ರಾಜ್ಯದ ನೈಋತ್ಯ ಪದವೀಧರರ ಕ್ಷೇತ್ರದ ಆಕಾಂಕ್ಷಿ ಕ್ರಿಯಾಶೀಲ ಪತ್ರಕರ್ತ, ವಕೀಲ ಜಿ.ಆರ್. ಷಡಾಕ್ಷರಪ್ಪರವರಿಂದ ಬಿರುಸಿನ ಪ್ರಚಾರ

ರಾಜ್ಯ

ಈ ಬಾರಿಯ ಚುನಾವಣೆಯಲ್ಲಿ ರಾಷ್ಟೀಯ ಪಕ್ಷಗಳ ಅಭ್ಯರ್ಥಿಗಳಿಗೆ ಷಡಾಕ್ಷರಪ್ಪನವರು ತೀವ್ರ ಸ್ಪರ್ಧೆ ಒಡ್ಡುವುದು ಖಚಿತ

ಕರ್ನಾಟಕ ರಾಜ್ಯದ ನೈಋತ್ಯ ಪದವೀಧರರ ಕ್ಷೇತ್ರಕ್ಕೆ – 2024ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಈ ಬಾರಿ ಶಿವಮೊಗ್ಗದ ಕ್ರಿಯಾಶೀಲ ಪತ್ರಕರ್ತ ಹಾಗೂ ವಕೀಲ ಜಿ.ಆರ್. ಷಡಾಕ್ಷರಪ್ಪ ಸ್ಪರ್ಧಿಸುತ್ತಿದ್ದು, ಈಗಾಗಲೇ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ನೈರುತ್ಯ ಪದವೀಧರ ಕ್ಷೇತ್ರ ತುಂಬಾ ವಿಶಾಲ ವ್ಯಾಪ್ತಿಯನ್ನು ಹೊಂದಿರುವ ಕ್ಷೇತ್ರವಾಗಿದ್ದು, 3೦ ವಿಧಾನಸಭಾ ಕ್ಷೇತ್ರ ಹಾಗೂ 5 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳು ಹಾಗೂ ದಾವಣಗೆರೆ ಜಿಲ್ಲೆಯ ನ್ಯಾಮತಿ, ಹೊನ್ನಾಳಿ ಹಾಗೂ ಚನ್ನಗಿರಿ ತಾಲೂಕುಗಳು ಕ್ಷೇತ್ರದ ವ್ಯಾಪ್ತಿಗೆ ಬರಲಿದೆ.

