ಬಂಟ್ವಾಳ: ಯುವಕನ ಮೇಲೆ ತಲ್ವಾರ್ ದಾಳಿ; ಪ್ರಾಣಾಪಾಯದಿಂದ ಪಾರು

ಕರಾವಳಿ

ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮೈಂದಾಳದಲ್ಲಿ ನಿನ್ನೆ ರಾತ್ರಿ ಯುವಕನೋರ್ವನ ಮೇಲೆ ತಲ್ವಾರ್ ದಾಳಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದಾಳಿಗೊಳಗಾದ ಯುವಕನನ್ನು ನಾವೂರು ಮೈಂದಾಳದ ಮುಹಮ್ಮದ್ ನಿಸಾರ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ನಿಸಾರ್ ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ: ದಿನಾಂಕ 09-09-2023, ಶನಿವಾರದಂದು ರಾತ್ರಿ 10 ಗಂಟೆಯ ಸುಮಾರಿಗೆ ಮೈಂದಾಳದಲ್ಲಿರುವ ಅಜ್ಜಿ ಮನೆಯಿಂದ ನಡೆದುಕೊಂಡು ಬರುತ್ತಿದ್ದ ನಿಸಾರ್ ನನ್ನು ಮೈಂದಾಳ ಬ್ರಿಡ್ಜ್ ಬಳಿಯ ಗುರಿಮಜಲ್ ರಸ್ತೆಯ ಸಮೀಪ ಆಟೋ ರಿಕ್ಷಾದಲ್ಲಿದ್ದ ಐದು ಜನರ ಪೈಕಿ ಇಬ್ಬರು ನಿಸಾರ್ ನನ್ನು ಏಕಾಏಕಿ ತಡೆದು ಅವಾಚ್ಯ ಶಬ್ದದಿಂದ ಬೈದು, ಹಲ್ಲೆ ಮಾಡಿದ್ದು, ಇನ್ನಿತರ ಮೂವರು ರಿಕ್ಷಾದಲ್ಲಿ ತಲ್ವಾರ್ ಹಿಡಿದುಕೊಂಡು ನಿಂತಿದ್ದು, ಇನ್ನಿಬ್ಬರು ಕಡಿಯಿರಿ ಕಡಿಯಿರಿ ಎಂದು ಹೇಳಿದಾಗ ಅವರಿಂದ ತಪ್ಪಿಸಿಕೊಂಡು ಓಡಿದಾಗ ಬಿದ್ದು ಎಡಸೊಂಟಕ್ಕೆ ಗಾಯವಾಗಿದ್ದು, ಅಲ್ಲಿಂದ ತಪ್ಪಿಸಿ ತೋಟದ ಬಳಿ ಅಡಗಿಕೊಂಡು ಸಂಭಾವ್ಯ ಅನಾಹುತದಿಂದ ಪಾರಾಗಿದ್ದಾನೆ.ಎಂದು ತಿಳಿದುಬಂದಿದೆ. ಕೂಡಲೇ ಸ್ನೇಹಿತ ಸಿದ್ದೀಕ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದ ನಿಸಾರ್,ಸ್ಥಳಕ್ಕಾಗಮಿಸಿದ ಸಿದ್ದೀಕ್ ನಿಸಾರ್ ನನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ.ಅರೋಪಿಗಳು ನಿಸಾರ್ ನನ್ನು ಹತ್ಯೆಗೈಯ್ಯುವ ದುರುದ್ದೇಶದಿಂದ ಹೊಂಚು ಹಾಕಿ ಕೃತ್ಯ ಎಸಗಿದ್ದಾರೆಂಬ ಸಂಶಯವಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.