ದಿ ಸೊ ಕಾಲ್ಡ್ ಬ್ಯಾರಿ ನಾಯಕರು ಬ್ಯಾರಿ ಸಮುದಾಯಕ್ಕೆ ಕೊಟ್ಟ ಕೊಡುಗೆ ಏನು ಎಂದು ನೋಡುವುದಾದರೆ “ಶೂನ್ಯ” ವೇ ಉತ್ತರ.
✍️. ಇಸ್ಮಾಯಿಲ್ ಸುನ್ನಾಲ್, ವಕೀಲರು ಮಂಗಳೂರು
ಕರಾವಳಿ ಕರ್ನಾಟಕದ ಬ್ಯಾರಿ ಸಮುದಾಯವು, ಸರ್ವ ಜನಾಂಗದ ಸಹಬಾಳ್ವೆಯ ಪರಂಪರೆಯನ್ನು ಹೊಂದಿದ್ದು, ಇತ್ತೀಚೆಗೆ ಅದು ತನ್ನ ಭಾಷೆ (ಬ್ಯಾರಿ ಭಾಷೆ), ಸಂಪ್ರದಾಯಗಳು ಮತ್ತು ರಾಜಕೀಯ ಸಂಸ್ಥೆಯನ್ನು ಸಂರಕ್ಷಿಸುವ ಗುರಿಯನ್ನು ಹೊಂದಿರುವ ಸಾಮಾಜಿಕ-ಸಾಂಸ್ಕೃತಿಕ ಪುನರುತ್ಥಾನದ ಚಳುವಳಿಗೆ ಸಾಕ್ಷಿಯಾಗಿದೆ. ಆದಾಗ್ಯೂ, ಈ ಆಂದೋಲನವು-ಆರಂಭದಲ್ಲಿ ತಳಮಟ್ಟದ ಬುದ್ಧಿಜೀವಿಗಳು, ಶಿಕ್ಷಣತಜ್ಞರು ಮತ್ತು ಸಾಂಸ್ಕೃತಿಕ ಕಾರ್ಯಕರ್ತರಿಂದ ಆರಂಭವಾಗಿ, ಪ್ರಸಕ್ತ ಶ್ರೀಮಂತರು, ಗಣ್ಯರು, ರಾಜಕಾರಣಿಗಳು ಮತ್ತು ಧಾರ್ಮಿಕ ಮುಖಂಡರ ಪ್ರಭಾವಕ್ಕೆ ಒಳಗಾಗಿ ತನ್ನ ದಿಕ್ಕು ದೆಸೆಯನ್ನು ಕಳೆದುಕೊಳ್ಳುತ್ತಿದೆಯೋ ಎಂಬ ಭಾವನೆ ಮೂಡುವಂತೆ ಮಾಡುತ್ತಿದೆ.

ಐತಿಹಾಸಿಕ ಬುನಾದಿ ಹಾಗೂ ಬೆಳವಣಿಗೆ:
ಬ್ಯಾರಿಗಳು ಕರ್ನಾಟಕದ ಕರಾವಳಿಯಲ್ಲಿ ಕೇಂದ್ರೀಕೃತವಾಗಿರುವ ಒಂದು ವಿಶಿಷ್ಟವಾದ ಜನಾಂಗೀಯ-ಭಾಷಾ ಮುಸ್ಲಿಂ ಸಮುದಾಯವಾಗಿದ್ದು, ಪ್ರಾಥಮಿಕವಾಗಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕೆಲವು ಭಾಗಗಳಲ್ಲಿ ಕೇಂದ್ರೀಕೃತವಾದುದಾಗಿದೆ. ಬ್ಯಾರಿಗಳ ಇತಿಹಾಸವು ಅರೇಬಿಯನ್ ರಾಷ್ಟ್ರಗಳೊಂದಿಗಿನ ಕಡಲ ವ್ಯಾಪಾರದಿಂದ ಹೊಂಡಿದುದಾಗಿದೆ. ಸ್ಥಳೀಯ ತುಳು ಮತ್ತು ಮಲಯಾಳಂ-ಮಾತನಾಡುವ ಜನಸಂಖ್ಯೆಯೊಂದಿಗೆ ಮತ್ತು ಶತಮಾನಗಳ ಸಾಂಸ್ಕೃತಿಕ ಹಾಗೂ ಸಾಮಾಜಿಕ ತಳಹದಿಯನ್ನು ಹೊಂದಿರುವ ಒಂದು ಜನಸಮುದಾಯವಾಗಿದೆ.
ಬ್ಯಾರಿ ಐಡೆಂಟಿಟಿ ಅಥವಾ ಬ್ಯಾರಿಯೆಂದು ಗುರುತಿಸಿಕೊಳ್ಳುವ ಚಳುವಳಿಯು 1970 ರ ದಶಕದಲ್ಲಿ ಅಂಚಿನಲ್ಲಿ ಆರಂಭವಾಗಿರುವುದನ್ನು ನಾವು ಕಾಣಬಹುದಾಗಿದೆ. ಆರಂಭಿಕ ಬ್ಯಾರಿ ಕಾರ್ಯಕರ್ತರು ಮೂರು ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿ ತಮ್ಮ ಚಳುವಳಿಯನ್ನು ಆರಂಭಿಸಿರುವುದನ್ನು ನಾವು ಕಾಣಬಹುದಾಗಿದೆ.
