ದನ ಕಳವು ಮಾಡುತ್ತಿದ್ದ ಅಂತರಾಜ್ಯದ ನಾಟೋರಿಯಸ್ ಗ್ಯಾಂಗ್ ನ ಹೆಡೆಮುರಿ ಕಟ್ಟಿದ ಬಜಪೆ ಪೊಲೀಸರು

ಕರಾವಳಿ

ಇರ್ಷಾದ್ ಗಂಜಿಮಠ,ಇರ್ಫಾನ್ ಪೊಲೀಸರ ಬಲೆಗೆ.ಮದ್ದಡ್ಕ ಪಾರೂಕ್ ಪೊಲೀಸರಿಂದ ತಪ್ಪಿಕೊಂಡು ಪರಾರಿ

ಬಜಪೆ: ದಿನಾಂಕ 06-03-2023 ಸೋಮವಾರ ಬೆಳಗ್ಗಿನ ಜಾವ ಸುಮಾರು 5-30 ಗಂಟೆಗೆ ಉಪ-ನಿರೀಕ್ಷಕ ಪೂವಪ್ಪರವರು ಸಿಬ್ಬಂದಿಗಳ ಜೊತೆ ಅಡ್ಡೂರು ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ದ.ಕ ಮತ್ತು ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ದನಗಳನ್ನು ಕಳವು ಮಾಡುತ್ತಿದ್ದ ಗಂಜಿಮಠ ನಿವಾಸಿ ಇರ್ಷಾದ್ ಮತ್ತು ಮಂಜೇಶ್ವರದ ನಿವಾಸಿ ಇರ್ಪಾನ್ ಎಂಬವರನ್ನು ದನ ಕಳವು ಮಾಡಲು ಉಪಯೋಗಿಸಿರುವ KA-01,AB 0832 ನಂಬರಿನ ಮಹೇಂದ್ರ XYLO ಕಾರು ಹಾಗು ಇತರ ಸೊತ್ತುಗಳೊಂದಿಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ತಪಾಸಣೆ ವೇಳೆ ಮದ್ದಡ್ಕ ಪಾರೂಕ್ ಎಂಬಾತನು ಪೊಲೀಸರಿಂದ ತಪ್ಪಿಕೊಂಡು ಪರಾರಿಯಾಗಿರುತ್ತಾನೆ.
ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಿದಾಗ ಇವರು ಇತ್ತೀಚೆಗೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಮಿತ್ತೂರು ಎಂಬಲ್ಲಿಂದ 6 ದನಗಳನ್ನು ಮತ್ತು 2021 ರಲ್ಲಿ ಬಡಗ ಎಡಪದವು ದಡ್ಡಿಯಿಂದ 2 ದನಗಳನ್ನು ಕೆಂಪು ಬಣ್ಣದ XYLO ಕಾರಿನಲ್ಲಿ ಕಳವು ಮಾಡಿರುವ ವಿಚಾರ ಒಪ್ಪಿಕೊಂಡಿರುತ್ತಾರೆ.

ತಪ್ಪಿಕೊಂಡು ಪರಾರಿಯಾಗಿರುವ ಮದ್ದಡ್ಕ ಪಾರೂಕ್ ಎಂಬಾತನ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆಸಲಾಗಿದೆ. ಆರೋಪಿಗಳ ವಿರುದ್ದ ಬಜಪೆ, ಕೊಣಾಜೆ, ಕಾವೂರು,ಮೂಡುಬಿದ್ರೆ, ಮಂಗಳೂರು ಉತ್ತರ, ದ.ಕ ಜಿಲ್ಲೆಯ ಪುಂಜಾಲಕಟ್ಟೆ, ಬಂಟ್ವಾಳ ನಗರ ಮತ್ತು ಚಿಕ್ಕಮಂಗಳೂರು ಜಿಲ್ಲೆಯ ಬಣಕ್ಕಲ್, ಬಸವನಹಳ್ಳಿ ಮತ್ತು ಚಿಕ್ಕಮಂಗಳೂರು ನಗರ ಪೊಲೀಸ್ ಠಾಣೆಗಳಲ್ಲಿ ದನ ಕಳವು ಮತ್ತು ದರೋಡೆಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ.

ಮಂಗಳೂರು ಪೊಲೀಸ್ ಆಯುಕ್ತರಾದ ಶ್ರೀ ಕುಲದೀಪ್ ಕುಮಾರ್ ಜೈನ್ ರವರ ಮಾರ್ಗದರ್ಶನದಂತೆ, DCP ಗಳಾದ ಅಂಶು ಕುಮಾರ್ ,ದಿನೇಶ್ ಕುಮಾರ ರವರ ನಿರ್ದೇಶನದಲ್ಲಿ ಮಂಗಳೂರು ಉತ್ತರ ಉಪ ವಿಭಾಗದ ACP ಮನೋಜ್ ಕುಮಾರ್ ನಾಯ್ಕ್ ರವರ ನೇತೃತ್ವದಲ್ಲಿ ಬಜಪೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ರವರ ನೇತೃತ್ವದಲ್ಲಿ ಉಪ-ನಿರೀಕ್ಷಕರಾದ ಪೂವಪ್ಪ, ಗುರು ಕಾಂತಿ, ASI ರಾಮಣ್ಣ ಪೂಜಾರಿ, ಸುಜನ್, ರಶೀದ ಶೇಖ, ರಾಜೇಶ್, ಸಂತೋಷ,ಸಂಜೀವ ಭಜಂತ್ರಿ, ಬಸವರಾಜ್ ಪಾಟೀಲ್, ಮೋಹನ್, ಉಮೇಶ್ ಮತ್ತು ಕೆಂಚಪ್ಪ ರವರು ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದರು.