16ನೇ ವಿಧಾನಸಭೆಯ ಅಧಿವೇಶನದ ಮುಂದುವರಿದ ಉಪ-ಅಧಿವೇಶನ ಜುಲೈ ಮೂರರಿಂದ ಆರಂಭ; ಮೂರು ದಿನಗಳ ಕಾಲ ಶಾಸಕರಿಗೆ ತರಬೇತಿ ಶಿಬಿರ

16ನೇ ವಿಧಾನಸಭೆಯ ಅಧಿವೇಶನದ ಮುಂದುವರಿದ ಉಪ ಅಧಿವೇಶನ ಇದೇ ಜುಲೈ ಮೂರರಿಂದ ಆರಂಭವಾಗಲಿದ್ದು, ಜುಲೈ 14ರ ವರೆಗೆ 10 ದಿನಗಳ ಕಾಲ ನಡೆಯಲಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜುಲೈ ಮೂರರಂದು ಮಧ್ಯಾಹ್ನ 12 ಗಂಟೆಗೆ ರಾಜ್ಯಪಾಲರು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಅಧಿವೇಶನದಲ್ಲಿ ಮುಖ್ಯವಾಗಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆ ನಡೆದು ತದನಂತರ ನಿರ್ಣಯ ಅಂಗೀಕಾರ ವಾಗಲಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ […]

Continue Reading

ಗೃಹಲಕ್ಷ್ಮಿ ಯೋಜನೆಗೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಲು ಪ್ರತ್ಯೇಕ ಆ್ಯಪ್‌; ಮೊಬೈಲ್ ನಲ್ಲಿ ಅರ್ಜಿ ತುಂಬಲು ಅವಕಾಶ,ಲಂಚ ಪಡೆದರೆ ಸೂಕ್ತ ಕ್ರಮ: ಡಿ.ಕೆ ಶಿವಕುಮಾರ್

ಮಹಿಳೆಯರಿಗೆ ಮಾಸಿಕ 2,000 ರೂ ಸಹಾಯಧನ ನೀಡುವ ಗೃಹಲಕ್ಷ್ಮಿ ಯೋಜನೆಗೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಲು ಪ್ರತ್ಯೇಕ ಆ್ಯಪ್‌ ಸಿದ್ಧಪಡಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ತಿಳಿಸಿದರು.ಗೃಹಲಕ್ಷ್ಮಿ ಯೋಜನೆಯಲ್ಲಿ ಆಗಸ್ಟ್‌ನಿಂದ ಹಣ ನೀಡಲು ಸರ್ಕಾರ ತೀರ್ಮಾನಿಸಿದೆ. ಶೀಘ್ರದಲ್ಲೇ ಈ ಯೋಜನೆಗೆ ಆಪ್ ಮೂಲಕ ನೋಂದಣಿ ಆರಂಭವಾಗಲಿದೆ ಎಂದರು. ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್ ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು […]

Continue Reading

ಮುಸ್ಲೀಮರ ಬ್ಯಾರಕ್ ಮತ್ತು ಸೌಜನ್ಯ ಕೊಲೆ ಆರೋಪಿ ಸಂತೋಷ್ ರಾವ್

ನಾನಾದರೆ ಹಿಂದುತ್ವವಾದಿಗಳ ಬೆದರಿಕೆ ಹಿನ್ನಲೆ ‘ಎ’ ಬ್ಲಾಕ್ ನಲ್ಲಿದ್ದೆ. ಸೌಜನ್ಯ ಕೊಲೆ ಆರೋಪಿ ಸಂತೋಷ್ ರಾವ್ ನನ್ನು ಯಾಕೆ ‘ಎ’ಬ್ಲಾಕ್ ಗೆ ಹಾಕಿದರು ? ✍️. ನವೀನ್ ಸೂರಿಂಜೆ ಮಂಗಳೂರಿನ ಜೈಲಿನೊಳಗೆ ಎರಡು ಜೈಲುಗಳಿವೆ‌. ಒಂದು ಮುಸ್ಲೀಮರಿಗಾಗಿ, ಇನ್ನೊಂದು ಹಿಂದೂಗಳಿಗಾಗಿ ! ಹಿಂದೂ ಕೈದಿಗಳು ಮುಸ್ಲೀಮರನ್ನೂ, ಮುಸ್ಲಿಂ ಕೈದಿಗಳು ಹಿಂದೂಗಳನ್ನು ನೋಡುವಂತೆಯೂ ಇಲ್ಲ. ಅಪ್ಪಿ ತಪ್ಪಿಯೋ, ಉದ್ದೇಶಪೂರ್ವಕವೋ, ಕಾಮಗಾರಿ ನಿಮಿತ್ತವೋ ಎಲ್ಲಾ ಕೈದಿಗಳನ್ನು ಬೆರೆಸಿದರೆ ಜೈಲಿನೊಳಗೆ ಕೊಲೆಗಳು ಗ್ಯಾರಂಟಿ. ಹಾಗಾಗಿ ಜೈಲನ್ನು ಎ ಬ್ಲಾಕ್, ಬಿ ಬ್ಲಾಕ್ […]

