ಒಂದಕ್ಕಿಂತ ಹೆಚ್ಚು ಮೀಟರ್ ಇದ್ದರೆ ಒಂದಕ್ಕೆ ಮಾತ್ರ ಉಚಿತ; ಬಾಡಿಗೆ ಮನೆಯವರಿಗೆ ಶಾಕ್.!

ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ‘ಗೃಹ ಜ್ಯೋತಿ’ ಯೋಜನೆಯ ಮಾರ್ಗಸೂಚಿಗಳನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ. ಈ ಯೋಜನೆಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹೊಸ ನಿಬಂಧನೆ ಹಾಕಿದ್ದು, ಯೋಜನೆಯ ಲಾಭ ಪಡೆಯಲು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.ಅಲ್ಲದೇ ಗೃಹ ವಿದ್ಯುತ್ ಬಳಕೆದಾರರಲ್ಲಿ ಒಂದಕ್ಕಿಂತ ಹೆಚ್ಚಿನ ಮೀಟರ್ ಇದ್ದಲ್ಲಿ ಒಂದು ಮೀಟರ್ ಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಈ ಮೂಲಕ ಬಾಡಿಗೆ ಮನೆಯವರಿಗೆ ಶಾಕ್ ನೀಡಲಾಗಿದೆ. ಇದರಿಂದಾಗಿ 200 ಯೂನಿಟ್ ವಿದ್ಯುತ್ ಬಳಸಬಹುದು ಎಂದುಕೊಂಡಿದ್ದ ಬಾಡಿಗೆದಾರರು […]

Continue Reading

ಭ್ರಷ್ಟ ಅಧಿಕಾರಿಗಳ ಅಮಾನತಿಗೆ ಡಿಸಿಎಂ, ಡಿ.ಕೆ.ಶಿವಕುಮಾರ್ ಆದೇಶ

ಬೆಂಗಳೂರು:ಪ್ರಭಾವಿ ಅಪಾರ್ಟ್ಮೆಂಟ್ ಮಾಲೀಕರಿಗೆ ಅನುಕೂಲ ಮಾಡಿಕೊಡಲು ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ನಿರ್ಮಾಣ ಯೋಜನೆ ರೂಪಿಸಿ,ಅನುಷ್ಠಾನಕ್ಕೆ ತಂದ ಎಲ್ಲಾ ಅಧಿಕಾರಿಗಳನ್ನು,ಇಂಜಿನಿಯರ್ ಗಳನ್ನು ಇವತ್ತು ಸಂಜೆ ಒಳಗೆ ಸೇವೆಯಿಂದ ಅಮಾನತು ಮಾಡುವಂತೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಅವರಿಗೆ ಸೂಚನೆ ನೀಡಿದ್ದಾರೆ.. ಈ ಕೆರೆ ಮಧ್ಯೆ ರಸ್ತೆ ನಿರ್ಮಾಣ ಮಾಡುವ ಐಡಿಯಾ ಕೊಟ್ಟವರು ಯಾರು? ಯೋಜನೆ ರೂಪಿಸಿದವರು ಯಾರು? ಅನುಷ್ಠಾನಕ್ಕೆ ತಂದವರು ಯಾರು.? ಯಾತಕ್ಕಾಕಗಿ ಇದನ್ನು ಮಾಡಿದಿರಿ.? ಯಾರಿಗೆ ಅನುಕೂಲ ಮಾಡಿಕೊಡಲು […]

Continue Reading

ಗಂಜಿಮಠ: ರಸ್ತೆಯಲ್ಲೇ ಹರಿಯುತ್ತಿದೆ ಕೊಳಚೆ ನೀರು; ರೋಗದ ಭೀತಿಯಲ್ಲಿ ನಾಗರಿಕರು, ಗಂಜಿಮಠ ಪಿಡಿಓ ಮೌನ

ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಳಲಿ ಕ್ರಾಸ್ ಎದುರುಗಡೆ ಇರುವ ಝಾರಾ ಕಲ್ಯಾಣ ಮಂಟಪದ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಜನ ತೊಂದರೆ ಪಡುತ್ತಿದ್ದಾರೆ. ಮಾತ್ರವಲ್ಲದೆ ರೋಗ ಹರಡುವ ಸಾಧ್ಯತೆ ಇರುವ ಬಗ್ಗೆ ಜನ ಆತಂಕ ವ್ಯಕ್ತಪಡಿಸಿದ್ದಾರೆ.ಝಾರಾ ಕನ್ವೆನ್ಷನ್ ಹಾಲ್ ಇದರ ಮುಂಭಾಗದ ರಸ್ತೆಯಲ್ಲಿ ತ್ಯಾಜ್ಯದಿಂದ ತುಂಬಿದ ಕೊಳಚೆ ನೀರು ಸರಾಗವಾಗಿ ರಸ್ತೆಯ ಮೇಲೆ ಹರಿಯುತ್ತಿದೆ. ಕೊಳಚೆ ನೀರು ದುರ್ವಾಸನೆ ಬೀರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಆದರೆ ಗಂಜಿಮಠ ಗ್ರಾಮ ಪಂಚಾಯತ್ ಅಧಿಕಾರಿಗಳು ಇತ್ತ […]

Continue Reading

ಸೋತಿನಾಯೆ ನಿಕ್ಕ್ ದಾಯೆಗ್. ಪಂಚಾಯತ್ ಸದಸ್ಯನ ಮೇಲಿನ ಹಲ್ಲೆಗೆ ತಿರುವು. ಏನಿದು ಹಕೀಕತ್ತು..!

ನೂರ್ ಸಾಬ್ರ ನೂರೊಂದು ಕತೆ.!! ಪಡುಪೆರಾರ ಗ್ರಾಮ ಪಂಚಾಯತ್ ಸದಸ್ಯ ನೂರ್ ಅಹಮದ್ ಎಂಬವರ ಮೇಲೆ ಗುತ್ತಿಗೆದಾರ ಮತ್ತು ಸ್ಥಳೀಯ ಬಿಜೆಪಿ ಮುಖಂಡನೊಬ್ಬ ಕಬ್ಬಿಣದ ರಾಡ್ ನಿಂದ ಗಂಭೀರ ಹಲ್ಲೆ ನಡೆಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯವಾಗಿ ವ್ಯಾಪಕ ತಿರುವು ದೊರೆಯುತ್ತಿದ್ದು, ವೈಯಕ್ತಿಕ ಕಾರಣಕ್ಕಾಗಿ ನಡೆದ ಗಲಾಟೆಯನ್ನು ಕಾಂಗ್ರೆಸ್-ಬಿಜೆಪಿ, ಭಜರಂಗದಳ ಎಂಬ ರೀತಿಯಲ್ಲಿ ತಿರುಚಲು ಹುನ್ನಾರ ನಡೆದಿದೆ ಅನ್ನುವ ಅಭಿಪ್ರಾಯ ಇದೀಗ ಸ್ಥಳೀಯರಿಂದ ಪ್ರಬಲವಾಗಿ ಕೇಳಿ ಬರುತ್ತಿದೆ.ಒಟ್ಟಾರೆ ಪಡುಪೆರಾರ ಗ್ರಾಮ ಪಂಚಾಯತ್ ಸದಸ್ಯರ ಮೇಲೆ ನಡೆದ ಹಲ್ಲೆಯ […]

