ಪ್ರತಿ ತಿಂಗಳ ಮೂರನೇ ಶನಿವಾರ ‘ಸಂಭ್ರಮ ಶನಿವಾರ’; ಬ್ಯಾಗ್ ರಹಿತ ದಿನ: ಡಿಎಸ್ ಇ ಆರ್ ಟಿ

ವಿದ್ಯಾರ್ಥಿಗಳಿಗೆ ಚಟುವಟಿಕೆಗಳ ಮೂಲಕ ಕಲಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರತಿ ತಿಂಗಳು ಒಂದು ಶನಿವಾರ ‘ಬ್ಯಾಗ್ ರಹಿತ ದಿನ’ ಆಚರಿಸುವಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್ಇ ಆರ್ ಟಿ) ನಿರ್ದೇಶನ ನೀಡಿದೆ. ಮಕ್ಕಳನ್ನು ಬಹುಮುಖ ಚಟುವಟಿಕೆಗಳಲ್ಲಿ ತೊಡಗಿಸುವುದರ ಮೂಲಕ ನಾಗರಿಕ ಪ್ರಜ್ಞೆ ಬೆಳೆಸಲು ವಿವಿಧ ಥೀಮ್ ಗಳನ್ನು ಆಧರಿಸಿ ವಿದ್ಯಾರ್ಥಿಗಳಿಗಾಗಿ 10 ಸ್ವಯಂ ವಿವರಣಾತ್ಮಕ ಮಾಡ್ಯೂಲ್ ಗಳನ್ನು ಹಾಗೂ ಶಿಕ್ಷಕರಿಗೆ ಮಾರ್ಗದರ್ಶಿ ಕೈಪಿಡಿ ಸಿದ್ಧಪಡಿಸಲಾಗಿದೆ. ಈ ಮಾಡ್ಯೂಲ್ ಗಳು ಅರಿವು, ಅನುಭವ […]

Continue Reading

ನೀಟ್‌ ಪರೀಕ್ಷೆಯಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಭಾರೀ ಅನ್ಯಾಯ; ತಮಿಳುನಾಡಿನ ಮಾದರಿಯನ್ನು ಅನುಸರಿಸುವ ಬಗ್ಗೆ ಚಿಂತನೆ: ಡಿಸಿಎಂ ಡಿ.ಕೆ.ಶಿ

ನೀಟ್‌ ಪರೀಕ್ಷೆಯಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಭಾರೀ ಅನ್ಯಾಯವಾಗುತ್ತಿರುವುದರಿಂದ ಕರ್ನಾಟಕವೂ ತಮಿಳುನಾಡಿನ ಮಾದರಿಯನ್ನು ಅನುಸರಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ನೀಟ್‌ ಪರೀಕ್ಷೆಯಿಂದ ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ದೊಡ್ಡ ಅನ್ಯಾಯವಾಗುತ್ತಿದೆ. ನಾವು ಕಾಲೇಜುಗಳನ್ನು ಕಟ್ಟಿದೇವೆ. ನೀಟ್‌ ಪರೀಕ್ಷೆಯಿಂದ ಉತ್ತರ ಭಾರತದ ರಾಜ್ಯಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ. ಹೀಗಾಗಿ ನಮ್ಮ ಮಕ್ಕಳಿಗೆ ತಾರತಮ್ಯವಾಗುತ್ತಿದೆ ಎಂದು ಹೇಳಿದ್ದಾರೆ. ವೈದ್ಯಕೀಯ ಶಿಕ್ಷಣದ ಪ್ರವೇಶ ಪರೀಕ್ಷೆಯನ್ನು ರಾಜ್ಯಗಳೇ ನಡೆಸಲು ಅವಕಾಶ ಮಾಡಿಕೊಡುವುದು ಉತ್ತಮ. ಈ […]

Continue Reading

ಕಣ್ಣೀರಿನ ಹಿಂದಿರುವ ರಾಜ್ಯಪಾಲರ ‘ಧರ್ಮ’ ಸಂಕಟದ ಆಫ್ ದಿ ರೆಕಾರ್ಡ್ ಕತೆ..!

