ಪಕ್ಷದ ಅಧ್ಯಕ್ಷರಾದವರು ಜನರ ಸೇವೆ ಮಾಡುವುದು ಭಾರೀ ಕಡಿಮೆ. ಪಕ್ಷದ ಸಭೆ, ಪಕ್ಷದ ಬೆಳವಣಿಗೆಗೆ ಪೂರಕವಾಗಿರುವ ಸಲಹೆ, ಅಭಿಪ್ರಾಯಗಳನ್ನು ಅನುಷ್ಠಾನ ಗೊಳಿಸುವುದರಲ್ಲೇ ಮಗ್ನರಾಗಿರುತ್ತಾರೆ. ಆದರೆ ಇಲ್ಲೊಬ್ಬರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಆಪತ್ತಿನ ಕಾಲದಲ್ಲಿ ಜನಸಾಮಾನ್ಯರ ಸಂಕಷ್ಟಕ್ಕೆ ಮಿಡಿಯುವ ಮೂಲಕ ಅಪರೂಪದ ಕೆಲಸ ಮಾಡಿದ್ದಾರೆ. ಅವರು ಬೇರಾರೂ ಅಲ್ಲ. ಮೂಡಬಿದ್ರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶಿರ್ತಾಡಿ.

ಮೂಡುಬಿದ್ರಿ ತಾಲೂಕಿನಾದ್ಯಂತ ಹಲವೆಡೆ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಗಾಳಿಯ ರಭಸಕ್ಕೆ, ಸಿಕ್ಕ ಕೆಲವು ಮರಗಳು ಮನೆಗಳ ಮೇಲೆ ಉರುಳಿಬಿದ್ದಿದ್ದರಿಂದ ಜನರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಗಾಳಿ, ಮಳೆಯ ರಭಸಕ್ಕೆ ಹಲವು ಮನೆಗಳ ಛಾವಣಿಗಳು ಸಂಪೂರ್ಣ ಜಖಂಗೊಂಡಿದೆ. ಮೂಡಬಿದ್ರೆ ತಾಲೂಕಿನ ವಾಲ್ಪಾಡಿ, ನೆಲ್ಲಿಕಾರು (ಬೋರುಗುಡ್ಡೆ) ಮತ್ತು ಮಾಂಟ್ರಾಡಿ ಗ್ರಾಮಗಳ ಹಲವು ಮನೆಗಳಿಗೆ ಬಾರಿ ಹಾನಿಯಾಗಿದೆ. ಮಾಹಿತಿ ತಿಳಿದ ತಕ್ಷಣ ಮೂಡುಬಿದ್ರೆ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶಿರ್ತಾಡಿ ಯವರು ಸ್ಥಳೀಯ ಪಂಚಾಯತ್ ಸದಸ್ಯರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಜೊತೆಗೂಡಿ ಮಳೆಯಿಂದ ಹಾನಿಯಾದ ಮಾಂಟ್ರಾಡಿ ಗ್ರಾಮದ ಸಿದ್ದೀಕ್ ಅವರ ಮನೆಗೆ, ವಾಲ್ಪಾಡಿ ಗ್ರಾಮದ ಒಂದನೇ ವಾರ್ಡಿನ ಜಯಂತಿ ಶೇಖರ್ ಶೆಟ್ಟಿ ಮತ್ತು ಗ್ರಾ.ಪಂ ನ ಮಾಜಿ ಅಧ್ಯಕ್ಷರಾದ ವಸಂತಿಯವರ ಮನೆಗೆ, ಲಲಿತಾ ಸುಂದರ ಆಚಾರಿ ಮತ್ತು ಸತೀಶ ರವರ ಮನೆಗಳಿಗೆ ಮತ್ತು ನೆಲ್ಲಿಕಾರು ಗ್ರಾಮದ ಬೋರುಗುಡ್ಡೆ ನಿವಾಸಿ ಶ್ರೀಧರ್ ಪೂಜಾರಿ ಅವರ ಮನೆಗೆ ಭೇಟಿ ನೀಡಿದ್ದಾರೆ.

ಸ್ಥಳದಿಂದಲೇ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ಮಿಥುನ್ ರೈ ಅವರಿಗೆ ಕರೆ ಮಾಡಿ ಮಳೆ ಗಾಳಿಯಿಂದ ಆದ ಹಾನಿಯ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಮಿಥುನ್ ರೈ ಅವರು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಹಾನಿಗೊಳಗಾದ ಮನೆಗಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳನ್ನು ತಕ್ಷಣ ಕಳುಹಿಸಿ ಅವರಿಗೆ ಹಾನಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಅವರಿಗೆ ಹೆಚ್ಚಿನ ಪರಿಹಾರ ಅತ್ಯಂತ ಶೀಘ್ರದಲ್ಲಿ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಪ್ರವೀಣ್ ಕುಮಾರ್ ಅವರು ಸ್ಥಳೀಯ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಿ ಈ ಭಾಗದಲ್ಲಿ ಮಳೆಯಿಂದ ಬಹಳಷ್ಟು ಅಡಿಕೆ ಕೃಷಿಗೆ ಹಾನಿ ಉಂಟಾಗಿದ್ದು ಎಲ್ಲಾ ಮಾಹಿತಿ ಪಡೆದು ಅವರಿಗೆ ಸೂಕ್ತ ಪರಿಹಾರ ತೆಗೆಸಿಕೊಡುವಂತೆ ಒತ್ತಾಯಿಸಿದ್ದಾರೆ. ಮನೆಯ ಮೇಲ್ಚಾವಣಿ ಕುಸಿತದಿಂದ ಗಾಯಗೊಂಡವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಅವರಿಗೆ ಸರಕಾರದಿಂದ ಸೂಕ್ತ ಪರಿಹಾರ ತೆಗೆಸಿಕೊಡುವ ಭರವಸೆ ನೀಡಿದರು. ಜನರ ಸಂಕಷ್ಟದ ಸಂದರ್ಭದಲ್ಲಿ ಅವರೊಂದಿಗಿದ್ದು, ದೈರ್ಯ ತುಂಬಿ, ಆಪತ್ತಿನ ಕಾಲದಲ್ಲಿ ಜನಸಾಮಾನ್ಯರ ಸಂಕಷ್ಟಕ್ಕೆ ಮಿಡಿಯುವ ಮೂಲಕ ಅಪರೂಪದ ಕೆಲಸ ಮಾಡಿರುವ ಇವರ ಮಾನವೀಯತೆ ಸೇವೆಯನ್ನು ಜನರು ಕೊಂಡಾಡಿದ್ದಾರೆ.

ಈ ಸಂದರ್ಭದಲ್ಲಿ ವಾಲ್ಪಾಡಿ ಗ್ರಾಮ ಪಂಚಾಯಿತ್ ಸದಸ್ಯರಾದ ಶ್ರೀಧರ ಪೂಜಾರಿ, ಸುಶೀಲ ನೆಲ್ಲಿಕಾರು, ಗ್ರಾಮ ಪಂಚಾಯತ್ ಸದಸ್ಯರಾದ ಶಶಿಧರ ಎಂ, ಚಾರ್ಲ್ಸ್ ಸಾಂತಮಯೋರ್, ಕಾಂಗ್ರೆಸ್ ಮುಖಂಡರಾದ ಸುಕುಮಾರ ಕಡಂಬ, ಸಂತೋಷ್ ಕೋಟ್ಯಾನ್, ಪ್ರಸಾದ್ ಹೆಗ್ಡೆ ಬೋರುಗುಡ್ಡೆ ಮತ್ತು ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.