Continue Reading

ಮಹಿಳೆಯರು ನಾಗಾಸಾಧು ಆಗುವ ಪ್ರಕ್ರಿಯೆಯೇ ಬಹಳ ವಿಚಿತ್ರ.! ನಿಗೂಢ ಲೋಕದ ವಿಸ್ಮಯಕಾರಿ ವಿಚಾರ

ಹಿಂದೂ ಧರ್ಮದಲ್ಲಿ ಪುರುಷ ನಾಗಾ ಸಾಧುಗಳಂತೆ ಸ್ತ್ರೀ ನಾಗಾ ಸಾಧುಗಳೂ ಇದ್ದಾರೆ. ಋಷಿಗಳು ಮತ್ತು ಸಂತರ ಈ ಭ್ರಾತೃತ್ವವು ಬಹಳ ಕಠಿಣ ತಪಸ್ಸು ಮಾಡುತ್ತಾರೆ ಮತ್ತು ಅವರ ಜೀವನವು ತುಂಬಾ ನಿಗೂಢವಾಗಿದೆ. ಸ್ತ್ರೀ ನಾಗಾ ಸಾಧುಗಳ ಜೀವನಕ್ಕೆ ಸಂಬಂಧಿಸಿದ ಪ್ರಮುಖ ಅಂಶ ಭಸ್ಮ, ರುದ್ರಾಕ್ಷ ಮಣಿ, ಉದ್ದನೆಯ ವಸ್ತ್ರಗಳನ್ನು ಮೈಮೇಲೆ ಇಟ್ಟುಕೊಂಡು ನಿಗೂಢವಾಗಿ ಕಾಣುವ ನಾಗಾ ಸಾಧುಗಳ ಲೋಕವೂ ಅವರಂತೆಯೇ ನಿಗೂಢ. ಆದರೆ, ಗಂಡು ಮತ್ತು ಹೆಣ್ಣು ನಾಗಾ ಸಾಧುಗಳಂತೆ ಹೆಣ್ಣು ನಾಗಾ ಸಾಧುಗಳೂ ಇದ್ದಾರೆ ಎಂಬುದು […]

Continue Reading

200 ಯುನಿಟ್ ಉಚಿತ ಕರೆಂಟ್. ಲೆಕ್ಕಾಚಾರ ತಪ್ಪಿದರೆ ಶಾಕ್ ಗ್ಯಾರಂಟಿ.!

ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಇದೀಗ ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ನೀಡಿದ್ದ ‘ಗ್ಯಾರಂಟಿ’ ಆಶ್ವಾಸನೆಗಳನ್ನು ಹಂತ ಹಂತವಾಗಿ ಜಾರಿಗೊಳಿಸುವ ನಿರ್ಧಾರವನ್ನು ಮಾಡುತ್ತಿದೆ.ಚುನಾವಣಾ ಪ್ರನಾಳಿಕೆಯಲ್ಲಿ ನೀಡಿರುವ ಐದು ಗ್ಯಾರಂಟಿಗಳ ಪೈಕಿ ಇದೀಗ ಅತೀ ಹೆಚ್ಚು ಚರ್ಚೆಗೆ ಒಳಗಾಗಿರುವುದು 200 ಯುನಿಟ್ ಉಚಿತ ಕರೆಂಟ್. ಇದರ ಲೆಕ್ಕಾಚಾರ ಇನ್ನೂ ಸ್ಪಷ್ಟವಾಗಿಲ್ಲದ ಕಾರಣ ಈ ವಿಚಾರದಲ್ಲಿ ಜನಸಾಮಾನ್ಯರಲ್ಲಿ ಸ್ವಲ್ಪ ಗೊಂದಲ ಮುಂದುವರೆದಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದ ಸುದ್ದಿಗೋಷ್ಠಿಯಲ್ಲಿ ಹೇಳಿರುವ ಪ್ರಕಾರ, ಪ್ರತೀ ತಿಂಗಳು ವಿದ್ಯುತ್ […]

