2024ರ ಮಾರ್ಚ್ ಒಳಗಾಗಿ ಜಿಪಿಎಸ್ ಆಧಾರಿತ ಹೆದ್ದಾರಿ ಟೋಲ್ ಸಂಗ್ರಹ ವ್ಯವಸ್ಥೆ ಜಾರಿ: ನಿತೀನ್ ಗಡ್ಕರಿ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶುಲ್ಕ ಪಾವತಿಗಾಗಿ ಪ್ರಸ್ತುತ ಜಾರಿಯಲ್ಲಿರುವ ಫಾಸ್ಟ್‌ಟ್ಯಾಗ್ ಬದಲಾಗಿ ಜಿಪಿಎಸ್ ಆಧರಿತ ಟೋಲ್ ಸಂಗ್ರಹ ಸೌಲಭ್ಯವನ್ನು ಜಾರಿಗೆ ತರಲಾಗುತ್ತಿದ್ದು, ಹೊಸ ಶುಲ್ಕ ಪಾವತಿ ಸೌಲಭ್ಯವು ಸರಳ ಮತ್ತು ತ್ವರಿತ ಪ್ರಕ್ರಿಯೊಂದಿಗೆ ವಾಹನ ಮಾಲೀಕರಿಗೆ ತಡೆರಹಿತ ಪ್ರಯಾಣಕ್ಕೆ ಸಹಕಾರಿಯಾಗುವ ನೀರಿಕ್ಷೆಗಳಿವೆ. 2024ರ ಮಾರ್ಚ್ ಒಳಗಾಗಿ ಜಿಪಿಎಸ್ ಆಧಾರಿತ ಹೆದ್ದಾರಿ ಟೋಲ್ ಸಂಗ್ರಹ ವ್ಯವಸ್ಥೆಯು ಜಾರಿಯಾಗುವುದು ಬಹುತೇಕ ಖಚಿತವಾಗಿದ್ದು, ಇದು ಪ್ರಸ್ತುತ ಜಾರಿಯಲ್ಲಿರುವ ಶುಲ್ಕ ಸಂಗ್ರಹ ವಿಧಾನವನ್ನು ಮತ್ತಷ್ಟು ಸರಳಗೊಳಿಸುವುದಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ […]

Continue Reading

ತಾಯಿಯ ವಶದಲ್ಲಿದ್ದ ಮಗುವನ್ನು ತಂದೆ ಕರೆದೊಯ್ದರೆ ಅದು ಕಿಡ್ನಾಪ್ ಅಲ್ಲ: ಬಾಂಬೆ ಹೈಕೋರ್ಟ್

ತಾಯಿಯ ವಶದಲ್ಲಿದ್ದ ಮಗುವನ್ನು ಮಗುವಿನ ತಂದೆ ಕರೆದುಕೊಂಡು ಹೋದರೆ ಅದನ್ನು ಅಪಹರಣ ಎಂದು ಪರಿಗಣಿಸಲಾಗದು ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ಮಹತ್ವದ ತೀರ್ಪು ನೀಡಿದೆ. ಪರಿತ್ಯಕ್ತ ಪತ್ನಿಯ ಆರೈಕೆ ಮತ್ತು ಪೋಷಣೆಯಲ್ಲಿ ಇದ್ದ ಮೂರು ವರ್ಷದ ಮಗುವನ್ನು ಕರೆದೊಯ್ದ ಆರೋಪದ ಮೇಲೆ ಪತಿಯ ವಿರುದ್ಧ ಪತ್ನಿ ಅಪಹರಣ ಪ್ರಕರಣದ ದೂರನ್ನು ನೀಡಿದ್ದರು. ಈ ದೂರನ್ನು ದಾಖಲಿಸಿಕೊಂಡ ಪೊಲೀಸರು ಐಪಿಸಿ ಸೆಕ್ಷನ್ 363 ರ ಅಡಿಯಲ್ಲಿ ಅಪಹರಣ ಪ್ರಕರಣ ಕೇಸು ದಾಖಲಿಸಿದ್ದರು. ಈ ಪ್ರಕರಣವನ್ನು ವಜಾಗೊಳಿಸಬೇಕು ಎಂದು […]

