ಗಂಜಿಮಠ ಬಿಗ್ ಬ್ಯಾಗ್ ಕಿಕ್ ಬ್ಯಾಕ್..? ಪಂಚಾಯತ್ ಥಂಡಾ.!ಬಡವನಿಗೊಂದು ನ್ಯಾಯ.. ಶ್ರೀಮಂತನಿಗೊಂದು ನ್ಯಾಯ

ಕರಾವಳಿ

ಗುರುಪುರ ಭಾಗದಲ್ಲಿ ಅತ್ಯಂತ ದೊಡ್ಡ ಪಂಚಾಯತ್ ಆಗಿರುವ, ವಿವಿಧ ಮೂಲಗಳಿಂದ ತೆರಿಗೆ ಸಂಗ್ರಹಿಸಲು ಸಶಕ್ತ ಮೂಲವಿರುವ ಪಂಚಾಯತ್ ಇದ್ದರೆ ಅದು ಗಂಜಿಮಠ ಗ್ರಾಮ ಪಂಚಾಯತ್ ಮಾತ್ರ. ಅತ್ಯಂತ ವೇಗವಾಗಿ ನಗರವಾಗಿ ಬೆಳೆಯುತ್ತಿರುವ ಕೈಕಂಬ ಆಸುಪಾಸಿನ ಪ್ರದೇಶವನ್ನು ಒಡಲಲ್ಲಿ ಇಟ್ಟುಕೊಂಡಿರುವ ಗಂಜಿಮಠ ಗ್ರಾಮ ಪಂಚಾಯತ್ ಈ ಭಾಗದಲ್ಲಿ ಚಿನ್ನದ ಮೊಟ್ಟೆ ಇಡುವ ಪಂಚಾಯತ್ ಅನ್ನುವ ಪ್ರತೀತಿ ಇದೆ. ಬಾನೆತ್ತರಕ್ಕೆ ಬೆಳೆದು ನಿಂತಿರುವ ವಿವಿಧ ಕಟ್ಟಡ ಸಂಕೀರ್ಣಗಳಿಂದಲೇ ವರ್ಷಕ್ಕೆ ಲಕ್ಷಗಟ್ಟಲೆ ಆದಾಯ ತೆರಿಗೆ ಮೂಲದಿಂದ ಬರುತ್ತಿದೆ. ಇನ್ನು ಈ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಗಂಜಿಮಠ ಕೈಗಾರಿಕಾ ವಲಯಗಳಿಂದಲೇ ವರ್ಷಕ್ಕೆ ಕೋಟಿ ಗಟ್ಟಲೆ ತೆರಿಗೆ ಪಂಚಾಯತ್ ಗೆ ಬರುವಂತದ್ದು. ಆದರೆ ಗಂಜಿಮಠ ಕೈಗಾರಿಕಾ ವಲಯದ ಬಿಗ್ ಬ್ಯಾಗ್ ಇಂಟರ್ ನ್ಯಾಶನಲ್ ಪ್ರೈವೇಟ್ ಲಿಮಿಟೆಡ್ ಒಂದರಿಂದಲೇ ಎರಡು ಕೋಟಿಗೂ ಅಧಿಕ ತೆರಿಗೆ ಪಂಚಾಯತ್ ಗೆ ಬರಲು ಬಾಕಿ ಇದೆ. ಈ ಬಗ್ಗೆ ಪಂಚಾಯತ್ ಅಧಿಕಾರಿಗಳು ಹಲವು ಬಾರಿ ಈ ಕಂಪನಿಗೆ ನೋಟಿಸ್ ಇಶ್ಯೂ ಮಾಡಿದರೂ ಕಂಪೆನಿ ತೆರಿಗೆ ಕಟ್ಟದೆ ಬಾಕಿ ಉಳಿಸಿದೆ. ಮಾತ್ರವಲ್ಲ ಕಂಪನಿಗೆ ಸಂಬಂಧಪಟ್ಟ ವ್ಯಕ್ತಿಗಳು ತೆರಿಗೆ ಪಾವತಿಸದೆ ಅಧಿಕಾರಿಗಳನ್ನೇ ಗದರಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾರೆ ಅನ್ನುವ ಮಾತು ಸ್ಥಳೀಯವಾಗಿ ಹರಿದಾಡುತ್ತಿದೆ.

