‘ಒಂದು ದೇಶ, ಒಂದು ಚುನಾವಣೆ’ ಮಾದರಿಯಲ್ಲೇ ‘ಶಿಕ್ಷಣದಲ್ಲೂ ಏಕರೂಪ’? ಕೇಂದ್ರ ಸರ್ಕಾರದಿಂದ ಪ್ರಕ್ರಿಯೆ ಆರಂಭ!

ನವದೆಹಲಿ: ‘ಒಂದು ದೇಶ, ಒಂದು ಚುನಾವಣೆ’ ತೀರ್ಮಾನ ಮೂಲಕ ದೇಶದ ಗಮನ ಸೆಳೆದಿರುವ ಕೇಂದ್ರ ಸರ್ಕಾರ ಇದೀಗ ‘ಒಂದು ದೇಶ ಏಕರೂಪದ ಶಿಕ್ಷಣ ವ್ಯವಸ್ಥೆ’ ಜಾರಿ ಬಗ್ಗೆ ಚಿಂತನೆ ನಡೆಸಿದೆ. ಈ ಸಂಬಂಧ ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ (Department of Higher Education) ಇಂದು (13.062025 ಶುಕ್ರವಾರ) ಯುಜಿಸಿ ಗೆ ಮಹತ್ವದ ನಿರ್ದೇಶನ ನೀಡಿದೆ. ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಹದೆಗೆಟ್ಟಿದ್ದು ಕಾರ್ಪೊರೇಟ್ ಲಾಭಿಯಿಂದಾಗಿ ಶಾಲೆಗಳಲ್ಲಿ ದುಬಾರಿ ಶುಲ್ಕ ವಿಧಿಸಲಾಗುತ್ತಿದೆ. ಏಕರೂಪ ಶಿಕ್ಷಣ ಹಾಗೂ ಅಗತ್ಯ […]

Continue Reading

ಭಾರತದ ಬ್ಯಾಂಕ್ ಗಳಲ್ಲಿ ವಾರಿಸುದಾರರಿಲ್ಲದ 78,000 ಕೋಟಿ ರೂಪಾಯಿ ಪತ್ತೆ

ಭಾರತದ ಬ್ಯಾಂಕ್‌ಗಳಲ್ಲಿ ವಾರಿಸುದಾರರಿಲ್ಲದ 78,000 ಕೋಟಿ ಗೂ ಮಿಕ್ಕ ಹಣ ವಿವಿಧ ಬ್ಯಾಂಕ್ ಗಳಲ್ಲಿ ಸಂಗ್ರಹವಿದೆ. ಈ ಹಣ ನಮ್ಮದು ಎಂದು ಯಾವ ಗ್ರಾಹಕರು ಮುಂದಾಗಿಲ್ಲ. ಈ ಸಂಬಂಧ ಮಂಗಳವಾರ ಸಭೆ ನಡೆಸಿರುವ ಕೇಂದ್ರ ಹಣಕಾಸು ಸಚಿವೆ ಯಾರು ಕ್ಲೈಮ್ ಮಾಡದ ಹಣವನ್ನು ನಿಜವಾದ ಮಾಲೀಕರಿಗೆ ಹಿಂದಿರುಗಿಸುವಂತೆ ಬ್ಯಾಂಕಿಂಗ್ ನಿಯಂತ್ರಕರಿಗೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ. ಕಳೆದ ಕೆಲವು ವರ್ಷಗಳಿಂದ ಬ್ಯಾಂಕ್‌ಗಳಲ್ಲಿ ವಾರಸುದಾರರಿಲ್ಲದ ಹಣದ ಮೊತ್ತ ಏರಿಕೆಯಾಗುತ್ತಿದೆ. ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿಯ (FSDC) 29 […]

Continue Reading

242 ಪ್ರಯಾಣಿಕರನ್ನು ಹೊತ್ತೊಯ್ದ ಏರ್ ಇಂಡಿಯಾ ವಿಮಾನದ ಪೈಲಟ್ ಗೆ ಸಹಾಯ ಮಾಡುತ್ತಿದ್ದ ಸಹ ಪೈಲೆಟ್ ಮಂಗಳೂರಿನ ಕ್ಲೈವ್ ಕುಂದರ್..

