ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಮಾದಕಟ್ಟೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ 91 ವರ್ಷ ತುಂಬಿದ ಹಿನ್ನೆಲೆಯಲ್ಲಿ ಶಾಲೆಯ ಹಳೆವಿದ್ಯಾರ್ಥಿಗಳು ಸಂಘಟಿಸಿದ ಆಟೋಟ ಸ್ಪರ್ದೆಯ ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಇದರ ಅಂಗವಾಗಿ 55 ಕೆ.ಜಿ.ವಿಭಾಗದ ಕಬಡ್ಡಿ ಪಂದ್ಯಾಕೂಟದ ವೇದಿಕೆಯಲ್ಲಿ ಈ ಅವಮಾನದ ಘಟನೆ ಸಂಭವಿಸಿದೆ.ಅತಿಥಿಗಳು ವೇದಿಕೆಯಲ್ಲಿ ತುಂಬಿ ತುಳುಕಿದ ಕಾರಣ ಸಂಘಟಕರು ಶಿಷ್ಟಾಚಾರವನ್ನು ಪಾಲಿಸದೆ ಬೇಕಾಬಿಟ್ಟಿ ಕಾರ್ಯಕ್ರಮ ನಡೆಸಿದ್ದೆ ಎಡವಟ್ಟಿಗೆ ಕಾರಣವಾಗಿದೆ.
ವೇದಿಕೆಯಲ್ಲಿ ಸಮಾಜಘಾತುಕರು, ಕ್ರಿಮಿನಲ್ ಹಿನ್ನೆಲೆಯಲ್ಲಿ ಉಳ್ಳವರನ್ನು ಹಣದಾಸೆಗಾಗಿ ಸನ್ಮಾನ ಎಂಬ ಪೋಟೋ ಕ್ಲಿಕ್ಕಿಸೋದಕ್ಕೆ ಸಿಮಿತವಾಗಿ ನಡೆಸಿದ್ದಾರೆ ಎಂದು ಇಲ್ಲಿನ ಕೆಲವು ಹಳೆವಿದ್ಯಾರ್ಥಿಗಳ ನೇರ ಆರೋಪವಾಗಿದೆ. ಜಿಲ್ಲೆಯ ಮೂಲೆಮೂಲೆಯಲ್ಲಿರುವ ಸ್ಥಿತಿವಂತರನ್ನು,ಪರಿಚಯವೇ ಇಲ್ಲದ ಪ್ರಚಾರಪ್ರಿಯ ಸಾಮಾಜಿಕ ನೇತಾರರನ್ನು ಗ್ರಾಮೀಣ ಪ್ರದೇಶವಾದ ಮಾದಕಟ್ಟೆಗೆ ಕರೆಯಿಸಿ ಅವರಿಂದ ಆರ್ಥಿಕ ಸಹಾಯ ಪಡೆದು ಸನ್ಮಾನಿಸಲಾಗಿದೆ ಎಂದು ಹಳೆ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.