ಬಸ್ಸಿನಲ್ಲಿ 55 ಮಂದಿ ಹೆಚ್ಚು ಪ್ರಯಾಣಿಕರಿದ್ದರು.. ಗಾಯಾಳುಗಳು ಬಂಟ್ವಾಳ ದವರೆಂದು ಪ್ರಾಥಮಿಕ ಮಾಹಿತಿ
ಮಂಗಳೂರಿನಿಂದ ಶಿವಮೊಗ್ಗಕ್ಕೆ ಪ್ರವಾಸ ಹೊರಟಿದ್ದ ಖಾಸಗಿ ಬಸ್ ವೊಂದು ಜೋಗ-ಕಾರ್ಗಲ್ ಸಮೀಪದ ಅರಳಗೋಡು ರಸ್ತೆ ತಿರುವಿನಲ್ಲಿ ಬಸ್ ಪಲ್ಟಿಯಾಗಿ ಅಪಘಾತ ಸಂಭವಿಸಿದ ಘಟನೆ ಇಂದು ಮಧ್ಯಾಹ್ನ ನಡೆದಿದ್ದು, ಮಂಗಳೂರಿನಿಂದ ಜೋಗಕ್ಕೆ ಪ್ರವಾಸಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ.
ಬಸ್ಸಿನಲ್ಲಿ ಸುಮಾರು 55 ಪ್ರಯಾಣಿಕರಿದ್ದು 15 ಜನರಿಗೆ ತೀವ್ರತರವಾದ ಗಾಯವಾಗಿದ್ದು, ಗಾಯಾಳುಗಳನ್ನು ಕಾರ್ಗಲ್ ಆಸ್ಪತ್ರೆಗೆ ಹಾಗೂ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಟ್ವಾಳದ ನಿವಾಸಿಗಳೆಂದು ಪ್ರಾಥಮಿಕ ಮಾಹಿತಿ ಲಭ್ಯವಾಗುತ್ತಿದ್ದು, ಹೆಚ್ಚಿನ ವಿವರ ಇನ್ನಷ್ಟೇ ತಿಳಿದು ಬರಬೇಕಾಗಿದೆ.