ಹತ್ತು ವರ್ಷಕ್ಕಿಂತ ಹೆಚ್ಚು ಹಳೆಯ ಆಧಾರ್ ಕಾರ್ಡ್ ನವೀಕರಿಸುವುದು ಕಡ್ಡಾಯವಾಗಿದೆ.

ಇತ್ತೀಚೆಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು 10 ವರ್ಷಗಳ ಹಿಂದೆ ಆಧಾರ್ ಕಾರ್ಡ್ ನೀಡಿದ ನಾಗರಿಕರಿಗೆ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಸರ್ಕಾರ ಹೊರಡಿಸಿರುವ ಈ ಹೊಸ ಸಲಹೆಯ ಪ್ರಕಾರ, ಆಧಾರ್ ಕಾರ್ಡ್ 10 ವರ್ಷಕ್ಕಿಂತ ಹೆಚ್ಚು ಹಳೆಯ ಆಧಾರ್ ಕಾರ್ಡ್ ನವೀಕರಿಸುವುದು ಕಡ್ಡಾಯವಾಗಿದೆ. ಸರ್ಕಾರಿ ಸೇವೆಗಳನ್ನು ಪಡೆಯಲು ಅಥವಾ ಬ್ಯಾಂಕ್ ಖಾತೆಗಳನ್ನು ತೆರೆಯಲು ಮತ್ತು ಇತರ ಹಣಕಾಸು ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಆಧಾರ್ ಕಾರ್ಡ್ ಬಳಸಲಾಗುವ ದಾಖಲೆಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ […]

Continue Reading

ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅವ್ಯವಸ್ಥೆ: ಸಾರ್ವಜನಿಕರು ಗರಂ

ಅದ್ಯಪಾಡಿ ನಿವಾಸಿಗಳ ರೋಧನೆ ಕೇಳುವವರ್ಯಾರು..? ಮಂಗಳೂರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಘೋಷಣೆಯಾದಾಗ ಮೊದಲು ಖುಷಿ ಪಟ್ಟಿದ್ದು ಅದ್ಯಪಾಡಿ ಗ್ರಾಮದ ನಿವಾಸಿಗಳು. ನಮ್ಮೆಲ್ಲ ಸಂಕಷ್ಟ ಮುಗಿಯಿತು; ನಮ್ಮ ಊರು ಇನ್ನು ಅಭಿವೃದ್ಧಿ ಪಥದಲ್ಲಿ ದಾಪುಗಾಲಿಡುತ್ತದೆ ಅಂದುಕೊಂಡಿದ್ದರು . ಇವರು ಅಂದುಕೊಂಡಿದ್ದೇ ಬೇರೆ ಆದದ್ದೇ ಬೇರೆ. ಇಲ್ಲಿನ ನಿವಾಸಿಗಳ ರೋಧನೆ ಕೇಳುವವರೇ ಇಲ್ಲದಂತಾಗಿದೆ. ಅದ್ಯಪಾಡಿ ಗ್ರಾಮದ ಸನಿಹದಲ್ಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲೆ ಎತ್ತಿ ನಿಂತಿದೆ. ಅಂದಿನಿಂದ ಇಲ್ಲಿನ ಗ್ರಾಮಸ್ಥರಿಗೆ ಶನಿಕಾಟ ಆರಂಭವಾಗಿದೆ. ಮೊದಲು ಬಜಪೆ ಪೇಟೆಗೆ ತೆರಳಲು ಎರಡು […]

Continue Reading

ಬಾಬಾ ಸಿದ್ದಿಕಿ ಕೊಲೆ ಪ್ರಕರಣದ ಆರೋಪಿಗಳಿಗೆ 25 ಲಕ್ಷ ನಗದು, ಫ್ಲ್ಯಾಟ್​, ಕಾರು, ದುಬೈ ಪ್ರವಾಸದ ಭರವಸೆ ನೀಡಲಾಗಿತ್ತಂತೆ

