ಇಂತಹ ಅರ್ಜಿಗಳಿಂದ ಸಮಾಜದಲ್ಲಿ ವಕೀಲರ ಘನತೆಗೆ ಧಕ್ಕೆ ಉಂಟಾಗುತ್ತದೆ
ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ವೇಶ್ಯಾಗೃಹ ನಡೆಸಲು ಅಗತ್ಯ ರಕ್ಷಣೆ ನೀಡುವಂತೆ ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ಮನವಿ ಅರ್ಜಿಯ ವಿಚಾರಣೆ ವೇಳೆ ಮದ್ರಾಸ್ ಹೈಕೋರ್ಟ್ ನ ನ್ಯಾಯಮೂರ್ತಿ ಗಲಿಬಿಲಿಗೊಂಡಿದ್ದಾರೆ. ತನ್ನ ವಿರುದ್ಧ ಪೊಲೀಸರು ದಾಖಲಿಸಿರುವ ಎಫ್ ಐ ಆರ್ ಅನ್ನು ಕೂಡ ರದ್ದುಗೊಳಿಸುವಂತೆ ವಕೀಲ ರಾಜಾ ಮುರುಗನ್ ಅವರು ಹೈಕೋರ್ಟ್ ಗೆ ಮನವಿ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ಪುಗಳೇಂದಿ ಅವರಿದ್ದ ನ್ಯಾಯಪೀಠವು ಅರ್ಜಿದಾರರ ಮನವಿಗೆ ತೀವ್ರ ವಿರೋಧ ವ್ಯಕ್ತಪಡಿಸಿತು. ಅರ್ಜಿಯ ಹಿಂದಿನ ಉದ್ದೇಶವನ್ನು ಖಂಡಿಸಿತು.
ಪ್ರತಿಷ್ಠಿತ ಕಾನೂನು ಕಾಲೇಜುಗಳಿಂದ ಕಾನೂನು ಪದವಿ ಪಡೆದು, ಗಂಭೀರವಾಗಿ ವಕೀಲ ವೃತ್ತಿ ಮಾಡುವವರನ್ನು ಬಾರ್ ಕೌನ್ಸಿಲ್ ಗೆ ಪರಿಗಣಿಸುವಂತೆ ನ್ಯಾಯಪೀಠವು ಸೂಚಿಸಿತು. “ಇಂತ ಅರ್ಜಿಗಳಿಂದ ಸಮಾಜದಲ್ಲಿ ವಕೀಲರ ಘನತೆಗೆ ಧಕ್ಕೆ ಉಂಟಾಗುತ್ತದೆ ಎನ್ನುವುದನ್ನು ಬಾರ್ ಕೌನ್ಸಿಲ್ ಅರ್ಥ ಮಾಡಿಕೊಳ್ಳಬೇಕಿದೆ.
ಆಂಧ್ರಪ್ರದೇಶ, ಕರ್ನಾಟಕ ಹಾಗೂ ಇತರ ರಾಜ್ಯಗಳ ಕೆಲವು ಅಪ್ರತಿಷ್ಠಿತ ಕಾಲೇಜುಗಳ ಪದವೀಧರರನ್ನು ಸಂಘಕ್ಕೆ ನೋಂದಣಿ ಮಾಡಿಕೊಳ್ಳುವ ಮುನ್ನ ಆಲೋಚಿಸಬೇಕಿದೆ” ಎಂದು ವಕೀಲರ ಸಂಘಕ್ಕೆ ನ್ಯಾಯಪೀಠವು ಕಿವಿ ಮಾತು ಹೇಳಿದೆ.