ದೇಶವನ್ನೇ ಬೆಚ್ಚಿ ಬೀಳಿಸಿದ ಭೀಕರ ವಿಮಾನ ದುರಂತ ಗುಜರಾತಿನ ಅಹಮದಾಬಾದ್ ನಲ್ಲಿ ನಡೆದ ಏರ್‌ ಇಂಡಿಯಾ ವಿಮಾನ ದುರಂತ ದೇಶವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ಗುರುವಾರ ಮಧ್ಯಾಹ್ನ 1.38 ಕ್ಕೆ ತೆರಳಿದ ಏರ್ ಇಂಡಿಯಾ ವಿಮಾನ AI 171 ಪತನಗೊಂಡಿದೆ. ಮಂಗಳೂರು ಮೂಲದ ಸಹ ಪೈಲೆಟ್ ಕ್ಲೈವ್ ಕುಂದರ್ ಸೇರಿದಂತೆ 242 ಜನರಿದ್ದ ವಿಮಾನದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಇದ್ದರು ಎನ್ನಲಾಗಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ದುರ್ಮರಣಕ್ಕೀಡಾಗಿರುವ ಸಾಧ್ಯತೆ ಹೆಚ್ಚಾಗಿದೆ. ಅಹಮದಾಬಾದ್‌ನ ಮೇಘನಿ ನಗರದ […]

Continue Reading

ಕಾಲ್ತುಳಿತ, ಮರಣಹೋಮ: ರಾಜ್ಯ ಸರ್ಕಾರದ ಅಮಾನತಿಗೆ CRF ಸಲಹೆ; ಕಾಲ್ತುಳಿತ, ಮರಣಹೋಮಕ್ಕೆ ಸಿಎಂ-ಡಿಸಿಎಂ ಹೊಣೆಗಾರಷ್ಟೇ ಅಲ್ಲ, ಕಾರಣಕರ್ತರು: ರಾಜ್ಯಪಾಲರಿಗೆ CRF ವರದಿ

‘ಪುಷ್ಪಾ-2’ ಕಾಲ್ತುಳಿತ ದುರಂತದಲ್ಲಿ ಅಲ್ಲೂ ಅರ್ಜುನ್ ಬಂಧನ; ಇಲ್ಲಿ ಡಿಕೆಶಿ, ಕೊಹ್ಲಿ ವಿರುದ್ದ ಏಕೆ ಕ್ರಮವಿಲ್ಲ? CRF ಪ್ರಶ್ನೆ ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಜಯೋತ್ಸವ ವೇಳೆ ಸಂಭವಿಸಿದ ಕಾಲ್ತುಳಿತ ದುರಂತ ಇದೀಗ ರಾಜ್ಯ ಸರ್ಕಾರದ ಅಸ್ತಿತ್ವಕ್ಕೂ ಸಂಚಕಾರ ತಂದಿದೆ. ಜೊತೆಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ತಂಡಕ್ಕೂ ಸಂಕಷ್ಟ ತಂದೊಡ್ಡಿದೆ. 11 ಜನರ ಮರಣ ಹೋಮಕ್ಕೆ ರಾಜ್ಯ ಸರ್ಕಾರವೇ ಕಾರಣವಾಗಿದ್ದು, ಇಲಾಖೆಗಳ ಆಕ್ಷೇಪದ ಹೊರತಾಗಿಯೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹಠಕ್ಕೆ […]

Continue Reading

ಅಮಿತ್ ಶಾ ಆತುರಕ್ಕೆ ಏನು ಕಾರಣ.? ಕೋರ್ ಕಮಿಟಿಯಲ್ಲಿ ಇವರಿಗೆ ಜಾಗವಿಲ್ಲ.

ಕುಮಾರಣ್ಣ ಯಶಸ್ವಿ ಆಗುತ್ತಿರುವುದು ಹೇಗೆ.?ಕುಮಾರಸ್ವಾಮಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಖುಷಿ. ಸಿದ್ಧರಾಮಯ್ಯ – ಡಿ.ಕೆ.ಶಿ ನಡುವಣ ಸಂಘರ್ಷ ತೀವ್ರ ರೂಪ ಪಡೆಯಲಿದೆ. ಸಂಘರ್ಷ ತಡೆಯಲು ಕಾಂಗ್ರೆಸ್ ಹೈಕಮಾಂಡ್ ವಿಫಲವಾಗಲಿದೆಯೇ.? ✍️. ಆರ್.ಟಿ.ವಿಠ್ಠಲಮೂರ್ತಿ ರಾಜ್ಯ ಬಿಜೆಪಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಾಧಾ ಮೋಹನದಾಸ್ ಅಗರ್ವಾಲ್ ಕಳೆದ ವಾರ ಕರ್ನಾಟಕಕ್ಕೆ ಬಂದರು.ಹೀಗೆ ಬಂದವರು ಪಕ್ಷದ ರಾಜ್ಯ ನಾಯಕರ ವಿರುದ್ದ ಕಂಪ್ಲೇಂಟುಗಳ ಪಟ್ಟಿ ಹಿಡಿದುಕೊಂಡು ಬಂದಿದ್ದರು.ಅಂದ ಹಾಗೆ ಇದಕ್ಕೂ ಮುಂಚೆ ತಿರಂಗಾ ಯಾತ್ರೆಗೆ ಅಂತ ಕರ್ನಾಟಕಕ್ಕೆ ಬಂದಿದ್ದ ರಾಧಾಮೋಹನದಾಸ್ ಅಗರ್ವಾಲ್, ಅವತ್ತೇ […]

Continue Reading

ಗಡ್ಕರಿ, ಸಿಂಗ್ ಬಿಜೆಪಿಯ ಹೊಸ ವಿಂಗ್; ಡಿಕೆಶಿಗೆ ಸಿಎಂ ಪಟ್ಟ ಸಿಗದಿದ್ದರೆ.?

