ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ; ತಲೆಮರೆಸಿಕೊಂಡ ಆರೋಪಿಗಳ ಮನೆಗೆ NIAದಾಳಿ.

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿಗಳ ಮನೆಗಳಿಗೆ NIAತಂಡ ಸ್ಥಳೀಯ ಪೊಲೀಸರ ಸಹಕಾರದಲ್ಲಿ ದಾಳಿ ನಡೆಸಿದೆ. ಬೆಳ್ತಂಗಡಿ ತಾಲೂಕು ಪಡಂಗಡಿ ಗ್ರಾಮದ ಪೊಯ್ಯಗದ್ದೆ ಎಂಬಲ್ಲಿನ ನೌಷಾದ್(27) ಮನೆಗೆ ಇಂದು ಬೆಳಗ್ಗೆ NIA ತಂಡ ಸ್ಥಳೀಯ ಪೊಲೀಸರ ಸಹಕಾರದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.ನೌಷಾದ್ ಪತ್ತೆಗಾಗಿ ಈಗಾಗಲೇ ಸುಳಿವು ನೀಡಿದವರಿಗೆ ಎನ್.ಐ.ಎ. 2ಲಕ್ಷ ಬಹುಮಾನ ಘೋಷಿಸಿದೆ. ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಮತ್ತೋರ್ವ ತಲೆಮರೆಸಿಕೊಂಡ ಆರೋಪಿ ಅಬೂಬಕ್ಕರ್ ಸಿದ್ದೀಕ್ ಎಂಬಾತನ ಪತ್ನಿ ಮತ್ತು ಸಹೋದರನ […]

Continue Reading

ಗುರುಪುರ: ಹೆಜ್ಜೇನು ದಾಳಿಗೆ ಮೂವರಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ಗುರುಪುರ ಮಠದಬೈಲಿನಲ್ಲಿ ಹೆಜ್ಜೇನು ದಾಳಿ ನಡೆಸಿ ಮೂವರು ಗಂಭೀರ ಗಾಯಗೊಂಡು, ಇಬ್ಬರಿಗೆ ಸಾಮಾನ್ಯ ಗಾಯಗಳಾಗಿ ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ. ಮಠದಬೈಲಿನ ಬೇಬಿ ಎಂಬವರು ಮನೆಯಂಗಳದಲ್ಲಿ ಇದ್ದ ವೇಳೆ ಹೆಜ್ಜೇನು (ಪೆರಿಯ) ಗುಂಪೊಂದು ದಾಳಿ ಮಾಡಿದೆ; ನೋವಿನಿಂದ ಕಿರುಚುತ್ತಾ ಹತ್ತಿರದ ರಸ್ತೆಗೆ ಓಡಿ ಬಂದ ವೇಳೆ ಅವರ ನೆರವಿಗೆ ಬಂದ ಗಣೇಶ್ ಮೇಲೆಯೂ ಹೆಜ್ಜೇನು ಎರಗಿದೆ. ಇವರಿಬ್ಬರು ತಪ್ಪಿಸಿಕೊಳ್ಳಲು ರಸ್ತೆಯಲ್ಲಿ ಓಡಾಡುತ್ತಿದ್ದ ಸಂದರ್ಭ ಇವರ ನೆರವಿಗೆ ಬಂದ ಶೋಧನ್ ರವರ ಮೇಲೂ ದಾಳಿ ಮಾಡಿದೆ. ಹೆಜ್ಜೇನು ದಾಳಿಯಿಂದ […]

Continue Reading

ಗೋವುಗಳ ಕಳ್ಳಸಾಗಾಟ ಸುಳ್ಳು ಆರೋಪ; ಪೊಲೀಸ್‌ ಸಿಬ್ಬಂದಿ ಸೇರಿ ಗೋ ರಕ್ಷಕರ ವಿರುದ್ಧ ಎಫ್‌ಐಆರ್‌ ದಾಖಲಿಸಲು ನ್ಯಾಯಾಲಯ ಆದೇಶ

