ಮಂಗಳೂರು -ಬಂಟ್ವಾಳ: ಅಕ್ರಮ ಮರಳುಗಾರಿಕೆ ಅಡ್ಡೆಗಳ ಮೇಲೆ ದಾಳಿ

ಎ.ಸಿ ಹರ್ಷವರ್ಧನ್ ನೇತ್ರತ್ವದ ತಂಡದಿಂದ ದಾಳಿ, ಹಲವಾರು ದೋಣಿ ವಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ಧ ಇಲಾಖೆ ತೊಡೆ ತಟ್ಟಿದ್ದು, ಮಂಗಳೂರು ಸಹಾಯಕ ಆಯುಕ್ತರಾದ ಹರ್ಷವರ್ಧನ್ ನೇತ್ರತ್ವದಲ್ಲಿ ಮಂಗಳೂರು ಹಾಗೂ ಬಂಟ್ವಾಳ ತಹಶೀಲ್ದಾರರ ತಂಡ ಅಕ್ರಮ ಮರಳುಗಾರಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಿರುವ ಘಟನೆಗಳು ವರದಿಯಾಗಿವೆ. ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮಂಗಳೂರು -ಬಂಟ್ವಾಳ ಸುತ್ತಮುತ್ತಲಿನ ನದಿಗಳಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಮೇಲೆ […]

Continue Reading

ಕಳ್ಳತನ ಪ್ರಕರಣದಲ್ಲಿ ಕಳೆದ 20 ವರ್ಷಗಳಿಂದ ಬಂಟ್ವಾಳ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಸೆರೆ:

ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬ ಕರ್ನಾಟಕ ರಾಜ್ಯದ ಹಲವೆಡೆ ಮತ್ತು ಕೇರಳ ರಾಜ್ಯದಲ್ಲಿ ವಿಳಾಸ ಬದಲಾವಣೆ ಮಾಡಿಕೊಂಡು ಕಳೆದ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದು ಕೊನೆಗೂ ಬಂಟ್ವಾಳ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಟ್ವಾಳ ತಾಲ್ಲೂಕಿನ ಬಡಗಬೆಳ್ಳೂರು ಗ್ರಾಮದ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದಿನಾಂಕ 07.11.2004 ರಂದು ನಡೆದ ಕಳ್ಳತನ ಪ್ರಕರಣದಲ್ಲಿ ಆರೋಪಿತನಾಗಿ ಬಂಧನಕ್ಕೆ ಸಿಗದೇ ತಲೆಮರೆಸಿಕೊಂಡಿದ್ದ ಪಾಣಾಜೆ ಗ್ರಾಮ, ಪುತ್ತೂರು ನಿವಾಸಿ ಮೊಹಮ್ಮದ್ ಶರೀಫ್ (44) ಎಂಬಾತನನ್ನು ದಿನಾಂಕ 06.11.2024 ರಂದು ಕೇರಳದ ಕಾಸರಗೋಡಿನಲ್ಲಿ ವಶಕ್ಕೆ […]

Continue Reading

ಉಡುಪಿ : ಬೈಲಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಉಡುಪಿ : ಬೈಲಕೆರೆ ವಿದ್ಯೋದಯ ಶಾಲೆಯ ಪಕ್ಕ ಇಂದ್ರಾಣಿ ತೋಡಿನಲ್ಲಿ ಅಪರಿಚಿತ ಗಂಡಸಿನ ಕೊಳೆತ ಶವ ಗುರುವಾರ ಪತ್ತೆಯಾಗಿದೆ. ಸ್ಥಳೀಯ ನಿವಾಸಿ ಸುನೀಲ್ ಬೈಲಕೆರೆ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದರು. ತಕ್ಷಣವೇ ಘಟನಾ ಸ್ಥಳಕ್ಕೆ ಆಗಮಿಸಿದ ಒಳಕಾಡು ಅವರು ತೋಡಿನಲ್ಲಿ ಬಿದ್ದಿದ್ದ ಕೊಳೆತ ಶವವನ್ನು ಮೇಲಕ್ಕೆತ್ತಿದ್ದರು. ನಗರ ಠಾಣೆಯ ಎ ಎಸ್ ಐ ನವೀನ್ ದೇವಾಡಿಗ, ಹೆಡ್ ಕಾನ್ಸಟೇಬಲ್ ತಾರಾನಾಥ್ ಕಾನೂನು ಪ್ರಕ್ರಿಯೆ ನಡೆಸಿದರು. ಉಮೇಶ ಬೈಲಕೆರೆ ಸಹಕರಿಸಿದರು ಕೊಳೆತ ಶವವನ್ನು […]

