ಶಿಕ್ಷಕಿಯರಿಬ್ಬರ ಜಡೆಜಗಳ. ಕನ್ಯಾನ-ಕಣಿಯೂರು ಸರ್ಕಾರಿ ಶಾಲೆಯ ದುರಂತ ಕಥೆ.
ಅಧಿಕಾರಿಗಳ ಮುಂದೆ ಶಿಕ್ಷಕಿಯರ ಜನ್ಮ ಜಾಲಾಡಿ ಪೋಷಕರ ಆಕ್ರೋಶ. ವಿಟ್ಲ: ಶಿಕ್ಷಕಿಯರಿಬ್ಬರ ಒಣ ಪ್ರತಿಷ್ಠೆ ಮತ್ತು ಒಳಜಗಳದಿಂದಾಗಿ ಕನ್ಯಾನ ಗ್ರಾಮದ ಕಣಿಯೂರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಂತಾಗಿದೆ. ನಲ್ವತ್ತಾರು ವಿದ್ಯಾರ್ಥಿಗಳಿರುವ ಕಣಿಯೂರು ಸರ್ಕಾರಿ ಶಾಲೆಯಲ್ಲಿ ಮೂವರು ಶಿಕ್ಷಕಿಯರಿದ್ದಾರೆ. ಇಪ್ಪತ್ತಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅನಿತಾ ಎಂಬವರು ಮುಖ್ಯ ಶಿಕ್ಷಕಿಯಾಗಿದ್ದಾರೆ. ಏಳೆಂಟು ವರ್ಷಗಳಿಂದ ಲವಿನಾ ಎಂಬವರು ಸಹಾಯಕ ಶಿಕ್ಷಕಿಯಾಗಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಹಾಸನ ಮೂಲದ ಸುಮಯ್ಯ ಎಂಬವರು ಇದೇ ಕಣಿಯೂರು ಶಾಲೆಗೆ ಶಿಕ್ಷಕಿಯಾಗಿ ಕರ್ತವ್ಯಕ್ಕೆ ಬಂದಿದ್ದಾರೆ. […]
Continue Reading