ಪಂಚಾಯತ್ ಅಭಿವೃದ್ದಿ ಅಧಿಕಾರಿ ಈ ಕಂಪೆನಿಗೆ ತೆರಿಗೆ ಬಾಕಿ ಬಾಬ್ತು ನೋಟಿಸ್ ಮೇಲೆ ನೋಟಿಸ್ ಜಾರಿ ಮಾಡಿದರೂ ಕ್ಯಾರೆ ಅನ್ನದ ಬಿಗ್ ಬ್ಯಾಗ್ ಕಂಪೆನಿಗೆ ಎಕಾಏಕಿಯಾಗಿ ಪಂಚಾಯತ್ ತರಾತುರಿಯಲ್ಲಿ ಮೀಟಿಂಗ್ ನಡೆಸಿ, ಕೆಲವು ಸದಸ್ಯರ ವಿರೋಧದ ಮಾತಿಗೆ ಬೆಲೆ ಕೊಡದೆ 500 ರೂಪಾಯಿ ಬಾಂಡ್ ಪಡೆದು 9/11 ನೀಡಲು ನಿರ್ಣಯಿಸಿ ಸದಸ್ಯರಿಂದ ಸಹಿ ಪಡೆದುಕೊಂಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎರಡು ಕೋಟಿ ತೆರಿಗೆ ಹಣ ಮುಂದಿನ ಬಾರಿ ಪಡೆಯುವ, ಅವರಿಗೆ ಬೇಕಾದ ದಾಖಲೆಗೆ ಸಂಬಂಧಪಟ್ಟ ಪ್ರತಿ ನೀಡಲು ಪಂಚಾಯತ್ ಮುಂದಾಗಿದೆ.

ಇದ್ಯಾವ ಮಾರ್ಜಾಲ ನ್ಯಾಯ..!ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷರು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಜನರಿಗೆ ನಿಜ ಸಂಗತಿ ತಿಳಿಸಬೇಕಾಗಿದೆ. ಬಿಗ್ ಬ್ಯಾಗ್ ಸೂಟ್ ಕೇಸ್ ಪಂಚಾಯತಿಗೆ ಸಂಬಂಧ ಪಟ್ಟವರನ್ನು ಮೌನಕ್ಕೆ ಶರಣಾಗಿಸಿತೇ.? ಅನ್ನುವ ಮಾತುಗಳು ಈಗ ಬೀದಿ ಬೀದಿಗಳಲ್ಲಿ ಕೇಳಿಬರುತ್ತಿದೆ. ಈ ಬಗ್ಗೆ ಗಂಜಿಮಠ ಪಂಚಾಯತ್ ಅಧ್ಯಕ್ಷರು, ಅ ಭಾಗದ ಸದಸ್ಯರು ನಾಗರೀಕರಿಗೆ ಸ್ಪಷ್ಟನೆ ನೀಡಬೇಕಾಗಿದೆ. ಇಲ್ಲಿ ಏನೋ ಕುರುಡು ಕಾಂಚಣ ಕುಣಿದಿದೆ ಎಂಬ ಮಾತುಗಳು ಸಾರ್ವಜನಿಕರ ಬಾಯಿಯಿಂದ ಕೇಳಿ ಬರುತ್ತಿವೆ. ನಾಗರೀಕರು ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಇನ್ನಿತರ ಕೆಲಸಕ್ಕೆ ಪಂಚಾಯತ್ ಗೆ ಹೋದರೆ ಬಾಕಿ ಇರುವ ತೆರಿಗೆ ಪಾವತಿಸದೆ ಒಂದು ತುಂಡು ಪ್ರತಿಯನ್ನು ಪಂಚಾಯತ್ ನೀಡುವುದಿಲ್ಲ. ಆದರೆ ಬಲಾಢ್ಯರ ಕೋಟಿಗಟ್ಟಲೆ ತೆರಿಗೆ ಬಾಕಿ ಇದ್ದರೂ ಅವರ ಕೆಲಸ ಸಲೀಸಾಗಿ ನಡೆಯುತ್ತಿದೆ. ಪಾಪದವನ ಕುಡಿಯುವ ನೀರಿನ ಬಿಲ್ಲ್ ಬಾಕಿಯಾದರೆ ನೀರಿನ ಸಂಪರ್ಕವನ್ನೇ ಕಟ್ಟ್ ಮಾಡುವವರು ಕಂಪೆನಿ ಬಗ್ಗೆ ಮೌನ ತಾಳಿ ಅವರ ಎಂಜಲಿಗೆ ಬಲಿಯಾದರೇ.?ಜನಸಾಮಾನ್ಯರಿಗೊಂದು ನ್ಯಾಯ..ಉಳ್ಳವರಿಗೊಂದು ನ್ಯಾಯ..ಬಿಗ್ ಬ್ಯಾಗ್ ಕಂಪೆನಿ ಕಿಕ್ಕ್ ಬ್ಯಾಕ್ ಗೆ ಸಂಬಂಧ ಪಟ್ಟವರು ಮಾರುಹೋದರೆ.?