ಆಸ್ಕರ್ ಪಟ್ಟಾ ಶಿಷ್ಯ ಇನಾಯತ್ ಅಲಿ ತಂತ್ರಗಾರಿಕೆಯ ಚರಿಷ್ಮಾ.. ಮಕಾಡೆ ಮಲಗಿದ ಭರತ್ ಶೆಟ್ಟಿ.!

ಮಂಗಳೂರು ಉತ್ತರದ ಪಂಚಾಯತ್ ಉಪಚುನಾವಣೆ: ಮೂರರಲ್ಲೂ ಕಾಂಗ್ರೆಸ್ ಕ್ಲೀನ್ ಸ್ವೀಪ್; ಬಿಜೆಪಿ ಧೂಳೀಪಟ ರಾಜಕಾರಣದಲ್ಲಿ ವರ್ಕೌಟ್ ಆಗುವುದು ತಂತ್ರಗಾರಿಕೆ ಅನ್ನುವುದು ನೂರಕ್ಕೆ ನೂರು ಸತ್ಯ. ಎಂತಹ ಬಲಾಢ್ಯರನ್ನು ಮಣ್ಣು ಮುಕ್ಕಿಸಬಹುದು ಅನ್ನುವುದಕ್ಕೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರವೇ ಸ್ಪಷ್ಟ ನಿದರ್ಶನ. ಮಂಗಳೂರು ಉತ್ತರದಲ್ಲಿ ಬಿಜೆಪಿ ಶಾಸಕರಿದ್ದರೂ, ಬಿಜೆಪಿ ಗೆಲುವಿಗೆ ಹಗಲು ರಾತ್ರಿ ಫೀಲ್ಡಿಗಿಳಿದ ಶಾಸಕರು ಹಾಗೂ ಅವರ ಬಂಟರಿಗೆ ಮತದಾರರು ಚಳ್ಳೆ ಹಣ್ಣು ತಿನ್ನಿಸಿದ್ದಾರೆ. ಆಸ್ಕರ್ ಫರ್ನಾಂಡಿಸ್ ಗರಡಿಯಲ್ಲಿ ಪಳಗಿದ ಇನಾಯತ್ ಅಲಿ ತಂತ್ರಗಾರಿಕೆಯ ಚರೀಷ್ಮಾ ವರ್ಕೌಟ್ […]

Continue Reading

ಗೆಲುವಿನ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ನಿಂದ ಸಚಿವ ಸಂಪುಟ ಭರ್ಜರಿ ಸರ್ಜರಿ.. ಅಸಮರ್ಥರು ಔಟ್..ಹೊಸಬರ ಎಂಟ್ರಿ

ಹರಿಪ್ರಸಾದ್, ಸವದಿಗೆ ಅದೃಷ್ಟ ಖುಲಾಯಿಸುತ್ತಾ..? ಉಪಸಮರ ನಡೆದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆ ಆಗಬೇಕೆಂಬ ಕೂಗು ಕೇಳಿ ಬರುತ್ತಿದ್ದು, ಈ ಸಂಬಂಧ ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ಸೇರಿದಂತೆ ಪಕ್ಷದ ನಾಯಕರು ಹೈಕಮಾಂಡ್‌ ಮೇಲೆ ಒತ್ತಡ ಹೇರಲು ಆರಂಭಿಸಿದ್ದಾರೆ. ಸಂಪುಟ ವಿಸ್ತರಿಸುವ ಮನಸ್ಸಿದ್ದರೂ ಮುಡಾ ನಿವೇಶನ ಹಂಚಿಕೆ ಪ್ರಕರಣ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ, ವಕ್ಫ್ ಆಸ್ತಿ ವಿವಾದದಂತಹ ಹಲವು ಕಾರಣಗಳಿಂದ ಆ ಸಾಹಸಕ್ಕೆ ಸದ್ಯ ಕೈಹಾಕುವುದೇ ಬೇಡ ಎಂಬ ನಿಲುವಿಗೆ ಸಿಎಂ-ಡಿಸಿಎಂ ಬಂದಿದ್ದರು. […]

Continue Reading

ಉಪಸಮರದಲ್ಲಿ ಗೆದ್ದು ಬೀಗಿದ ಕೈ ಗೆ ಈಗ ವಿಧಾನಪರಿಷತ್ ನಾಮ ನಿರ್ದೇಶನದ್ದೇ ಚಿಂತೆ; ಆಕಾಂಕ್ಷಿಗಳಿಂದ ಲಾಬಿ ಜೋರು.!

ಉಪಸಮರದಲ್ಲಿ ಗೆದ್ದು ಬೀಗುತ್ತಿರುವ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದಲ್ಲೀಗ ಮೇಲ್ಮನೆಯ ನಾಮನಿರ್ದೇಶನಕ್ಕೆ ಸಂಬಂಧಿಸಿದ ಚಟುವಟಿಕೆ ಗರಿಗೆದರಿದ್ದು, ತೆರವಾದ ಮತ್ತು ತೆರವಾಗಲಿರುವ ಸ್ಥಾನಗಳಿಗಾಗಿ ಆಕಾಂಕ್ಷಿಗಳಿಂದ ಲಾಬಿ ಬಹಳ ಚೋರಾಗಿ ನಡೆಯುತ್ತಿದೆ. ನೂತನ ಶಾಸಕ ಸಿ.ಪಿ. ಯೋಗೇಶ್ವರ್‌ ರಾಜೀನಾಮೆಯಿಂದ ತೆರವಾದ ಸ್ಥಾನ ಸೇರಿ 3 ಸ್ಥಾನಗಳು ಈಗಾಗಲೇ ಖಾಲಿಯಾಗಿದ್ದು, ಮತ್ತೊಂದು ಸ್ಥಾನ ಜನವರಿಯಲ್ಲಿ ತೆರವಾಗಲಿದೆ. ಇವುಗಳಿಗಾಗಿ ಭಾರಿ ಪೈಪೋಟಿ ನಡೆಯುತ್ತಿದೆ. ಪರಿಷತ್ ಆಕಾಂಕ್ಷಿಗಳು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಸಹಿತ ಪ್ರಮುಖ ನಾಯಕರ […]

Continue Reading

ಲಂಚ.. ಲಂಚ..ಲಂಚ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಲಂಚ ಮುಟ್ಟದವನು ಪಾಪಿ.!

ಮಣ್ಣಗುಡ್ಡೆ ಕ್ವಾಟ್ರಸ್ ನಲ್ಲಿ ನಡೆಯುತ್ತಿರುವುದೇನು..? ಲಂಚ.. ಲಂಚ..ಲಂಚ ಮಂಗಳೂರು ಮಹಾನಗರ ಪಾಲಿಕೆಯ ಒಳಹೊಕ್ಕರೆ ಕೇಳಿ ಬರುವ ವೇದವಾಕ್ಯ ಇದೊಂದೆ. ಇಲ್ಲಿ ಲಂಚ ಮುಟ್ಟದವನು ಪಾಪಿ ಅನ್ನುವಂತೆ ಭ್ರಷ್ಟಾಚಾರದ ಪರಮಾವಧಿ ಮೇಳೈಸಿದೆ. ಇಡೀ ಮಂಗಳೂರು ನಗರದ ಶಕ್ತಿ ಕೇಂದ್ರವಾದ ಮನಪಾದಲ್ಲಿ ಊಟದ ಸ್ಪೀಡಂತೂ ಬಲು ಜೋರು. ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಮೃಷ್ಟಾನ್ನ ಭೋಜನ ನೀಡುವ ಇಲಾಖೆಯೆಂದರೆ ಅದು ಕಂದಾಯ ಇಲಾಖೆ. ಇಲ್ಲಿದ್ದು ಎತ್ತಂಗಡಿಯಾದ ಅನೇಕರು ಮತ್ತೆ ಮತ್ತೆ ಇಲ್ಲಿಯೆ ಬೀಡು ಬಿಟ್ಟಿರುತ್ತಾರೆ. ಕಂದಾಯ ಸೆಕ್ಷನ್ ಬಿಟ್ಟು ಹೋಗಲು […]

Continue Reading

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಜರುಗಿದ ಅತ್ಯಂತ ಉದ್ದದ ಮಾನವ ಸರಪಳಿ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನಕ್ಕೆ ಆಯ್ಕೆ

ಕರ್ನಾಟಕ ಸರಕಾರವು ಸೆಪ್ಟೆಂಬರ್ 15 ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಪ್ರಜಾಪ್ರಭುತ್ವ ಜಾಗೃತಿ ಮೂಡಿಸಲು ಬೀದರ್ ನಿಂದ ಚಾಮರಾಜನಗರ ಜಿಲ್ಲೆಯವರೆಗೆ ಮಾನವ ಸರಪಳಿ ನಿರ್ಮಾಣ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆಗೊಂಡಿತ್ತು. ಪ್ರಜಾಪ್ರಭುತ್ವ ದಿನಾಚರಣೆಯ ಮಾನವ ಸರಪಳಿಯ ನಿರ್ಮಾಣ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಜಿಲ್ಲೆಗಳಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ಅದರಂತೆ ದಕ್ಷಿಣ ಕನ್ನಡ ಜಿಲ್ಲೆ ಅತ್ಯಂತ ಉದ್ದದ ಮಾನವ ಸರಪಳಿ ವಿಭಾಗದಲ್ಲಿ ದ್ವಿತೀಯ ಸ್ಥಾನಕ್ಕೆ ಆಯ್ಕೆಯಾಗಿದೆ. ನವೆಂಬರ್ […]