Continue Reading

ಆಸ್ತಿ ಖರೀದಿದಾರರಿಗೆ ಕಾದಿದೆ ಸಂಕಷ್ಟ: ಆಸ್ತಿ ಮಾರ್ಗಸೂಚಿ ದರ ಹೆಚ್ಚಳ ಸಾಧ್ಯತೆ : ಕಂದಾಯ ಸಚಿವ

ಭೂ ಖರೀದಿದಾರರಿಗೆ ಸರ್ಕಾರ ಶಾಕ್ ನೀಡಲು ಮುಂದಾಗಿದೆ‌.ಶೀಘ್ರದಲ್ಲೇ ಆಸ್ತಿ ಮಾರ್ಗಸೂಚಿ ದರ ಪರಿಷ್ಕರಿಸುವುದಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ. ಆಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡುವ ಚಿಂತನೆ ಇದೆ. ಕಳೆದ ನಾಲ್ಕೂವರೆ ವರ್ಷಗಳಿಂದ ಮಾರ್ಗಸೂಚಿ ದರ ಏರಿಕೆಯಾಗಿಲ್ಲ.‌ ಸಾಮಾನ್ಯವಾಗಿ ಎರಡು ವರ್ಷಗಳಿಗೊಮ್ಮೆ ಮಾರ್ಗಸೂಚಿ ದರ ಏರಿಕೆ ಮಾಡಲಾಗುವುದು. ಆದರೆ, ಕೊರೋನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಾಲ್ಕು ವರ್ಷದಿಂದ ಮಾರ್ಗಸೂಚಿ ದರ ಏರಿಕೆ ಮಾಡಿಲ್ಲ. ಮಾರುಕಟ್ಟೆ ದರಕ್ಕೆ ತಕ್ಕಂತೆ ಮಾರ್ಗಸೂಚಿ ದರ ಇರಬೇಕೆಂದು ಅಧಿಕಾರಿಗಳು ಹೇಳಿದ್ದಾರೆ. ಈ ನಿಟ್ಟಿನಲ್ಲಿ […]

Continue Reading

ಇದು ರೀಲ್ ಕೇರಳ ಸ್ಟೋರಿಯಲ್ಲ.. ರಿಯಲ್ ತೀರ್ಥಹಳ್ಳಿ ಸ್ಟೋರಿ.!

ಮಲೆನಾಡಲ್ಲಿ ‘ಕಿಕ್’ ಹೊಡೆದ ಬಿಜೆಪಿ ವಿದ್ಯಾರ್ಥಿ ಮುಖಂಡನ ಸೆಕ್ಸ್ ಸಿಡಿ.! ರಜೆ ಮುಗಿದು ಕಾಲೇಜು ಏನೋ ತೆರೆದಿದೆ. ಆದರೆ ಮಲೆನಾಡಿನ ತೀರ್ಥಹಳ್ಳಿಯಲ್ಲಿ ಬಲಪಂಥೀಯ ವಿದ್ಯಾರ್ಥಿ ಮುಖಂಡನ ಸೆಕ್ಸ್ ರಾಕೆಟ್ ಗಳು ಒಂದೊಂದಾಗಿ ಹೊರಬರುತ್ತಿದೆ. ಎಬಿವಿಪಿ ಸಂಘಟನೆ ಹೆಸರಿನಲ್ಲಿ ವಿದ್ಯಾರ್ಥಿನಿಯರನ್ನು ಸಂಘಟನೆಗೆ ಸೇರಿಸಿಕೊಂಡು ಹೋರಾಟ, ಪ್ರತಿಭಟನೆ ಹೆಸರಿನಲ್ಲಿ ಈತ ‘ಕಾಮದಾಟ’ ಮಾಡುತ್ತಿದ್ದದ್ದೆ ಹೆಚ್ಚು. ಮಲೆನಾಡಿನ ಪ್ರತಿಯೊಬ್ಬರ ಮೊಬೈಲಿನಲ್ಲಿ ಇದೀಗ ಈತನ ಕಾಮಕಾಂಡ ಒಂದೊಂದಾಗಿ ಬಯಲಾಗುತ್ತಿದೆ. ತೀರ್ಥಹಳ್ಳಿ ಎಂಬುದು ಸಮಾಜವಾದಕ್ಕೆ ಹೆಸರಾದ ಊರು. ಆದರೆ ಇಲ್ಲಿ ಧರ್ಮ, ಸಂಸ್ಕೃತಿ ಹೆಸರಿನಲ್ಲಿ […]

