ಮಂಗಳೂರು ಕಮಿಷನರ್ ವರ್ಗಾವಣೆ ಒತ್ತಾಯಿಸಿ ಪ್ರತಿಭಟನೆ, ಬಂಧನ; ಕಮಿಷನರ್ ವರ್ಗಾವಣೆ ಆಗುವವರೆಗೆ ಹೋರಾಟ ಮುಂದುವರಿಸಲು ಡಿವೈಎಫ್ಐ ನಿರ್ಧಾರ

ಸುರತ್ಕಲ್ : ಹೆದ್ದಾರಿ ದುರಸ್ಥಿಗೆ ಒತ್ತಾಯಿಸಿ ನಡೆದ ಪ್ರತಿಭಟಗೆ ಅನುಮತಿ ನಿರಾಕರಿಸಿ ಹೋರಾಟಗಾರ ಮುನೀರ್ ಕಾಟಿಪಳ್ಳ, ಮತ್ತಿತರರ ಮೇಲೆ ಕೇಸು ದಾಖಲಿಸಿ ಪ್ರಜಾಪ್ರಭುತ್ವವನ್ನು ದಮನಿಸುತ್ತಿರುವ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ವರ್ಗಾವಣೆಗೆ ಒತ್ತಾಯಿಸಿ ಡಿವೈಎಫ್ಐ ನೇತೃತ್ವದಲ್ಲಿ ಇಂದು ಸುರತ್ಕಲ್ ಜಂಕ್ಷನ್ ಬಳಿ ಪ್ರತಿಭಟನೆ ನಡೆಯಿತು. ಬಿಗು ಪೊಲೀಸ್ ಬಂದೋಬಸ್ತಿನ ನಡುವೆ ಸುರತ್ಕಲ್ ಪೇಟೆಯಲ್ಲಿ ಜಮಾಯಿಸಿದ ಡಿವೈಎಫ್ಐ ಕಾರ್ಯಕರ್ತರು ಕಮಿಷನರ್ ಅಗ್ರವಾಲ್ ವರ್ಗಾವಣೆಗೆ ಒತ್ತಾಯಿಸಿ ಘೋಷಣೆ ಕೂಗಿದರು. ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಅವರು ಭಾಷಣ ಆರಂಭಿಸುತ್ತಿದ್ದಂತೆ […]

Continue Reading

ಅಕ್ರಮ ಮರಳುಗಾರಿಕೆಗೆ, ಕಾಪು ಉಪ-ನಿರೀಕ್ಷಕ ಅಮಾನತು

ಉಡುಪಿ: ಅಕ್ರಮ ಮರಳುಗಾರಿಕೆಗೆ ಸಹಕಾರ ಮಾಡಿರುವ ಆರೋಪದಲ್ಲಿ ಕಾಪು ಪೊಲೀಸ್‌ ಠಾಣೆಯ ಉಪ-ನಿರೀಕ್ಷಕ ಅಬ್ದುಲ್‌ ಖಾದರ್‌ ಅವರನ್ನು ಅಮಾನತು ಮಾಡಲಾಗಿದೆ. ಕಾಪು ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಬಗ್ಗೆ ಕಾಪು ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಮರಳು ದಂಧೆಕೋರರೊಂದಿಗೆ ಪಿಎಸ್‌ಐ ಅಬ್ದುಲ್‌ ಖಾದರ್‌ ಸಹಕರಿಸಿದ್ದಾರೆ ಎನ್ನುವುದನ್ನು ತಿಳಿಸುವ ಆಡಿಯೋವೊಂದರ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡಲಾಗಿತ್ತು. ಪ್ರಾಥಮಿಕ ತನಿಖೆ ನಡೆಸಿದ ವೇಳೆ ಕಾಪು ಠಾಣಾಧಿಕಾರಿ ವಿರುದ್ಧದ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ.