ಭಾಷಾ ಸಂರಕ್ಷಣೆ:
ಬ್ಯಾರಿ ಭಾಷೆ ಅರೇಬಿಕ್, ಮಲಯಾಳಂ, ಕನ್ನಡ ಮತ್ತು ತುಳುಗಳಿಂದ ಪ್ರಭಾವಿತವಾದ ದ್ರಾವಿಡ ಉಪಭಾಷೆಯಾಗಿದೆ. ಅದರ ಲಿಪಿ ಮತ್ತು ಶಬ್ದಕೋಶವನ್ನು ಪ್ರಮಾಣೀಕರಿಸುವ ಪ್ರಯತ್ನಗಳು ಭಾಷಾಶಾಸ್ತ್ರಜ್ಞರಾದ ಡಾ. ಎ.ಕೆ. ಹಂಜಾ ಮತ್ತು ಬಿ.ಎಂ.ಇದಿನಬ್ಬ ಮುಂತಾದ ಮಹನೀಯರು ಯಾವುದೇ ಫಲಾಪೇಕ್ಷೆ ಇಲ್ಲದೆ ಈ ಒಂದು ಬ್ಯಾರಿ ಭಾಷಾ ಚಳುವಳಿಗೆ ಮುನ್ನುಡಿ ಬರೆದರೂ ಎಂದು ಹೇಳಲಾಗುತ್ತಿದೆ. ಈ ಚಳುವಳಿ ಹಂತ ಹಂತ ವಾಗಿ ಮುಂದುವರಿದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, 2007 ರಲ್ಲಿ ಸ್ಥಾಪನೆಯಾಗುವಷ್ಟರ ಮಟ್ಟಿಗೆ ಬೆಳೆಯಿತು. ಈ ಅಕಾಡೆಮಿಯ ಮೂಲಕ ಬ್ಯಾರಿ ಭಾಷೆಯ ಶಿಕ್ಷಣ ಮತ್ತು ಪ್ರಕಟಣೆಗಳು ಮತ್ತಷ್ಟು ಹುರುಪು ಪಡೆದು ಮುನ್ನುಗ್ಗತೊಡಗಿತು.

ಶಿಕ್ಷಣ ಮತ್ತು ಆರ್ಥಿಕ ಉನ್ನತಿ:
ಐತಿಹಾಸಿಕವಾಗಿ, ಬ್ಯಾರಿಗಳು ಕಡಲ ವ್ಯಾಪಾರ, ಗುಜರಿ, ಮೀನುಗಾರಿಕೆ ಮತ್ತು ಸಣ್ಣ-ಪ್ರಮಾಣದ ವಾಣಿಜ್ಯದಲ್ಲಿ ತೊಡಗಿಸಿಕೊಂಡಿದ್ದರು. ಆದಾಗ್ಯೂ, ಸ್ವಾತಂತ್ರ್ಯದ ನಂತರದ ಆರ್ಥಿಕ ಅತಂತ್ರೀಕರಣವು ಬ್ಯಾರಿಗಳ ಶೈಕ್ಷಣಿಕ ಹಿನ್ನಡೆಗೆ ಕಾರಣವಾಯಿತು ಹಾಗೂ ಬ್ಯಾರಿಗಳು ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿಯೂ ಸಾಕಷ್ಟು ಹಿಂದುಳಿದು ಬಿಟ್ಟರು. ನಂತರದ ದಿನಗಳಲ್ಲಿ ಬ್ಯಾರಿ ಸಮುದಾಯ-ನೇತಾರರು, ಧಾರ್ಮಿಕ ಪಂಡಿತರು ಮದರಸಾಗಳು, ಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸಿ ಶೈಕ್ಷಣಿಕವಾಗಿ ಬ್ಯಾರಿ ಸಮುದಾಯವನ್ನು ಮೇಲೆತ್ತುವ ಪ್ರಯತ್ನವನ್ನು ಆರಂಭಿಸಿದವು. ಮುಖ್ಯವಾಗಿ ಬದ್ರಿಯಾ ಕಾಲೇಜು (ಮಂಗಳೂರು) ಮತ್ತು ಸಾಹಿಲ್ ಎಜುಕೇಶನ್ ಟ್ರಸ್ಟ್, ಮುಂತಾಗಿ ಆರಂಭವಾದ ಶೈಕ್ಷಣಿಕ ಸಂಶೆಗಳು ಬಹಳಷ್ಟು ಬೆಳೆದು ಈಗ ನೂರಾರು ಬ್ಯಾರಿ ಶೈಕ್ಷಣಿಕ ಸಂಸ್ಥೆಗಳನ್ನು ಒಳಗೊಂಡ ಮೀಫ್ ಎಂಬ ಸಂಘ ಸ್ಥಾಪನೆಯಾಗಿ ರಾಜ್ಯಮಟ್ಟದಲ್ಲಿ ಹೆಸರು ಪಡೆಯುವಷ್ಟು ಬೆಳೆಯಿತು. ಪ್ರಸಕ್ತ ಬ್ಯಾರಿ ಸಮುದಾಯ ಶೈಕ್ಷಣಿಕವಾಗಿ ಬಹಳಷ್ಟೂ ಪ್ರಗತಿಯನ್ನು ಕಾಣುತ್ತಿದ್ದು, ವಿಶೇಷವಾಗಿ ಹೆಣ್ಣುಮಕ್ಕಳು ವಿದ್ಯಾರಂಗದಲ್ಲಿ ಬಹಳಷ್ಟು ಹೆಸರು ಮಾಡುತ್ತಿದ್ದಾರೆ. ಹೆಣ್ಣುಮಕ್ಕಳಿಗೆ ಹೋಲಿಸಿದಲ್ಲಿ, ಬ್ಯಾರಿ ಗಂಡು ಮಕ್ಕಳ ಶೈಕ್ಷಣಿಕ ಪ್ರಗತಿ ಸ್ವಲ್ಪ ಸಪ್ಪೆಯಾಗಿ ಕಾಣಿಸುತ್ತಿದೆ ಎಂದರೆ ತಪ್ಪಾಗಲಾರದು.
ಸಾಂಸ್ಕೃತಿಕ ಪುನರುಜ್ಜೀವನ ಮತ್ತು ಪ್ರಾತಿನಿಧ್ಯ
ಬ್ಯಾರಿ ಸಾಂಸ್ಕೃತಿಕ ಪರಂಪರೆಯನ್ನು ಮರಳಿ ಪಡೆಯಲು ಬೈಲು ಪರ್ಬ (ಸುಗ್ಗಿಯ ಹಬ್ಬ) ಮತ್ತು ದಫ್ ಮೇಳ ಪ್ರದರ್ಶನಗಳಂತಹ ಉತ್ಸವಗಳನ್ನು ಪುನರುಜ್ಜೀವನಗೊಳಿಸಲಾಯಿತು. ಕೆಲವೊಂದು ಲೇಖಕರು ಬ್ಯಾರಿ ಜಾನಪದ, ಸಾಮಾಜಿಕ ಪದ್ಧತಿಗಳು ಮತ್ತು ಹೋರಾಟಗಳನ್ನು ಎತ್ತಿ ತೋರಿಸುವ ಸಾಹಿತ್ಯವನ್ನು ನಿರ್ಮಿಸಿದರು.

ಆದಾಗ್ಯೂ, 2000 ರ ನಂತರದ ಚಳವಳಿಯ ನಾಯಕತ್ವವು ನಾಟಕೀಯವಾಗಿ ಬದಲಾಯಿತು, ಏಕೆಂದರೆ ಪ್ರಭಾವಿ ವ್ಯಾಪಾರೋದ್ಯಮಿಗಳು, ಧಾರ್ಮಿಕ ನೇತಾರರು ಮತ್ತು ರಾಜಕಾರಣಿಗಳು ಬ್ಯಾರಿ ಸಂಸ್ಥೆಗಳಲ್ಲಿ ಪ್ರಾಬಲ್ಯ ಸಾಧಿಸಲು ಪ್ರಾರಂಭಿಸಿದರು ಹಾಗೂ ಬ್ಯಾರಿ ಚಳುವಳಿಯನ್ನು ಸಂಪೂರ್ಣವಾಗಿ ಹೈಜಾಕ್ ಮಾಡಿ ತಮ್ಮ ಸುಪರ್ಧಿಗೆ ತೆಗೆದುಕೊಂಡು, ಈ ಒಂದು ಚಳುವಳಿ ಪ್ರಭಾವಿಗಳು ರಾಜಕೀಯ ನೇತಾರರು, ಸಿರಿವಂತರ ಆಡಂಬರವನ್ನು ಜಗಜ್ಜಾಹೀರು ಮಾಡುವ ಹಾಗೂ ಈ ಚಳುವಳಿಯಲ್ಲಿ ಗುರುತಿಸಿಕೊಂಡವರಿಗೆ ಅಕಾಡೆಮಿಗಳಲ್ಲಿ ಹಿಂಬಾಗಿಲ ಪ್ರವೇಶಕ್ಕೆ ಒಂದು ವೇದಿಕೆಯಾಗಿ ರೂಪುಗೊಂಡಿದ್ದು ವಿಪರ್ಯಾಸವೇ ಸರಿ. ಸಾಹಿತ್ಯದ ಗಂಧ ಗಾಳಿ ಇಲ್ಲದ, ಕೇವಲ ಅವರಿವರ ಕೃತಿಚೌರ್ಯ ನಡೆಸಿ ಕೆಲವೊಂದು ಬರಹಗಳು ಹಾಗೂ ಕಾರ್ಯಕ್ರಮಗಳನ್ನು ಮಾಡಿದವರು ಬ್ಯಾರಿ ಸಾಹಿತ್ಯ ಅಕಾಡೆಮಿಗಳ ಮುಖ್ಯಸ್ಥರಾಗಿ ನೇಮಿಸಲ್ಪಟ್ಟು, ಅಕಾಡೆಮಿಗೆ ಬರುವ ಗ್ರಾಂಟ್ ಗಳಿಂದ ಹೊಟ್ಟೆ ತುಂಬಿಸಿಕೊಂಡು ಹೆಸರು ಮಾಡಿದರು. ಈ ನಡುವೆ ಬ್ಯಾರಿ ಚಳುವಳಿಯ ಹೆಸರಲ್ಲಿ ಸಿರಿವಂತ ಉದ್ಯಮಿಗಳು ಒಂದೊಂದು ಸಂಗತಿಗಳನ್ನು ಹುಟ್ಟುಹಾಕಿ ಬಡಪಾಯಿ ಬ್ಯಾರಿಗಳಿಗೆ ಪಂಗನಾಮ ಹಾಕಿ ಮೆರೆದಾಡಲು ಆರಂಭಿಸಿದರು. ಬ್ಯಾರಿಗಳ ಹೆಸರಲ್ಲಿ ಅವರು ಮಾಡುವ ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರಾಗಿ ಬರುವುದು ಬಿಟ್ಟರೆ ಸಾಮಾನ್ಯ ಬ್ಯಾರಿಯೊಬ್ಬನಿಗೆ ಈ ಬ್ಯಾರಿ ಚಳುವಳಿಯಿಂದ ಯಾವುದೇ ಪ್ರಯೋಜನವಾಗಿಲ್ಲ ಎಂಬುವುದರಲ್ಲಿ ಎರಡು ಮಾತಿಲ್ಲ.
ಬಡಪಾಯಿ ಬ್ಯಾರಿಗಳು, ಈ ಬ್ಯಾರಿ ಚಳುವಳಿ ಮೂಲಕ ಒಂದುಗೂಡಿದ್ದರ ರಾಜಕೀಯ ಲಾಭವನ್ನು ಪಡಕೊಂಡ ಕೆಲವೊಂದು ರಾಜಕೀಯ ನಾಯಕರು ಹಾಗೂ ಅವರ ಹಿಂಬಾಲಕರು, ಬ್ಯಾರಿ ಮತಗಳನ್ನು ಪಡೆದು ಆಯ್ಕೆಯಾದರೂ, ಅದರಿಂದ ಸಮುದಾಯಕ್ಕೆ ಹೆಚ್ಚಿನ ಪ್ರಯೋಜನವಾಗಿಲ್ಲ ಎನ್ನುವುದನ್ನು ಎಲ್ಲರೂ ಒಪ್ಪತಕ್ಕದ್ದೇ. ಬ್ಯಾರಿ ಚಳುವಳಿ ಯಾವ ಮಟ್ಟಿಗೆ ಸೀಮಿತವಾಗಿದೆಯೆಂದರೆ, ಬ್ಯಾರಿ ಹೆಸರಲ್ಲಿ ನಡೆಯುವ ಪ್ರತಿಯೊಂದು ಮೇಳವು ಕೇವಲ ಹತ್ತಿಪ್ಪತ್ತು ಬ್ಯಾರಿ ರಾಜಕೀಯ ನೇತಾರರು, ಬ್ಯಾರಿ ಉದ್ಯಮಿಗಳು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳಲು ಮಾಡಿದ ವೇದಿಕೆಯಯಾಗಿ ಪರಿಣಮಿಸಿದೆ. ಅದೇ ಬ್ಯಾರಿಗಳು, ಅದೇ ರೀತಿಯ ಕತ್ತಿನಲ್ಲಿ ನೇತಾಡುವ ಟ್ಯಾಗ್ ಹಾಗೂ ಅವರೇ ಅವರನ್ನು ಸನ್ಮಾನಿಸಿಕೊಳ್ಳುವ, ಹೊಗಳಿಕೊಳ್ಳುವ ವೇದಿಕೆಯಾಗಿ ಬ್ಯಾರಿ ಚಳುವಳಿ ಮಾರ್ಪಟ್ಟಿದ್ದು, ಬ್ಯಾರಿಗಳ ಪಾಲಿನ ದುರಂತವಲ್ಲದೆ ಮತ್ತೇನೂ ಅಲ್ಲ. ಇಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮವೂ “ಐತಿಹಾಸಿಕ” ಎಂಬ ಹಣೆಪಟ್ಟಿ ಹೊಂದಿ, ಅಲ್ಲಿ ಮೇಳೈಸುವ ದಿ ಸೊ ಕಾಲ್ಡ್ ಬ್ಯಾರಿ ನಾಯಕರು ಬ್ಯಾರಿ ಸಮುದಾಯಕ್ಕೆ ಕೊಟ್ಟ ಕೊಡುಗೆ ಏನು ಎಂದು ನೋಡುವುದಾದರೆ “ಶೂನ್ಯ” ವೇ ಉತ್ತರ.
ಚಳುವಳಿಯ ಖಾಸಗೀಕರಣ:
ಒಂದು ರೀತಿಯಲ್ಲಿ ಹೇಳುವುದಾದರೆ ಈ ಬ್ಯಾರಿ ಚಳುವಳಿ ಕೆಲವೊಂದು ಬ್ಯಾರಿ ಕುಲಗಳ ಹಿತಾಸಕ್ತಿಗಳನ್ನು ಪೂರೈಸಲು ಇರುವ ಖಾಸಗಿ ಚಳುವಳಿಯಾಗಿ ಪರಿವರ್ತನೆಯಾಗಿದೆ. ಸಮುದಾಯ ಚಳುವಳಿಗಳನ್ನು ಈ ಪ್ರಭಾವಿಗಳು ಕುಶಲತೆಯಿಂದ ತಮ್ಮದಾಗಿಸಿದ್ದಾರೆ. ರಾಜಕೀಯ ನಾಯಕರ ಗೇಟ್ ಕೀಪಿಂಗ್, ಸಂಸ್ಕೃತಿಯ ವ್ಯಾಪಾರೀಕರಣ ಮತ್ತು ಧಾರ್ಮಿಕ ಸಾಂಸ್ಥಿಕ ನಿಯಂತ್ರಣದ ಮೂಲಕ ಬ್ಯಾರಿ ಗುರುತಿನ ಚಳುವಳಿ ಖಾಸಾಗಿಯಾಗಿ ಪರಿವರ್ತತೆನೆಯಾಗಿದೆ.
ರಾಜಕೀಯ ಗೇಟ್ ಕೀಪಿಂಗ್ ಮೂಲಕ ಮತ್ತು ಚುನಾವಣಾ ಲಾಭವನ್ನು ಪಡೆಯುವ ಸಲುವಾಗಿ ಬ್ಯಾರಿ ಅಭಿವೃದ್ಧಿ ಪ್ರಾಧಿಕಾರ ರಚಿಸಲೂ ಕಸರತ್ತು ನಡೆಯುತ್ತಿದೆ. ಬ್ಯಾರಿ ಕಲ್ಯಾಣದ ಹೆಸರಲ್ಲಿ ಮತ್ತಷ್ಟು ಗೋಲ್ಮಾಲ್ ಮಾಡಲು ಒಂದು ಕೂಟ ಪ್ರಯತ್ನಿಸುತ್ತಿದೆ. ಸ್ವಜನಪಕ್ಷಪಾತ ಮತ್ತು ಹಣ ದುರುಪಯೋಗ ಮಾಡುವ ಒಂದು ಉದ್ದೇಶದೊಂದಿಗೆ ತೆರೆಮರೆಯಲ್ಲಿ ಇಂತದೊಂದು ಪ್ರಯತ್ನ ನಡೆಯುತ್ತಿದೆ.
ಚುನಾವಣೆಗಳ ಸಮಯದಲ್ಲಿ, ಮತಗಳನ್ನು ಸಜ್ಜುಗೊಳಿಸಲು ಬ್ಯಾರಿ ಗುರುತನ್ನು ದುರುಪಯೋಗಪಡಿಸಲಾಗುತ್ತಿದೆ. ರಾಜಕೀಯವಾಗಿ ಲಾಭ ಪಡೆದಿರುವ ಕೆಲವು “ಟೋಕನ್ ಬ್ಯಾರಿ” ಗಳು, ಬ್ಯಾರಿ ನೇತಾರರೆಂದು ತಮ್ಮನ್ನು ತಾವೇ ಘೋಷಿಸಿಕೊಳ್ಳುತ್ತಿದ್ದಾರೆ.

ಸಂಸ್ಕೃತಿ ಮತ್ತು ಭಾಷೆಯ ವಾಣಿಜ್ಯೀಕರಣ:
ಬ್ಯಾರಿ ಹಬ್ಬ, ಬ್ಯಾರಿ ಮೇಳ, ಬ್ಯಾರಿ ಕಮರ್ಷಿಯಲ್ ಮೇಳ, ಬ್ಯಾರಿ ಕೂಡ ಮುಂತಾದ ಹೆಸರುಗಳೊಂದಿಗೆ ಕಾರ್ಪೊರೇಟ್ ಪ್ರಾಯೋಜಕರು ಮತ್ತು ರಾಜಕೀಯ ವ್ಯಕ್ತಿಗಳು ಬ್ಯಾರಿ ಸಮುದಾಯಕ್ಕೆ ಪಂಗನಾಮ ಹಾಕುತ್ತಿದ್ದಾರೆ. 2022 ರಲ್ಲಿ, 35 ಪ್ರದರ್ಶಕರಲ್ಲಿ ಕೇವಲ 3 ಜನರು ಸಾಂಪ್ರದಾಯಿಕ ದಫ್ ಮೇಳ ಸಂಗೀತಗಾರರಾಗಿದ್ದರು ಎನ್ನುವುದು ತಿಳಿದವರು ಹೇಳಿದ ಸಂಗತಿಯಾಗಿದೆ. ಉಳಿದವು ಬಾಲಿವುಡ್-ಪ್ರೇರಿತ ಹಾಡುಗಳಾಗಿದ್ದವಂತೆ.
ಪವರ್ ಬ್ರೋಕರ್ಗಳಾಗಿ ಧಾರ್ಮಿಕ ನೇತಾರರು, ಮಸೀದಿ ಸಮಿತಿಗಳು, ಶ್ರೀಮಂತ ದಾನಿಗಳಿಂದ ನಿಯಂತ್ರಿಸಲ್ಪಡುತ್ತವೆ, ಸಾಮಾಜಿಕ ಕಲ್ಯಾಣಕ್ಕಿಂತ ವಾಣಿಜ್ಯ ಯೋಜನೆಗಳಿಗೆ ಆದ್ಯತೆ ನೀಡುತ್ತವೆ. ಧಾರ್ಮಿಕ ನೇತಾರರು ಸಹ ಸಮುದಾಯದ ಏಳಿಗೆಯ ಬಗ್ಗೆ ಚಿಂತಿಸದೆ ಪ್ರಭಾವಿಗಳ ಕೈಗೊಂಬೆಗಳಾಗಿ ಮಾರ್ಪಾಡಾಗಿದ್ದರೆ. ಬ್ಯಾರಿ ಸಮುದಾಯದ ಚಳುವಳಿಗಳಲ್ಲಿ ಮಹಿಳೆಯರನ್ನು ಕೇವಲ ಪ್ರೇಕ್ಷಕರಾಗಿ ಉಳಿಸಿಕೊಂಡು ಚಪಲೆಗಿತ್ತಿಸಲು ಬಳಸಿಕೊಳ್ಳುತ್ತಿದ್ದಾರೆ.
ಉದ್ಯಮಿಗಳು ಹಾಗೂ ರಾಜಕಾರಣಿಗಳ ಪ್ರಾಬಲ್ಯದ ದುಷ್ಪರಿಣಾಮಗಳು:
ಉದ್ಯಮಿಗಳು ಹಾಗೂ ರಾಜಕಾರಣಿಗಳ “ಬ್ಯಾರಿ” ಗುರುತಿನ ಮೇಲಿನ ಏಕಸ್ವಾಮ್ಯವು ಆಳವಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ದುಃಷ್ಪರಿಣಾಮಗಳನ್ನು ಬೀರುತ್ತಿದೆ.
ಅರ್ಹತೆಯ ಮೂಲೆಗುಂಪು ಹಾಗೂ ಹಣವಂತರೇ ಮೇಳೈಕೆ:
ಮೀನುಗಾರಿಕೆ ಮತ್ತು ಕೃಷಿಯಲ್ಲಿ ತೊಡಗಿರುವ ಗ್ರಾಮೀಣ ಬ್ಯಾರಿಗಳನ್ನು ಕಡೆಗಣಿಸಿ, ಸಾಂಸ್ಕೃತಿಕ ವೇದಿಕೆಗಳಲ್ಲಿ ನಗರದ ಗಣ್ಯರು ಪ್ರಾಬಲ್ಯ ಮೆರೆಯುತ್ತಿದ್ದಾರೆ. ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಕಾರ್ಕಳ ದಂತಹ ಪ್ರದೇಶಗಳ ಬ್ಯಾರಿಗಳನ್ನು ಸಂಪೂರ್ಣ ನಿರ್ಲಕ್ಷಿಸಿ, 78% ಬ್ಯಾರಿ ವಿಷಯದ ಕಾರ್ಯಕ್ರಮಗಳು ಮಂಗಳೂರಿನಲ್ಲಿ ನಡೆದಿವೆ ಎಂದು 2023 ರ ಸಮೀಕ್ಷೆ ಯಿಂದ ತಿಳಿದುಬಂದಿದೆ.
ಲಿಂಗ ಅಸಮಾನತೆಗಳು:
ಮಹಿಳಾ ಕಾರ್ಯಕರ್ತರು ಕೇವಲ ನಾಮಮಾತ್ರವಾಗಿದ್ದರೆ. 2023 ರ ಬ್ಯಾರಿ ಸಾಹಿತ್ಯ ಸಮ್ಮೇಳನದಲ್ಲಿ, 22 ಭಾಷಣಕಾರರಲ್ಲಿ ಕೇವಲ 2 ಮಹಿಳೆಯರು ಮಾತ್ರ ಇದ್ದು, ಉಳಿದವರು ಪುರುಷ ರಾಜಕಾರಣಿಗಳು ಹಾಗೂ ಉದ್ಯಮಿಗಳಾಗಿದ್ದರು.

ಸಾಂಸ್ಕೃತಿಕ ಸವೆತ:
ಸಾಂಪ್ರದಾಯಿಕ ಕಲಾ ಪ್ರಕಾರಗಳಾದ ಕೋರಿಕಟ್ಟಾ (ಪಾರಿವಾಳದ ಓಟ) ಮತ್ತು ಪಾಡ್-ದಾನ ಲಾವಣಿಗಳು ಕಣ್ಮರೆಯಾಗುತ್ತಿವೆ ಏಕೆಂದರೆ ಗಣ್ಯರು ಬ್ಯಾರಿ ಸಂಸ್ಕೃತಿಯ ನೈರ್ಮಲ್ಯ, ಪ್ರವಾಸಿ ಸ್ನೇಹಿ ಪ್ರಾತಿನಿಧ್ಯಗಳಿಗೆ ಆದ್ಯತೆ ನೀಡುತ್ತಾರೆ.
“ಬ್ಯಾರಿ” ಭಾಷೆಯು ಉರ್ದು ಮತ್ತು ಇಂಗ್ಲಿಷ್ನೊಂದಿಗೆ ಹೆಚ್ಚು ಮಿಶ್ರಣವಾಗಿದ್ದು, ಹಳೆಯ ತಲೆಮಾರುಗಳನ್ನು ದೂರವಿಡುತ್ತದೆ.
ಆರ್ಥಿಕ ಅಸಮಾನತೆಗಳು ಮತ್ತು ರಾಜಕೀಯ ಕಡೆಗಣನೆ:
• ಭೂ ವ್ಯವಹಾರಗಳು, ವ್ಯಾಪಾರ ಒಪ್ಪಂದಗಳು ಮತ್ತು ರಾಜಕೀಯ ನೇಮಕಾತಿಗಳನ್ನು ಖಚಿತಪಡಿಸಿಕೊಳ್ಳಲು ಪ್ರಭಾವಿ ಗಣ್ಯರು ತಮ್ಮ ಪ್ರಭಾವವನ್ನು ಬಳಸಿಕೊಳ್ಳುತ್ತಾರೆ.
• ಶಾಸಕರಾಗಿ ಮಾರ್ಪಟ್ಟಿರುವ ಬ್ಯಾರಿಗಳು, ಉದ್ಯಮಿಗಳ ಆರೈಕೆಯಲ್ಲಿ ತೊಡಗಿ, ಐಷಾರಾಮಿ ರೆಸಾರ್ಟ್ ಯೋಜನೆಗಾಗಿ ತಮ್ಮ ಸಮಯ ಮೀಸಲಿಡುತ್ತಿದ್ದಾರೆ ಎಂದರೆ ತಪ್ಪಾಗಲಾರದು.
ತಳಮಟ್ಟದ ಪ್ರತಿರೋಧ ಮತ್ತು ಪರ್ಯಾಯ ಚಳುವಳಿಗಳು:
ಪ್ರಭಾವಿಗಳ ಬ್ಯಾರಿ ಮೇಳೈಕೆಗೆ ಪ್ರತಿಕ್ರಿಯೆಯಾಗಿ, ಬ್ಯಾರಿ ಸಮುದಾಯದ ಕೆಲವೊಂದು ವಿಭಾಗಗಳು ಪರ್ಯಾಯ ಚಳುವಳಿಗಳನ್ನು ಪ್ರಾರಂಭಿಸಿವೆ. ಆದರೆ ಗಣ್ಯ ಬ್ಯಾರಿಗಳ ಮೀಲಟಟದ ಮುಂದೆ ಅವುಗಳು ನಗಣ್ಯವಾಗಿಬಿಟ್ಟಿದೆ.

ಬ್ಯಾರಿಗಳ ಭವಿಷ್ಯದ ಬಗ್ಗೆ ಬ್ಯಾರಿಗಳೇನು ಮಾಡಬೇಕು:
- ಮೊಟ್ಟಮೊದಲನೆಯದಾಗಿ ಇಲ್ಲಿನ ತಳಮಟ್ಟದ ಬ್ಯಾರಿಗಳು, ಬ್ಯಾರಿ ಚಳುವಳಿಗಳು “ಬ್ಯಾರ” ಚಳುವಳಿಗಳಾಗಿ ಪರಿವರ್ತನೆಯಾಗಿದೆ ಎಂಬುವುದನ್ನು ಅರಿತುಕೊಂಡು, ಈ ಬ್ಯಾರ ಚಳುವಳಿಗಳನ್ನು ಸಂಪೂರ್ಣ ತಿರಸ್ಕರಿಸಿ, ಬ್ಯಾರಿ ಸಮುದಾಯದ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಏಳಿಗೆಗಾಗಿ ತಳಮಟ್ಟದಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳತಕ್ಕದ್ಧು, ಹಾಗೂ ಇದಕ್ಕಾಗಿ ವಿವಿಧ ಜಮಾತ್ ಗಳು ತಮ್ಮ ತಮ್ಮ ಜಮಾತ್ ಮಟ್ಟದಲ್ಲಿ ಕಾರ್ಯಕ್ರಗಳನ್ನು ರೂಪಿಸಿ ಜ್ಯಾರಿಗೆ ತರತಕ್ಕದ್ದು ಹಾಗೂ ಸ್ಥಿತಿವಂತರು, ಪ್ರಭಾವಿಗಳ ಕಪಿಮುಷ್ಟಿಯಿಂದ ಹೊರಭಾರತಕ್ಕದ್ದು. ಒಂದು ಸ್ವಾವಲಂಬೀ ಬ್ಯಾರಿ ಸಮುದಾಯವನ್ನು ರೂಪಿಸಿ, ಬ್ಯಾರಿಗಳು ವಿದ್ಯಾವಂತರಾಗುವಂತೆ ಮಾಡಬೇಕಾದ ಕ್ರಮಗಳನ್ನು ಕೈಗೊಳ್ಳತಕ್ಕದ್ದು.