ಬಾಬಾ ಸಿದ್ದಿಕಿ ಕೊಲೆ ಪ್ರಕರಣದ ಆರೋಪಿಗಳ ಪೈಕಿ ನಾಲ್ವರಿಗೆ 25 ಲಕ್ಷ ರೂ. ನಗದು ಹಣ, ಫ್ಲ್ಯಾಟ್​, ಕಾರು ಮತ್ತು ದುಬೈ ಪ್ರವಾಸದ ಭರವಸೆ ನೀಡಲಾಗಿತ್ತು ಎಂದು ವಿಚಾರಣೆ ವೇಳೆ ಬಂಧಿತರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಬಂಧಿತ ಆರೋಪಿಗಳಲ್ಲಿ ಒಬ್ಬರಾದ ರಾಮ್​ಚಂದ್​ಪೂಲ್​ ಕನೋಜಿಯಾ ಎಂಬಾತನಿಂದ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ನಾಲ್ಕು ಯುವ ಆರೋಪಿಗಳಿಗೆ ಈ ಭರವಸೆ ನೀಡಿದ್ದನು ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ನಾಲ್ವರು ಯುವ ಆರೋಪಿಗಳಾದ ರೂಪೇಶ್ ಮೊಹೋಲ್, ಶಿವಂ ಕೊಹಾದ್, ಕರಣ್ ಸಾಳ್ವೆ, ಮತ್ತು […]

Continue Reading

ಜಮೀನು ವಿವಾದ; ಕತ್ತಿಯಿಂದ ಕಡಿದು ಸಂಬಂಧಿಕನಿಂದಲೇ ಕೃಷಿಕನ ಹತ್ಯೆ. ನೆಲ್ಯಾಡಿ ಬಳಿ ಇದೀಗ ನಡೆದ ಕೃತ್ಯ.

ಅಲಂತಾಯ ಗ್ರಾಮದ ಪೆರ್ಲ ನಿವಾಸಿ ಪ್ರಗತಿಪರ ಕೃಷಿಕ ರಮೇಶ ಗೌಡ(51)ಕೊಲೆಯಾದ ದುರ್ಧೈವಿ. ಹತ್ತಿರದ ಸಂಬಂಧಿಕನಾದ ಹರೀಶ್ ಕೊಲೆಗೈದ ಪಾಪಿ‌ ಇಂದು ರಾತ್ರಿ 7 ಗಂಟೆಯ ಸುಮಾರಿಗೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ರಮೇಶ ಗೌಡ ಮತ್ತು ಸಂಬಂಧಿ ಹರೀಶ್ ಮಧ್ಯೆ ಪರಸ್ಪರ ಮಾತಿನ ಚಕಮಕಿ ನಡೆದು ಮುಂದುವರಿದ ಭಾಗವಾಗಿ ಹರೀಶ್ ಕತ್ತಿಯಿಂದ ಕಡಿದು ಹತ್ಯೆಗೈದನೆಂಬ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿದ್ದು ಹೆಚ್ಚಿನ ವಿವರ ಇನ್ನಷ್ಟೇ ತಿಳಿಯಬೇಕಾಗಿದೆ.

Continue Reading

ಕೃತ್ಯ ನಡೆದ 24ಗಂಟೆಯೊಳಗೆ ಕುಖ್ಯಾತ ಕಳ್ಳನ ಬಲೆಗೆ ಕೆಡವಿದ ಮುಲ್ಕಿ ಪೊಲೀಸರು; ಬಂಧಿತನಿಂದ 64ಗ್ರಾಂ ಚಿನ್ನಾಭರಣ ವಶ.

ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಉತ್ತರ ವಿಭಾಗದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ನಾಡು ಬಳಿ ಬಿಜಾಪುರ ಕಾಲೋನಿಯ ಮನೆಯೊಂದರಲ್ಲಿ ದಿನಾಂಕ 6-11-2024 ರಂದು ಹಾಡಹಗಲೇ ಕಳ್ಳತನ ನಡೆದಿತ್ತು. ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು 64.200 ಗ್ರಾಂ ಚಿನ್ನಾಭರಣವನ್ನು ಲಪಟಾಯಿಸಿ ಪರಾರಿಯಾಗಿದ್ದರು‌. ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು. ಘಟನೆ ನಡೆದ ಕೇವಲ 24 ಗಂಟೆಯೊಳಗೆ ಮುಲ್ಕಿ ಠಾಣಾ ಇನ್ಸ್ ಪೆಕ್ಟರ್ ವಿದ್ಯಾಧರ ಬಾಯ್ಕೇರಿಕರ್ ನೇತೃತ್ವದಲ್ಲಿ ಮುಲ್ಕಿ ಠಾಣಾ ಪೊಲೀಸರು ಕಳ್ಳನ ಹೆಡೆಮುರಿ […]

Continue Reading

ಉಪ ಚುನಾವಣೆ: ಆಂತರಿಕ ಸಮೀಕ್ಷೆಯ ವರದಿ, ಗುಪ್ತಚರ ಸಮೀಕ್ಷೆಯ ವರದಿ ನೋಡಿ ಬೆಚ್ಚಿಬಿದ್ದ ಕಾಂಗ್ರೆಸ್ ಪಕ್ಷದ ನಾಯಕರು

ಉಪ ಚುನಾವಣಾ ಕಣ ರಂಗೇರಿದ್ದು. ಚುನಾವಣೆಗೆ ಮುನ್ನ ಕಾಂಗ್ರೆಸ್​​ ಪಕ್ಷದ ಆಂತರಿಕ ಸಮೀಕ್ಷೆಯ ವರದಿ ಮತ್ತು ಗುಪ್ತಚರ ಸಮೀಕ್ಷೆಯ ವರದಿ ಕಾಂಗ್ರೆಸ್​ ಪಕ್ಷದ ನಾಯಕರ ಕೈ ಸೇರಿದ್ದು. ವರದಿಯನ್ನು ನೋಡಿದ ಸಿಎಂ ಮತ್ತು ಡಿಸಿಎಂ ಬೆಚ್ಚಿಬಿದ್ದಿದ್ದಾರೆ ಎನ್ನಲಾಗಿದೆ. ಚುನಾವಣಾ ಪೂರ್ವ ಸಮೀಕ್ಷೆಯ ಆಂತರಿಕ ವರದಿಯಲ್ಲಿ ಕಾಂಗ್ರೆಸ್​​ ಎರಡು ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದ್ದು. ಒಂದು ಕ್ಷೇತ್ರದಲ್ಲಿ ಸೋಲುತ್ತದೆ ಎಂದು ವರದಿಯನ್ನು ನೀಡಲಾಗಿದೆ. ಶಿಗ್ಗಾಂವ್​​ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ರಾಜ್ಯ ಕಾಂಗ್ರೆಸ್​​ ನಾಯಕರು ಸೋತಿದ್ದು. ಕಾಂಗ್ರೆಸ್​​ ಅಭ್ಯರ್ಥಿ […]