ಘಟಿಕೋತ್ಸವದಲ್ಲಿ “ರಾಜ್ಯಪಾಲರ ದರ್ಬಾರ್ ಮತ್ತು ಉಪಕುಲಪತಿಗಳ ಕಣ್ಣೀರಿನ” ಹಿಂದೆ ಬೇರೆಯದ್ದೇ ಕತೆ ಇದೆ. ✍️. ನವೀನ್ ಸೂರಿಂಜೆ, ಪತ್ರಕರ್ತರು ಘಟಿಕೋತ್ಸವದಲ್ಲಿ “ರಾಜ್ಯಪಾಲರ ದರ್ಬಾರ್ ಮತ್ತು ಉಪಕುಲಪತಿಗಳ ಕಣ್ಣೀರಿನ” ಹಿಂದೆ ಬೇರೆಯದ್ದೇ ಕತೆ ಇದೆ. ಸಹಜವಾಗಿ ಮೃದು ಸ್ವಭಾವದವರಾಗಿರುವ ರಾಜ್ಯಪಾಲರು ಈ ಒಂದು ವಿವಿ ಘಟಿಕೋತ್ಸವದಲ್ಲಿ ಮಾತ್ರ ಯಾಕೆ ಹೀಗೆ ‘ರೂಡ್’ ಆಗಿ ನಡೆದುಕೊಂಡರು ಎಂಬುದಕ್ಕೆ ಬಲವಾದ ಕಾರಣ ಇದೆ. ಇದೊಂದು ಆಫ್ ದಿ ರೆಕಾರ್ಡ್ ಕಥೆ. ಯೂನಿವರ್ಸಿಟಿಗೆ ಉಪಕುಲಪತಿ ನೇಮಕ ಮಾಡಲು ರಾಜ್ಯ ಸರ್ಕಾರವು ಪ್ರೊ ಮುಜಾಫರ್ […]

Continue Reading

ಪೊಲೀಸ್‌ ವರ್ಗಾವಣೆಯಲ್ಲಿ ಹೊಸ ನೀತಿ ಜಾರಿಗೊಳಿಸುವುದಕ್ಕೆ ಗೃಹ ಇಲಾಖೆ ಸಿದ್ಧತೆ

ಜುಲೈ ತಿಂಗಳಿನಲ್ಲಿ ನಡೆಯುವ ವಿಧಾನಮಂಡಲದ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲು ಸಿದ್ಧತೆ ಪೊಲೀಸ್‌ ವರ್ಗಾವಣೆಯಲ್ಲಿ ಹೊಸ ನೀತಿ ಜಾರಿಗೊಳಿಸುವುದಕ್ಕೆ ಗೃಹ ಇಲಾಖೆ ಸಿದ್ಧತೆ ನಡೆಸಿದ್ದು, ಜೀವಮಾನದುದ್ದಕ್ಕೂ ಸೂಕ್ತ ಜಾಗ ಸಿಗದೆ ಪರಿತಪಿಸುತ್ತಿದ್ದ ನಿಷ್ಠಾವಂತರಾದ ಪ್ರಾಮಾಣಿಕ ಅಧಿಕಾರಿಗಳ ಕೈ ಹಿಡಿಯಲು ಸರಕಾರ ಮುಂದಾಗಿದೆ. ಹೀಗಾಗಿ 2 ವರ್ಷ ವರ್ಗಾವಣೆ ಮಾಡದಂತೆ ಕಾನೂನು ತಿದ್ದುಪಡಿ ಮಾಡಲು ಚಿಂತಿಸಲಾಗಿದೆ. ಇನ್‌ಸ್ಪೆಕ್ಟರ್‌ ದರ್ಜೆಯಿಂದ ಮೇಲ್ಪಟ್ಟು ಜಿಲ್ಲಾ ಎಸ್‌ಪಿ ಹಂತದ ಅಧಿಕಾರಿಗಳಿಗೆ ಪ್ರಾಯೋಗಿಕವಾಗಿ ಈ ನಿಯಮ ಅನುಸರಿಸಲು ಗೃಹ ಇಲಾಖೆ ಮುಂದಾಗಿದೆ. ಇದರ ಅನ್ವಯ ಠಾಣೆ, […]