Continue Reading

ಕೇವಲ ‘ಗೋ’ಮಾಂಸವನ್ನು ಹೊಂದುವುದು, ಗೋ ಉತ್ಪನ್ನ ಮಾರಾಟ ಅಪರಾಧ ಅಲ್ಲ; ಅಲಹಾಬಾದ್ ಹೈಕೋರ್ಟ್

ಮಾಂಸವನ್ನು ಹೊಂದುವುದು ಅಥವಾ ಸಾಗಿಸುವುದು, ಗೋಮಾಂಸ ಅಥವಾ ಗೋಮಾಂಸ ಉತ್ಪನ್ನಗಳ ಮಾರಾಟ ಅಥವಾ ಸಾಗಣೆಯನ್ನು ಗೋಹತ್ಯೆ ಕಾಯಿದೆಯಡಿಯಲ್ಲಿ ಶಿಕ್ಷಾರ್ಹವೆಂದು ಪರಿಗಣಿಸಲಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಪಿಲಿಭಿತ್‌ನ ಪುರನ್‌ಪುರ ಪ್ರದೇಶದ ಇಬ್ರಾನ್ ಅಲಿಯಾಸ್ ಶೇರು ಜಾಮೀನು ಅರ್ಜಿ ಕುರಿತಂತೆ ನ್ಯಾಯಮೂರ್ತಿ ವಿಕ್ರಮ್ ಡಿ ಚೌಹಾಣ್ ಈ ಆದೇಶ ನೀಡಿದ್ದಾರೆ. ಅಲ್ಲದೆ ವಶಪಡಿಸಿಕೊಂಡ ವಸ್ತು ಗೋಮಾಂಸ ಎಂದು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಇಬ್ರಾನ್ ಯಾನೆ ಶೇರು ಪೇಂಟರ್ ವೃತ್ತಿಗಾರನಾಗಿದ್ದು,ದಾಳಿ ನಡೆಸಿದ ವೇಳೆ ಆತನು ಮನೆಯಲ್ಲಿ […]

Continue Reading

ರುಚಿ ಗೋಲ್ಡ್ ಗೆ ಬೀಗ ಜಡಿಯಿರಿ, ಭ್ರಷ್ಟ ಪರಿಸರ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ, ಜೀವ ನದಿ ಪಲ್ಗುಣಿ, ತುಳುನಾಡ ಪರಿಸರ ಉಳಿಸಿ

ಇದು ಜೋಕಟ್ಟೆ ಸಮೀಪ ಇರುವ ರುಚಿ ಗೋಲ್ಡ್ (ಬಾಬಾ ರಾಮ್ ದೇವ್ ಮಾಲಕತ್ವದ) ಕಂಪೆನಿ ಪಲ್ಗುಣಿ ನದಿಗೆ ಕೈಗಾರಿಕಾ ತ್ಯಾಜ್ಯದ ವಿಷ ಹರಿಸುತ್ತಿರುವುದಕ್ಕೆ ಸಾಕ್ಷ್ಯ ಒದಗಿಸುವ ಚಿತ್ರ. ನಾಗರಿಕ ಹೋರಾಟ ಸಮಿತಿಯ ಸತತ ದೂರು, ಪ್ರತಿಭಟನೆಗಳು, ಕೆಲವು ಮಾಧ್ಯಮಗಳ ಜವಾಬ್ದಾರಿಯುತ ವರದಿ ಕಾರಣಕ್ಕೆ ಪಲ್ಗುಣಿ ನದಿ ಹಾಗೂ ತೋಕೂರು ಹಳ್ಳಕ್ಕೆ MRPL, Sez, ಅದಾನಿ ವಿಲ್ಮರ್, ರುಚಿಗೋಲ್ಡ್ ಸೇರಿದಂತೆ ಹಲವು ಉದ್ಯಮಗಳು ಕೈಗಾರಿಕಾ ತ್ಯಾಜ್ಯ ಹರಿಸಿ ನದಿ ಹಾಗೂ ಪರಿಸರವನ್ನು ವಿಷಮಯಗೊಳಿಸುವ ವಿಷಯ ಹಸಿರು ಪೀಠದ ಗಮನಕ್ಕೆ […]

Continue Reading

ರಾಶಿ,ರಾಶಿ ಕಸ ಮಾಯ.! ವರದಿಗೆ ಸ್ಪಂದಿಸಿ ಶುಚಿತ್ವ ಕಾಪಾಡಿದ ಗಂಜಿಮಠ ಗ್ರಾಮ ಪಂಚಾಯತ್ ಜನಪ್ರತಿನಿದಿಗಳು

