ಉಳ್ಳಾಲ ತಾಲೂಕಿನ ಮಂಜನಾಡಿ ಕಲ್ಕಟ್ಟ ಮನೆಯಲ್ಲಿ ಡಿಸೆಂಬರ್ 7 ರಂದು ಮನೆಯ ಸಿಲಿಂಡರ್ ಸ್ಪೋಟಗೊಂಡು ಮನೆಯಲ್ಲಿ ಮಲಗಿದ್ದ ತಾಯಿ ಹಾಗೂ ಮೂವರು ಮಕ್ಕಳು ಗಂಭೀರ ಗಾಯಗೊಂಡು ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ತಾಯಿ ಖುಬ್ರಾ ಮೃತಪಟ್ಟಿದ್ದಾರೆ.
ಮೂವರು ಮಕ್ಕಳಾದ ಮೆಹದಿಯಾ, ಮಝಿಯಾ, ಮಾಯಿದಾ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಲಿಂಡರ್ ಸ್ಪೋಟಗೊಂಡು ಇವರ ಚರ್ಮ ಬೆಂದು ಹೋಗಿರುವುದಾಗಿ ತಿಳಿದು ಬಂದಿದೆ.