ದ.ಕ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಐಕಾನ್ ತುಂಬೆ ಶೆಟ್ರು.!

ಕರಾವಳಿ, ಮಲೆನಾಡಿನಲ್ಲಿ ಲಗಾಡಿ ತೆಗೆದ ನಾಯಕರಿಗೆ ಸಿಂಹಸ್ವಪ್ನವಾದ ಯುವ ನಾಯಕ ಹೊಂದಾಣಿಕೆ ರಾಜಕಾರಣಕ್ಕೆ ಜಿಲ್ಲಾ ಕಾಂಗ್ರೆಸ್ ಧೂಳೀಪಟ.! ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಡಿಶುಂ.. ಡಿಶುಂ ಸಖತ್ ಸುದ್ದಿ ಮಾಡಿದ್ದಂತೂ ಸತ್ಯ. ಕಛೇರಿ ಒಳಗಡೆ ನಡೆದ ಭಾರೀ ತಮ್ಮಣಕ್ಕೆ ಪೇಚಿಗೆ ಸಿಲುಕಿದ ನಾಲಾಯಕರು ಮೀಡಿಯಾದೆದುರು ನಮ್ಮ ನಡುವೆ ಹಂಗೇನಿಲ್ಲ, ಎಲ್ಲವೂ ಸರಿಯಾಗಿದೆ ಎಂದು ತೇಪೆ ಹಚ್ಚಿದರೂ ಕಾಂಗ್ರೆಸ್ ನಾಯಕರೊಳಗೆ ಬೂದಿ ಮುಚ್ಚಿದ ಕೆಂಡದಂತಿದೆ. ಪಾಪ ಕಾರ್ಯಕರ್ತರು ಮಾತ್ರ ಈ ಹೈಡ್ರಾಮವನ್ನು ಎಂಜಾಯ್ ಮಾಡಿದ್ದಾರೆ. ಜಿಲ್ಲಾ ಕಾಂಗ್ರೆಸ್ […]

Continue Reading

ಬಿಜೆಪಿಯಲ್ಲಿ ಉನ್ನತ ಹುದ್ದೆಗಳು ಬಿಕರಿ; ವಿವಾದಿತ ಆಡಿಯೋ ಸೃಷ್ಟಿಸಿದ ಸಂಚಲನ, ಆಡಿಯೋ ವೈರಲ್ ಬಗ್ಗೆ ಪತ್ರಕರ್ತನಿಗೆ ಆರೆಸ್ಸೆಸ್ ನಾಯಕನಿಂದ ಬೆದರಿಕೆ; ಪೊಲೀಸ್ ಆಯುಕ್ತರಿಗೆ ದೂರು

ಬೆಂಗಳೂರು: ಬಿಜೆಪಿಯಲ್ಲಿ ಹುದ್ದೆ ಗಿಟ್ಟಿಸಿಕೊಳ್ಳಲು ಆರೆಸ್ಸೆಸ್ ನಾಯಕರಿಂದ ಭಾರೀ ಮೊತ್ತದ ವಸೂಲಿ ನಡೆದಿದೆ ಎಂಬ ಆಡಿಯೋ ವೈರಲ್ ವಿಚಾರದಲ್ಲಿ ಪತ್ರಕರ್ತರಿಗೆ ಬೆದರಿಕೆ ಹಾಕಿರುವ ಪ್ರಕರಣ ಇದೀಗ ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲೇರಿದೆ. ಪತ್ರಕರ್ತನಿಗೆ RSS ಧುರೀಣನ ಹೆಸರಲ್ಲಿ ಬೆದರಿಕೆ ಒಡ್ಡಲಾಗಿದೆ ಎಂಬ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಶುಕ್ರವಾರ (ಡಿ.6) ದೂರು ಸಲ್ಲಿಕೆಯಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಿ.ಎಸ್.ಪ್ರಕಾಶ್ ಅವರು ತಮಗೆ ನಿರಂತರ ಕರೆ ಮಾಡಿ ಬೆದರಿಕೆ ಒಡ್ಡಿದ್ದಾರೆ ಎಂದು […]