Continue Reading

ಭಾರಿ ವಿವಾದ ಸೃಷ್ಟಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಮೇಲಿನ ‘ಕತ್ತಲೆ ಜಗತ್ತು’ ಪುಸ್ತಕಕ್ಕೆ ಸ್ಟೇ

ತೀವ್ರ ಕುತೂಹಲ ಕೆರಳಿಸಿರುವ ಪ್ರವೀಣ್ ಕುಮಾರ್ ಮಾವಿನಕಾಡು ವಿರಚಿತ ‘ಕತ್ತಲೆ ಜಗತ್ತು’ ಕೃತಿ. ಟಿಕೆಟ್ ವಂಚಿತ ಪ್ರತಾಪ್ ಸಿಂಹ ಕುರಿತ ‘ಕತ್ತಲೆ ಜಗತ್ತು’ ಪುಸ್ತಕ ಬೆತ್ತಲೆ ಜಗತ್ತಿನ ನಿದ್ದೆಗೆಡಿಸಿದ ‘ಕತ್ತಲೆ ಜಗತ್ತು’ ಬೆಂಗಳೂರು: ಪತ್ರಕರ್ತ ಹಾಗೂ ‘ಬೆತ್ತಲೆ ಜಗತ್ತು’ ಅಂಕಣ ಖ್ಯಾತಿಯ ಪ್ರತಾಪ್ ಸಿಂಹ ಎರಡು ಬಾರಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಮೂಲಕ ಸಂಸತ್ತಿಗೆ ಆಯ್ಕೆಗೊಂಡಿದ್ದರಾದರೂ ಕಳೆದ 2024ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿದ್ದರು. ಈ ಟಿಕೆಟ್ ವಂಚಿತರಾಗಲು ಕಾರಣ ಏನು ಎಂಬ ಕುತೂಹಲ […]

Continue Reading

CPIM ದ.ಕ.ಜಿಲ್ಲಾ ನೂತನ ಕಾರ್ಯದರ್ಶಿಯಾಗಿ ಮುನೀರ್ ಕಾಟಿಪಳ್ಳ ಆಯ್ಕೆ

CPIM 24ನೇ ದ.ಕ.ಜಿಲ್ಲಾ ಸಮ್ಮೇಳನವು ಇತ್ತೀಚಿಗೆ ಮೂರು ದಿನಗಳ ಕಾಲ ಮಂಗಳೂರಿನಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ಸಮ್ಮೇಳನಕ್ಕೆ ಮಾರ್ಗದರ್ಶಕರಾಗಿ CPIM ಪೋಲಿಟ್ ಬ್ಯೂರೋ ಸದಸ್ಯರಾದ ಎಂ.ಎ ಬೇಬಿ, CPIM ರಾಜ್ಯ ಕಾರ್ಯದರ್ಶಿ ಬಸವರಾಜ್, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಡಾ.ಕೆ.ಪ್ರಕಾಶ್ ರವರು ಭಾಗವಹಿಸಿದ್ದರು. ಸಮ್ಮೇಳನದ ಉದ್ಘಾಟನಾ ಸಮಾರಂಭ, ಪ್ರತಿನಿಧಿ ಅಧಿವೇಶನ, ಸಮಾರೋಪ ಸಮಾರಂಭ, ಆಕರ್ಷಕ ಮೆರವಣಿಗೆ ಹಾಗೂ ಬಹಿರಂಗ ಸಭೆಯು ಅಚ್ಚುಕಟ್ಟಾಗಿ ನಡೆಯಿತು. ಈ ಸಮ್ಮೇಳನವು ಮುಂಬರುವ ಮೂರು ವರ್ಷಗಳ ಕಾಲಾವಧಿಗೆ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆಗೊಳಿಸಿತು. […]

Continue Reading

ಸತತ 6 ಬಾರಿ SGFI ರಾಜ್ಯ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಉಡುಪಿಯ ಪ್ರನುಷಾ