ನೈರುತ್ಯ ಪದವೀಧರ ಕ್ಷೇತ್ರವನ್ನು ಮಾಜಿ ವಿಧಾನ ಪರಿಷತ್ ಸಭಾಪತಿ ಡಿ.ಹೆಚ್. ಶಂಕರಮೂರ್ತಿ 5 ಬಾರಿ ಪ್ರತಿನಿಧಿಸಿದ್ದು, ಕಳೆದ ಅವಧಿಯಲ್ಲಿ ಆಯನೂರು ಮಂಜುನಾಥ್ ಆಯ್ಕೆಯಾಗಿದ್ದರು. ಕಳೆದ ವರ್ಷ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದ ಆಯನೂರು ಮಂಜುನಾಥ್ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಆ ಮೂಲಕ ಅವಧಿ ಮುಗಿಯುವ ವರ್ಷದ ಮುಂಚೆಯೇ ಈ ಸ್ಥಾನ ತೆರವಾಗಿದ್ದು, ಇದೇ ಜೂನ್‌ನಲ್ಲಿ ನೂತನ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಸ್ಪರ್ಧಾಕಾಂಕ್ಷಿಗಳ ಸಾಲಿನಲ್ಲಿ ಪತ್ರಕರ್ತರಾಗಿ, ವಕೀಲರಾಗಿ ಜನಸಾಮಾನ್ಯರೊಂದಿಗೆ ಗುರುತಿಸಿ ಕೊಂಡಿರುವ ಜಿ.ಆರ್. ಷಡಾಕ್ಷರಪ್ಪ ಸ್ಪರ್ಧಿಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಸಾರ್ವತ್ರಿಕ ಚುನಾವಣೆಗಳಲ್ಲಿ ಕಡೆಗಣನೆಗೊಳಗಾದ ಅವಕಾಶ ವಂಚಿತರಿಗೆ ಅವಕಾಶ ಮಾಡಿಕೊಡಲು ಮತ್ತು ವಿವಿಧ ವರ್ಗಗಳ ವರ ಸಮಸ್ಯೆಗಳಿಗೆ ಧ್ವನಿಯಾಗಲೆಂದು, ನಮ್ಮ ಸಂವಿಧಾನದಲ್ಲಿ ದ್ವಿಸದನ ವ್ಯವಸ್ಥೆಗೆ ಅವಕಾಶ ಮಾಡಿಕೊಟ್ಟಿದ್ದು, ವಿಧಾನ ಪರಿ ಷತ್ ಮೇಲ್ಮನೆಯಾಗಿದ್ದು, ವಿಧಾನಸಭೆಯಲ್ಲಿ ಚರ್ಚೆಗೆ ಬಾರದ ವಿಚಾರಗಳನ್ನು ಇಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾತ್ತದೆ. ವಿಧಾನ ಪರಿಷತ್ ಅನ್ನು ದೇಶದ ಆರು ರಾಜ್ಯಗಳಷ್ಟೇ ಅಳವಡಿಸಿಕೊಂಡಿವೆ. ಅದರಲ್ಲಿ ಕರ್ನಾಟಕವೇ ಮೊದಲು ವಿಧಾನ ಪರಿಷತ್ ಅನ್ನು ಅಳವಡಿಸಿಕೊಂಡಿದ್ದು ಎನ್ನುವುದು ಗಮನಾರ್ಹ. ಇನ್ನುಳಿದಂತೆ ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟç, ಬಿಹಾರ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ದ್ವಿಸದನ ವ್ಯವಸ್ಥೆ ಇದೆ. ಆದರೆ, ನೈರುತ್ಯ ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸಿದ ಹಿಂದಿನ ಶಾಸಕರುಗಳು ಈ ಕ್ಷೇತ್ರದ ಪದವೀಧರರಿಗೆ ಅನುಕೂಲವಾಗುವಂತೆ ಯಾವುದೇ ಕೆಲಸಗಳನ್ನು ಇದುವರೆಗೂ ಮಾಡಿಲ್ಲ. ಅವರ ಕೆಲಸ ಏನಿದ್ದರೂ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡಲು, ಪಕ್ಷದ ಸಂಘಟನೆಗೆ ಅನುಕೂಲ ಮಾಡಿಕೊಡಲಷ್ಟೇ ಸೀಮಿತವಾಗಿದೆ. ಪದವೀಧರರ ಸಮಸ್ಯೆಗಳು ಇಂದಿಗೂ ಜ್ವಲಂತವಾಗಿವೆ. ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಯುವಕರು ಪದವಿ ಪಡೆದು ಹೊರಬರುತ್ತಿದ್ದರೂ ಎಲ್ಲರಿಗೂ ಸೂಕ್ತ ಉದ್ಯೋಗಾವಕಾಶ ಗಳನ್ನು ಒದಗಿಸಿಕೊಡುವಲ್ಲಿ ಸರ್ಕಾರ ಗಳು ವಿಫಲವಾಗಿದೆ. ಅದನ್ನು ಸದನದ ಗಮನಕ್ಕೆ ತರಲೂ ಆ ಕ್ಷೇತ್ರವನ್ನು ಪ್ರತಿನಿಧಿಸಿದವರು ಪ್ರಯತ್ನ ಮಾಡಿಲ್ಲ.