Continue Reading

ಬಂಟ್ವಾಳ: ಅರಣ್ಯ ಇಲಾಖೆ ಸಿಬ್ಬಂದಿ ಹಠಾತ್ ಕುಸಿದು ಬಿದ್ದು ಮೃತ್ಯು

ಬಂಟ್ವಾಳ ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿಯಾಗಿದ್ದ ವೀರಕಂಭ ನಿವಾಸಿ ಜಯರಾಮ ಮೂಲ್ಯ ಕರ್ತವ್ಯನಿರತರಾಗಿದ್ದ ಸಂದರ್ಭ ಕಚೇರಿಯಲ್ಲಿ ಹಠಾತ್ ಕುಸಿದು ಬಿದ್ದು ಮೃತಪಟ್ಟ ಘಟನೆ ಬಿಸಿ ರೋಡಿನಲ್ಲಿ ನಡೆದಿದೆ. ಸುಮಾರು 30 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದರು. ನ.29ರಂದು ರಾತ್ರಿ ಪಾಳಿಯಲ್ಲಿ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಜೆ ವೇಳೆ ಇವರಿಗೆ ತಲೆಸುತ್ತು ಬರುವ ವಿಚಾರ ಇಲಾಖೆಯ ಜೊತೆ ಕೆಲಸಗಾರರಲ್ಲಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಕಚೇರಿಯಲ್ಲಿ ಒಬ್ಬನೇ ಕರ್ತವ್ಯದಲ್ಲಿದ್ದು, ಮುಂಬಾಗಿಲ ಚಿಲಕ ಹಾಕಿಕೊಂಡು ಕೋಣೆಯೊಳಗೆ ಮಲಗಲು ಹೋಗುವ […]

Continue Reading

ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ನಿಯೋಗದಿಂದ ಗೃಹ ಸಚಿವರ ಭೇಟಿ, ಪೊಲೀಸ್ ಕಮೀಷನರ್ ಅಗ್ರವಾಲ್ ವಿರುದ್ಧ ದೂರು, ವರ್ಗಾವಣೆಗೆ ಆಗ್ರಹಿಸಿ ಮನವಿ

ಸಿಪಿಐಎಂ ಪಕ್ಷದ ದ‌.ಕ. ಜಿಲ್ಲಾ ಸಮಿತಿಯ ನಿಯೋಗ ಮಂಗಳೂರು ಪ್ರವಾಸದಲ್ಲಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮಂಗಳೂರು ಪೊಲೀಸ್ ಕಮೀಷನರ್ ವಿರುದ್ಧ ಲಿಖಿತ ದೂರು ನೀಡಿತು. ಶಿಸ್ತು ಕ್ರಮ ಕೈಗೊಂಡು ವರ್ಗಾಯಿಸುವಂತೆ ಆಗ್ರಹಿಸಿತು. ಜನಪರ ಸಂಘಟನೆಗಳು ನಡೆಸುವ ಪ್ರತಿಭಟನೆ, ಧರಣಿಗಳಿಗೆ ವಿನಾಕಾರಣ ಅನುಮತಿ ನಿರಾಕರಿಸುವುದು, ಪ್ರತಿಭಟನಾಕಾರರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹೂಡುತ್ತಿರುವುದು ಮಂಗಳೂರಿನಲ್ಲಿ ಜನಾಕ್ರೋಶಕ್ಕೆ ಕಾರಣವಾಗಿದೆ. ಸಿಪಿಐಎಂ ಪಕ್ಷವು ಕಮೀಷನರ್ ಅನುಪಮ್ ಅಗ್ರವಾಲ್, ಡಿಸಿಪಿ ಸಿದ್ದಾರ್ಥ ಗೋಯಲ್ ರ ಸರ್ವಾಧಿಕಾರಿ ಧೋರಣೆಯ […]

Continue Reading

ಒಪ್ಪಿಗೆಯ ದೈಹಿಕ ಸಂಬಂಧವನ್ನು ಅಪರಾಧೀಕರಣಗೊಳಿಸುವುದು ಆತಂಕಕಾರಿ ಪ್ರವೃತ್ತಿ

ವರ್ಷಗಳ ಕಾಲ ವಿವಾಹೇತರ ಸಂಬಂಧ ಹೊಂದಿರುವ ಮಹಿಳೆ ಅತ್ಯಾಚಾರದ ಆರೋಪವನ್ನು ಹೊರಿಸುವಂತಿಲ್ಲ: ಸುಪ್ರೀಂ ಕೋರ್ಟ್ ಒಪ್ಪಿಗೆಯ ದೈಹಿಕ ಸಂಬಂಧವನ್ನು ಅಪರಾಧೀಕರಣಗೊಳಿಸುವ ಆತಂಕಕಾರಿ ಪ್ರವೃತ್ತಿಯ ಬಗ್ಗೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ವಿವಾಹದ ಸುಳ್ಳು ಭರವಸೆಯ ಮೇಲೆ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ವರ್ಷಗಳ ಕಾಲ ವಿವಾಹೇತರ ಸಂಬಂಧ ಹೊಂದಿರುವ ಮಹಿಳೆ ಅತ್ಯಾಚಾರದ ಆರೋಪವನ್ನು ಹೊರಿಸುವಂತಿಲ್ಲ ಎಂದು ಹೇಳಿದೆ. ಮುಂಬೈನ ಖಾರ್ಘರ್ ಪೊಲೀಸ್ ಠಾಣೆಯಲ್ಲಿ ಮಹೇಶ್ ದಾಮು ಖರೆ ವಿರುದ್ಧ ವನಿತಾ ಎಸ್ ಜಾಧವ್ ಎಂಬುವರು […]

