ಪತಿಗೆ 500ಕ್ಕೂ ಅಧಿಕ ಮಹಿಳೆಯರ ಜತೆ ಅನೈತಿಕ ಸಂಬಂಧ ಇದೆ ಎಂದು ಆರೋಪಿಸಿ, ಮಹಿಳೆಯೊಬ್ಬಳು ಮದ್ರಾಸ್ ಹೈಕೋರ್ಟ್ನ ಮದುರೈ ಪೀಠಕ್ಕೆ ಅರ್ಜಿ ಸಲ್ಲಿಸಿರುವ ಪ್ರಸಂಗ ವರದಿಯಾಗಿದೆ. ಆರತಿ ಎಂಬ ಈಕೆ ತಂಜಾವೂರು ಜಿಲ್ಲೆಯ ನಿವಾಸಿ. ವಿವೇಕ್ರಾಜ್ ಎಂಬುವರನ್ನು ನಾನು ಮದುವೆಯಾಗಿದ್ದೇನೆ. ಇಬ್ಬರು ಜತೆಯಲ್ಲೇ ವಾಸಿಸುತ್ತಿದ್ದೆವು. ಒಮ್ಮೆ ನನ್ನ ಗಂಡನ ಸೆಲ್ಫೋನ್ ತೆಗೆದು ಪರಿಶೀಲನೆ ನಡೆಸಿದಾಗ ಒಂದು ಕ್ಷಣ ಶಾಕ್ ಆದೆ. ಮಹಿಳೆಯರ ಜತೆ ವಿಡಿಯೋ ಕಾಲ್ನಲ್ಲಿ ಬೆತ್ತಲೆಯಾದ ಅನೇಕ ಸ್ಕ್ರೀನ್ಶಾಟ್ಗಳು ಮತ್ತು ಗಂಡನ ಖಾಸಗಿ ಅಂಗದ ಫೋಟೋಗಳನ್ನು ನೋಡಿ ಆಘಾತವಾಗಿದೆ.
ಪತಿ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿರುವುದರಿಂದ ಅಲ್ಲಿಗೆ ಬರುವ ಹುಡುಗಿಯರು ಹಾಗೂ ಕಾಲೇಜು ವಿದ್ಯಾರ್ಥಿನಿಯರ ಜತೆ ಮಾತನಾಡಿ, ಅವರನ್ನು ಪರಿಚಯಿಸಿಕೊಂಡು ಸುಮಾರು 500 ರಿಂದ 1000 ಅಶ್ಲೀಲ ಚಿತ್ರಗಳು ಹಾಗೂ ವಿಡಿಯೋಗಳನ್ನು ತೆಗೆದಿದ್ದಾರೆ ಎಂದು ಪತ್ನಿ ಆರೋಪ ಮಾಡಿದ್ದಾರೆ. ಈ ಬಗ್ಗೆ ಪತಿ ಮತ್ತು ಅವರ ಪಾಲಕರನ್ನು ಪ್ರಶ್ನೆ ಮಾಡಿದಾಗ ಈ ವಿಚಾರವನ್ನು ಬಹಿರಂಗಪಡಿಸಿದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಗಂಡನ ಅನೈತಿಕ ವಿಚಾರ ನನಗೆ ತಿಳಿಯಿತು ಎಂಬ ಕಾರಣಕ್ಕೆ ನಾನು ಎರಡು ತಿಂಗಳ ಗರ್ಭಿಣಿ ಅಂತಾನೂ ನೋಡದೆ ನನಗೆ ಕಿರುಕುಳ ನೀಡಿದರು. ಇದರ ಪರಿಣಾಮ ಗರ್ಭಪಾತವೂ ಆಯಿತು. ಈ ಸಂಬಂಧ ತಂಜಾವೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ. ಆದರೆ, ಯಾವೊಬ್ಬ ಪೊಲೀಸ್ ಕೂಡ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸಂತ್ರಸ್ತ ಮಹಿಳೆ ಅರ್ಜಿಯಲ್ಲಿ ಉಲ್ಲೇಖಿಸಿದ್ದಾಳೆ. ನನ್ನ ಗಂಡನ ವಿರುದ್ಧ ನೀಡಿರುವ ದೂರಿನ ತನಿಖೆಯನ್ನು ತಂಜಾವೂರು ಮಹಿಳಾ ಪೊಲೀಸರ ಬದಲಾಗಿ ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾಯಿಸಿ ಆದೇಶ ಹೊರಡಿಸಬೇಕು ಎಂದು ಮಹಿಳೆ ಮನವಿ ಮಾಡಿದ್ದು, ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ತಂಜಾವೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಿಐಡಿಗೆ ಆದೇಶಿಸಿ ವಿಚಾರಣೆಯನ್ನು ಮುಂದೂಡಿದರು.