Continue Reading

ರೆಸ್ಟೋರೆಂಟಿನಲ್ಲಿ ವೇಶ್ಯಾವಟಿಕೆ; 12 ಮಂದಿ ಬಾಲಕಿಯರೊಂದಿಗೆ 18 ಮಂದಿ ಬಾಲಕರ ಬಂಧನ

ರೆಸ್ಟೋರೆಂಟ್ ಒಂದರಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 12 ಮಂದಿ ಬಾಲಕಿಯರೊಂದಿಗೆ 18 ಮಂದಿ ಬಾಲಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. DYSP ನೇತೃತ್ವದಲ್ಲಿ ಹೋಟೆಲ್ ಮೇಲೆ ದಾಳಿ ನಡೆಸಿ ಇವರನ್ನು ಬಂದಿಸಲಾಗಿದೆ. ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿದ ಪೊಲೀಸರು ಆರ್ರಾ ಜಿಲ್ಲೆಯಲ್ಲಿರುವ ಹೋಟೆಲ್ ಮೇಲೆ ದಾಳಿ ನಡೆಸಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಯುವತಿಯರು ಸೇರಿದಂತೆ 30 ಜನರನ್ನು ಬಂಧಿಸಿದ್ದಾರೆ. ಹೋಟೆಲ್‌ ಮಾಲೀಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು […]

Continue Reading

ರಾಮ ಮಂದಿರ ಉದ್ಘಾಟನೆಯಿಂದ ಕರಾವಳಿಯ ಶೂದ್ರ ಸ್ವಾಮೀಜಿಗಳು ಹೊರಕ್ಕೆ.!

ಆರ್‌ಎಸ್‌ಎಸ್‌ನ ಅಂತಿಮ ಗುರಿ ಬ್ರಾಹ್ಮಣ್ಯದ ಸ್ಥಾಪನೆಯೇ ಹೊರತು ಹಿಂದುತ್ವವಲ್ಲ.! ✍️. ನವೀನ್ ಸೂರಿಂಜೆ, ಪತ್ರಕರ್ತ “ರಾಮನ ಹೆಸರಿನಲ್ಲಿ ಕರಾವಳಿಯನ್ನು ಕೋಮುವಾದದ ಪ್ರಯೋಗಶಾಲೆಯನ್ನಾಗಿಸುವ ಮೂಲಕ ಕರ್ನಾಟಕದಲ್ಲಿ ಸಾವು ನೋವು, ಅಪನಂಬಿಕೆ, ಧರ್ಮ ದ್ವೇಷಗಳಿಗೆ ಕಾರಣರಾದ ಶೂದ್ರ ಸ್ವಾಮೀಜಿಗಳಿಗೆ ಈಗಲಾದರೂ ಬುದ್ದಿ ಬರಬೇಕಿದೆ…” ರಾಮಮಂದಿರ ಉದ್ಘಾಟನೆಯ ಕಾರ್ಯಕ್ರಮಕ್ಕೆ ದೇಶದ ಗಣ್ಯರು, ಪ್ರಮುಖ ರಾಜಕಾರಣಿಗಳು, ಸ್ವಾಮೀಜಿಗಳನ್ನು ವಿಶೇಷವಾಗಿ ಆಹ್ವಾನಿಸಲಾಗುತ್ತಿದೆ. ರಾಮಮಂದಿರ ನಿರ್ಮಾಣ ವಿಷಯವನ್ನೇ ಇಟ್ಟುಕೊಂಡು ಕೋಮುವಾದದ ಪ್ರಯೋಗಶಾಲೆಯನ್ನಾಗಿಸಿದ ಕರಾವಳಿಯ ಶೂದ್ರ ಸ್ವಾಮೀಜಿಗಳನ್ನು ಮಾತ್ರ ರಾಮಮಂದಿರ ಉದ್ಘಾಟನೆಯಿಂದ ಹೊರಗಿಡಲಾಗಿದೆ. 1992ರಲ್ಲಿ ಬಾಬರೀ ಮಸೀದಿಯನ್ನು […]