Continue Reading

ಸಂತ್ರಸ್ತೆ ಪರ ಆರೋಪಿಗಳಿಂದ ಮನೆಗೆ ನುಗ್ಗಿ ದಾಂಧಲೆ, ಸೊತ್ತು ಹಾನಿ. ಬೆಂಕಿ ಹಚ್ಚಿ ಸಜೀವದಹನದ ಬೆದರಿಕೆ; ಬಂಟ್ವಾಳ ಠಾಣೆಯಲ್ಲಿ ದೂರು ದಾಖಲು.

ಮದುವೆಯಾಗಿ ಕೈಕೊಟ್ಟು ಬೀದಿಪಾಲು ಮಾಡಿದ್ದಾನೆಂದು ಮಾಣಿ ರಫೀಕ್ ವಿರುದ್ಧ ಬಂಟ್ವಾಳ ಠಾಣೆಗೆ ಪತ್ನಿ ಮಂಜನಾಡಿ ನಿವಾಸಿ ನಸೀಮಾ ಎಂಬವರು ದೂರು ನೀಡಿದ್ದರು. ಇದೀಗ ದೂರು ನೀಡಿದ್ದ ಸಂತ್ರಸ್ತೆ ಪರ ತಂಡದ ವಿರುದ್ಧ ರಫೀಕ್ ಪುತ್ರಿ ಬಂಟ್ವಾಳ ಠಾಣೆಗೆ ದೂರು ನೀಡಿದ್ದಾರೆ. ಮನೆಗೆ ನುಗ್ಗಿ ದಾಂಧಲೆ ನಡೆಸಿದ ತಂಡದ ದುಷ್ಕೃತ್ಯ ಸಿಸಿ ಟೀವಿಯಲ್ಲಿ ದಾಖಲಾಗಿದ್ದು ವೀಡಿಯೋ, ಫೊಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲಾಗಿವೆ. ಮದುವೆಯಾಗಿ ತ್ರಿವಳಿ ತಲಾಖ್ ನೀಡಿ ಜೀವನ ನಡೆಸದೇ ಕೈಕೊಟ್ಟನೆಂದೂ, ಮನೆಗೆ ಮಗುವಿನ ಜೊತೆ ಬಂದಾಗ ಚಿನ್ನಾಭರಣ […]

Continue Reading

ಮಂಗಳೂರು: ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ವರ್ಗಾವಣೆಗೆ ದಲಿತ ಸಂಘರ್ಷ ಸಮಿತಿ ಆಗ್ರಹ

ಸುರತ್ಕಲ್ -ನಂತೂರ್ ಹೆದ್ದಾರಿ ದುರಸ್ತಿ, ಕೂಳೂರು ಸೇತುವೆ ಕಾಮಗಾರಿ ಪೂರ್ಣಗೊಳಿಸುವಂತೆ ಹಾಗೂ ನಂತೂರು ಮೆಲ್ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಕೂಳೂರಿನ ಸೇತುವೆ ಸಮೀಪ ನಡೆಸಿದ್ದ ಶಾಂತಿಯುತ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಮಿತಿಯ ಸಂಚಾಲಕರಾದ ಮುನೀರ್ ಕಾಟಿಪಳ್ಳ ಇವರ ಮೇಲೆ ಕಾವೂರು ಪೊಲೀಸ್ ಠಾಣೆ ಯಲ್ಲಿ ವಿನಾಃ ಕಾರಣ ಎಫ್. ಐ. ಆರ್. ದಾಖಲಿಸಿರುವ ಪೋಲೀಸರ ಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಸ್ವಾಭಿಮಾನಿ ಪ್ರೊ. ಬಿ. […]

Continue Reading

ಶಿವಪುರಿ ದಲಿತ ಹತ್ಯೆ: ಬೋರ್ ವೆಲ್ ನಿಂದ ನೀರು ತುಂಬಿಸಿದ ಕಾರಣಕ್ಕೆ ಕ್ರೂರವಾಗಿ ಕೊಂದ ಮೇಲ್ಜಾತಿಯವರು.!