Continue Reading

ಮಂಗಳೂರು ಕಮೀಷನರ್ ಅಮಾನತಿಗೆ ಸಂಘಟಿತ ಹೋರಾಟ ನಡೆಸಲು ನಿರ್ಧಾರ, ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಧರಣಿ, ಪ್ರತಿಭಟನೆಗಳಿಗೆ ಮುಕ್ತ ಅವಕಾಶ ಒದಗಿಸಲು ಆಗ್ರಹ

ಮಂಗಳೂರಿನಲ್ಲಿ ಸಮಾನ ಮನಸ್ಕ ಸಂಘಟನೆಗಳಿಂದ ಸಮಾಲೋಚನಾ ಸಭೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಜನಚಳವಳಿಗಳು ಧರಣಿ, ಪ್ರತಿಭಟನೆ, ಹೋರಾಟಗಳನ್ನು ಹಮ್ಮಿಕೊಳ್ಳುವುದರ ಮೇಲೆ ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ನಿರ್ಬಂಧಗಳನ್ನು ವಿಧಿಸುತ್ತಿರುವುದರಿಂದ ಉಂಟಾಗಿರುವ ಪರಿಸ್ಥಿತಿಯ ಕುರಿತು ಚರ್ಚಿಸಲು ಸಮಾನ ಮನಸ್ಕ ಜನಪರ ಸಂಘಟನೆಗಳು ನಗರದಲ್ಲಿ ಸಮಾಲೋಚನಾ ಸಭೆ ನಡೆಸಿದವು. ರೈತ, ದಲಿತ, ಕಾರ್ಮಿಕ, ಮಹಿಳಾ, ಯುವಜನ ಸಂಘಟನೆಗಳು ಸೇರಿದಂತೆ ವಿವಿಧ ಸಾಮಾಜಿಕ ಸಂಘಟನೆಗಳು, ಎಡಪಕ್ಷಗಳ ಪ್ರಮುಖರು ಸಭೆಯಲ್ಲಿ ಭಾಗಿಯಾದರು. ಬಿಜೆಪಿ ದುರಾಡಳಿತದ ಎದುರಾಗಿ ಜನಪರ ಸಂಘಟನೆಗಳ ಒಕ್ಕೊರಲ ಬೆಂಬಲ […]

Continue Reading

ವಿಟ್ಲ: ಸ್ವಾಮಿ ಹೋಲೋ ಬ್ಲಾಕ್ ನ ಉದ್ಯಮಿ ಆತ್ಮಹತ್ಯೆ; ಕಂಪನಿಯ ಶೆಡ್ಡಿನೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಮಾಲಿಕನ ಮೃತದೇಹ ಪತ್ತೆ

ಉದ್ಯಮಿ ಸಾವಿನ ಸುತ್ತ ಸಂಶಯದ ಹುತ್ತ. ವಿಟ್ಲದ ಸ್ವಾಮಿ ಹೋಲೋ ಬ್ಲಾಕ್ & ಇಂಟರ್ ಲಾಕ್ ಕಂಪನಿಯ ಮಾಲಿಕ ನಿಡ್ಯ ದಾಮೋದರ ಪೂಜಾರಿ(59) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವು ವರ್ಷಗಳಿಂದ ವಿಟ್ಲ-ಕುಂಡಡ್ಕ ರಸ್ತೆಯ ಪರನೀರು ಎಂಬಲ್ಲಿ ಹೋಲೋ ಬ್ಲಾಕ್ ಕಂಪನಿ ನಡೆಸುತ್ತಿದ್ದ ದಾಮೋದರ ಪೂಜಾರಿಗೆ ಮೇಲ್ನೋಟಕ್ಕೆ ಯಾವುದೇ ರೀತಿಯಲ್ಲೂ ಆರ್ಥಿಕ ಸಂಕಷ್ಟಗಳಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಉತ್ತಮ ರೀತಿಯಲ್ಲಿ ವ್ಯವಹಾರ ನಡೆಸುತ್ತಾ ಎಲ್ಲರೊಂದಿಗೂ ಸಹಬಾಳ್ವೆಯಿಂದ ಕೊಡುಗೈ ದಾನಿಯಾಗಿದ್ದ ದಾಮೋದರ ಪೂಜಾರಿಯವರ ಸಾವಿನ ಸುತ್ತ ಹಲವಾರು ಸಂಶಯಗಳು ವ್ಯಕ್ತವಾಗಿವೆ. ಘಟನಾ […]

