ಬಿಜೆಪಿ-ಜೆಡಿಎಸ್ ಮೈತ್ರಿಕೂಟದಲ್ಲಿ ಇದೀಗ ತೀವ್ರ ಅಸಮಾಧಾನದ ಹೊಗೆ; ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಇಲ್ಲ

ಜೆಡಿಯು ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲಿದೆ. ಕರ್ನಾಟಕದಲ್ಲಿ ಬಿಜೆಪಿ ನಾಯಕರು ಮೈತ್ರಿ ಧರ್ಮ ಪಾಲಿಸುತ್ತಿಲ್ಲ: ಎಚ್.ಡಿ. ದೇವೇಗೌಡ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಓಟಕ್ಕೆ ಲಗಾಮು ಹಾಕುವ ಉದ್ದೇಶ ಹಾಗೂ ಅಧಿಕಾರ ಪಡೆಯಲು ಒಂದಾಗಿದ್ದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದಲ್ಲಿ ಇದೀಗ ತೀವ್ರ ಅಸಮಾಧಾನದ ಹೊಗೆಯಾಡುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಅನಿವಾರ್ಯವಾಗಿ ಒಂದಾಗಿದ್ದ ಉಭಯ ಪಕ್ಷಗಳು, ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಭವಿಷ್ಯದ ರಾಜಕೀಯ ಅಸ್ತಿತ್ವದ ಪ್ರಶ್ನೆ ಬಂದಾಗ ಬೇರೆ ಬೇರೆಯಾಗಿ ಮೈತ್ರಿ ಮುರಿಯುವ ಹಂತಕ್ಕೆ […]

Continue Reading

ಉಪ ಮುಖ್ಯಮಂತ್ರಿಯ ಲಾಬಿಗೆ ಮಣಿಯದ ಹೈಕಮಾಂಡ್; ಹುದ್ದೆಗಿಂತಲೂ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಇರುವುದರಲ್ಲೇ ಹೆಚ್ಚು ಖುಷಿ ಎಂದ ಡಿಕೆಸಿ

ನಾಯಕತ್ವ ಬದಲಾವಣೆ ವಿಷಯದಲ್ಲಿ ಹೈಕಮಾಂಡ್‌ ನಾಯಕರು ಮಧ್ಯ ಪ್ರವೇಶಿಸುವಂತೆ ಮಾಡಲು ಡಿ.ಕೆ. ಶಿವಕುಮಾರ್‌ ದೆಹಲಿ ಮಟ್ಟದಲ್ಲಿ ಭಾರೀ ಲಾಬಿ ನಡೆಸುತ್ತಿದ್ದಾರೆ. ಈ ನಡುವೆ ರಾಷ್ರೀಯ ಮಟ್ಟದ ನಾಯಕರು ಡಿ.ಕೆ. ಶಿವಕುಮಾರ್‌ ಅವರ ಭೇಟಿಗೆ ಸಮಯವನ್ನು ನೀಡದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಂಚಿಕೆಯ ಬಿಕ್ಕಟ್ಟು ಮತ್ತು ಹೈಕಮಾಂಡ್ ನಾಯಕರ ನಡೆಯ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಬೇಸರಗೊಂಡಂತೆ ಕಾಣುತ್ತಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಅವರು ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ […]

Continue Reading

ಡಿಕೆಶಿ ಪವರ್ ‘ಕಟ್’ ಗೆ ನಡೆಯುತ್ತಿದೆಯಾ.. ಮೆಗಾ ಪ್ಲ್ಯಾನ್..!, ಡಿಸೆಂಬರ್ 27ರ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ನಡೆಯುತ್ತಾ ಬಿಗ್ ಅನೌನ್ಸ್ ಮೆಂಟ್.?

