ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕೋಟೆ ಬಡಾವಣೆ ನಿವಾಸಿ ಶ್ರೀನಿವಾಸ ಸಿರಯಾನ್, ಅರಕಲಗೂಡು ತಾಲ್ಲೂಕಿನ ದೊಡ್ಡಗಾವನಹಳ್ಳಿ ನಿವಾಸಿ ಉಪೇಂದ್ರ ಡಿ.ಸಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಶ್ರೀನಿವಾಸ ಸಿರಯಾನ್ ಎಂಬಾತನ ವಿರುದ್ಧ ಮಂಗಳೂರು ಪೂರ್ವ ಪೊಲೀಸ್ ಠಾಣಾ ಅ.ಕ್ರ 152/ 2017 ಕಲಂ 3(1), 3(2ಎ), 4, 9 ಐಟಿಪಿ ಕಾಯ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ 6ನೇ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಸಿಸಿ ನಂ 1108/2025 ರಂತೆ ಪ್ರಕರಣ ವಿಚಾರಣ ಹಂತದಲ್ಲಿದ್ದು ನ್ಯಾಯಾಲಯವು ಹಾಜರಾತಿಗಾಗಿ ಹಲವು ಬಾರಿ ಜಾಮೀನು ರಹಿತ ವಾರೆಂಟ್ ನ್ನು ಹೊರಡಿಸಿತ್ತು.
ಇನ್ನು ಉಪೇಂದ್ರ ಡಿ.ಸಿ ಯಾನೆ ಅಭಿಷೇಕ್ ಎಂಬಾತನ ವಿರುದ್ಧ ಮಂಗಳೂರು ಪೂರ್ವ ಪೊಲೀಸ್ ಠಾಣಾ ಅ.ಕ್ರ 102/2019 ಕಲಂ 379 ಐಪಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ 6ನೇ ಜೆಎಂಎಫ್ ಸಿ ನ್ಯಾಯಾಲಯ ಇಲ್ಲಿನ ಸಿ.ಸಿ ನಂ 815/2021 ರಂತೆ ಪ್ರಕರಣವು ವಿಚಾರಣೆಯಲ್ಲಿದ್ದು ನ್ಯಾಯಾಲಯವು ಹಾಜರಾತಿಗಾಗಿ ಹಲವು ಬಾರಿ ಜಾಮೀನು ರಹಿತ ವಾರೆಂಟ್ ನ್ನು ಹೊರಡಿಸಿತ್ತು.
ನ್ಯಾಯಾಲಯಕ್ಕೂ ಹಾಜರಾಗದೆ ತಲೆಮರೆಸಿಕೊಂಡಿದ್ದ ಶ್ರೀನಿವಾಸ ಸಿರಯಾನ್ ಹಾಗೂ ಉಪೇಂದ್ರ ಡಿ.ಸಿ ಯಾನೆ ಅಭಿಷೇಕ್ ಎಂಬವರನ್ನು ಜೂನ್ 6 ರಂದು ಮಂಗಳೂರು ಪೂರ್ವ ಪೊಲೀಸ್ ಠಾಣಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಹಾಗೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