Continue Reading

ಶಕ್ತಿನಗರ ಜನರಿಗೂ ಸಿಕ್ತು ‘ಶಕ್ತಿ’ಯ ಖುಷಿ..! ಭಗೀರಥ ಪ್ರಯತ್ನದ ನಂತರ ಬಂದ ಸರ್ಕಾರಿ ಬಸ್ ಕಂಡು ಜನ ಫುಲ್ ಖುಷ್..

ಮಂಗಳೂರು: ಬಂದರು ನಗರಿ ಮಂಗಳೂರಿನ ಶಕ್ತಿನಗರದ ಜನರಲ್ಲಿ ಎಂದಿಲ್ಲದ ಹರ್ಷ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಗ್ಯಾರೆಂಟಿ ಯೋಜನೆ ರಾಜ್ಯದ ಎಲ್ಲೆಡೆ ಮಹಿಳೆಯರ ಪಾಲಿಗೆ ಆಶಾಕಿರಣವಾದರೆ, ಖಾಸಗಿ ಬಸ್’ಗಳ ಪ್ರಾಬಲ್ಯವಿರುವ ದಕ್ಷಿಣ ಕನ್ನಡದ ಬಹುತೇಕ ಊರುಗಳ ಮಹಿಳೆಯರಿಗೆ ನಿಲುಕದ ಕುಸುಮದಂತಿದೆ. ಇಂತಹಾ ಸ್ಥಿತಿಯನ್ನು ಮನಗಂಡ ಸಾಮಾಜಿಕ ಹೋರಾಟಗಾರರೂ ಆದ ಮಂಗಳೂರಿನ ಹಿರಿಯ ವಕೀಲ ಮನೋರಾಜ್ ರಾಜೀವ್ ಅವರ ಕಾಳಜಿಯಿಂದ ಮಂಗಳೂರು ಸುತ್ತಮುತ್ತಲ ಗ್ರಾಮಗಳಲ್ಲಿ ಸರ್ಕಾರಿ ಬಸ್ ಸಂಚರಿಸುವಂತಾಗಿದೆ. ಮಂಗಳೂರಿನ ಶಕ್ತಿನಗರ ಅನನ್ಯ ಸಂಭ್ರಮಕ್ಕೆ ಸಾಕ್ಷಿಯಾಯಿತು. ಶಕ್ತಿನಗರ ಪದವು […]

Continue Reading

ಪೊಲೀಸ್ ಕಮೀಷನರ್ ವರ್ಗಾವಣೆ ಅಸಾಧ್ಯವಾದರೆ ಜಿಲ್ಲಾಡಳಿತದ ಕಾರ್ಯಕ್ರಮಗಳಿಗೆ ಮುತ್ತಿಗೆ; ಯೋಗೀಶ್ ಜಪ್ಪಿನಮೊಗರು ಎಚ್ಚರಿಕೆ