Continue Reading

ಕೇಂದ್ರ ಸರ್ಕಾರದಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗ್ಯಾರಂಟಿ ಭಾಗ್ಯ.. ಪಿಎಂ -ವಿದ್ಯಾಲಕ್ಷ್ಮೀ ಯೋಜನೆಗೆ ಸಂಪುಟ ಅಸ್ತು

ಕಡಿಮೆ ಬಡ್ಡಿ ದರದಲ್ಲಿ ಸಾಲ.. ವರ್ಷಕ್ಕೆ 22 ಲಕ್ಷ ವಿದ್ಯಾರ್ಥಿಗಳಿಗೆ ಲಾಭ..! ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುವ ಪ್ರಧಾನಮಂತ್ರಿ -ವಿದ್ಯಾಲಕ್ಷ್ಮೀ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆ ಅನ್ವಯ ಉನ್ನತ ಶಿಕ್ಷಣಕ್ಕೆ ಸೇರ್ಪಡೆಯಾಗುವ ವಿದ್ಯಾರ್ಥಿಗಳಿಗೆ ಯಾವುದೇ ಮೇಲಾಧಾರ ಇಲ್ಲದೆ ಗ್ಯಾರಂಟಿ ರಹಿತವಾಗಿ ಸಾಲ ನೀಡಲಾಗುತ್ತದೆ. ಕುಟುಂಬದ ಆದಾಯ 8 ಲಕ್ಷ ರೂಪಾಯಿ ಗಿಂತ ಕಡಿಮೆ ಇದ್ದವರು ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಏಳೂವರೆ ಲಕ್ಷದವರೆಗಿನ ಸಾಲಕ್ಕೆ ಕೇಂದ್ರ ಸರಕಾರ ಶೇಕಡಾ 75 ರಷ್ಟು ಖಾತರಿಯನ್ನು […]

Continue Reading

ಸೌತಡ್ಕದ ಮಹಾ ಗಣಪತಿಯನ್ನೇ ನುಂಗಲು ಹೊರಟ ಹಿಂದೂಗಳ ರಕ್ಷಕರು

ದೇವಸ್ಥಾನದ ಜಾಗವನ್ನೇ ಅಕ್ರಮವಾಗಿ ಒಳಗೆ ಹಾಕಿದ ಕಲ್ಲಡ್ಕ ಭಟ್ರು. ರಾಜ್ಯದಲ್ಲಿ ಹಿಂದೂಗಳ ಜಮೀನನ್ನು ವಕ್ಫ್ ಮಂಡಳಿಯು ಅಕ್ರಮವಾಗಿ ಸ್ವಾಧೀನಪಡಿಸುತ್ತಿದೆ ಎಂಬ ಬಿಜೆಪಿ- ಸಂಘ ಪರಿವಾರಗಳು ಪ್ರತಿಭಟನೆ ನಡೆಸುತ್ತಿರುವ ಮಧ್ಯೆಯೇ ದೇವಸ್ಥಾನಕ್ಕೆ ಸೇರಿದ ಜಾಗವನ್ನೇ ಕಲ್ಲಡ್ಕದ ಭಟ್ರ ನೇತೃತ್ವದ ಸಂಸ್ಥೆಯು ಅಕ್ರಮವಾಗಿ ತನ್ನ ಹೆಸರಿಗೆ ನೋಂದಣಿ ಮಾಡಿ ದೇವಸ್ಥಾನದ ಜಾಗವನ್ನೇ ನುಂಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದರ ವಿರುದ್ಧ ಸಿಡಿದೆದ್ದಿರುವ ಸ್ಥಳೀಯ ಹಿಂದೂಗಳು ನವೆಂಬರ್ 11 ರಿಂದ ಅನಿರ್ಧಿಷ್ಟಾವಧಿ ಧರಣಿ ಕೈಗೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ಧ ಸೌತಡ್ಕ […]

Continue Reading

ಅಂಗಳದಲ್ಲಿ ಆಟವಾಡುತ್ತಿದ್ದಾಗ ಟೆಂಪೋ ಚಲಿಸಿ ಮಗು ಮೃತ್ಯು. ಬಂಟ್ವಾಳದ ಲೊರೆಟ್ಟೋಪದವಿನಲ್ಲಿ ನಡೆದ ದುರ್ಘಟನೆ.

