ಸರಕಾರದ ಹಣ ಪೋಲು ಮಾಡುತ್ತಿರುವ PWD ಇಲಾಖೆ; ಯಾರದ್ದೊ ದುಡ್ಡು ಯಲ್ಲಮ್ಮನ ಜಾತ್ರೆ

ರಿಯಲ್ ಎಸ್ಟೇಟ್ ಮಾಫಿಯಾದವರನ್ನು ತೃಪ್ತಿಪಡಿಸಲು, ಕೋಟಿ, ಕೋಟಿ ನದಿಗೆ ಸುರಿಯುತ್ತಿರುವ ಇಲಾಖೆ ಮಳವೂರು ಸೇತುವೆ ಕೆಳಗೆ ಭಾಗದ ಉಳ್ಳವರ ಖಾಸಗಿ ಜಮೀನಿಗೆ PWD ಇಲಾಖೆಯಿಂದ ತಡೆಗೋಡೆ ನಿರ್ಮಿಸುವ ಮಹತ್ಕಾರ್ಯಕ್ಕೆ ಪಿಡಬ್ಲ್ಯೊಡಿ ಇಲಾಖೆ ಕೈ ಹಾಕಿದೆ. ಶಾಂತವಾಗಿ ಹರಿಯುತ್ತಿದ್ದ ವಿಶಾಲವಾದ ಪಲ್ಗುಣಿ ನದಿಗೆ ಮಣ್ಣು ತುಂಬಿಸಿ ನದಿಯನ್ನು ಕಿರಿದಾಗಿಸುವ ಕೆಲಸವು ಭರದಿಂದ ಸಾಗುತ್ತಿದೆ. ನದಿಗೆ ಮಣ್ಣು ಹಾಕಿ ಮಣ್ಣಿನಿಂದ ಅಮೇದ್ಯ ತಿನ್ನುವ ಸಕಲಕಲಾ ಪಂಡಿತ್ಯವನ್ನು ಅರಿತ ಅಧಿಕಾರಿಗಳು ತರಾತುರಿಯಿಂದ ನದಿಗೆ ಮಣ್ಣು ತುಂಬಿಸಿ ತಡೆಗೋಡೆ ನಿರ್ಮಿಸಿ ಉಳ್ಳವರನ್ನು ಉದ್ದಾರ […]

Continue Reading

ಕೇರಳ, ಆಂಧ್ರ, ತಮಿಳು ನಾಡು ಮಾದರಿಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಗಳಿಗೆ ಪೀಕ್ ಕ್ಯಾಪ್: ರಾಜ್ಯ ಪೊಲೀಸ್ ಇಲಾಖೆ ಚಿಂತನೆ

ಪೊಲೀಸ್ ಕಾನ್ಸ್ ಟೇಬಲ್ ಹಾಗೂ ಹೆಡ್ ಕಾನ್ಸ್ ಟೇಬಲ್ ಗಳ ಟೋಪಿ ಬದಲಾವಣೆಗೆ ಚಿಂತನೆ ನಡೆಸಿರುವ ರಾಜ್ಯ ಪೊಲೀಸ್ ಇಲಾಖೆ, ಈ ಕುರಿತು ಚರ್ಚೆ ನಡೆಸಲು ಏಪ್ರಿಲ್ 4 ರಂದು ವಿವಿಧ ಘಟಕಗಳ ಮುಖ್ಯಸ್ಥರ ಸಭೆ ಕರೆದಿದೆ. ಕಾನ್ಸ್ ಟೇಬಲ್ ಗಳು ಹಾಲಿ ಧರಿಸುತ್ತಿರುವ ಸ್ಲೋಚ್ ಹ್ಯಾಟ್ ಬದಲಿಗೆ ಪೀಕ್ ಕ್ಯಾಪ್ ನೀಡುವ ಸಂಬಂಧ ಕೆಎಸ್ ಆರ್ ಪಿ ಎಡಿಜಿಪಿ ಅಧ್ಯಕ್ಷತೆಯ ಸಭೆಯಲ್ಲಿ ಚರ್ಚೆ ನಡೆಯಲಿದೆ. ಜತೆಗೆ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಡಿಜಿ ಐಜಿಯವರಿಗೆ ಕಳುಹಿಸಲಾಗುತ್ತದೆ. ಆನಂತರ […]