Continue Reading

ನಟ ದರ್ಶನ್ ‘ಡಿ’ ಗ್ಯಾಂಗ್ ಬಂಧಿಸಿ ಅಸಲಿ ರಹಸ್ಯ ಭೇದಿಸಿದ್ದು ಮಂಗಳೂರಿನಲ್ಲಿ ಎಸಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಸೂಪರ್ ಕಾಫ್ ಅಧಿಕಾರಿ.!

ಇಬ್ಬರು ಪೊಲೀಸ್ ಅಧಿಕಾರಿಗಳು ‘ರೀಲ್ ಹೀರೊ’ನಾ ಬಂಧಿಸಿ ‘ರಿಯಲ್ ಹೀರೊ’ಗಳಾಗಿದ್ದಾರೆ. ರಾಜ ಕಾಲುವೆಯಲ್ಲಿ ಕೊಚ್ಚಿ ಹೋಗಬೇಕಿದ್ದ ರೇಣುಕಾ ಸ್ವಾಮಿ ಹತ್ಯೆಯ ಅಸಲಿ ಸತ್ಯ ಭೇದಿಸಿ ಪ್ರಭಾವಿ ನಟ ದರ್ಶನ್ ನನ್ನು ಬಂಧಿಸುವಲ್ಲಿ ಯಶಸ್ವಿಯಾದ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್, ವಿಜಯನಗರ ಎಸಿಪಿ ಚಂದನ್ ಕುಮಾರ್ ಅವರ ದಿಟ್ಟ ಕಾರ್ಯ ವೈಖರಿ ಮೆಚ್ಚುಗೆಗೆ ಕಾರಣವಾಗಿದೆ. ಕೊಲೆ ಮಾಡಿದ್ದೇವೆ ಎಂದು ನಾಲ್ವರ ಶರಣಾಗತಿ ಗೊತ್ತಾದ ಕೂಡಲೇ ಕಾಮಾಕ್ಷಿ ಪಾಳ್ಯ ಠಾಣೆಗೆ ಹೋಗಿದ್ದ ಡಿಸಿಸಿ ಗಿರೀಶ್ ಹಲವು ಆಯಾಮಗಳಲ್ಲಿ ತನಿಖೆ ನಡೆಸಲು […]

Continue Reading

ಸಾವಿನ ರಹದಾರಿ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಎಕ್ಸ್ ಪ್ರೆಸ್ ವೇ ನಲ್ಲಿ ಅಪಘಾತ ಇಳಿಮುಖ

ಪೊಲೀಸ್ ಇಲಾಖೆಯ ಪ್ರಯಾಣಿಕ ಸುಧಾರಣ ಕ್ರಮದ ಪರಿಣಾಮ ಅಪಘಾತಗಳ ಸಂಖ್ಯೆ ಇಳಿಮುಖ ಸಾವಿನ ರಹದಾರಿ ಎಂದೇ ರಾಜ್ಯದಲ್ಲಿ ಕುಖ್ಯಾತಿ ಪಡೆದಿದ್ದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಇತ್ತೀಚೆಗೆ ಅಪಘಾತ ಸಂಖ್ಯೆ ಇಳಿಕೆಯಾಗುತ್ತಿದ್ದು, ಮೂರಂಕಿ ದಾಟಿದ್ದ ಸಾವಿನ ಸಂಖ್ಯೆಯು ಎರಡಂಕಿಗೆ ಬಂದಿದೆ. ಒಟ್ಟಾರೆ ಅಪಘಾತ ಸಂಬಂಧಿತ ಸಾವಿನ ಪ್ರಮಾಣ ಶೇಕಡಾ 69 ರಷ್ಟು ಕಡಿಮೆಯಾಗಿದೆ. ಹೆದ್ದಾರಿಯಲ್ಲಿ ಪದೇ ಪದೆ ಸಂಭವಿಸುತ್ತಿದ್ದ ಅಪಘಾತ, ಸಾವಿನ ಪ್ರಮಾಣವು ಗಾಬರಿಗೊಳಿಸುವಂತಿದ್ದೆವು. ವಾಹನ ಚಾಲಕರು ನೆಮ್ಮದಿಯಾಗಿ ವಾಹನ ಚಲಾಯಿಸಲು ಹಿಂದೆ ಮುಂದೆ ನೋಡಬೇಕಾದ ಸ್ಥಿತಿ […]