ಮಂಗಳೂರು ನಗರದ ಪೊಲೀಸ್‌‌ ಕಮೀಷನರ್ ವಿನಾ ಕಾರಣ ಹೋರಾಟಗಾರರ ಮೇಲೆ ಎಫ್ಐಆರ್ ದಾಖಲಿಸುವ, ಪ್ರತಿಭಟನೆಯ ಹಕ್ಕನ್ನು ನಿರಾಕರಿಸುತ್ತಿರುವುದು ಸಂವಿಧಾನ ವಿರೋಧಿ ಮತ್ತು ಈ ನೆಲದ ಕಾನೂನು ವಿರೋಧಿ ನಡೆಯಾಗಿದೆ ಇಂತಹ ವರ್ತನೆ ಬದಲಾಯಿಸದಿದ್ದರೆ ಕಮೀಷನರ್ ಅಗ್ರವಾಲರು ಮಂಗಳೂರಿಗೆ ಬೇಕಾಗಿಲ್ಲ ಕೂಡಲೇ ವರ್ಗಾಯಿಸಲು ಕ್ರಮಕೈಗೊಳ್ಳಿ ಇಲ್ಲವೆಂದಾದರೆ ಜಿಲ್ಲಾಡಳಿತ ಕಾರ್ಯಕ್ರಮಗಳಿಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಎಚ್ಚರಿಸಿದರು. ಅವರು ಇಂದು ಡಿವೈಎಫ್ಐ ಸಿಪಿಐಎಂ ಬಜಾಲ್ ವಿಭಾಗ ಸಮಿತಿ ನೇತೃತ್ವದಲ್ಲಿ ನಗರದ ಪಂಪ್ವೆಲ್ […]

Continue Reading

ಮಣಿಪಾಲ: ಬಿಯರ್ ಬಾಟಲಿಯಿಂದ ಇರಿದು ಹೊಟೇಲ್ ಕಾರ್ಮಿಕನ ಕೊಲೆ..!

ಮಣಿಪಾಲ: ಲಕ್ಷ್ಮೀಂದ್ರನಗರದ ಬಳಿಯ ಮುಖ್ಯ ರಸ್ತೆಯ ಅನಂತ ಕಲ್ಯಾಣ ಮಾರ್ಗದಲ್ಲಿ ಹೊಟೇಲ್ ಕಾರ್ಮಿಕನನ್ನು ಬಿಯರ್ ಬಾಟಲಿಯಿಂದ ಇರಿದು ಹತ್ಯೆಗೈದ ಘಟನೆ ಡಿ. 6 ರಂದು ಶುಕ್ರವಾರ ನಡೆದಿದೆ. ಕೊಲೆಯಾದ ಹೋಟೆಲ್ ಕಾರ್ಮಿಕನನ್ನು ಕೇರಳದ ಕಾಸರಗೋಡು ನಿವಾಸಿ ಶ್ರೀಧರ ನಾಯಕ್ (38) ಎಂದು ಗುರುತಿಸಲಾಗಿದೆ. ಈತ ಮಣಿಪಾಲ ಈಶ್ವರನಗರದ ಹೊಟೇಲ್ ಒಂದರ ಕುಕ್ ಎಂದು ತಿಳಿದುಬಂದಿದೆ. ಬೆಳಿಗ್ಗೆ 6ಗಂಟೆ ಸುಮಾರಿಗೆ ಮೂರರಿಂದ ನಾಲ್ಕು ಮಂದಿಯ ತಂಡ ಹೊಡೆದಾಟ ನಡೆಸುತ್ತಿದ್ದರು. ಗಲಾಟೆ ವಿಕೋಪಕ್ಕೆ ತಿರುಗಿದಾಗ ಶ್ರೀಧರ್ ಅವರ ಕುತ್ತಿಗೆಗೆ ಬಿಯರ್ […]

Continue Reading

ರಂಜಾನ್ 25 ಶುಕ್ರವಾರ ಉದ್ಯಮಿಗೆ ಖೆಡ್ಡಾ ತೋಡಿ 596 ಪವನ್ ಚಿನ್ನಾಭರಣ ಲೂಟಿದ ಮಾಟಗಾತಿ ಜಿನ್ನುಮ್ಮ!

