ಚುನಾವಣಾ ಆಯೋಗದ ಕಾರ್ಯವೈಖರಿಯ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಸರ್ಕಾರ ಏಕೆ ‘ಸಿದ್ಧವಾಗಿಲ್ಲ’: ಕಾಂಗ್ರೆಸ್

ನವದೆಹಲಿ: ಹಿಂದಿನ ಸರ್ಕಾರಗಳು ಎರಡೂ ಸದನಗಳಲ್ಲಿ ಚುನಾವಣಾ ಆಯೋಗದ ಕಾರ್ಯವೈಖರಿಯ ಕುರಿತು ಚರ್ಚೆಗೆ ಅವಕಾಶ ನೀಡಿದ್ದರೂ, ಚುನಾವಣಾ ಆಯೋಗದ ಕಾರ್ಯವೈಖರಿಯ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಏಕೆ “ಸಿದ್ಧವಾಗಿಲ್ಲ” ಎಂದು ಕಾಂಗ್ರೆಸ್ ಶನಿವಾರ ಸರ್ಕಾರವನ್ನು ಕೇಳಿದೆ. ಚುನಾವಣಾ ಆಯೋಗದ ಚುನಾವಣಾ ಸುಧಾರಣೆಗಳು ಮತ್ತು ಚುನಾವಣೆಯಲ್ಲಿ ಹಣದ ಬಳಕೆಯ ಕುರಿತು ಚರ್ಚೆ ನಡೆದಾಗ ಹಿಂದೆ ಹಲವಾರು ಘಟನೆಗಳನ್ನು ಕಾಂಗ್ರೆಸ್ ನಾಯಕ ಮಾಣಿಕಮ್ ಟ್ಯಾಗೋರ್ ಉಲ್ಲೇಖಿಸಿದ್ದಾರೆ. “ಗೌರವಾನ್ವಿತ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸಂಸತ್ತಿನಲ್ಲಿ ಚುನಾವಣಾ ಆಯೋಗದ ಕಾರ್ಯವೈಖರಿಯ […]

Continue Reading

ಧರ್ಮಸ್ಥಳ ