ಜೀಪು ಚಾಲಕನ ಮೇಲೆ ತಲ್ವಾರ್ ದಾಳಿಗೆ ಯತ್ನ; ಬೈಕಿನಲ್ಲಿ ಬಂದ ಹಿಂಬದಿ ಸವಾರನಿಂದ ದುಷ್ಕೃತ್ಯ, ಪ್ರಕರಣ ದಾಖಲು

ಕರಾವಳಿ

ಸಜಿಪ ಮುನ್ನೂರು ಗ್ರಾಮದ
ಉಮರ್ ಫಾರೂಕ್ (48)ಎಂಬವರು ದಿನಾಂಕ 11.06.2025 ರಂದು ಮುಂಜಾನೆ ತನ್ನ ಮನೆಯಿಂದ ಜೀಪ್ ನಲ್ಲಿ ದೇರಳಕಟ್ಟೆ ಕಡೆಗೆ ತೆರಳುತ್ತಾ, ಸಜೀಪ ನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ತಲುಪಿದಾಗ, ಪಿರ್ಯಾದಿದಾರರು ತೆರಳುತ್ತಿದ್ದ ರಸ್ತೆಯಲ್ಲಿ ವಿರುದ್ದ ದಿಕ್ಕಿನಿಂದ ಇಬ್ಬರು ಅಪರಿಚಿತರು ಬೈಕ್ ನಲ್ಲಿ ಬಂದಿದ್ದಾರೆ. ಬೈಕಿನ ಹಿಂಬದಿ ಸವಾರ ತಲವಾರು ಬೀಸಿದ್ದು ಅದೃಷ್ಟವಶಾತ್ ಚಾಲಕನಿಗೆ ಯಾವುದೇ ಗಾಯಗಳಾಗದೇ ಬಚಾವಾಗಿದ್ದಾರೆ.

ಆದರೆ ದುಷ್ಕರ್ಮಿಯ ತಲವಾರು ವಾಹನದ ಸೈಡ್ ಮಿರರ್ ಗೆ ತಾಗಿದ ಪರಿಣಾಮ ಗಾಜು ಒಡೆದಿರುತ್ತದೆ. ಘಟನೆಯ ಬಗ್ಗೆ ಪಿರ್ಯಾದಿರವರು ದಿನಾಂಕ; 13.06.2025 ರಂದು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ ಕ್ರ ಸಂಖ್ಯೆ : 68/2025 ಕಲಂ : 109, 324(4), ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿರುತ್ತದೆ.