ಗೋವುಗಳ ಕಳ್ಳಸಾಗಾಟ ನಡೆಸುತ್ತಿದ್ದಾರೆ ಎಂಬ ಸುಳ್ಳು ದೂರಿನಲ್ಲಿ ಇಬ್ಬರನ್ನು ಸಿಲುಕಿಸಿದ ಪ್ರಕರಣ ಸಂಬಂಧ ಮೂವರು ಪೊಲೀಸ್‌ ಸಿಬ್ಬಂದಿ ಮತ್ತು ‘ಗೋ ರಕ್ಷಕ’ ಸೇರಿ ಇತರ ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಗುಜರಾತ್‌ನ ನ್ಯಾಯಾಲಯವೊಂದು ಆದೇಶಿಸಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪರ್ವೇಜ್‌ ಅಹಮ್ಮದ್‌ ಮಾಳವೀಯ ಅವರು ಮಂಗಳವಾರ, ಗೋವುಗಳ ಮಾಲೀಕ ಇಲಿಯಾಸ್‌ ದೇವಾಳ್‌ ಮತ್ತು ಚಾಲಕ ನಾಜಿರ್ ಮಲಿಕ್‌ ಅವರನ್ನು ಖುಲಾಸೆಗೊಳಿಸಿದರು. ಆರೋಪಿಗಳು ಗೋವುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದರು ಎಂದು ಸಾಬೀತು ಮಾಡುವ ಯಾವುದೇ ಸಾಕ್ಷ್ಯಗಳನ್ನು ಪ್ರಾಸಿಕ್ಯೂಷನ್‌ ಒದಗಿಸಿಲ್ಲ ಎಂದು […]

Continue Reading

ಕಳಪೆ ಮಟ್ಟದ ಪೀಠೋಪಕರಣ ತಯಾರಿಸಿ ಕೊಟ್ಟು ವಂಚನೆ; ಪ್ರೀತಿ ಫರ್ನಿಚರ್ ಮಾಲಕನಿಗೆ ಬಿತ್ತು ದಂಡ; ಜಿಲ್ಲಾ ಗ್ರಾಹಕ ನ್ಯಾಯಾಲಯ ತೀರ್ಪು

ಕಳಪೆ ಮಟ್ಟದ ಪೀಠೋಪಕರಣ ತಯಾರಿಸಿ ಕೊಟ್ಟು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಸಮೀಪದ ಕಲ್ಲಂಗಲದ ಪ್ರೀತಿ ಫರ್ನಿಚರ್ ಮಾಲಕ ಸಂಜಯ್ ಕುಮಾರ್ ಗೆ 20,000 ರೂಪಾಯಿ ದಂಡ ವಿಧಿಸಿ ಮಂಗಳೂರಿನ ಜಿಲ್ಲಾ ಗ್ರಾಹಕರ ನ್ಯಾಯಾಲಯ ತೀರ್ಪು ನೀಡಿದೆ. ಕಲ್ಲಂಗಲ ನಿವಾಸಿ ಹೈದರ್ ಅಲಿ 50,000 ರೂಪಾಯಿ ಮುಂಗಡ ನೀಡಿ ಉತ್ತಮ ಗುಣಮಟ್ಟದ ತೇಗದ ಮರದಿಂದ ಮನೆಗೆ ಪೀಠೋಪಕರಣವನ್ನು ತಯಾರಿಸಲು ಸೂಚಿಸಿದ್ದರು. ನಿಗದಿತ ಸಮಯಕ್ಕೆ ಪೀಠೋಪಕರಣ ತಯಾರಿಸದೆ ಕಳಪೆ ಗುಣಮಟ್ಟದ ಪೀಠೋಪಕರಣಗಳನ್ನು ಪೂರೈಸಿದ ಬಗ್ಗೆ ಹೈದರ್ ಅಲಿ ನ್ಯಾಯಾಲಯಕ್ಕೆ […]

Continue Reading

ಉಪಚುನಾವಣೆಯಲ್ಲಿ ಕೈ ಹಿಡಿದ ಮುಸ್ಲಿಂ ಸಮುದಾಯಕ್ಕೆ ಸಿಗುತ್ತಾ ಮಂತ್ರಿ ಭಾಗ್ಯ.?