Continue Reading

ರಾಜ್ಯಪಾಲರ ದರ್ಭಾರ್.!ಮುಜುಗರಕ್ಕೀಡಾಗಿ, ವೇದಿಕೆಯಲ್ಲೆ ಕಣ್ಣೀರು ಹಾಕಿದ ವಿವಿ ಉಪ ಕುಲಪತಿ

ಮಂಗಳೂರು: ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ಘಟಿಕೋತ್ಸವ ಕಾರ್ಯಕ್ರಮ ರಾಜ್ಯಪಾಲರ ರಾಜ್ಯಭಾರಕ್ಕೆ ಸಾಕ್ಷಿಯಾಗಿ ವಿವಾದ ಹುಟ್ಟುಹಾಕಿದೆ. ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲ ಥಾವರ್​ಚಂದ್ ಗೆಹಲೋತ್ ವೇದಿಕೆಯಲ್ಲಿ ಕುಳಿತು ತಮಗೆ ಬೇಕಾದಂತೆ ಕಾರ್ಯಕ್ರಮದ ಶಿಷ್ಟಾಚಾರ ಬದಲಿಸಲು ನಿರ್ದೇಶಿಸುತ್ತಲೇ ಇದ್ದರು. ಇದರಿಂದ ಮುಜುಗರಕ್ಕೀಡಾದ ವಿವಿ ಉಪ ಕುಲಪತಿ ಡಾ.ಪಿ.ಎಲ್.ಧರ್ಮ ವೇದಿಕೆಯಲ್ಲೇ ಕಣ್ಣೀರು ಹಾಕಿದರು. ಘಟಿಕೋತ್ಸವವನ್ನು ಪೂರ್ವ ಶಿಷ್ಟಾಚಾರದಂತೆ ನಡೆಸಲು ವಿವಿ ಆಡಳಿತ ಸಿದ್ಧತೆ ನಡೆಸಿತ್ತು. ಆದರೆ ರಾಜ್ಯಪಾಲರ ದರ್ಬಾರ್​ನಿಂದ ಇದು ಸಾಧ್ಯವಾಗಲಿಲ್ಲ. ಘಟಿಕೋತ್ಸವದ ಕೊನೆಯಲ್ಲಿ ಹಾಡಬೇಕಿದ್ದ ರಾಷ್ಟ್ರಗೀತೆಯನ್ನು ಗವರ್ನರ್ ಆರಂಭದಲ್ಲೇ ಹಾಡಲು […]

Continue Reading

ಮಾಜಿ ಸಿ.ಎಂ. ಬಿ.ಎಸ್ ಯಡಿಯೂರಪ್ಪಗೆ ಬಿಗ್ ರಿಲೀಫ್; ಬಂಧಿಸದಂತೆ ಹೈಕೋರ್ಟ್ ಆದೇಶ

ಪೋಕ್ಸೋ ಪ್ರಕರಣದಲ್ಲಿ ಮಾಜಿ ಸಿ.ಎಂ. ಬಿ.ಎಸ್ ಯಡಿಯೂರಪ್ಪಗೆ ಬಿಗ್ ರಿಲೀಫ್ ನೀಡಿದ್ದು, ಬಂಧಿಸದಂತೆ ಹೈಕೋರ್ಟ್ ಆದೇಶ ಹೊರಡಿಸಿದೆ. ಯಡಿಯೂರಪ್ಪ ವಿರುದ್ಧ ದಾಖಲಾದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ ಹೈಕೋರ್ಟ್ ಬಿಎಸ್ವೈ ಅವರನ್ನು ಬಂಧಿಸದಂತೆ ಸಿಐಡಿಗೆ ಹೈಕೋರ್ಟ್ ಸೂಚನೆ ನೀಡಿದೆ. ಜೂ.17 ರಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿಯಲ್ಲಿರುವ ಮಾಜಿ ಸಿಎಂ ಯಡಿಯೂರಪ್ಪ ಹೈಕೋರ್ಟ್ ಗೆ ನಿರೀಕ್ಷಣಾ […]