ಅಜ್ಞಾತ ಮೂಲಗಳ ಜತೆ ರಾಜನಾಥ ಸಿಂಗ್ ಚರ್ಚಿಸಿದ್ದು ಯಾರೊಂದಿಗೆ.? ✍️. ಆರ್.ಟಿ. ವಿಠ್ಠಲಮೂರ್ತಿ ಮೊನ್ನೆ ದಿಲ್ಲಿಯ ಬಿಜೆಪಿ ಕಂಪೋಂಡಿನಿಂದ ತೇಲಿ ಬಂದ ಸುದ್ದಿ ಕರ್ನಾಟಕದ ಕಮಲ ಪಾಳಯದಲ್ಲಿ ಸಂಚಲನ‌ ಮೂಡಿಸಿದೆ. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ನಿತೀನ್ ಗಡ್ಕರಿ ಅವರನ್ನು ಹೊಸ ಆಪರೇಷನ್ನಿಗೆ ನಿಯೋಜಿಸಲಾಗಿದೆ ಎಂಬುದು ಈ ಸುದ್ದಿ. ಅಂದ ಹಾಗೆ ಕರ್ನಾಟಕದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಇಲ್ಲಿನ ಬೆಳವಣಿಗೆಗಳ ಮೇಲೆ ಕಣ್ಣಿಡಲು, ಅದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲು […]

Continue Reading

ಹಣ ಅಕ್ರಮ ವರ್ಗಾವಣೆ ಪ್ರಕರಣ: ಜಾಮೀನು ಪಡೆಯಲು ಒಂದು ವರ್ಷ ಜೈಲಿನಲ್ಲಿರಬೇಕು ಎಂಬ ನಿಯಮವಿಲ್ಲ: ಸುಪ್ರೀಂ ಕೋರ್ಟ್‌

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯು ಜಾಮೀನು ಪಡೆಯಲು ಒಂದು ವರ್ಷ ಜೈಲಿನಲ್ಲಿ ಇರಬೇಕು ಎಂಬ ನಿಯಮ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಮತ್ತು ಉಜ್ಜಲ್‌ ಭುಯಾನ್ ಅವರನ್ನು ಒಳಗೊಂಡ ನ್ಯಾಯಪೀಠವು, ರೂಪಾಯಿ 2,000 ಕೋಟಿ ಮದ್ಯ ಹಗರಣ ಪ್ರಕರಣದಲ್ಲಿ ಉದ್ಯಮಿ ಅನ್ವರ್‌ ಧೇಬರ್‌ ಅವರಿಗೆ ಜಾಮೀನು ನೀಡಿತು. ಈ ಸಂದರ್ಭದಲ್ಲಿ ಆರೋಪಿಯು ಜಾಮೀನು ಪಡೆಯಲು ಒಂದು ವರ್ಷ ಜೈಲಿನಲ್ಲಿರಬೇಕು ಎಂಬ ನಿಯಮ ಇಲ್ಲ ಎಂದು ಸ್ಪಷ್ಟಪಡಿಸಿತು. ಅನ್ವರ್ ಅವರನ್ನು ಕಳೆದ […]

Continue Reading

ಪಾಕಿಸ್ತಾನದ ಐಎಸ್‌ಐಗೆ ಮಾಹಿತಿ ರವಾನೆ, ಹರಿಯಾಣದ ಯೂಟ್ಯೂಬರ್​ ಸೇರಿದಂತೆ ಆರು ಜನರ ಬಂಧನ

ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಸಂದಿಗ್ಧ ಸ್ಥಿತಿ ನಿರ್ಮಾಣವಾದಾಗ ಪಾಕಿಸ್ತಾನ ಸೇನೆ ಮತ್ತು ಐಎಸ್‌ಐಗೆ ಮಾಹಿತಿ ಒದಗಿಸಿದ ಆರೋಪದ ಮೇಲೆ ಹರಿಯಾಣದ ಯೂಟ್ಯೂಬರ್​ ಸೇರಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.ಈ ಪ್ರಕರಣದಲ್ಲಿ ಹರಿಯಾಣ ಮೂಲದ ಟ್ರಾವೆಲ್ ವ್ಲಾಗರ್ ಜ್ಯೋತಿ ಮಲ್ಹೋತ್ರಾ, ಮಸ್ತ್‌ಗಢ ಚೀಕಾ ಗ್ರಾಮದ ದೇವೇಂದ್ರ ಸಿಂಗ್​ ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ. ಟ್ರಾವೆಲ್ ವಿಥ್ ಜೋ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ಜ್ಯೋತಿ ಮಲ್ಹೋತ್ರಾ, 2023ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಳು. ಆ ಭೇಟಿ […]