ಕ್ಯೂ ನಲ್ಲಿದ್ದಾರೆ ಆಸೀಫ್ ಸೇಠ್..ಕೈ ಹಿಡಿಯುತ್ತಾ.? ಕೈ ಕೊಡುತ್ತಾ.? ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣವಾಗಿ ಕಾಂಗ್ರೆಸ್ ಕೈ ಹಿಡಿದ ಮುಸ್ಲಿಂ ಸಮುದಾಯ, ಮೊನ್ನೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಮುಸ್ಲಿಂ ಸಮುದಾಯ ಸಂಪೂರ್ಣ ಕೈ ಜೋಡಿಸಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ನಿಂದ ಒಂಭತ್ತು ಮುಸ್ಲಿಂ ಶಾಸಕರು ಆಯ್ಕೆಯಾದರೂ,ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಜೋಡೆತ್ತಿನ ಸರ್ಕಾರದಲ್ಲಿ ಈಗಾಗಲೇ ಮುಸ್ಲಿಂ ಸಮುದಾಯದ ಇಬ್ಬರಿಗೆ ಕ್ಯಾಬಿನೆಟ್ ಸ್ಥಾನ ನೀಡಲಾಗಿದೆ. ಬೇರೆ ಸಮುದಾಯಕ್ಕೆ ಮಂತ್ರಿ ಪಟ್ಟ ನೀಡಿದ ಪ್ರಾತಿನಿಧ್ಯಕ್ಕೆ ಹೋಲಿಸಿದರೆ […]

Continue Reading

ಮಂಗಳೂರು ಪೊಲೀಸ್ ಕಮೀಶನರ್ ವರ್ಗಾವಣೆ ಒತ್ತಾಯಿಸಿ- ಉಡುಪಿಯಲ್ಲಿ ಸಿಪಿಐಎಂ ಮತ್ತು ಸಮಾನ ಮನಸ್ಕ ಸಂಘಟನೆಗಳಿಂದ ಪ್ರತಿಭಟನೆ

ಪ್ರತಿಭಟನೆ ಧರಣಿಗಳಿಗೆ ಅನುಮತಿ ನಿರಾಕರಣೆ ಮಾಡುವುದು ,ಸಿಪಿಐಎಂ ಮುಖಂಡರ ಮೇಲೆ ಹಾಗೂ ಜನಪರ ಸಂಘಟನೆಯ ಮುಖಂಡರ ಮೇಲೆ ಮೊಕದ್ದಮೆ ಹೂಡುವುದು, ಸಂವಿಧಾನದ ಹಕ್ಕುಗಳನ್ನು ದಮನಿಸಲು ಹೊರಟ, ಬಿ.ಜೆ.ಪಿ. ಸಂಘಪರಿವಾರದ ಬೆಂಗಾವಲಾಗಿ ನಿಂತಿರುವ ಮಂಗಳೂರು ಪೊಲೀಸ್ ಕಮೀಶನರ್ ಅನುಪಮ್ ಅಗರವಾಲ್ ವರ್ಗಾವಣೆ ಒತ್ತಾಯಿಸಿ ಉಡುಪಿಯ ಅಜ್ಜರಕಾಡು ಹುತಾತ್ಮರ ಸ್ಮಾರಕ ಬಳಿ ಪ್ರತಿಭಟನೆ ನಡೆಸಿ ಸರಕಾರಕ್ಕೆ ಒತ್ತಾಯಿಸಿಸಲಾಯಿತು. ಮುಖ್ಯಮಂತ್ರಿ ಹಾಗೂ ಗ್ರಹ ಸಚಿವರು ಕೂಡಲೆ ಸಿಪಿಐಎಂ ಮುಖಂಡರ ಮೇಲೆ ಹಾಕಿರುವ ಕೇಸನ್ನು ವಾಪಾಸು ಪಡೆಯಬೇಕು, ಅಕ್ರಮ ಮರಳುಗಾರಿಕೆ, ಬೆಟ್ಟಿಂಗ್, ಮಸಾಜ್ […]