Continue Reading

ರಾಜ್ಯ ಸರ್ಕಾರದ ರಕ್ಷಣೆಯಲ್ಲಿದ್ದ ಮಾಜಿ ಸಿ.ಎಂ ಯಡಿಯೂರಪ್ಪಗೆ ವಾರೆಂಟ್ ಜಾರಿಯಾದ ಹಿಂದಿನ ರಹಸ್ಯ.?

F.I.R ಆಗಿ ತಿಂಗಳು ಕಳೆದರೂ ಪೊಲೀಸರು ತನಿಖೆ ಮಾಡಿಲ್ಲ, ಬಂಧಿಸಿಲ್ಲ; “ದೂರುದಾರೆ ಸಂತ್ರಸ್ತ ಹೆಣ್ಣು ಮಗುವಿನ ತಾಯಿ ಮಾನಸಿಕ ಅಸ್ವಸ್ಥೆ” ಎಂದು ತನಿಖೆಯೇ ನಡೆಸದೇ ಗೃಹ ಸಚಿವರ ತೀರ್ಪು.? ✍️. ನವೀನ್ ಸೂರಿಂಜೆ, ಪತ್ರಕರ್ತರು ಬಿ.ಎಸ್.ಯಡಿಯೂರಪ್ಪ ವಿರುದ್ದ ಸುಮಾರು ಮೂರು ತಿಂಗಳ ಹಿಂದೆ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಬಗ್ಗೆ ಪೊಕ್ಸೊ(POCSO) ಪ್ರಕರಣ ದಾಖಲಾಗಿತ್ತು. ಅಮಾಯಕ ಮಹಿಳೆ ತನ್ನ ಅಪ್ರಾಪ್ತ ಹೆಣ್ಣು ಮಗುವಿನ ಜೊತೆ ದೂರು ನೀಡಲು ಹೋದಾಗ ಪೊಲೀಸರು ದೂರು ದಾಖಲಿಸಲು ನಿರಾಕರಿಸಿದ್ದರು. ಈ […]

Continue Reading

ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ 15 ಮಂದಿ ಅಧಿಕಾರಿಗಳ ವರ್ಗಾವಣೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ 15ಮಂದಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ನಿಗಮದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಿಡಿಸಿದ್ದಾರೆ. KSRTC ಕೇಂದ್ರ ಕಚೇರಿಯಲ್ಲಿ ಮುಖ್ಯ ಕಾನೂನು ಅಧಿಕಾರಿಯವರನ್ನು NWKRTC ಕೇಂದ್ರ ಕಚೇರಿಗೆ ಮುಖ್ಯ ಕಾನೂನು ಅಧಿಕಾರಿಯಾಗಿ ನಿಯೋಜಿಸಿ ವರ್ಗಾವಣೆ ಮಾಡಲಾಗಿದೆ. ಮಾಲೂರಿನಲ್ಲಿರುವ ಕೇಂದ್ರೀಯ ತರಬೇತಿ ಕೇಂದ್ರದ ಪ್ರಾಂಶುಪಾಲರಾಗಿದ್ದ ವಿಶ್ವನಾಥ ಅವರನ್ನು ನಿಗಮ ಶಿವಮೊಗ್ಗ ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನಿಯೋಜಿಸಿ ವರ್ಗಾವಣೆ ಮಾಡಲಾಗಿದೆ. ಚಿತ್ರದುರ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯವರನ್ನು ದಾವಣಗೆರೆ ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ, […]

Continue Reading