ಕೆ.ಪಿ.ಸಿ.ಸಿ ಅಧ್ಯಕ್ಷ ಪಟ್ಟದ ರೇಸ್ ನಲ್ಲಿ ಜಾರಕಿಹೊಳಿ, ಎಂ.ಬಿ. ಪಾಟೀಲ್, ಬಿ.ಕೆ. ಹರಿಪ್ರಸಾದ್! ಕರ್ನಾಟಕ ಕಾಂಗ್ರೆಸ್ಸಿನ ಪವರ್ ಫುಲ್ ಲೀಡರ್ ಎಂದೇ ಕರೆಸಿಕೊಂಡಿಕೊಂಡಿರುವ ಕನಕಪುರದ ಬಂಡೆ ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಬಿಗ್ ಶಾಕ್ ನೀಡುವ ತಯಾರಿಯಲ್ಲಿದೆ ಅನ್ನುವ ಮಾಹಿತಿ ಕೇಳಿಬರುತ್ತಿದೆ. ಡಿಕೆಶಿ ಅವರಿಗೆ ಸಿಎಂ ಬಿಡಿ, ಈಗಿರುವ ಕೆಪಿಸಿಸಿ ಅಧ್ಯಕ್ಷ ಹುದ್ದೆ ಕೂಡ ಕೈ ತಪ್ಪಿ ಹೋಗುತ್ತದೆ ಅನ್ನುವ ಚರ್ಚೆಗಳು ಕಾಂಗ್ರೆಸ್ ವಲಯದಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಅದಕ್ಕೆ ಮುಖ್ಯ ಕಾರಣ ಡಿಸೆಂಬರ್ 27 ರಂದು […]

Continue Reading

ಬಜೆಟ್ ಮಂಡಿಸಲು ಸಿದ್ದು-ಡಿಕೆಶಿ ರೆಡಿ; ಡಿಕೆಶಿಯ ವೈಬ್ರೆಂಟ್ ಕರ್ನಾಟಕದ ಕನಸು

ಯುದ್ಧಕ್ಕೆ ಸಜ್ಜಾದ ಮಿತ್ರರು; ಯಡಿಯೂರಪ್ಪ ಶಿಕಾರಿಪುರದಲ್ಲೇ ಸೆಟ್ಲ್ ✍️ .ಆರ್. ಟಿ. ವಿಠ್ಠಲಮೂರ್ತಿ ಮೊನ್ನೆ ದಿಲ್ಲಿಯಿಂದ ಬಂದ ವರ್ತಮಾನದ ಪ್ರಕಾರ ಕಾಂಗ್ರೆಸ್ ವರಿಷ್ಟರು ಚಿಂತೆಗೆ ಬಿದ್ದಿದ್ದಾರೆ. ಈ ಮುಂಚೆ ರಾಹುಲ್ ಗಾಂಧಿ ಅವರಿಗಷ್ಟೇ ಸೀಮಿತವಾಗಿದ್ದ ಈ ಚಿಂತೆ ಈಗ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಸುತ್ತಿಕೊಂಡಿದೆ.ಅಂದ ಹಾಗೆ ಒಪ್ಪಂದದ ಪ್ರಕಾರ, ಎರಡೂವರೆ ವರ್ಷಗಳ ನಂತರ ನನಗೆ ಸಿಎಂ ಹುದ್ದೆ‌ ಕೊಡಿಸಬೇಕು ಅಂತ ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಕಿದ ಪಟ್ಟು ರಾಹುಲ್ ಗಾಂಧಿಯವರ ಚಿಂತೆಗೆ ಕಾರಣವಾಗಿತ್ತು. ಯಾಕೆಂದರೆ […]

Continue Reading

ಕಟ್ಟಡ ಲೈಸೆನ್ಸ್, ಭೂ ಪರಿವರ್ತನೆಗಾಗಿ ಜನಸಾಮಾನ್ಯ ಆರು ಸರಕಾರಿ ಕಚೇರಿ ಅಲೆದಾಡುವಂತಾಗಿದೆ..

