ಬಿಎಲ್ಡಿಇ ಸಂಸ್ಥೆ ಅಧ್ಯಕ್ಷ ಹಾಗೂ ರಾಜ್ಯ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಅವರ ಕಿರಿಯ ಪುತ್ರ ಧ್ರುವ ಎಂ. ಪಾಟೀಲ ಅಮೆರಿಕಾದ ನ್ಯೂಯಾರ್ಕ್ ವಿಶ್ವವಿದ್ಯಾಲಯಕ್ಕೆ ಟಾಫ್ 5 ವಿದ್ಯಾರ್ಥಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.

ನ್ಯೂಯಾರ್ಕ್ ವಿವಿಯಲ್ಲಿ ಇತ್ತೀಚೆಗೆ ನಡೆದ ಘಟಿಕೋತ್ಸವದಲ್ಲಿ ಅವರಿಗೆ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪ್ರದಾನ ಮಾಡಲಾಯಿತು. ಘಟಿಕೋತ್ಸವದಲ್ಲಿ ಸಚಿವ ಎಂ. ಬಿ. ಪಾಟೀಲ ಹಾಗೂ ಕುಟುಂಬದ ಸದಸ್ಯರು ಭಾಗವಹಿಸಿ, ಧ್ರುವ ಎಂ. ಪಾಟೀಲ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವನ್ಯ ಜೀವಿ ರಕ್ಷಣೆ, ಪರಿಸರ ಜಾಗೃತಿ, ಬೀದಿ ಬದಿ ಪ್ರಾಣಿಗಳ ರಕ್ಷಣೆ ಕುರಿತು ಸದಾ ಮುಂದಿರುವ ಧ್ರುವ ಎಂ. ಪಾಟೀಲ ಅತ್ಯುತ್ತಮ ಛಾಯಾಚಿತ್ರಕಾರರಾಗಿದ್ದಾರೆ. ಅಲ್ಲದೆ, ಸೊಸೈಟಿ ಫಾರ್ ಪ್ರೊಟೆಕ್ಷನ್ ಆಫ್ ಪ್ಲಾಂಟ್ಸ್ ಆ್ಯಂಡ್ ಅನಿಮಲ್ಸ್ ಎನ್ಜಿಓದ ಮುಖ್ಯಸ್ಥರಾಗಿದ್ದಾರೆ.