Continue Reading

ತನ್ನ ಹೆಂಡತಿಯನ್ನು ಬಲವಂತ ಮಾಡಿ ಲೈಂಗಿಕ ಕ್ರಿಯೆ ನಡೆಸಿದರೆ ಅದೂ ಕೂಡಾ ಅತ್ಯಾಚಾರ ಎಂದೇ ಪರಿಗಣಿಸಲಾಗುತ್ತದೆ: ಗುಜರಾತ್ ಹೈ ಕೋರ್ಟ್

ಗುಜರಾತ್: ಅತ್ಯಾಚಾರ ಎಂದರೆ ಬಲವಂತಾಗಿ ಲೈಂಗಿಕ ಕ್ರಿಯೆ ನಡೆಸುವಂತಹದ್ದು. ಅದನ್ನು ಯಾರು ಮಾಡಿದರೂ ಅತ್ಯಾಚಾರವೇ. ತನ್ನ ಹೆಂಡತಿಯನ್ನು ಬಲವಂತ ಮಾಡಿ ಲೈಂಗಿಕ ಕ್ರಿಯೆ ನಡೆಸಿದರೆ ಅದೂ ಕೂಡಾ ಅತ್ಯಾಚಾರ ಎಂದೇ ಪರಿಗಣಿಸಲಾಗುತ್ತದೆ ಎಂದು ಗುಜರಾತ್‌ ಹೈಕೋರ್ಟ್‌ ಹೇಳಿದೆ. ಆಸ್ಟ್ರೇಲಿಯಾ, ಅಮೆರಿಕ, ನ್ಯೂಜಿಲೆಂಡ್‌, ಕೆನಡಾ ಮುಂತಾದ ದೇಶಗಳಲ್ಲಿ ಬಲವಂತದಿಂದ ಗಂಡನೇ ಲೈಂಗಿಕ ಕ್ರಿಯೆ ನಡೆಸೋದೂ ಕಾನೂನು ಬಾಹಿರವಾಗಿದೆ. ಹೀಗಾಗಿ ಪತ್ನಿಗೆ ಇಷ್ಟವಿಲ್ಲದಿದ್ದರೂ ಬಲವಂತ ಮಾಡಿ ಲೈಂಗಿಕ ಕ್ರಿಯೆ ನಡೆಸಿದರೆ ಅದನ್ನು ನಾನು ಅಪರಾಧ ಎಂದು ಒಪ್ಪಿಕೊಳ್ಳುವೆ ಎಂದು ಗುಜರಾತ್​​​​ […]

Continue Reading

ಕೇರಳ,ತಮಿಳುನಾಡು ರಾಜ್ಯಗಳಲ್ಲಿ ಮತ್ತೆ ಕೊರೋನಾ ಉಲ್ಬಣವಾಗಿದ್ದು, ಲಾಕ್ ಡೌನ್ ವಿಧಿಸುವ ಸಾಧ್ಯತೆ ಇದೆ

ದೇಶವನ್ನೇ ಕಾಡಿ ಬೆಚ್ಚಿ ಬೀಳಿಸಿದ ಸಂಕ್ರಾಮಿಕ ರೋಗ ಕೊರೋನಾ ಮತ್ತೆ ಕೇರಳದಲ್ಲಿ ಉಲ್ಬಣವಾಗಿದ್ದು, ಜನ ಸಂಚಾರಕ್ಕೆ ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.ಭಾರತದಲ್ಲಿ ಮೊದಲ ಪ್ರಕರಣ ಕೇರಳದಲ್ಲೇ ಕಂಡು ಬಂದಿತ್ತು. ಈಗ ಮತ್ತೆ ಅದೇ ರಾಜ್ಯದಲ್ಲಿ ಸಂಕ್ರಾಮಿಕ ರೋಗದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ನಿರಂತರ ಮುಂಜಾಗ್ರತೆ ವಹಿಸುವಂತೆ ಸೂಚನೆಗಳನ್ನು ನೀಡಲಾಗಿದೆ. ಸಿಂಗಾಪುರ, ಮಲೇಷ್ಯಾ ಮತ್ತು ಇಂಡೋನೇಷ್ಯಾದಂತಹ ಹಲವಾರು ಆಗ್ನೇಯ ಏಷ್ಯಾದ ದೇಶಗಳಲ್ಲಿ ಕೊರೋನಾ ಪ್ರಕರಣಗಳು ದಾಖಲೆಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಈ […]