ಫರಂಗಿಪೇಟೆ 10ನೇ ಮೈಲಿಗಲ್ಲು ನಿವಾಸಿ ಅಶಿಕಾ (3) ಮೃತ ಪುಟಾಣಿ. ದಿ.ಉನೈಸ್ ಅವರ ಪುತ್ರಿ ಲೊರೆಟ್ಟೋಪದವಿನ ಅಜ್ಜಿ ಮನೆಗೆ ಹೋಗಿದ್ದ ಸಂದರ್ಭ ಇತರ ಮಕ್ಕಳ ಜೊತೆ ಆಟವಾಡುತ್ತಿತ್ತು. ಮನೆ ಮುಂದೆ ನಿಲ್ಲಿಸಿದ್ದ ಟೆಂಪೋಗೆ ಹತ್ತಿದ್ದ ಇತರ ಮಕ್ಕಳು ಆಟವಾಡುತ್ತಾ ಚಾಲಕನಂತೆ ಕ್ಲಚ್ ತುಳಿದು ಗೇರ್ ಲಿವರ್ ಎಳೆದಿದ್ದಾರೆ. ತಕ್ಷಣವೇ ಮುಂದಕ್ಕೆ ಚಲಿಸಿದ ಟೆಂಪೋ ಅಂಗಳದಲ್ಲಿದ್ದ ಪುಟಾಣಿ ಅಶಿಕಾಳ ಮೇಲೆ ಹರಿದಿದೆ. ಪರಿಣಾಮ ಗಾಯಾಳು ಅಶಿಕಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆಂದು ತಿಳಿದುಬಂದಿದೆ. ನಿಲ್ಲಿಸಿದ್ದ ಟೆಂಪೊದ ಚಕ್ರಕ್ಕೆ ಕಲ್ಲು ಇಟ್ಟಿರದ ಕಾರಣ […]

Continue Reading

ಶಾಲಾ ಮಕ್ಕಳ ಬಲಿ ಪಡೆಯಲು ಕಾದು ಕುಳಿತ ವಿಟ್ಲದ ಇಂದಿರಾ ಕ್ಯಾಂಟೀನ್ ಮರಣಗುಂಡಿಗೆ ಮುಕ್ತಿ.

ಸ್ಪೆಷಲ್ ನ್ಯೂಸ್ ವರದಿಯ ಇಂಪ್ಯಾಕ್ಟ್. ವಿಟ್ಲದ ನಲಿ-ಕಲಿ ಶಾಲಾ ವಿದ್ಯಾರ್ಥಿಗಳ ಪ್ರಾಣ ಬಲಿ ಪಡೆಯಲು ಇಂದಿರಾ ಕ್ಯಾಂಟೀನ್ ಕಾಮಗಾರಿ ಪಡೆದ ಗುತ್ತಿಗೆದಾರ ಮತ್ತು ಅಧಿಕಾರಿಗಳು ಕಾರಣರಾಗಿದ್ದರು. ಇಲ್ಲಿನ ನಲಿ-ಕಲಿ ಶಾಲಾ ವಠಾರದಲ್ಲೇ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿಯಲ್ಲಿ ಗುತ್ತಿಗೆದಾರ ಮತ್ತು ಇಂಜಿನಿಯರುಗಳ ಬೇಜವಾಬ್ದಾರಿ ಎದ್ದು ಕಂಡಿತ್ತು‌. ಶಾಲಾ ಪುಟಾಣಿಗಳು ಓಡಾಡುತ್ತಿರುವ ಪರಿಸರದಲ್ಲೇ ನಡೆಯುತ್ತಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿಯಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮ ಅನುಸರಿಸದೇ ಶಾಲಾ ಆವರಣದಲ್ಲಿ ತೋಡಿದ್ದ ಇಂದಿರಾ ಕ್ಯಾಂಟೀನ್ ತ್ಯಾಜ್ಯ ಶೇಖರಣಾ ಗುಂಡಿ ಮುಚ್ಚದೇ ನಿರ್ಲಕ್ಷ್ಯ […]

Continue Reading

ಮುಂಬೈ: ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆ ಹಾಕಿದ್ದ, ಕರ್ನಾಟಕ ಮೂಲದ ವಿಕ್ರಮ್‌ ನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿರುವ ಮುಂಬೈ ಪೊಲೀಸರು

ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ನ ಸಹೋದರ ಎಂದು ಹೇಳಿಕೊಂಡು ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆ ಹಾಕಿದ್ದ ಕಿಡಿಗೇಡಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರೋಪಿ ಕರ್ನಾಟಕ ಮೂಲದ ವಿಕ್ರಮ್‌ ಎಂದು ಗುರುತಿಸಲಾಗಿದೆ. ಲಾರೆನ್ಸ್‌ ಬಿಷ್ಣೋಯ್‌ ಸಹೋದರ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಐದು ಕೋಟಿ ಬೇಡಿಕೆ ಹಾಗೂ ದೇವಸ್ಥಾನಕ್ಕೆ ಬಂದು ಸಲ್ಮಾನ್‌ ಕ್ಷಮೆ ಕೇಳಬೇಕೆಂದು ಮುಂಬೈನ ಸಂಚಾರ ನಿಯಂತ್ರಣ ಕೊಠಡಿಗೆ ಇತ್ತೀಚೆಗೆ ಸಂದೇಶ ಕಳುಹಿಸಿದ್ದ. ಸಲ್ಮಾನ್‌ ಜೀವಂತವಾಗಿರಬೇಕೆಂದರೆ ಆತ ನಮಗೆ ಐದು ಕೋಟಿ ನೀಡಬೇಕು ಹಾಗೂ ದೇವಸ್ಥಾನಕ್ಕೆ […]