ಸರಕಾರ ಕಾನೂನನ್ನು ಸರಳೀಕರಣ ಗೊಳಿಸಲಿ.. ನಿವೇಶನ ವಿನ್ಯಾಸದ ಅನುಮೋದನೆ ಗ್ರಾಮ ಪಂಚಾಯತ್ ಗೆ ನೀಡಲಿ.. ಸರಕಾರದ ಗಮನ ಸೆಳೆದ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನತೆ ತನ್ನ ಸ್ವಂತ ಜಮೀನಿನಲ್ಲಿ ಮನೆ ನಿರ್ಮಿಸಲು ಮುಂದಾದಾಗ ಸರ್ಕಾರದ ವಿವಿಧ ಇಲಾಖೆಗಳ ಅನುಮೋದನೆ ಪಡೆಯಲು ಕಷ್ಟ ಪಡಬೇಕಾಗಿದೆ. ಭೂ ಅಭಿವೃದ್ಧಿ ಹಾಗೂ ಕಟ್ಟಡ ಲೈಸೆನ್ಸ್ ಪಡೆಯುವ ಸಂದರ್ಭದಲ್ಲೂ ಗಂಭೀರ ಸಮಸ್ಯೆ ಎದುರಿಸುವಂತಾಗಿದೆ ಎಂದು ಬೆಳಗಾವಿ ಅಧಿವೇಶನದ ಶೂನ್ಯ ವೇಳೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ […]

Continue Reading

ಡಿಜಿಟಲ್ ಅರೆಸ್ಟ್ ಮಹಾ ವಂಚಕರಿಗೆ ತನ್ನ ಸ್ವಂತ ನಿವೇಶನವನ್ನೇ ಮಾರಿ ಎರಡು ಕೋಟಿ ಕೊಟ್ಟ ಸಾಫ್ಟವೇರ್ ಇಂಜನಿಯರ್.!, ಶಿಕ್ಷಿತ ವರ್ಗವೇ ಗುಂಡಿಗೆ ಬೀಳುತ್ತಿದ್ದಾರೆ.. ಜೋಕೆ

ಅನಕ್ಷರಸ್ಥರು, ಹೆಬ್ಬೆಟ್ಟು ದಾಸರು ಮೋಸದ ಜಾಲಕ್ಕೆ ಬಲಿಯಾಗುವ ಮುನ್ನ ಹತ್ತಾರು ಬಾರಿ ಯೋಚಿಸುತ್ತಾರೆ. ಇದರಲ್ಲಿ ನಿಜ ಯಾವುದು? ಸುಳ್ಳು ಯಾವುದು? ಎಂಬ ಬಗ್ಗೆ ಅವರಿಗೆ ಕನಿಷ್ಠ ಜ್ಞಾನವಂತೂ ಇದೆ. ಆದರೆ ನಾವು ಮಹಾ ಬುದ್ಧಿವಂತರು, ಶಿಕ್ಷಿತರು ಅನ್ನುವ ಕೆಲವರಂತೂ ಲೋಕ ಜ್ಞಾನ ಇಲ್ಲದೆ ಮಹಾ ವಂಚನೆಗೆ ಸುಲಭವಾಗಿ ತುತ್ತಾಗುತ್ತಿದ್ದಾರೆ. ಹೆಸರಿಗೆ ಇಂಜಿನಿಯರ್, ಡಾಕ್ಟರ್, ಅನ್ನುವ ಮಾಸ್ಟರ್ ಡಿಗ್ರಿ ಅಂತೂ ಇದೆ. ಅಕ್ಷರ ಜ್ಞಾನವಿಲ್ಲದ ಅನಕ್ಷರಸ್ಥರಿಗಿಂತಲೂ ಶಿಕ್ಷಿತ ವರ್ಗ ಕಡೆಯಾಗಿ ಹೋದರಲ್ಲ.. ಇಲ್ಲೊಬ್ಬರು ಸಾಫ್ಟ್ ವೇರ್ ಇಂಜಿನಿಯರ್ ಡಿಜಿಟಲ್ […]

Continue Reading

ವಕ್ಫ್ ಅಧ್ಯಕ್ಷ ರೇಸ್‍ನಲ್ಲಿ ಯಾರ್ಯಾರು?, ಎಲ್ಲರ ಚಿತ್ತ.. ವಕ್ಫ್ ಇಲಾಖೆಯತ್ತ..