Continue Reading

ಹಿಂದುತ್ವ ಅಂದರೆ ಏನು.? ನಾಮ ಹಾಕಿದರೆ ಮಾತ್ರ ಹಿಂದುತ್ವವಾ.? ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿದರೆ ಮಾತ್ರ ಹಿಂದೂತ್ವ ಆಗುತ್ತದಾ: ಕಲ್ಲಡ್ಕ ಭಟ್

ಹಿಂದುತ್ವವೆಂದು ಏನು ಬೇಕಾದರೂ ಮಾತಾನಾಡಬಹುದಾ.? ಸಂಘಟನೆಗೆ ಸೇರಿದ ಮೇಲೆ ಏನು ಮಾತನಾಡಬೇಕು ಎಂಬ ಪ್ರಜ್ಞೆ ಮೈಮೇಲೆ ಇರಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್‌ ಅವರು ಶಾಸಕ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಯತ್ನಾಳ್ ಉಚ್ಚಾಟನೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕಲ್ಲಡ್ಕ ಪ್ರಭಾಕರ ಭಟ್‌,’ ಸಂಘಟನೆಯ ವ್ಯಾಪ್ತಿಯೊಳಗೆ ಇದ್ದಾಗ ಗಡಿ ಮೀರಿ ಹೋಗಬಾರದು. ಮಾತನಾಡಲು ಅವಕಾಶ ಇದೆ. ಪಕ್ಷದ ಸಮಿತಿ ಇದೆ. ಆ ಸಮಿತಿಯೊಳಗೆ ಎಷ್ಟು […]

Continue Reading

ಬಂಧನ ನಿಯಮವನ್ನೇ ಪಾಲಿಸುತ್ತಿಲ್ಲ ರಾಜ್ಯ ಪೊಲೀಸರು. 70% ಬಂಧನದಲ್ಲಿ ನಿಯಮ ಉಲ್ಲಂಘನೆ: ಎನ್ ಜಿ ಒ ವರದಿ

ರಾಜ್ಯದ ಪೊಲೀಸರು ಶೇಕಡಾ 70 ರಷ್ಟು ಬಂಧನ ಪ್ರಕರಣಗಳಲ್ಲಿ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಪೊಲೀಸ್ ವ್ಯವಸ್ಥೆಯ ಸ್ಥಿತಿಗತಿಯ ವರದಿ ಬಹಿರಂಗವಾಗಿದೆ. ಲೋಕನೀತಿ, ಸಿಎಸ್ ಡಿ ಎಸ್ ಮತ್ತು ಲಾಲ್ ಫ್ಯಾಮಿಲಿ ಫೌಂಡೇಶನ್ ನೇತೃತ್ವದಲ್ಲಿ ‘ಕಾಮನ್ ಕಾಸ್’ ಎಂಬ ಎನ್ ಜಿ ಒ ಎಲ್ಲ ರಾಜ್ಯಗಳಲ್ಲಿ ಪೊಲೀಸ್ ವ್ಯವಸ್ಥೆಯ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ವರದಿ ಬಹಿರಂಗಪಡಿಸಿದೆ. ನೆರೆ ರಾಜ್ಯ ಕೇರಳದಲ್ಲಿ ಪೊಲೀಸರು ಶೇಕಡಾ 94 ರಷ್ಟು ಪ್ರತಿಶತ ಬಂಧನ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಜಾರ್ಖಂಡ್ ನಲ್ಲೂ ಕೂಡ ಶೇಕಡಾ 70 […]