Continue Reading

ತೀರ್ಥಹಳ್ಳಿ: ಎಬಿವಿಪಿ ನಾಯಕನ ಅಶ್ಲೀಲ ವಿಡಿಯೋ ವೈರಲ್, ಯುವಕನ ಬಂಧನ; ವಿಡಿಯೋ ಶೇರ್ ಮಾಡಿದರೆ ಕಾನೂನು ಕ್ರಮ : ಎಸ್.ಪಿ

ಯುವತಿಯರ ಜತೆ ಇದ್ದು ಅಶ್ಲೀಲ ವಿಡಿಯೋಗಳು ವೈರಲ್ ಆಗಿರುವ ಬೆನ್ನಲ್ಲೆ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದು,ಎಫ್ ಐಆರ್ ದಾಖಲಿಸಿದ್ದಾರೆ. ಈ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ಸ್ಪಷ್ಟನೆ ನೀಡಿದ್ದಾರೆ.ತೀರ್ಥಹಳ್ಳಿಯ ಎಬಿವಿಪಿ ಸಂಘಟನೆಯ ನಾಯಕ ತನ್ನದೇ ಸಂಘಟನೆಯ ಕೆಲವು ಯುವತಿಯರ ಜೊತೆಗೆ ಸಲುಗೆಯಿಂದ ಇರುವ ವಿಡಿಯೋಗಳು ವೈರಲ್‌ ಆಗಿತ್ತು. ಇದರ ಬೆನ್ನಿಗೆ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವಕನೊಬ್ಬ ಕೆಲವು ಯುವತಿಯರ ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಅಶ್ಲೀಲ ವೈರಲ್‌ ಆಗಿದೆ.ಯುವಕನನ್ನು ವಶಕ್ಕೆ ಪಡೆದು ಆತನ ವಿರುದ್ಧ ಎಫ್‌ […]

Continue Reading

ಬಿಜೆಪಿ ರಾಜ್ಯಾಧ್ಯಕ್ಷರ ರಹಸ್ಯ ಶತ್ರುಸಂಹಾರ ಯಾಗ: ಸ್ಪಷ್ಟನೆ ನೀಡಿದ ಕಟೀಲು.!

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತನ್ನ ಹೊಸ ಬಂಗಲೆ ಸವಣೂರಿನ ಕುಂಜಾಡಿಯಲ್ಲಿ ಹೋಮ-ಹವನದ ಜೊತೆಗೆ ಒಂಭತ್ತು ದಿನಗಳ ಧಾರ್ಮಿಕ ಕಾರ್ಯಗಳು ನಡೆಯುತ್ತಿದ್ದು, ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಹಲವು ವಿಧದ ಚರ್ಚೆಗಳು ಆರಂಭವಾಗಿದ್ದವು. ರಾಜಕೀಯ ಪಡಸಾಲೆಯಲ್ಲಿ ಈ ಬಗ್ಗೆ ವಿಶೇಷ ಚರ್ಚೆಗಳು ಕೂಡ ನಡೆದಿತ್ತು. ನಳಿನ್ ಕುಮಾರ್ ಕಟೀಲ್ ರವರ ರಾಜ್ಯಾಧ್ಯಕ್ಷ ಹುದ್ದೆಗೆ ಕುತ್ತು ಬರುತ್ತದೆ ಜೊತೆಗೆ ಸಂಸದ ಸ್ಥಾನವು ಕೈ ತಪ್ಪಿ ಹೋಗಲಿದೆ ಅನ್ನುವ ಕಾರಣಕ್ಕೆ ವಿರೋಧಿಗಳ ಶಕ್ತಿ ಕುಂದಿಸಲು ಶತ್ರು ಸಂಹಾರ ಯಾಗದ […]

Continue Reading

ರಾಜ್ಯಾಧ್ಯಕ್ಷ ಪಟ್ಟ ಅಶೋಕ್, ವಿಪಕ್ಷ ನಾಯಕನ ಪಟ್ಟ ಬೊಮ್ಮಾಯಿ ಹೆಗಲಿಗೆ ಸಾಧ್ಯತೆ.?

ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ವಿಚಲಿತವಾಗಿದ್ದ ಬಿಜೆಪಿ ಇದೀಗ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ಸ್ಥಾನಗಳಿಗೆ ಹೆಸರು ಅಂತಿಮಗೊಳಿಸಿದ್ದು, ಅಧಿಕೃತ ಆದೇಶ ಹೊರಡಿಸುವುದು ಬಾಕಿ ಇದೆ.ವಿಧಾನಸಭಾ ಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ನಳೀನ್ ಕುಮಾರ್ ಕಟೀಲ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಆರ್.ಅಶೋಕ್ ನೇಮಕಗೊಳ್ಳುವ ಸಾಧ್ಯತೆ ಇದೆ. ಇದೇ ವೇಳೆ ವಿಪಕ್ಷ ಸ್ಥಾನದ ಜವಾಬ್ದಾರಿಯನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ವಹಿಸುವ ಸಾಧ್ಯತೆ ಇದೆ.ಚುನಾವಣೆ ನಡೆದೂ ಒಂದು ತಿಂಗಳು ಕಳೆಯುತ್ತಾ ಬಂದರೂ ಬಿಜೆಪಿ […]