Continue Reading

ಕೆಪಿಸಿಸಿ ಪಟ್ಟ ಯಾರಿಗೂ ಬೇಕಿಲ್ಲ.

ಸುರ್ಜೇವಾಲ ಬಗ್ಗೆ ಅನುಮಾನ ಯಾಕೆ.? ಸುರ್ಜೇವಾಲ ಮೂಲಕ ಆಟವಾಡಿದ ನಾಯಕ ಯಾರು.? ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಷಯದಲ್ಲಿ ಕುತೂಹಲಕಾರಿ ಮಾಹಿತಿಗಳು ಹೊರಬರುತ್ತಿವೆ. ಅದರ ಪ್ರಕಾರ, ಈ ಪಟ್ಟಕ್ಕೇರುವ ವಿಷಯದಲ್ಲಿ ತುಂಬ ನಾಯಕರು ಹಿಂದೇಟು ಹೊಡೆಯುತ್ತಿದ್ದಾರೆ. ಕೆಲವೇ ಕಾಲದ ಹಿಂದೆ ಡಿಕೆಶಿ ನಂತರ ಈ ಪಟ್ಟಕ್ಕೆ ಬರುವವರು ಯಾರು?ಎಂಬ ಪ್ರಶ್ನೆ ಕೇಳಿದಾಗ ಹಲ ನಾಯಕರು ಉತ್ಸಾಹ ತೋರಿಸಿದ್ದರು. ಆದರೆ ಇತ್ತೀಚೆಗೆ ದಿಲ್ಲಿಗೆ ಹೋದ ಡಿಸಿಎಂ ಡಿಕೆಶಿ: ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆಯಿಂದ ನನ್ನನ್ನು ಬಿಡುಗಡೆ […]

Continue Reading

ಬಾಡಿಗೆ ಹೋಗಿದ್ದ ವಿಟ್ಲದ ಚಾಲಕ ನಾಪತ್ತೆ. ಉಪ್ಪಿನಂಗಡಿಯಲ್ಲಿ ಅನಾಥ ಸ್ಥಿತಿಯಲ್ಲಿ ಆಟೋ ಪತ್ತೆ; ಚಾಲಕನ ಮೊಬೈಲ್ ಸ್ವಿಚ್ಡ್ ಆಫ್

ಬಂಟ್ವಾಳ ತಾಲೂಕು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವೀರಕಂಭ ಗ್ರಾಮದ ಬಾಯಿಲ ನಿವಾಸಿ ಪದ್ಮನಾಭ ನಾಯ್ಕರ ಪುತ್ರ ಧನರಾಜ್(28) ನಾಪತ್ತೆಯಾದ ಆಟೋ ಚಾಲಕ. 28/11/2024ರಂದು ಎಂದಿನಂತೆ ಬೆಳಿಗ್ಗೆ 8.30ರ ಸುಮಾರಿಗೆ ತನ್ನ ಮನೆಯಿಂದ ಆಟೋದೊಂದಿಗೆ ಹೊರಟಿದ್ದ ಧನರಾಜ್ ಆರು ದಿನ ಕಳೆದರೂ ಮರಳಿ ಬಂದಿಲ್ಲ. ಆತಂಕಗೊಂಡ ಪೋಷಕರು ಧನರಾಜ್ ಮೊಬೈಲಿಗೆ ಕರೆ ಮಾಡಿದರೂ ಸ್ವಿಚ್ಡ್ ಆಫ್ ಬರುತ್ತಿದೆ. ಸಂಬಂಧಿಕರಲ್ಲಿ, ಸ್ನೇಹಿತರಲ್ಲಿ ವಿಚಾರಿಸಿದ್ದರೂ ಎಲ್ಲೂ ಮಾಹಿತಿ ಲಭ್ಯವಾಗಿಲ್ಲ ಎಂದು ಪೋಷಕರು ತಿಳಿಸಿದ್ದಾರೆ. ತುಳು-ಕನ್ನಡ ಭಾಷೆ ಬಲ್ಲ ಸುಮಾರು ಐದು […]