Continue Reading

ಬಿಜೆಪಿ ಮುಖಂಡನಿಂದ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಪೋಕ್ಸೋ ಪ್ರಕರಣ ದಾಖಲು, ಆರೋಪಿ ನಾಪತ್ತೆ

ಅಪ್ರಾಪ್ತ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ದ.ಕ ಜಿಲ್ಲೆಯ ಬಿಜೆಪಿ ಮುಖಂಡನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ. ಆರೋಪಿ ಬಂಟ್ವಾಳ ಕ್ಷೇತ್ರದ ಪ್ರಭಾವಿ ಬಿಜೆಪಿ ಮುಖಂಡ ಆಗಿರುವ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸರು ತಡವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂಬ ಗುಸು ಗುಸು ಕೇಳಿ ಬಂದಿವೆ. ಅಪ್ರಾಪ್ತ ದಲಿತ ಬಾಲಕಿಗೆ ಸುಳ್ಳು ಆಮಿಷ ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಕೃತ್ಯವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾಗಿ ಆರೋಪಿ ಪ್ರಯತ್ನಿಸಿದ್ದ ಎಂಬ ಮಾಹಿತಿಯೂ ಕೇಳಿಬಂದಿದೆ. ಪೆರುವಾಯಿ ವ್ಯವಸಾಯ […]

Continue Reading

ಸಿಸಿಬಿ ಪೊಲೀಸರ ಕಾರ್ಯಾಚರಣೆ; ಉನ್ನತ ಶಿಕ್ಷಣ ಮಂಡಳಿ ಹೆಸರಿನಲ್ಲಿ ನಕಲಿ ಅಂಕಪಟ್ಟಿ ನೀಡುತ್ತಿದ್ದ ಜಾಲ ಪತ್ತೆ.

ರಾಜ್ಯದ ಉನ್ನತ ಶಿಕ್ಷಣ ಮಂಡಳಿ ಎಂಬ ಸಂಸ್ಥೆ ಹೆಸರಿನಲ್ಲಿ ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ನಕಲಿ ಅಂಕಪಟ್ಟಿಗಳನ್ನು ನೀಡುತ್ತಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಸಿಸಿಬಿಯ ಆರ್ಥಿಕ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪ್ರಶಾಂತ್ ಗುಂಡ್ಮಿ, ಮೋನೀಷ್ ಕೆ.ಜೆ ಹಾಗೂ ರಾಜಶೇಖರ ಎಂದು ಗುರುತಿಸಲಾಗಿದೆ. ಕತ್ರಿಗುಪ್ಪೆಯ ರಾಮ್‌ ರಾವ್ ಲೇಔಟ್‌ನಲ್ಲಿರುವ ಅಕಾಡೆಮಿಯೊಂದರಲ್ಲಿ pucಗೆ ದಾಖಲಾಗಿದ್ದ ವಿದ್ಯಾರ್ಥಿಗೆ ಯಾವುದೇ ಪರೀಕ್ಷೆ ಬರೆಯದೆಯೇ ಆರೋಪಿಗಳು ಕರ್ನಾಟಕ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಎಂಬ ಹೆಸರಿನಲ್ಲಿ ಅಂಕಪಟ್ಟಿ ನೀಡಿದ್ದರು. ವಿದ್ಯಾರ್ಥಿಯ […]