ಅಯನೂರು ಮಂಜುನಾಥ್ ಅವರು ಸದನದಲ್ಲಿ ಅತಿಥಿಶಿಕ್ಷಕರ ಬಗ್ಗೆ ಒಂದಿಷ್ಟು ಮಾತಾಡಿದ್ದು ಬಿಟ್ಟರೆ ಮತ್ತೆ ಬೇರೆ ಯಾವ ಕೆಲಸ ಗಳನ್ನೂ ಮಾಡಲೇ ಇಲ್ಲ. ವಿಧಾನಸಭೆಗೆ ಆಯ್ಕೆ ಬಯಸಿ ರಾಜೀ ನಾಮೆ ನೀಡಿದ್ದ ಕ್ಷೇತ್ರಕ್ಕೇ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದಾರೆ.
ಕಾಂಗ್ರೆಸ್‌ನ ಪ್ರಬಲ ಆಕಾಂಕ್ಷಿಗಳಾಗಿದ್ದ ಎಸ್.ಪಿ. ದಿನೇಶ್ ಮತ್ತು ರಂಗಸ್ವಾಮಿ ಅವರುಗಳು ಬಹುತೇಕ ಕಣದಿಂದ ಹಿಂದೆ ಸರಿದಿ ದ್ದಾರೆ. ಬಿಜೆಪಿ-ಜೆಡಿಎಸ್ ಅಭ್ಯರ್ಥಿಯನ್ನಾಗಿ ವೈದ್ಯರ ನ್ನೊಬ್ಬರನ್ನು ಕಣಕ್ಕಿಳಿಸುವ ಚಿಂತನೆ ನಡೆದಿದೆ ಎಂಬ ಮಾತುಗಳು ಕೇಳಿ ಬರು ತ್ತಿವೆ. ಆದರೆ, ಇರ‍್ಯಾರೂ ಪದವೀಧರರ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗುವುದು ಸಾಧ್ಯವಿಲ್ಲ ಎನ್ನುವುದೂ ಅಷ್ಟೇ ವಾಸ್ತವವಾಗಿದೆ.