ಉಡುಪಿ : ಉಡುಪಿ ಮಠದಬೆಟ್ಟು ಮಹೇಶ್ ಪೂಜಾರಿ ಮತ್ತು ಪ್ರಮೀಳಾ ದಂಪತಿಗಳ ಪುತ್ರಿ ಕಲ್ಯಾಣಪುರ ಮಿಲಾಗ್ರೀಸ್ ಪಿ. ಯು ಕಾಲೇಜು ವಿದ್ಯಾರ್ಥಿನಿ ಹಾಗೂ ಪಿಕೆಸಿ ತಂಡದ ಕ್ರೀಡಾಪಟು ಪ್ರನುಷಾ ಎಂ. ಪೂಜಾರಿ ರಾಜ್ಯದಲ್ಲಿ ವಿಶೇಷ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದು ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ದ ರಾಷ್ಟ್ರಮಟ್ಟದ ಆಯ್ಕೆಗೆ ರಾಜ್ಯದಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಆಯೋಜಿಸುವ ಕರಾಟೆ ಪಂದ್ಯಾವಳಿಯಲ್ಲಿ ಸತತ ಆರು ವರ್ಷ ಜಿಲ್ಲಾ ಮಟ್ಟದಿಂದ ಆಯ್ಕೆಯಾಗಿ ರಾಜ್ಯಮಟ್ಟದಲ್ಲಿ […]

Continue Reading

ಮಹಾರಾಷ್ಟ್ರ: ಮಹಾ ಆಘಾದಿ ಲಗಾಡಿ.. ಬಿಜೆಪಿ ಸುನಾಮಿ..!

ಮೋದಿ-ಷಾ ಇಲ್ಲದೆಯೂ ರಾಜ್ಯ ಗೆಲ್ಲಬಹುದು ಅನ್ನುವ ಸಂದೇಶ ರವಾನಿಸಿದ ಆರ್ ಎಸ್ ಎಸ್.! ಜಾರ್ಖಂಡ್: ಬಿಜೆಪಿಗೆ ಬಿಗ್ ಶಾಕ್.! ದೇಶದ ಗಮನ ಸೆಳೆದಿದ್ದ ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ಇಂಡಿಯಾ ಮೈತ್ರಿಕೂಟ ಮಕಾಡೆ ಮಲಗಿದೆ. ಎನ್ ಡಿಎ ಒಕ್ಕೂಟ ಭರ್ಜರಿ ಕಮ್ ಬ್ಯಾಕ್ ಮಾಡಿದೆ. ಅದರಲ್ಲೂ ಬಿಜೆಪಿ ಎಲ್ಲಾ ರೆಕಾರ್ಡ್ ಬ್ರೇಕ್ ಮಾಡಿ ಸುನಾಮಿಯಂತೆ ಎದ್ದು ನಿಂತಿದೆ. ಮಹಾಯುತಿ ವರ್ಸಸ್ ಮಹಾ ಆಘಾದಿ ಲಡಾಯಿಯಲ್ಲಿ ಬಿಜೆಪಿ ಮೈತ್ರಿಕೂಟ ಕೈ ಮೇಲಾಗಿದೆ. ಮಹಾರಾಷ್ಟ್ರ ದೇಶದ ಫೈನಾನ್ಸಿಯಲ್ ರಾಜಧಾನಿ […]

Continue Reading

ಶಾಸಕ ಉಮಾನಾಥ ಕೋಟ್ಯಾನ್ ರವರೇ ನೀವು ‘ಸೌಮ್ಯ’ ಆದರೆ ಸಾಕಾ..?

ಇಲ್ಲಿನ ಉಪ ತಹಶೀಲ್ದಾರ್ ಗಳ ದರ್ಬಾರ್ ಗೆ ಬ್ರೇಕ್ ಹಾಕುವವರು ಯಾರು.? ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್ ರವರ ಬಗ್ಗೆ ಸ್ಥಳೀಯವಾಗಿ ಒಳ್ಳೆಯ ಅಭಿಪ್ರಾಯವಿದೆ. ಪಕ್ಷ ಬಿಜೆಪಿಯಾದರೂ ನ್ಯಾಯದ ವಿಚಾರದಲ್ಲಿ ಎಲ್ಲರಿಗೂ ಒಂದೇ. ಅನುದಾನ ಕೂಡ ಹಾಗೆನೇ. ಓಟು ಹಾಕಿದವರು, ಹಾಕದವರು ಅನ್ನುವ ಭೇದಭಾವ ತೋರದೆ ಎಲ್ಲರನ್ನು ಸಮಾನ ಕಾಣುತ್ತಾರೆ. ಸೌಮ್ಯ ಸ್ವಭಾವದವರು ಅನ್ನುವ ಮಾತಿದೆ. ಆದರೆ ಅಧಿಕಾರಿಗಳನ್ನು ಹದ್ದು ಬಸ್ತಿನಲ್ಲಿಡುವ ಕೆಲಸ ಮಾಡಬೇಕು. ಮೂಡಬಿದ್ರೆ ತಾಲೂಕು ಆಡಳಿತ ಸೌಧದಲ್ಲಿ ಪರ್ಮನೆಂಟ್ ತಹಶೀಲ್ದಾರ್ ಇಲ್ಲ. ಮೂಲ್ಕಿಯ ತಹಶೀಲ್ದಾರ್ […]

Continue Reading