Continue Reading

ತಂದೆಯ ಸಾಮಾಜಿಕ ಕಾಳಜಿಯ ಪರಂಪರೆ ಮುಂದುವರಿಸುತ್ತೇನೆ – ಶೋಹೈಬ್ ವೈಟ್ ಸ್ಟೋನ್

ವೃತ್ತಿಪರ ಕೋರ್ಸ್ ನ 115 ವಿದ್ಯಾರ್ಥಿಗಳಿಗೆ ಕಮ್ಯೂನಿಟಿ ಸೆಂಟರ್ ನಲ್ಲಿ ವಿದ್ಯಾರ್ಥಿ ವೇತನ ವಿತರಣೆ…… ಇಂದು ನಡೆದ ಸರಳ ಸಮಾರಂಭದಲ್ಲಿ ಕಮ್ಯೂನಿಟಿ ಸೆಂಟರ್ ಮೂಲಕ ವಿವಿಧ ಕಾಲೇಜುಗಳಲ್ಲಿ ವೃತ್ತಿಪರ ಕೋರ್ಸ್ ಮತ್ತು ಪದವಿ ಶಿಕ್ಷಣ ಪಡೆಯುತ್ತಿರುವ 115 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. 82 ವಿದ್ಯಾರ್ಥಿಗಳಿಗೆ ವೈಟ್ ಸ್ಟೋನ್ ಮಾಲಕರಾದ ಬಿ.ಎಂ ಶರೀಫ್ ಜೋಕಟ್ಟೆ ಅವರು ವಿದ್ಯಾರ್ಥಿ ವೇತನ ನೀಡಿದರೆ, ಉಳಿದ 33 ವಿದ್ಯಾರ್ಥಿಗಳಿಗೆ ಪುತ್ತೂರು ಕಮ್ಯೂನಿಟಿ ಸೆಂಟರಿನ ಸ್ಥಾಪಕ ಸದಸ್ಯ ಉದ್ಯಮಿ ಅಬ್ದುಲ್ ಸತ್ತಾರ್ ರವರು […]

Continue Reading

ಹನಿಟ್ರ್ಯಾಪ್ ಬಲೆಗೆ ಬಿದ್ದ ಆ ಸಚಿವರ ಮಕ್ಕಳು.? ಹನಿಟ್ರ್ಯಾಪ್ ಯಾವ ಲೆವೆಲ್ಲಿಗೆ ಹೋಗಬಹುದು ಎಂಬ ಚಿಂತೆ ದಿಲ್ಲಿ ವರಿಷ್ಟರಿಗೆ

ಅಮಿತ್ ಷಾ ಕಿರಿಕ್ ಮಾಡಿದ್ದೇಕೆ.? ವಿಜಯೇಂದ್ರ ಪದಚ್ಯುತಿಗೆ ಹೊಸ ತಂತ್ರ; ರಾಮಮೂರ್ತಿಗೆ ಬಂದಿದೆ ಕೋಪ ✍️. ಅರ್.ಟಿ.ವಿಠ್ಠಲಮೂರ್ತಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮೊನ್ನೆ ವಿಧಾನಸಭೆಯಲ್ಲಿ ನಿಂತು ಹನಿಟ್ರ್ಯಾಪ್ ಬಗ್ಗೆ ಮಾತನಾಡಿದ ನಂತರ ದಿಲ್ಲಿಯ ಕಾಂಗ್ರೆಸ್ ನಾಯಕರು ಮಂಕಾಗಿದ್ದಾರೆ. ಕಾರಣ.? ರಾಜಣ್ಣ ಎಪಿಸೋಡಿನ ನಂತರ ಕರ್ನಾಟಕದಿಂದ ಅವರಿಗೆ ತಲುಪುತ್ತಿರುವ ಸಂದೇಶಗಳು ಹಿತಕರವಾಗಿಲ್ಲ. ದಿಲ್ಲಿಯ ಕಾಂಗ್ರೆಸ್ ಮೂಲಗಳ ಪ್ರಕಾರ, ಹನಿಟ್ರ್ತಾಪ್ ಜಾಲ ಕರ್ನಾಟಕದಲ್ಲಿ ಯಾವ ಮಟ್ಟಕ್ಕೆ ಸಕ್ರಿಯವಾಗಿದೆ ಎಂದರೆ ಮಂತ್ರಿ ರಾಜಣ್ಣ ಮತ್ತವರ ಮಗ ರಾಜೇಂದ್ರ ಅವರ ವಿರುದ್ದ ಮಾತ್ರವಲ್ಲ, […]

Continue Reading

ಅಕ್ರಮ ಮರಳುಗಾರಿಕೆಗೆ ಬಿಸಿ ಮುಟ್ಟಿಸಿದ ಮಂಗಳೂರು ಎ.ಸಿ ಹರ್ಷವರ್ಧನ್; ಅಕ್ರಮ ದಂಧೆಕೋರರ ಆಸ್ತಿ ಮುಟ್ಟುಗೋಲಿಗೆ ನೋಟೀಸು .