Continue Reading

ಪತ್ನಿಯರನ್ನು ಸಮಾನವಾಗಿ ನೋಡಿಕೊಂಡಲ್ಲಿ ಮುಸ್ಲಿಮರು ಒಬ್ಬರಿಗಿಂತ ಹೆಚ್ಚು ಪತ್ನಿಯರನ್ನು ಹೊಂದಬಹುದು: ಅಲಹಾಬಾದ್ ಹೈಕೋರ್ಟ್‌

ಬಹುಪತ್ನಿತ್ವಕ್ಕೆ ಸಕಾರಣವಿದ್ದಲ್ಲಿ ಮತ್ತು ಎಲ್ಲಾ ಪತ್ನಿಯರನ್ನೂ ಸಮಾನವಾಗಿ ನೋಡಿಕೊಂಡಲ್ಲಿ ಮುಸ್ಲಿಮರು ಒಬ್ಬರಿಗಿಂತ ಹೆಚ್ಚು ಪತ್ನಿಯರನ್ನು ಹೊಂದಬಹುದು ಎಂದು ಅಲಹಾಬಾದ್ ಹೈಕೋರ್ಟ್‌ ಗುರುವಾರ ಹೇಳಿದೆ. ಮೊದಲ ಮದುವೆಯನ್ನು ಗೌಪ್ಯವಾಗಿಟ್ಟು ತನ್ನನ್ನೂ ಮದುವೆಯಾಗಿ ವಂಚಿಸಲಾಗಿದೆ ಎಂದು ಮಹಿಳೆಯೊಬ್ಬರು ನೀಡಿದ ದೂರನ್ನು ಪರಿಗಣಿಸಿ ಉತ್ತರ ಪ್ರದೇಶದ ಮೊರಾದಾಬಾದ್‌ನ ಜಿಲ್ಲಾ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದ್ದನ್ನು ಮತ್ತು ಆರೋಪಪಟ್ಟಿಯನ್ನು ರದ್ದುಪಡಿಸುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಅರುಣ್ ಕುಮಾರ್ ಸಿಂಗ್ ದೇಶವಾಲ್ ಅವರಿದ್ದ ಪೀಠವು ಈ ಅಭಿಪ್ರಾಯ ಹೇಳಿದೆ. ಮುಸ್ಲಿಂ ವೈಯಕ್ತಿಕ […]

Continue Reading

ಕರ್ನಲ್ ಸೋಫಿಯಾ ಖುರೇಷಿ “ಭಯೋತ್ಪಾದಕರ ಸಹೋದರಿ” ಬಿಜೆಪಿ ನಾಯಕ, ರಾಜ್ಯ ಸಚಿವ ಕುನ್ವರ್ ವಿಜಯ್ ಶಾ ವಿರುದ್ದ ಎಪ್ಐಆರ್.

ಮಧ್ಯಪ್ರದೇಶ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲಿಸಲು ನಿರ್ದೇಶನ ಕರ್ನಲ್ ಸೋಫಿಯಾ ಖುರೇಷಿ ಅವರನ್ನು “ಭಯೋತ್ಪಾದಕರ ಸಹೋದರಿ” ಎಂದು ಕರೆದಿದ್ದಕ್ಕಾಗಿ ಬಿಜೆಪಿ ನಾಯಕ ಮತ್ತು ರಾಜ್ಯ ಸಚಿವ ಕುನ್ವರ್ ವಿಜಯ್ ಶಾ ಅವರ ವಿರುದ್ಧ ಮಧ್ಯಪ್ರದೇಶ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲಿಸಲು ನಿರ್ದೇಶಿಸಿದೆ. ಭಾರತೀಯ ನ್ಯಾಯ ಸಂಹಿತಾ, 2023 ರ ಅಡಿಯಲ್ಲಿ ಪ್ರಾಥಮಿಕವಾಗಿ ಅಪರಾಧಗಳನ್ನು ಸಚಿವರ ವಿರುದ್ಧ ಮಾಡಲಾಗುತ್ತಿದೆ ಎಂದು ನ್ಯಾಯಾಲಯ ಗಮನಿಸಿದೆ. ನ್ಯಾಯಮೂರ್ತಿ ಅತುಲ್ ಶ್ರೀಧರನ್ ಮತ್ತು ನ್ಯಾಯಮೂರ್ತಿ ಅನುರಾಧಾ ಶುಕ್ಲಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಭಾರತದ […]

Continue Reading