Continue Reading

ಸೌದಿ ಅರೇಬಿಯಾ: ಇತಿಹಾಸದಲ್ಲೇ ಮೊದಲ ಬಾರಿಗೆ ಹವಾಮಾನ ವೈಪರೀತ್ಯಕ್ಕೆ ಸಾಕ್ಷಿ

ಅಲ್ -ಜಾವ್ಫ್ ಮರುಭೂಮಿ ಹಿಮಭರಿತ ಮರುಭೂಮಿಯಾಗಿ ಪರಿವರ್ತನೆ ಅಲ್-ಜಾಫ್‌ನಲ್ಲಿ ಅಪರೂಪದ ಹಿಮಪಾತವು ಸೌದಿ ಅರೇಬಿಯಾದ ಮರುಭೂಮಿಯನ್ನು ಪ್ರಯಾಣಿಕರ ಕನಸಾಗಿ ಪರಿವರ್ತಿಸುತ್ತದೆ ಪ್ರಕೃತಿಯ ವಿಸ್ಮಯಕ್ಕೆ ಸೌದಿ ಅರೇಬಿಯಾದ ಅಲ್-ಜಾವ್ಫ್ ಪ್ರದೇಶವು ಸಾಕ್ಷಿಯಾಗಿದೆ . ಇತಿಹಾಸದಲ್ಲೇ ಮೊದಲ ಬಾರಿಗೆ ಹಿಮಪಾತವು ಸೌದಿ ಅರೇಬಿಯಾದ ಪ್ರದೇಶವನ್ನು ಆವರಿಸಿದೆ. ಪ್ರಕೃತಿಯ ಬೆರಗನ್ನು ಕಂಡು ಇಲ್ಲಿನ ನಿವಾಸಿಗಳು ಆಶ್ಚರ್ಯಚಕಿತರಾಗಿದ್ದಾರೆ. ಅಲ್ -ಜಾವ್ಫ್ ವಿಶಾಲವಾದ ಮರುಭೂಮಿಯನ್ನು ಹೊಂದಿದ್ದು, ಅಲ್ಲಿ ಉಸಿರುಕಟ್ಟುವ ವಾತಾವರಣವಿದೆ. ಚಳಿಗಾಲದ ಸಂದರ್ಭವನ್ನು ನೆನಪಿಸುತ್ತಿದೆ. ತಮ್ಮ ಮರಳಿನ ಭೂಪ್ರದೇಶದಲ್ಲಿ ಹಿಂದೆಂದೂ ಹಿಮವನ್ನು ನೋಡದ ಸ್ಥಳೀಯರು […]

Continue Reading

ಆರ್.ಎಸ್.ಎಸ್ ರಾಷ್ಟ್ರ ನಾಯಕನೊಬ್ಬರ ಕುಮ್ಮಕ್ಕಿನಿಂದ ತಮ್ಮದೆ ಪಕ್ಷದ ಮೂವರು ಮಾಜಿ ಮುಖ್ಯಮಂತ್ರಿಗಳ ವಿರುದ್ದ ಹೋರಾಟದ ಕುತಂತ್ರ: ವೈ.ಬಿ.ಚಂದ್ರಕಾಂತ್

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಷ್ಟ್ರನಾಯಕರೊಬ್ಬರ ಕುಮ್ಮಕ್ಕಿನಿಂದ ರಾಜ್ಯದಲ್ಲಿ ತನ್ನದೆ ಪಕ್ಷದ ಮೂವರು ಮಾಜಿ ಮುಖ್ಯಮಂತ್ರಿಗಳ ವಿರುದ್ದ ವಕ್ಫ್ ಆಸ್ತಿಯ ನೆಪದಲ್ಲಿ ಹೋರಾಟಕ್ಕೆ ಇಳಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಅವರು ಆರೋಪಿಸಿದ್ದಾರೆ. ವಕ್ಫ್ ಆಸ್ತಿಯ ವಿಷಯದಲ್ಲಿ ಹಲವರಿಗೆ ನೋಟೀಸ್ ನೀಡಿರುವುದು ಆಡಳಿತದ ಭಾಗವೆನ್ನುವುದು ಆರ್.ಎಸ್.ಎಸ್ ನಾಯಕರಿಗೂ ಗೊತ್ತಿರದ ವಿಷಯವೇನಲ್ಲ. ರಾಜ್ಯದಲ್ಲಿ ಈ ಹಿಂದೆ 2019 ರಿಂದ 2022 ರ ಅವಧಿಯಲ್ಲೂ ಬಿ.ಜೆ.ಪಿ. ಸರ್ಕಾರವಿದ್ದಾಗ ವಿವಿಧ ಜಿಲ್ಲೆಗಳ ಹಲವರಿಗೆ ವಕ್ಫ್ ಆಸ್ತಿಯ ವಿಷಯದಲ್ಲಿ 200 ಕ್ಕೂ […]