Continue Reading

ವಕ್ಪ್ ಆಸ್ತಿಗಳ ರಕ್ಷಣೆಗಾಗಿ ವಕ್ಫ್ ಮಂಡಳಿಗೆ ಹೆಚ್ಚಿನ ಅಧಿಕಾರ, ವಕ್ಫ್‌ ಆಸ್ತಿಗಳ ರಕ್ಷಣೆ, 2014ರ ಲೋಕಸಭೆ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಆಶ್ವಾಸನೆ

ಅಂದು ಇಂಚಿಂಚು ವಕ್ಫ್ ಆಸ್ತಿಯನ್ನು ಕಾಪಾಡುವುದಾಗಿ ಶಪಥ ಮಾಡಿದ್ದರು. ಇಂದು ರಾಜಕೀಯ ಕಾರಣಕ್ಕಾಗಿ ತಪ್ಪು ಸಂದೇಶ ನೀಡುತ್ತಿದ್ದಾರೆ ವಕ್ಪ್ ಆಸ್ತಿಗಳ ರಕ್ಷಣೆಗಾಗಿ ವಕ್ಫ್ ಮಂಡಳಿಗೆ ಹೆಚ್ಚಿನ ಅಧಿಕಾರ ಹಾಗೂ ವಕ್ಫ್‌ ಆಸ್ತಿಗಳ ಒತ್ತುವರಿ ತೆರವು ಕುರಿತು 2014ರ ಲೋಕಸಭೆ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಆಶ್ವಾಸನೆ ನೀಡಿದ್ದ ಸಂಗತಿ ಇದೀಗ ಬಯಲಾಗಿದೆ. ಈ ವಿಷಯವನ್ನು ಕಾಂಗ್ರೆಸ್‌ ನಾಯಕರು ಇದೀಗ ಬಹಿರಂಗಪಡಿಸಿದ್ದಾರೆ. ಕರ್ನಾಟಕದಲ್ಲಿ ವಕ್ಫ್ ಆಸ್ತಿ ನೋಟಿಸ್‌ ವಿರೋಧಿಸಿ ಪ್ರತಿಭಟನೆಗೆ ಇಳಿದಿರುವ ರಾಜ್ಯ ಬಿಜೆಪಿ ನಾಯಕರಿಗೆ 2014 ರ ಚುನಾವಣಾ […]

Continue Reading

ಗುತ್ತಿಗೆದಾರನ ನಿರ್ಲಕ್ಷ್ಯ. ಶಾಲಾ ಮಕ್ಕಳ ಬಲಿ ಪಡೆಯಲು ಕಾದು ಕುಳಿತ ವಿಟ್ಲದ ಇಂದಿರಾ ಕ್ಯಾಂಟೀನ್ ಕಾಮಗಾರಿ.

ವಿಟ್ಲದ ನಲಿ-ಕಲಿ ಶಾಲಾ ವಿದ್ಯಾರ್ಥಿಗಳ ಪ್ರಾಣ ಬಲಿ ಪಡೆಯಲು ಇಂದಿರಾ ಕ್ಯಾಂಟೀನ್ ಕಾಮಗಾರಿ ಪಡೆದ ಗುತ್ತಿಗೆದಾರ ಮತ್ತು ಅಧಿಕಾರಿಗಳು ಕಾರಣರಾಗುತ್ತಿದ್ದಾರೆ. ಇಲ್ಲಿನ ನಲಿ-ಕಲಿ ಶಾಲಾ ವಠಾರದಲ್ಲೇ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿಯಲ್ಲಿ ಗುತ್ತಿಗೆದಾರ ಮತ್ತು ಇಂಜಿನಿಯರುಗಳ ಬೇಜವಾಬ್ದಾರಿ ಎದ್ದುಕಾಣುತ್ತಿದೆ. ಶಾಲಾ ಪುಟಾಣಿಗಳು ಓಡಾಡುತ್ತಿರುವ ಪರಿಸರದಲ್ಲೇ ನಡೆಯುತ್ತಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿಯಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮ ಅನುಸರಿಸಿಲ್ಲ. ಶಾಲಾ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ತ್ಯಾಜ್ಯ ಶೇಖರಣೆಗಾಗಿ ಗುಂಡಿ ತೋಡಿದ್ದರೂ ಇನ್ನೂ ಮುಚ್ಚದೇ ನಿರ್ಲಕ್ಷ್ಯ ತೋರಿದ್ದಾರೆ. ಅಲ್ಲದೇ ಗುಂಡಿಯ ಸುತ್ತ […]

Continue Reading