Continue Reading

ಗುರ್ಪತ್‌ವಂತ್ ಸಿಂಗ್ ಪನ್ನುನ್ ಹತ್ಯೆ ಆರೋಪ; ಭಾರತೀಯ ಪ್ರಜೆ ನಿಖಿಲ್ ಗುಪ್ತಾ ಹಸ್ತಾಂತರಕ್ಕೆ ಅಮೇರಿಕ ಕೋರಿಕೆ

ಖಲಿಸ್ತಾನ್​ ಉಗ್ರ ಗುರ್ಪತ್‌ವಂತ್ ಸಿಂಗ್ ಪನ್ನುನ್​ನನ್ನು ಹತ್ಯೆಗೈದ ಸಂಚಿನಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಭಾರತೀಯ ಪ್ರಜೆ ನಿಖಿಲ್ ಗುಪ್ತಾರನ್ನು ಹಸ್ತಾಂತರಿಸುವಂತೆ ಅಮೆರಿಕಾ ಕೋರಿದೆ, ಜೆಕ್ ರಿಪಬ್ಲಿಕ್‌ ನಲ್ಲಿ ಈ ವರ್ಷದ ಆರಂಭದಲ್ಲಿ ಅವರನ್ನು ಬಂಧಿಸಲಾಗಿದೆ. ಚೆಕ್ ಗಣರಾಜ್ಯದ ನ್ಯಾಯ ಸಚಿವಾಲಯವು ನಿಖಿಲ್ ಗುಪ್ತಾ ಬಂಧನವನ್ನು ದೃಢಪಡಿಸಿದೆ. ಪನ್ನುನ್‌ನನ್ನು ಗುರಿಯಾಗಿಸಿಕೊಂಡು ‘ಬಾಡಿಗೆಗಾಗಿ ಕೊಲೆ’ ಸಂಚಿನಲ್ಲಿ ಭಾರತೀಯ ಪ್ರಜೆ ಗುಪ್ತಾ ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವ ಯುನೈಟೆಡ್ ಸ್ಟೇಟ್ಸ್‌ನ ಆದೇಶದ ಮೇರೆಗೆ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಭಾರತೀಯ ಸರ್ಕಾರಿ ನೌಕರನ ನಿರ್ದೇಶನದ […]

Continue Reading

ಹದಿಹರೆಯದ ಯುವತಿಯನ್ನು ಮನೆಯ ವರಾಂಡದಿಂದಲೇ ಎಳೆದೊಯ್ದು ನಾಲ್ಕು ಮಂದಿ ಯುವಕರಿಂದ ಅತ್ಯಾಚಾರ.!

ಗುರಗಾಂವ್: ಖಾಸಗಿ ಶಾಲೆಯಲ್ಲಿ ಪಿಯುಸಿ ಓದುತ್ತಿರುವ ಹದಿಹರೆಯದ ಯುವತಿಯನ್ನು ಅಪಾಟ್ಮೆಂಟ್ ಒಂದಕ್ಕೆ ಎಳೆದೊಯ್ದ ನಾಲ್ಕು ಮಂದಿ ಯುವಕರ ತಂಡ ಆಕೆಯ ಮೇಲೆ ಅಮಾನುಷವಾಗಿ ಅತ್ಯಾಚಾರ ನಡೆಸಿ, ಮಾರನೆಯ ದಿನ ಬೆಳಿಗ್ಗೆ ಆಕೆಯ ಮನೆ ಬಳಿ ಬಿಟ್ಟು ಹೋದ ಘಟನೆ ನಡೆದಿರುತ್ತದೆ. ರವಿವಾರ ರಾತ್ರಿ ವಿಧ್ಯಾರ್ಥಿನಿಯನ್ನು ಅಪಹರಿಸಿದ್ದ ಆರೋಪಿಗಳು ಸೋಮವಾರ ಬೆಳಿಗ್ಗೆ ಆಕೆಯನ್ನು ಮರಳಿ ಕರೆ ತಂದು, ಆಕೆಯ ಮನೆಯ ಹೊರಗೆ ತಂದು ಬಿಟ್ಟು ಹೋಗಿದ್ದು, ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾರೆ. ಮಾಹಿತಿ ಪಡೆದ […]