ಗ್ರಾಮದ ಸರಪಂಚ್, ಆತನ ಪತ್ನಿ ಸೇರಿದಂತೆ ಐವರ ಬಂಧನ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಬೋರ್ ವೆಲ್ ನಿಂದ ನೀರು ತುಂಬಿಸುವ ವಿವಾದಕ್ಕೆ ಸಂಬಂಧಿಸಿದಂತೆ 27 ವರ್ಷದ ಪರಿಶಿಷ್ಟ ಜಾತಿ (ಎಸ್ ಸಿ) ವ್ಯಕ್ತಿಯನ್ನು ಗ್ರಾಮದ ಸರಪಂಚ್ ಮತ್ತು ಸರಪಂಚ್ ನ ಪತ್ನಿ ಸೇರಿದಂತೆ ಕನಿಷ್ಠ ಐವರು ವ್ಯಕ್ತಿಗಳು ಹೊಡೆದು ಕೊಂದಿದ್ದಾರೆ. ರಾಜ್ಯದ ಗ್ವಾಲಿಯರ್ -ಚಂಬಲ್ ಪ್ರದೇಶದ ಸುಭಾಷ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಇಂದರ್ ಗಢ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ಸಂಭವಿಸಿದೆ. ಗ್ವಾಲಿಯರ್ ಜಿಲ್ಲೆಯ ನಾರದ್ […]

Continue Reading

ವಿಶ್ವವಿದ್ಯಾಲಯಗಳಿಗೆ ಮುಖ್ಯಮಂತ್ರಿಯೇ ಕುಲಪತಿ. ರಾಜ್ಯಪಾಲರ ಅಧಿಕಾರಕ್ಕೆ ಬ್ರೇಕ್

ವಿಶ್ವವಿದ್ಯಾಲಯಗಳಿಗೆ ಮುಖ್ಯಮಂತ್ರಿಯೇ ಕುಲಪತಿ. ರಾಜ್ಯಪಾಲರ ಅಧಿಕಾರಕ್ಕೆ ಸಂಪುಟ ಸಭೆಯಲ್ಲಿ ಕಡಿವಾಣ ಹಾಕಲಾಗಿದೆ. ಇಂತಹ ಮಹತ್ವದ ನಿರ್ಧಾರವನ್ನು ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಇಂದಿನ ಸಂಪುಟ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಯುನಿವರ್ಸಿಟಿ ತಿದ್ದುಪಡಿ ವಿಧೇಯಕಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಲಾಗಿದೆ. ಈ ವಿಧೇಯಕಕ್ಕೆ ತಿದ್ದುಪಡಿ ತರಲು ಕ್ಯಾಬಿನೇಟ್ ಅನುಮೋದನೆ ನೀಡಿದ್ದರಿಂದಾಗಿ, ರಾಜ್ಯಪಾಲರ ಅಧಿಕಾರ ಮೊಟಕಾಗಲಿದೆ. ಇಷ್ಟು ದಿನ ರಾಜ್ಯಪಾಲರು ಚಾನ್ಸ್ […]

Continue Reading

ನಾಲ್ಕು ಮದುವೆಯಾಗಿ ಕೈಕೊಟ್ಟು ಐದನೇ ಮದುವೆಗೆ ಸ್ಕೆಚ್, ಬಹುಪತ್ನಿ ವಲ್ಲಭ ಬಂಧನ.

ನಟೋರಿಯಸ್ ಕಿರಾತಕ ಮಾಣಿ ರಫೀಕ್ ಬಂಟ್ವಾಳ ಪೊಲೀಸರ ಬಲೆಗೆ.. ನಾಲ್ಕು ಮದುವೆಯಾಗಿ ತ್ರಿವಳಿ ತಲಾಖ್ ನೀಡಿ ಆಕೆಯ ಮೇಲೆ ಹಲ್ಲೆ ನಡೆಸಿ ಮಾನಸಿಕ ಕಿರುಕುಳ ನೀಡಿದ್ದಲ್ಲದೇ ಐದನೇ ಮದುವೆಗೆ ತಯಾರಿ ನಡೆಸುತ್ತಿದ್ದ ಭೂಪನೊಬ್ಬನನ್ನು ಬಂಟ್ವಾಳ ಪೊಲೀಸರು ಬಲೆಗೆ ಕೆಡವಿದ್ದಾರೆ‌.ನಾಲ್ಕನೇ ಮದುವೆಯಾದ ಪತ್ನಿಗೆ ತ್ರಿವಳಿ ತಲಾಖ್ ನೀಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಮನೆಯಿಂದ ಹೊರದಬ್ಬಿದ್ದ ರಾಕ್ಷಸೀಯ ಕೃತ್ಯವೊಂದು ಬಂಟ್ವಾಳ ತಾಲೂಕಿನ ಗೂಡಿನಬಳಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಈ ಬಗ್ಗೆ ಸಂತ್ರಸ್ತ ಪತ್ನಿ ನೀಡಿರುವ ದೂರಿನಂತೆ ಬಂಟ್ವಾಳ […]

Continue Reading