ಪ್ರಭಾವೀ ಬ್ಯಾರಿ ನಾಯಕನ ಒಲವು ಯಾರ ಕಡೆ? ನಿಗಮ ಮಂಡಳಿಗಳ ಗಡಿಬಿಡಿ ಬಹುತೇಕ ಮುಗಿದಿದೆ. ಈಗ ಏನಿದ್ದರೂ ರಾಜ್ಯದಲ್ಲಿ ಸಿಎಂ ಸಿದ್ಧರಾಮಯ್ಯ ಪೂರ್ಣಾವಧಿ ಸಿಎಂ ಆಗುತ್ತಾರೋ? ಡಿಕೆಶಿ ಸಿಎಂ ಆಗುತ್ತಾರೋ ಅನ್ನುವ ಕುತೂಹಲ ಗರಿಗೆದರಿದೆ. ಈ ಮಧ್ಯೆ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅವಧಿ ಮುಗಿದು ಎರಡು ತಿಂಗಳಾಗುತ್ತಾ ಬಂದಿದೆ. ಜಿಲ್ಲಾ ವಕ್ಫ್ ಸಮಿತಿಗೆ ಅಧ್ಯಕ್ಷರಾಗುವ ಕನಸಿನಲ್ಲಿ ಹಲವರು ತೆರೆಮರೆಯ ಲಾಬಿ ನಡೆಸುತ್ತಿದ್ದಾರೆ ಅನ್ನುವ ಸಮಾಚಾರಗಳು ಸಿಗತೊಡಗಿದೆ. ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಜಿಲ್ಲಾ […]

Continue Reading

ನಿಖಿಲ್ ಪತ್ತೆ ಮಾಡಿದ ಚಿದಂಬರ ರಹಸ್ಯ…!!

ಬಿಜೆಪಿ ಭಿನ್ನರ ಲೇಟೆಸ್ಟು ಚಿಂತೆ; ನಡ್ಡಾಗೆ ತಲುಪಿದ ಕಂಪ್ಲೇಂಟು ಪಟ್ಟಿ ಆರ್.ಟಿ.ವಿಠ್ಟಲಮೂರ್ತಿ* ಇತ್ತೀಚೆಗೆ ದಿಲ್ಲಿಯ ಎಐಸಿಸಿ ಪಡಸಾಲೆಯಿಂದ ಬರುತ್ತಿರುವ ಒಂದು ವರ್ತಮಾನ ಸಿಎಂ ಸಿದ್ದರಾಮಯ್ಯ ಅವರ ಪಾಳಯಕ್ಕೆ ಹಿತಕರವಾಗಿ ಕೇಳಿಸುತ್ತಿಲ್ಲ‌.ಹಾಗಂತ ಸಿಎಂ ಬದಲಾವಣೆ ಆಗಿ ಬಿಡುತ್ತದೆ ಅಂತಲೂ ಅವರು ಭಾವಿಸಿಲ್ಲ. ಯಾಕೆಂದರೆ, ಪಕ್ಷದ ವರಿಷ್ಟ ರಾಹುಲ್ ಗಾಂಧಿ ಅವರ ಇದುವರೆಗಿನ ಹೆಜ್ಜೆಗಳಲ್ಲಿ ಸಣ್ಣ ಅನುಮಾನವೂ ಅವರಿಗೆ ಗೋಚರಿಸಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕೆಲ ಕಾಲದ ಹಿಂದೆ ದಿಲ್ಲಿಯಲ್ಲಿ ನಡೆದ ಪಕ್ಷದ ಸಮಾವೇಶವೊಂದರಲ್ಲಿ ಸಿಎಂ ಸಿದ್ಧರಾಮಯ್ಯ ಅವರ ಬಗ್ಗೆ ರಾಹುಲ್ […]