Continue Reading

ಮಾಜಿ ಯೋಧನಿಗೆ ಮದುವೆ ಮಾಡಿಸಿ, ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ

ಕೇರಳ ಮೂಲದ ಮಾಜಿ ಯೋಧರೊಬ್ಬರಿಗೆ ಮದುವೆ ಮಾಡಿಸುವುದಾಗಿ ನಂಬಿಸಿ 8 ಲಕ್ಷ ರೂಪಾಯಿ ನಗದು ಹಾಗು 2 ಲಕ್ಷ ರೂಪಾಯಿ ಮೌಲ್ಯದ ಚೆಕ್ ಪಡೆದು ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳದ ಸಮೀಪದ ನಿವಾಸಿ ಅಬ್ದುಲ್ ಬಶೀರ್, ಕಡಬದ ನಿವಾಸಿ ಸಾಧಿಕ್,ಮತ್ತೊಬ್ಬ ಆರೋಪಿ ಫೈಝಲ್, ಇವರುಗಳು ಈಗಾಗಲೇ ಬೇರೊಂದು ಪ್ರಕರಣದಲ್ಲಿ ಮೈಸೂರಿನಲ್ಲಿ ಬಂಧನವಾಗಿದ್ದಾರೆ. ಬಂಧಿತ ಆರೋಪಿಗಳಿಂದ ಮೊಬೈಲ್, ನಗದು ಹಾಗೂ ಚೆಕ್​ನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೋರ್ವ ಆರೋಪಿ ಅಮೀರ್ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಎರ್ನಾಕುಳಂ ಜಿಲ್ಲೆಯ ನಿವಾಸಿ, […]

Continue Reading

ಕಾನೂನಿಗಿಂತ ಯಾರೂ ದೊಡ್ಡವರಲ್ಲ; ಕರ್ತವ್ಯಕ್ಕೆ ಚ್ಯುತಿ ಬಂದರೆ ಸೂಕ್ತ ಪರಿಣಾಮ ಎದುರಿಸಲೇಬೇಕು: ಕೇರಳ ಹೈಕೋರ್ಟ್‌

ನ್ಯಾಯಾಧೀಶರೂ ಸೇರಿದಂತೆ ನ್ಯಾಯಾಂಗದ ಉನ್ನತ ಅಧಿಕಾರಿಗಳು ಕಾನೂನಿಗಿಂತ ದೊಡ್ಡವರಲ್ಲ. ಕರ್ತವ್ಯದಲ್ಲಿ ಲೋಪ ಮಾಡಿದರೆ, ಅಥವಾ ಬದ್ಧತೆಗೆ ಚ್ಯುತಿ ಬಂದರೆ ಅವರೂ ಕಾನೂನು ಪ್ರಕಾರ ಸೂಕ್ತ ಪರಿಣಾಮವನ್ನು ಎದುರಿಸಬೇಕು ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಲಕ್ಷದ್ವೀಪದ ಮಾಜಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಕೆ. ಚೆರಿಯ ಕೋಯಾ ಅವರನ್ನು ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಿದ ಕೇರಳ ಹೈಕೋರ್ಟ್ ನ್ಯಾಯಪೀಠ, ಈ ಮಹತ್ವದ ಆದೇಶ ನೀಡಿದೆ. ಇಂತಹ ತೀರ್ಪುಗಳು ಎಲ್ಲರಿಗೂ ಪಾಠವಾಗಬೇಕು. ತಪ್ಪು ಎಸಗಿದ್ದರೆ ನ್ಯಾಯಾಧೀಶರೂ […]

Continue Reading