಟಕ್ಕೆ ಸಂಬಂಧಿಸಿ ಈ ಹಿಂದೆ 307 ಪ್ರಕರಣ ದಾಖಲಾಗಿದ್ದು, ಆತನ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿತ್ತು. […]

Continue Reading