Continue Reading

ನಾಯಕನಿಲ್ಲದೆ ಕಂಗಾಲಾದ ಬಿಜೆಪಿ. ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಮುಸುಕಿನ ಗುದ್ದಾಟ.! ರೇಸ್ ನಲ್ಲಿ ಬೊಮ್ಮಾಯಿ, ಯತ್ನಾಳ್, ಅಶ್ವಥ್‌ ನಾರಾಯಣ್, ಸುನಿಲ್ ಕುಮಾರ್.

ಬಿಜೆಪಿ ಪಕ್ಷದ ಹೀನಾಯ ಸೋಲಿನ ಬಳಿಕ ರಾಜ್ಯಾಧ್ಯಕ್ಷರ ಬದಲಾವಣೆಯ ಕೂಗು ಇದೀಗ ಬಹಳ ಜೋರಾಗ ತೊಡಗಿದೆ. ಆದರೂ ರಾಷ್ಟ್ರೀಯ ನಾಯಕರು ಕರ್ನಾಟಕದ ವಿದ್ಯಮಾನಗಳ ಬಗ್ಗೆ ತಲೆಕೆಡಿಸಿಕೊಂಡಂತ್ತೆ ಕಾಣಿಸುತ್ತಿಲ್ಲ. ರಾಜ್ಯದ ನಾಯಕರು ಕೂಡ ವರಿಷ್ಠರ ಮೇಲೆ ಒತ್ತಡ ಹಾಕುವುದಿರಲಿ, ಪ್ರಶ್ನಿಸುವ ಗೋಜಿಗೂ ಹೋಗುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಬಿಜೆಪಿಯ ಎರಡು ಪ್ರಮುಖ ಹುದ್ದೆಗಳೂ ಸೇರಿದಂತೆ ಯಾವುದೇ ಜವಾಬ್ದಾರಿಯನ್ನು ಹಂಚುವ ಪ್ರಕ್ರಿಯೆ ನಡೆಯಲಿಲ್ಲ. ಜುಲೈ ಮೊದಲ ವಾರದಲ್ಲಿ ರಾಜ್ಯದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಅಷ್ಟರಲ್ಲಿ ಕನಿಷ್ಟ ಪ್ರತಿಪಕ್ಷ ನಾಯಕ ಯಾರು […]

Continue Reading

ಲೋಕಸಭೆ ಗೆಲ್ಲಲು ಕಾಂಗ್ರೆಸ್ ಭರ್ಜರಿ ರಣತಂತ್ರ..

ಸಿ.ಎಂ ಪುತ್ರ ಯತೀಂದ್ರ, ಮೊಹಮ್ಮದ್ ನಲಪಾಡ್, ಗೀತಾ ಶಿವರಾಜ್ ಕುಮಾರ್, ನಿಕೇತ್ ರಾಜ್ ಮೌರ್ಯ, ಪ್ರಿಯಾಂಕಾ ಜಾರಕಿಹೊಳಿ ಕಣಕ್ಕೆ.! ಲೋಕಸಭೆ ಚುನಾವಣೆ ಸಂಬಂಧ ಬಿಜೆಪಿಯಲ್ಲಿ ಬಿರುಗಾಳಿ ಎದ್ದಿರುವಂತೆ ಕಾಂಗ್ರೆಸ್ ನಲ್ಲೂ ಚಟುವಟಿಕೆ ಜೋರಾಗಿದೆ. ವಿಧಾನಸಭೆ ಚುನಾವಣೆಯ ದೊಡ್ಡ ಗೆಲುವಿನ ಖುಷಿಯಲ್ಲಿರುವ ಕಾರ್ಯಕರ್ತರ ಪಡೆ ತಡಮಾಡದೇ ಲೋಕಸಭೆ ಚುನಾವಣೆಗೆ ಸಜ್ಜಾಗಬೇಕೆಂದು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ‌.ಕೆ ಶಿವಕುಮಾರ್ ಸಂದೇಶ ಕಳುಹಿಸಿದ್ದಾರೆ. ಲೋಕಸಭಾ ಚುನಾವಣೆಗೆ ಪರೋಕ್ಷ ತಯಾರಿ, ಚರ್ಚೆಗಳು ನಡೆದಿದೆ. ಕ್ಷೇತ್ರವಾರು ವಿಚಾರ ವಿನಿಮಯ ಕೂಡ ನಡೆದಿದೆ. 28 […]

Continue Reading