- ಬ್ಯಾರಿ ಸಮುದಾಯದಲ್ಲಿರುವ “ಕಾಸಿ ಬಂಗಾರ” ಪಿಡುಗನ್ನು ಹೋಗಲಾಡಿಸಲು ಜಮಾತ್ ಮಟ್ಟದಲ್ಲಿ ಪ್ರಯತ್ನಗಳಾಗತಕ್ಕದ್ದು.
- ಆಡಂಬರ ಮಾಡುವೆ ಮುಂಜಿಗಳಿಗೆ ತಿಲಾಂಜಲಿ ಇಟ್ಟು ಆಡಂಬರ ವಿಲ್ಲದ ಮದುವೆ-ಮುಂಜಿಗಳು ನಡೆಯಲು ಪ್ರೇರೇಪಣೆಯನ್ನು ನೀಡತಕ್ಕದ್ದು.
- ಬ್ಯಾರಿಗಳು ರಾಜಕೀಯ ಬಲಿಪಶುಗಳಾಗದೆ, ಯಾವುದೇ ರಾಜಕಾರಣಿಗಳು ಹಾಗೂ ರಾಜಕೀಯ ಪಕ್ಷಗಳ ಕೈಗೊಂಬೆಗಳಾಗುವ ಬದಲು, ತಮಗೂ ತಮ್ಮ ಬ್ಯಾರಿ ಜನಾಂಗಕ್ಕೂ ನೆರವಾಗುವ ರಾಜಕೀಯ ಆಶಯವನ್ನು ಬೆಳೆಸಿಕೊಳ್ಳತಕ್ಕದ್ದು.
- ಶ್ರೀಮಂತ ಲಾಬಿಯನ್ನು ಅರಿತು ಸಾಂಸ್ಕೃತಿಕ ಉತ್ಸವಗಳು ಜನಸಾಮಾನ್ಯರಿಗಾಗಿ ಇರುವುದನ್ನು ಖಾತ್ರಿಪಡಿಸಿಕೊಳ್ಳ ತಕ್ಕದ್ದು. ಬ್ಯಾರಿ ಸಮುದಾಯಕ್ಕಿಂತ ಭಿನ್ನವಾಗಿ, ಚಳುವಳಿ ನಡೆಸಿದಿಯೇ ಇನ್ನೂ ಕೆಲವು ಜನಾಂಗಗಳಿಂದ ಸ್ಫೂರ್ತಿ ಪಡೆದು, ಗಣ್ಯರ ಪ್ರೋತ್ಸಾಹವನ್ನು ಅವಲಂಬಿಸಿರುವುದಕ್ಕಿಂತ ಹೆಚ್ಚಾಗಿ ಶಿಕ್ಷಣದ ಮೂಲಕ ಸ್ವಾವಲಂಬನೆಯತ್ತ ಗಮನಹರಿಸ ಬೇಕಾಗಿದೆ. ಬ್ಯಾರಿಗಳು ತಳಮಟ್ಟದಿಂದ ಬೆಳೆದು ತಮ್ಮ ಶಕ್ತಿಯನ್ನು ವೃದ್ಧಿಹ್ಪಾಡಿಕೊಳ್ಳಬೇಕಾಗಿದೆ.
- ಇಲ್ಲಿನ ಶ್ರೀಮಂತ ಬ್ಯಾರಿಗಳ “ಎಲೈಟ್ ಥಿಯರಿ” ಯನ್ನು ಆರ್ಥ ಮಾಡಿಕೊಂಡು ಶ್ರೀಮಂತ ವ್ಯಕ್ತಿಗಳು ನಾಯಕತ್ವದ ಸ್ಥಾನಗಳನ್ನು ಏಕಸ್ವಾಮ್ಯಗೊಳಿಸುತ್ತಾರೆ, ಸವಲತ್ತುಗಳನ್ನು ತಮ್ಮಲ್ಲೇ ನಿರ್ವಹಿಸಿಕೊಳ್ಳುವ ವರ್ತುಲವನ್ನು ರಚಿಸಿಕೊಂಡಿದ್ದಾರೆ ಎಂಬುದನ್ನು ಸಾಮಾನ್ಯ ಬ್ಯಾರಿಗಳು ತಿಳಿದುಕೊಳ್ಳಬೇಕಾಗಿದೆ.
- ಬ್ಯಾರಿ ಗಣ್ಯರು ನಿಧಿ, ಮಾಧ್ಯಮ ಪ್ರವೇಶ ಮತ್ತು ರಾಜಕೀಯ ನೆಟ್ವರ್ಕ್ಗಳನ್ನು ನಿಯಂತ್ರಿಸುತ್ತಾರೆ, ಭಿನ್ನಾಭಿಪ್ರಾಯದ ಧ್ವನಿಗಳನ್ನು ನಿಗ್ರಹಿಸುತ್ತಾರೆ ಎಂಬುದನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾಗಿದೆ.