Continue Reading

ಚುನಾವಣಾ ಬಾಂಡ್ ಹಗರಣ: ನಳಿನ್ ಕುಮಾರ್ ಕಟೀಲ್ FIR ರದ್ದುಗೊಳಿಸಿದ ಹೈಕೋರ್ಟ್

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಸದ್ದು ಮಾಡಿದ್ದ ಸಂದರ್ಭ, ಮುಖ್ಯಮಂತ್ರಿ ವಿರುದ್ಧವೇ ಎಫ್ ಐ ಆರ್ ದಾಖಲಾಗಿ ಬಿಜೆಪಿ ರಾಜೀನಾಮೆ ನೀಡುವಂತೆ ಸಿದ್ದರಾಮಯ್ಯರನ್ನು ಆಗ್ರಹಿಸುತ್ತಿದ್ದ ಸಂದರ್ಭ ಇದಕ್ಕೆ ಪ್ರತ್ಯಾಸ್ತ್ರ ಅನ್ನುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್, ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಚುನಾವಣಾ ಬಾಂಡ್ ಗೆ ಸಂಬಂಧಿಸಿದಂತೆ ಎಫ್ ಐ ಆರ್ ದಾಖಲಾಗಿತ್ತು. ಚುನಾವಣಾ ಬಾಂಡ್ ಗಳನ್ನು ಖರೀದಿಸಲು ಉದ್ಯಮಿಗಳ ಮೇಲೆ ಒತ್ತಡ ಹೇರಿದ ಆರೋಪದ ಮೇಲೆ ರಾಜ್ಯ […]

Continue Reading

ನಿಯಮಬಾಹಿರವಾಗಿ ಅಕ್ರಮ ಸಾಗುವಳಿ ಚೀಟಿ ವಿತರಣೆ ಆರೋಪ; ಶಿರಸ್ತೇದಾರ್ ಹೇಮಂತ್ ಕುಮಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು

ನಿಯಮಬಾಹಿರವಾಗಿ ಅಕ್ರಮ ಸಾಗುವಳಿ ಚೀಟಿ ವಿತರಣೆ ಮಾಡಿದ ಆರೋಪದ ಮೇಲೆ ಶಿರಸ್ತೇದಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಶಿರಸ್ತೇದಾರ್ ಹೇಮಂತ್‌ ಕುಮಾರ್‌ ಕಳಸ ತಾಲ್ಲೂಕಿನ ಕಛೇರಿಯಲ್ಲಿ ಪ್ರಭಾರಿ ಶಿರಸ್ತೆದಾರರಾಗಿ ಕಾರ್ಯನಿರ್ವಹಿಸುವಾಗ 50 ಕ್ಕೂ ಹೆಚ್ಚು ಸಾಗುವಳಿ ಚೀಟಿ ಅಕ್ರಮವಾಗಿ ನೀಡಿದ್ದಾರೆಂದು ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. 2022 ರ ಫೆಬ್ರವರಿ ತಿಂಗಳಲ್ಲಿ ಕಳಸ ತಾಲೂಕು ಪ್ರಭಾರ ತಹಶೀಲ್ದಾರ್ ಆಗಿ ಒಂದು ತಿಂಗಳು ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಈ ಅಕ್ರಮ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆಡಳಿತಾತ್ಮಕ […]

Continue Reading