ಕಾಲೇಜು ದಿನಗಳಿಂದಲೇ ಹಲವಾರು ಹೋರಾಟಗಳಲ್ಲಿ ತೊಡಗಿಕೊಂಡು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಧ್ವನಿಯಾಗಿದ್ದ ಜಿ.ಆರ್. ಷಡಾಕ್ಷರಪ್ಪ ಅವರು, ಕಳೆದ ಎರಡು ದಶಕಗಳಿಂದ ಪತ್ರಕರ್ತರಾಗಿದ್ದುಕೊಂಡು, ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾಗಿ, ವಕೀಲರಾಗಿ ಪದವೀಧರರ ಸಮಸ್ಯೆಗಳನ್ನು ತೀರಾ ಹತ್ತಿರದಿಂದ ಬಲ್ಲವರಾಗಿ ದ್ದಾರೆ. ಪದವೀಧರರ ಕ್ಷೇತ್ರದ ಸಮಸ್ಯೆಗಳನ್ನು ಅವರದೇ ಮಾತುಗಳಲ್ಲಿ ಹೇಳುವುದಾದರೆ; “ಪದವೀಧರರ ಕ್ಷೇತ್ರವನ್ನು ಪ್ರತಿನಿಧಿಸಿದ ಹಿಂದಿನ ಶಾಸರ‍್ಯಾರೂ ಪದವೀಧರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡದೇ ಕಾಲಹರಣ ಮಾಡಿದ್ದೇ ಹೆಚ್ಚು. ಮುಖ್ಯವಾಗಿ 2006 ರ ನಂತರ ಸರ್ಕಾರಿ ನೌಕರರು ಎನ್.ಪಿ.ಎಸ್. ಅಡಿ ನೇಮಕವಾಗಿದ್ದು, ನಿವೃತ್ತಿ ವೇತನದಿಂದ ವಂಚಿತರಾಗಿದ್ದಾರೆ. ಅನುದಾನಿತ ಶಿಕ್ಷಣ ಸಂಸ್ಥೆ ಹಾಗೂ ಅರೆ ಸರ್ಕಾರಿ, ಸ್ವಾಯತ್ತ ಸಂಸ್ಥೆಗಳ ನೌಕರರಿಗೂ ಸಹ ಓ.ಪಿ.ಎಸ್. ಜಾರಿ ಮಾಡ ಬೇಕೆಂಬ ಆಗ್ರಹವಿದ್ದರೂ ಸಮಸ್ಯೆ ಪರಿಹಾರವಾಗುವ ಲಕ್ಷಣಗಳು ಇಂದಿಗೂ ಕಂಡುಬಂದಿಲ್ಲ.” “ಪ್ರತಿ ವರ್ಷ ಲಕ್ಷಾಂತರ ಮಂದಿ ಪದವಿ ಪಡೆದು ಹೊರಬರುತ್ತಿದ್ದರೂ ಅವರಿಗೆಲ್ಲ ಸೂಕ್ತ ಉದ್ಯೋಗ ನೀಡುವಲ್ಲಿ ಸರ್ಕಾರಗಳು ವಿಫಲವಾಗಿವೆ. ಸ್ವಂತ ಉದ್ಯೋಗ ಕೈಗೊಳ್ಳಲು ಸೂಕ್ತ ಹಣಕಾಸಿನ ನೆರವನ್ನೂ ಸರ್ಕಾರ ಒದಗಿಸುತ್ತಿಲ್ಲ. ಇದರಿಂದಾಗಿ ಪದವಿ ಪಡೆದ ಸಾವಿರಾರು ಜನಕ್ಕೆ ಉದ್ಯೋಗ ಭದ್ರತೆ, ಜೀವನ ಭದ್ರತೆಯ ಸಮಸ್ಯೆ ಕಾಡುತ್ತಲೇ ಇದೆ.”

ಈ ಎಲ್ಲಾ ಸಮಸ್ಯೆಗಳ ಬಗ್ಗೆ ಧ್ವನಿ ಆಗಬೇಕಿದ್ದ ನೈಋತ್ಯ ಪದವೀಧರರ ಕ್ಷೇತ್ರದ ಶಾಸಕರುಗಳು ಸದನದಲ್ಲಿ ಕಾಲಹರಣ ಮಾಡಿದರೆ ಹೊರತು, ಸಮಸ್ಯೆಗಳು ಸಮಸ್ಯೆಗಳಾಗಿಯೇ ಇವೆ. ಪದವೀಧರ ನೌಕರರು, ಸ್ವಯಂ ಉದ್ಯೋಗಿಗಳು, ಕಾರ್ಮಿಕರು, ನಿರುದ್ಯೋಗಿ ಪದವೀಧರರು, ಉದ್ಯೋಗ ಭದ್ರತೆ ಇಲ್ಲದ ನೌಕರರ ಪರವಾಗಿ ಸದನದ ಒಳಗೆ, ಹೊರಗೆ ಧ್ವನಿಯಾಗಿ ಕೆಲಸ ಮಾಡಲು ಅವಕಾಶ ಕೋರಿ ಸ್ಪರ್ಧಿಸುತ್ತಿರುವು ದಾಗಿ ಹೇಳುತ್ತಿದ್ದಾರೆ. ಹೋದ ಕಡೆಯೆಲ್ಲಾ ಜಿ.ಆರ್. ಷಡಾಕ್ಷರಪ್ಪ ಅವರಿಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಈ ಬಾರಿಯ ಚುನಾವಣೆಯಲ್ಲಿ ರಾಷ್ಟೀಯ ಪಕ್ಷಗಳ ಅಭ್ಯರ್ಥಿಗಳಿಗೆ ತೀವ್ರ ಸ್ಪರ್ಧೆ ಒಡ್ಡುವುದು ಖಚಿತವಾಗಿದೆ.