ಹನಿಟ್ರ್ಯಾಪ್, ಮಾಟ ಮಂತ್ರದಲ್ಲಿ ನಿಸ್ಸೀಮಳು ಈಕೆ ಭಾರೀ ಸಂಚಲನ ಸೃಷ್ಟಿಸಿದ ಪ್ರಕರಣ.. ಆರೋಪಿಗಳು ಅಂದರ್ ಗಲ್ಫ್ ರಾಷ್ಟ್ರಗಳಲ್ಲಿ ಹಲವಾರು ಸೂಪರ್ ಮಾರ್ಕೆಟ್ ಗಳು ಮತ್ತು ಇತರ ಉದ್ಯಮಗಳನ್ನು ಹೊಂದಿದ್ದ ಅನಿವಾಸಿ ಉದ್ಯಮಿ ಕಾಸರಗೋಡು ಫಾರೂಖಿಯ ನಿವಾಸಿ ಎಂ.ಸಿ ಅಬ್ದುಲ್ ಗಫೂರ್ ಹಾಜಿ ಏಪ್ರಿಲ್ 14, 2023 ರಂದು ಮುಂಜಾನೆ ಅವರ ಮನೆಯ ಮಲಗುವ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅದು ಮುಸ್ಲಿಮರ ಪವಿತ್ರ ಮಾಸ ರಂಜಾನ್ 25 ನೇ ಶುಕ್ರವಾರದ ದಿನವಾಗಿತ್ತು. ರಂಜಾನ್ ತಿಂಗಳಾಗಿದ್ದರಿಂದ ಅದು ಸಹಜ ಸಾವು […]

Continue Reading

ಸರ್ಕಾರಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು. ಬಂಟ್ವಾಳ ಸಮೀಪದ ವಗ್ಗ ಬಳಿ ಘಟನೆ.

ಬಂಟ್ವಾಳ-ಗುರುವಾಯನಕೆರೆ ರಸ್ತೆಯ ವಗ್ಗ ಸಮೀಪ ಬೈಕ್ ಮತ್ತು ಸರ್ಕಾರಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ನಿವಾಸಿ ರಾಜೇಂದ್ರಪೂಜಾರಿ (45) ಮೃತ ಬೈಕ್ ಸವಾರ. ಬಂಟ್ವಾಳದಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಬೈಕ್ ಹಾಗೂ ಧರ್ಮಸ್ಥಳದಿಂದ ಮಂಗಳೂರಿಗೆ ಹೋಗುತ್ತಿದ್ದ ಸರ್ಕಾರಿ ಬಸ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡ ರಾಜೇಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಆಗಮಿಸಿ […]

Continue Reading

ಪೊಲೀಸರಿಂದ ನೆಮ್ಮದಿಯೇ ಇಲ್ಲದಾಗ ನಿದ್ದೆ ಎಲ್ಲಿಂದ ಸಭಾಪತಿಗಳೇ ? – ಸುನೀಲ್ ಕುಮಾರ್ ಬಜಾಲ್

ಮಂಗಳೂರಿನ ಪೊಲೀಸ್ ಕಮೀಷನರ್ ಕಾನೂನುಬಾಹಿರವಾಗಿ ನಡೆಯುತ್ತಿದ್ದರೂ ಅವರನ್ನು ಕಣ್ಣು ಮುಚ್ಚಿ ಸಮರ್ಥಿಸುತ್ತಿರುವ ಮಾನ್ಯ ಸಭಾಪತಿಗಳು ಉತ್ತರಿಸಬೇಕು. ಜಿಲ್ಲೆಯೆಲ್ಲೆಡೆ ಪೊಲೀಸರಿಂದ ನೆಮ್ಮದಿಯೇ ಇಲ್ಲದೇ ಇರುವಾಗ ಇನ್ನು ನಿದ್ದೆ ಎಲ್ಲಿಂದ ಸ್ವಾಮಿ ಎಂದು ಸಿಪಿಐಎಂ ಉಳ್ಳಾಲ ತಾಲೂಕು ಸಮಿತಿ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ರವರು ಸ್ಪೀಕರ್ ನಡೆಯನ್ನು ಪ್ರಶ್ನಿಸಿದರು. ಅವರು ಇಂದು ತೊಕ್ಕೊಟ್ಟು ಜಂಕ್ಷನ್ ನಲ್ಲಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ ಅಗ್ರವಾಲ್ ವರ್ಗಾವಣೆಗೆ ಒತ್ತಾಯಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಮಟ್ಕಾ,, ಜುಗಾರಿ, ಸ್ಕಿಲ್ ಗೇಮ್, […]

Continue Reading