- ಗಣ್ಯರ “ಸಂಪನ್ಮೂಲ ಕ್ರೋಢೀಕರಣ ಸಿದ್ಧಾಂತ”, ಗಣ್ಯರ ನಿಧಿಯ ಮೇಲೆ ಅವಲಂಬಿತವಾದ ಚಳುವಳಿಗಳು ಅನಿವಾರ್ಯವಾಗಿ ದಾನಿಗಳ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತವೆ ಹಾಗೂ 80% ಕ್ಕಿಂತ ಹೆಚ್ಚು ಬ್ಯಾರಿ ಎನ್ಜಿಒಗಳು ವ್ಯಾಪಾರ ಹಾಗೂ ಲಾಭದ ಹವಣಿಕೆಯನ್ನು ಹೊಂದಿದೆ ಎಂಬುವುದನ್ನು ನಾವು ಮನಗಾಣಬೇಕಾಗಿದೆ. ಅವರು ವಾಣಿಜ್ಯ ಯೋಜನೆಗಳ ಕಡೆಗೆ ತಮ್ಮ ಕಾರ್ಯಸೂಚಿಗಳನ್ನು ತಿರುಗಿಸುತ್ತವೆ ಎಂಬುವುದನ್ನು ನಾವು ಮರೆಯಬಾರದು.
ಮುಂದಿನ ದಾರಿ
ಬ್ಯಾರಿ ಚಳುವಳಿಯನ್ನು ಮತ್ತೆ ಸಮಯರಲ್ಲಿ ಪುನಃಸ್ಥಾಪಿಸುವುದೊಂದೇ ನಮಗಿರುವ ಮುಂದಿನ ದಾರಿಯಾಗಿದೆ. ಅದನ್ನು ಹೇಗೆ ಮಾಡಬಹುದೆಂದರೆ;
- ಪ್ರಜಾಸತ್ತಾತ್ಮಕ ಪುನರ್ರಚನೆ: ಬ್ಯಾರಿ ಸಾಹಿತ್ಯ ಅಕಾಡೆಮಿಯಂತಹ ಸಂಸ್ಥೆಗಳಲ್ಲಿ ಚುನಾಯಿತ ನಾಯಕತ್ವವನ್ನು ಸ್ಥಾಪಿಸುವುದು.
- ಲಿಂಗ ಕೋಟಾಗಳು: ಸಾಂಸ್ಕೃತಿಕ ಮತ್ತು ರಾಜಕೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ 50% ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳುವುದು.
- ಪಾರದರ್ಶಕತೆ ಕಾನೂನುಗಳು: ಸಮುದಾಯ ನಿಧಿಗಳ ಸಾರ್ವಜನಿಕ ಲೆಕ್ಕಪರಿಶೋಧನೆಗಳನ್ನು ಕಡ್ಡಾಯಗೊಳಿಸಿ.
- ತಳಮಟ್ಟದ ಮೈತ್ರಿಗಳು: ಅಸಮಾನತೆಯ ವಿಶಾಲವಾದ ವ್ಯವಸ್ಥೆಗಳಿಗೆ ಸವಾಲು ಹಾಕಲು ದಲಿತ, ಆದಿವಾಸಿ ಮತ್ತು OBC ಚಳುವಳಿಗಳೊಂದಿಗೆ ನಮ್ಮನ್ನು ನಾವು ಗುರುತಿಸಿಕೊಳ್ಳಬೇಕಾಗಿದೆ.
ಬ್ಯಾರಿ ಚಳುವಳಿಯ ದೊಡ್ಡ ಶಕ್ತಿ-ಅದರ ಶ್ರೀಮಂತ ಸಾಂಸ್ಕೃತಿಕ ಪರಂಪರೆ-ಅದರ ದುರ್ಬಲತೆಯೂ ಆಗಿದೆ. ಗಣ್ಯರು ಗೋಚರತೆಯನ್ನು ತಂದಿದ್ದರೂ, ಅವರ ಟಾಪ್-ಡೌನ್ ವಿಧಾನವು ರಾಜಕೀಯ ಮತ್ತು ವಾಣಿಜ್ಯ ಶೋಷಣೆಗಾಗಿ “ಬ್ಯಾರಿ” ಗುರುತನ್ನು ಬ್ಯಾರಿ ಬ್ರ್ಯಾಂಡ್ಗೆ ಸೀಮಿತಗೊಳಿಸುವ ಅಪಾಯ ಇದೆ ಎಂಬುವುದನ್ನು ನಾನೀಗಾಗಲೇ ಮಾನವರಿಕೆ ಮಾಡಿಕೊಟ್ಟಿದ್ದೇನೆ. ಆಂದೋಲನವು ಉಳಿಯಲು, ಅದು ತನ್ನ ಬೇರುಗಳಿಗೆ ಮರಳಬೇಕು: ತಳಮಟ್ಟದ ಸಾಮಾನ್ಯ ಬ್ಯಾರಿಗಳ ನಾಯಕರಿಗೆ ಅಧಿಕಾರ ನೀಡುವುದು, ಭಾಷಾ ದೃಢೀಕರಣವನ್ನು ಕಾಪಾಡುವುದು ಮತ್ತು ಅಂತರ್ಗತ ನಾಯಕತ್ವವನ್ನು ಬೆಳೆಸುವುದರಿಂದ ಬ್ಯಾರಿ ಚಳುವಳಿ ಅಥವಾ ಬ್ಯಾರಿ ಅಂದೊಂಲನ ಮತ್ತೆ ಮರುಜೀವವನ್ನು ಪಡೆಯಬಹುದು ಎಂಬುವುದು ನನ್ನ ಅನಿಸಿಕೆಯಾಗಿದೆ.