ಅಕ್ರಮ ಮರಳುಗಾರಿಕೆ ನಡೆಸುವವರ, ಅದಕ್ಕೆ ಬೆಂಬಲ ನೀಡುವವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ತಮ್ಮ ಜಮೀನಿನಲ್ಲಿ ಅನಧಿಕೃತ ಮರಳುಗಾರಿಕೆ ನಡೆಸುತ್ತಿದ್ದ, ಅಕ್ರಮ ಮರಳು ಸಾಗಾಟಕ್ಕೆ ದಾರಿ ಮಾಡಿಕೊಡುತ್ತಿದ್ದ, ಮರಳು ದಾಸ್ತಾನು ಆರೋಪ ಎದುರಿಸುತ್ತಿರುವ ಜಾಗದ ಮಾಲಕರ ಆಸ್ತಿಯನ್ನು ಏಕೆ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬಾರದು ಎಂದು ಕಾರಣ ಕೇಳಿ ಮಂಗಳೂರು ಎ.ಸಿ ಹರ್ಷವರ್ಧನ ರವರು ಸಂಬಂಧ ಪಟ್ಟವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಮಂಗಳೂರು ತಾಲ್ಲೂಕಿನ ತಿರುವೈಲು, ಕಂದಾವರ ಗ್ರಾಮಗಳಲ್ಲಿ ಹಾದುಹೋಗುವ ಫಲ್ಗುಣಿ ನದಿಯಲ್ಲಿ ಅಕ್ರಮ […]

Continue Reading

ಮಗನ ಸಾಲ ಬಾಕಿ.. ತಾಯಿಯ ಗೃಹಲಕ್ಷ್ಮಿ ಹಣ ಕೊಡಲು ಸತಾಯಿಸಿದ ಬ್ಯಾಂಕ್ ಮ್ಯಾನೇಜರ್.

ಕೊಳ್ನಾಡು ಗ್ರಾಮಸಭೆಯಲ್ಲಿ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಭಾರಿ ಆಕ್ರೋಶ.. ಸಾಲಗಾರ ಪುತ್ರನ ತಾಯಿಯ ಗೃಹಲಕ್ಷ್ಮಿ ಹಣವನ್ನು ಖಾತೆಯಿಂದ ತೆಗೆಯಲು ಬಿಡದೆ ಸಾಲೆತ್ತೂರು ಕೆನರಾ ಬ್ಯಾಂಕ್ ಮ್ಯಾನೇಜರ್ ಹಿಡಿದಿಟ್ಟ ವಿಚಾರ ಕೊಳ್ನಾಡು ಗ್ರಾಮಸಭೆಯಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ.‌ ಕೊಳ್ನಾಡು ಗ್ರಾಮಸಭೆ ಆರಂಭವಾದ ಕೆಲಹೊತ್ತಿನಲ್ಲಿ ಕೆನರಾ ಬ್ಯಾಂಕ್ ಸಾಲೆತ್ತೂರು ಶಾಖೆಯ ಮ್ಯಾನೇಜರ್ ಬ್ಯಾಂಕ್ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಬಳಿಕ ಗ್ರಾಮಸ್ಥರಿಗೆ ಮಾತನಾಡಲು ಅವಕಾಶ ಕೊಟ್ಟರು. ಕೊಳ್ನಾಡು ಗ್ರಾಮದ ಕಲ್ಲಮಜಲು ನಿವಾಸಿ ದೃಷ್ಟಿ ಹೀನ ಮಹಿಳೆ ನೆಬಿಸ ಮಹಮ್ಮದ್ ಅವರ ಪುತ್ರ […]

Continue Reading