ಸಹಕಾರಿ ದಿಗ್ಗಜ ದಿವಂಗತ ಎಚ್. ನಾರಾಯಣ ಸನಿಲ್ ಹೆಸರಲ್ಲಿ ಮರಣೋತ್ತರ ಸಹಾಯ ನಿಧಿ ಸ್ಥಾಪಿಸಿದ ಪ್ರಿಯದರ್ಶಿನಿ ಕೋ.ಅಪರೇಟಿವ್ ಸೊಸೈಟಿ

ಕರಾವಳಿ

ಹಳೆಯಂಗಡಿ: ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಹಳೆಯಂಗಡಿ ಇದರ ವಾರ್ಷಿಕ ಮಹಾಸಬೆಯಲ್ಲಿ ಘೋಷಿಸಿದಂತೆ, ಸಹಕಾರಿ ದಿಗ್ಗಜ ದಿವಂಗತ ಎಚ್ ನಾರಾಯಣ ಸನಿಲ್ ಮರಣೋತ್ತರ ಸಹಾಯ ನಿಧಿಯನ್ನು ಸ್ಥಾಪನೆ ಮಾಡಿದ್ದು, ಈ ನಿಧಿಯ ಅನ್ವಯ ಸೊಸೈಟಿಯಲ್ಲಿ ಸದಸ್ಯರಾಗಿದ್ದ ವ್ಯಕ್ತಿಗಳು ಮರಣ ಹೊಂದಿದ್ದಲ್ಲಿ ಅವರ ವಾರಿಸುದಾರರಿಗೆ ಮೃತರ ಶವ ಸಂಸ್ಕಾರ ಬಾಬ್ತು 10 ಸಾವಿರ ರೂಪಾಯಿ ಮೊತ್ತವನ್ನು ಸಹಾಯ ರೂಪವಾಗಿ ನೀಡಲಾಗುವುದು. ಎಂದು ಸೊಸೈಟಿಯ ಅಧ್ಯಕ್ಷರಾದ ಎಚ್ ವಸಂತ ಬರ್ನಾಡ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಹಳೆಯಂಗಡಿಯ ಎಚ್ ನಾರಾಯಣ ಸನಿಲ್ ರವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀಡಿದ ಸಹಕಾರಿ ಸೇವೆಯನ್ನು ಅಜರಾಮರವಾಗಿ ಇರಿಸುವ ಉದ್ದೇಶದಿಂದ ಈ ಉತ್ಕೃಷ್ಟ ಯೋಜನೆಗೆ ಇವರ ಹೆಸರನ್ನು ನೀಡಲಾಗಿದ್ದು, ನಾರಾಯಣ ಸನಿಲ್ ರವರ ಆದರ್ಶಗಳು ಮುಂದಿನ ಪೀಳಿಗೆಗೂ ಅನುಕರಣವಾಗಲಿ ಎಂಬ ನಿಟ್ಟಿನಲ್ಲಿ ಅವರ ಹೆಸರನ್ನು ಪ್ರಸ್ತಾಪಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.