ಬಾರೀ ಅಕ್ರಮ ಮರಳು ದಾಸ್ತಾನು, ಗಣಿ ಇಲಾಖಾ ಅಧಿಕಾರಿಗಳಿಂದ ದಾಳಿ.!

ಕರಾವಳಿ

ಅಕ್ರಮವಾಗಿ ಖಾಸಗಿ ಜಾಗದಲ್ಲಿ ಬಾರೀ ಮರಳು ದಾಸ್ತಾನು ಮಾಡಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಉಡುಪಿ ಗಣಿ ಇಲಾಖಾ ಅಧಿಕಾರಿಗಳು ದಾಳಿ ನಡೆಸಿ ಮರಳು ಪತ್ತೆ ಮಾಡಿ ಆರೋಪಿಗೆ ನೋಟೀಸು ನೀಡಿದ್ದಾರೆ.

ಅಕ್ರಮ ಮರಳುದಂಧೆಯ ಆರೋಪಿ ಮೂಲತಃ ಹೊರ ಜಿಲ್ಲೆಯವನ್ನಾಗಿದ್ದು ಇದೀಗ ಎರ್ಮಾಳಿನಲ್ಲಿ ನೆಲೆಸಿರುವ ಗಿರೀಶ್ ಎರ್ಮಾಳು, ಈತ ಪಡುಬಿದ್ರಿಯ ಅಬ್ಬೇಡಿ ರಸ್ತೆಯ ನಾಗರಾಜ ನಗರ ಬಳಿ, ಎರ್ಮಾಳಿನ ಪೂಂದಾಡು ಮೈದಾನ ಸಮೀಪ ಹಾಗೂ ಬೆಳಪುವಿನ ಪಡುಬಿದ್ರಿ ರೈಲ್ವೆ ಸ್ಟೇಷನ್ ಬಳಿಯ ಖಾಸಗಿ ಸ್ಥಳದಲ್ಲಿ ಅಕ್ರಮವಾಗಿ ಸಮುದ್ರ ಭಾಗ ಮರಳನ್ನು ಸುಮಾರು ಎರಡು ಲಕ್ಷ ರೂಪಾಯಿಗೂ ಅಧಿಕ ಬೆಲೆ ಬಾಳುವ 75 ಟನ್ ಮರಳನ್ನು ಮೂರು ಗ್ರಾಮಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದು,ಅದನ್ನು ಗಣಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಈತ ಈ ಹಿಂದೆಯೂ ಇಂತಹಾ ಕೃತ್ಯಗಳಲ್ಲಿ ಬಾಗಿಯಾಗಿ ದಂಡ ಕಟ್ಟಿಸಿಕೊಂಡವನಾಗಿದ್ದಾನೆ.ಅಕ್ರಮ ಮರಳು ದಾಸ್ತಾನು ಪ್ರದೇಶಕ್ಕೆ ದಾಳಿ ನಡೆಸಿದ ಉಡುಪಿ ಗಣಿ ಮತ್ತು ಭೂ ಇಲಾಖೆ ಅಧಿಕಾರಿ ಗೌತಂ ಶಾಸ್ತ್ರಿ, ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಲಾಗಿದ್ದು, ಮೂರು ಗ್ರಾಮಗಳಲ್ಲೂ ಅಕ್ರಮವಾಗಿ ದಾಸ್ತಾನು ಮಾಡಲಾದ ಮರಳನ್ನು ನಾನೇ ದಾಸ್ತಾನು ನಡೆಸಿರುವುದಾಗಿ ಆರೋಪಿ ಗಿರೀಶ್ ಎರ್ಮಾಳು ಒಪ್ಪಿಕೊಂಡಿದ್ದಾನೆ ಎಂದಿದ್ದಾರೆ. ಇಷ್ಟರಲ್ಲೇ ಆತನಿಗೆ ಸುಮಾರು ಎರಡು ಲಕ್ಷ ರೂಪಾಯಿ ದಂಡ ವಿಧಿಸಿ ನೋಟಿಸು ನೀಡಲಾಗಿದೆ.ನಿಗದಿತ ಸಮಯದಲ್ಲಿ ದಂಡ ಪಾವತಿಸದೇ ಇದ್ದಲ್ಲಿ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.