ಕೈಕಂಬ: ಕೈಕಂಬದಿಂದ ಮರ್ಕಝ್ ನಗರಕ್ಕೆ ಹೋಗುವ ರಾಜ ರಸ್ತೆಯ ಪಕ್ಕದಲ್ಲೇ ಪ್ಲಾಸ್ಟಿಕ್, ಮನೆ ಕಸ, ಹೋಟೆಲ್ ತ್ಯಾಜ್ಯ ಸೇರಿದಂತೆ ವಿವಿಧ ರೀತಿಯ ಕಸಗಳ ರಾಶಿ ಬಿದ್ದು ದುರ್ವಾಸನೆ ಬೀರುತ್ತಿರುವ ಸಮಸ್ಯೆಯಿಂದ ಪರಿಸರದ ನಿವಾಸಿಗಳಿಗೆ ಬಹಳ ತೊಂದರೆಯಾಗುತ್ತಿತ್ತು. ಹಲವು ಸಮಯಗಳಿಂದ ಕಸ ವಿಲೇವಾರಿ ಮಾಡಿಲ್ಲ. ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾಗಿತ್ತು. ಇದು ಅಸಹ್ಯವಾಗಿ ಕಾಣುತ್ತಿತ್ತು. ಈ ಕುರಿತು ಸ್ಪೆಷಲ್ ನ್ಯೂಸ್ ಮೀಡಿಯಾ ಸಚಿತ್ರ ವರದಿಯನ್ನು ಪ್ರಕಟಿಸಿತ್ತು. ಇದೀಗ ಗಂಜಿಮಠ ಗ್ರಾಮ ಪಂಚಾಯತಿನ ಜನಪ್ರತಿನಿದಿಗಳು ಈ ಸಮಸ್ಯೆಗೆ ಸ್ಪಂದಿಸಿ, ಮುರ್ತುವರ್ಜಿ […]

Continue Reading

ಸಂವಿಧಾನದ ಆರ್ಟಿಕಲ್ 30 ಮತ್ತು 30A ಯನ್ನು ರದ್ದು ಮಾಡುವ ಮೂಲಕ ಮೋದೀಜಿ ಇನ್ನೊಂದು ಪೆಟ್ಟು ನೀಡಲಿದ್ದಾರೆ. ದ್ವೇಷ ಎನ್ನುವುದು ತನ್ನನ್ನು ತಾನೇ ಸುಟ್ಟುಕೊಳ್ಳುತ್ತದೆ.

✍️. ನವೀನ್ ಸೂರಿಂಜೆ “ಸಂವಿಧಾನದ ಆರ್ಟಿಕಲ್ 30 ಮತ್ತು 30A ಯನ್ನು ರದ್ದು ಮಾಡುವ ಮೂಲಕ ಮೋದೀಜಿಯವರು ಇನ್ನೊಂದು ಪೆಟ್ಟು ನೀಡಲಿದ್ದಾರೆ. ನೆಹರೂ ಹಿಂದೂಗಳಿಗೆ ಮಾಡಿದ್ದ ಅನ್ಯಾಯವನ್ನು ಮೋದಿ ಸರಿಪಡಿಸಲಿದ್ದಾರೆ” ಎಂದು ಸಂದೇಶವೊಂದು ಹರಿದಾಡುತ್ತಿದೆ. ಆರ್ಟಿಕಲ್ 30 ಮತ್ತು 30A ಪ್ರಕಾರ ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸುವಂತಿಲ್ಲ. ಆದರೆ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮವನ್ನು ಬೋಧಿಸಬಹುದು ಎಂದು ಈ ಆರ್ಟಿಕಲ್ ಹೇಳುತ್ತದೆ ಎಂದು ಈ ಸಂದೇಶದಲ್ಲಿ ಬರೆಯಲಾಗಿದೆ. ಮೊದಲನೆಯದಾಗಿ, ಸಂವಿಧಾನದ ಆರ್ಟಿಕಲ್ 30 ಎಲ್ಲೂ ಭಗವದ್ಗೀತೆ, ಹಿಂದೂ ಧರ್ಮ, […]

Continue Reading