Continue Reading

ಕೆಐಎಡಿಬಿ ಹಗರಣದ ಸುಳಿಯಲ್ಲಿ ರಾಜ್ಯ ಸರ್ಕಾರ; ಸಿದ್ದು, ಪಾಟೀಲ್, ಹಂದಿಗುಂದ ವಿರುದ್ಧ ಪ್ರಧಾನಿ, EDಗೆ ದೂರು

ಮುಡಾ, ವಾಲ್ಮೀಕಿ ನಿಗಮದ ಕರ್ಮಕಾಂಡದ ಬೆನ್ನಲ್ಲೇ ಸಿದ್ದರಾಮಯ್ಯ ಸರ್ಕಾರಕ್ಕೆ KIADB ಬಹುಕೋಟಿ ಹಗರಣವೂ ಸಂಕಷ್ಟ.! ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿರುವ ಮುಡಾ ನಿವೇಶನ ಅಕ್ರಮ, ವಾಲ್ಮೀಕಿ ನಿಗಮದ ಕರ್ಮಕಾಂಡದ ಬೆನ್ನಲ್ಲೇ ಸಿದ್ದರಾಮಯ್ಯ ಸರ್ಕಾರಕ್ಕೆ KIADB ಬಹುಕೋಟಿ ಹಗರಣವೂ ಸಂಕಷ್ಟ ತಂದೊಡ್ಡಿದೆ. ಕುತೂಹಲಕಾರಿ ಬೆಳವಣಿಗೆಯಲ್ಲಿ ‘ದೇವನಹಳ್ಳಿ KIADB ಭೂಸ್ವಾಧೀನ ಅವ್ಯವಹಾರ’ ಆರೋಪ ಕುರಿತಂತೆ ಸಿಎಂ ಸಿದ್ದರಾಮಯ್ಯ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹಾಗೂ ಕೆ.ಎ.ಎಸ್ ಅಧಿಕಾರಿ ಬಾಳಪ್ಪ ಹಂದಿಗುಂದ ವಿರುದ್ಧ ಜಾರಿ ನಿರ್ದೇಶನಾಲಯ (ED)ದ ನಿರ್ದೇಶಕರಿಗೆ ದೂರು ಸಲ್ಲಿಕೆಯಾಗಿದೆ. […]

Continue Reading

ಉತ್ತರದ ಧ್ರುವ ಕುಮಾರ ಇನಾಯತ್ ಅಲಿ ಖದರ್ರು .!

ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮಂಗಳೂರು ಉತ್ತರದ 15 ಮಂದಿಗೆ 14.17ಲಕ್ಷ ರೂ. ವಿತರಣೆ ವಿವಿಧ ರೋಗಗಳಿಂದ ಬಳಲುತ್ತಿರುವ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ 15 ಮಂದಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒಟ್ಟು 14,17,049 ರೂ ಸಹಾಯಧನ ದೊರೆತಿದೆ. ರಿಝನ್ ಕೋಯ (ರೂ.5,00,000), ಯಶವಂತ್ ಕಾಟಿಪಳ್ಳ (ರೂ.2,00,000), ಮಹಮ್ಮದ್ ಕುಂಞಿ (ರೂ.1,75,000), ರಮ್ಲತ್ ಬಾನು ವಾಮಂಜೂರು (ರೂ.1,50,000), ಅಪ್ಸ ಅದ್ಯಪಾಡಿ (ರೂ‌.94,600), ಆಸಿಯಾತ್ ಫರ್ಹಾನ (ರೂ.67,449), ಝೀನತ್ […]

Continue Reading