Continue Reading

ಅನ್ನದಾತರ ಆತ್ಮಹತ್ಯೆಯಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ. 30 ತಿಂಗಳಲ್ಲಿ 2809 ರೈತರು ಆತ್ಮಹತ್ಯೆ

ದೇಶದಲ್ಲಿ ಅತೀ ಹೆಚ್ಚು ರೈತರ ಆತ್ಮಹತ್ಯೆ ಪಟ್ಟಿಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿ ಮುಂದುವರೆದಿದೆ. ಕಳೆದ ಎರಡೂವರೆ ವರ್ಷದಲ್ಲಿ ಒಟ್ಟು 2809 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೃಷಿ ಇಲಾಖೆ ಪ್ರಕಾರ 2023-24 ರಲ್ಲಿ 1,254 ರೈತರು, 2024-25 ರಲ್ಲಿ 1178 ರೈತರು, 2025 ನವೆಂಬರ್ ವರೆಗೆ 377 ರೈತರ ಆತ್ಮಹತ್ಯೆ ಕೇಸು ವರದಿಯಾಗಿದೆ. ದೇಶದಲ್ಲಿ ಇದೀಗ ಕರ್ನಾಟಕ ರಾಜ್ಯ ಅನ್ನದಾತರ ಆತ್ಮಹತ್ಯೆಯಲ್ಲಿ ಎರಡನೇ ಸ್ಥಾನ ಪಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಜಿಲ್ಲಾವಾರು ನೋಡುವುದಾದರೆ ಕಳೆದ ಎರಡೂವರೆ ವರ್ಷಗಳಲ್ಲಿ ಹಾವೇರಿ ಜಿಲ್ಲೆ […]

Continue Reading

ವೈದ್ಯಕೀಯ ಲೋಕಕ್ಕೆ ಸವಾಲಾಗಿರುವ ಎಚ್‌ಐವಿ ಸೋಂಕಿಗೆ ಒಳಗಾಗುತ್ತಿರುವವರಲ್ಲಿ ಯುವ ಜನರ ಸಂಖ್ಯೆಯೇ ಹೆಚ್ಚು

ಅಸುರಕ್ಷಿತ ನಡೆನುಡಿಗೆ ಒಳಗಾಗಿ 22 ವರ್ಷ ಒಳಗಿನ ಯುವ ಜನತೆ ಎಚ್‌ಐವಿ ಬಲೆಗೆ ಬೀಳುತ್ತಿದ್ದಾರೆ ವೈದ್ಯಕೀಯ ಲೋಕಕ್ಕೆ ಸವಾಲಾಗಿರುವ ಎಚ್‌ಐವಿ ಸೋಂಕಿಗೆ ಒಳಗಾಗುತ್ತಿರುವವರಲ್ಲಿ ಯುವ ಜನರ ಸಂಖ್ಯೆಯೇ ಹೆಚ್ಚಾಗುತ್ತಿರುವ ಆತಂಕಕಾರಿ ಸಂಗತಿಯೊಂದು ಆರೋಗ್ಯ ಇಲಾಖೆಯ ಅಂಕಿ-ಅಂಶಗಳಿಂದ ಬೆಳಕಿಗೆ ಬಂದಿದೆ. ಉತ್ತರ ಕನ್ನಡ ತಾಲೂಕಿನಲ್ಲಿ 2025ನೇ ಸಾಲಿನ ಶೇ.66.33 ರಷ್ಟು ಪ್ರಕರಣದಲ್ಲಿ ಯುವ ಜನತೆಯಲ್ಲೆ ಎಚ್‌ಐವಿ ಸೋಂಕು ದೃಢಪಟ್ಟಿದೆ. ಇದರಲ್ಲಿ 22 ವರ್ಷದ ಒಳಗಿನ ವಯಸ್ಸಿನ ಯುವ ಜನತೆ ಎನ್ನುವುದು ವಿಶೇಷವಾಗಿ ಗಮನ ಸೆಳೆದಿದೆ. ಅಂಕೋಲಾ ತಾಲೂಕಿನಲ್ಲಿ ಒಟ್ಟು […]

Continue Reading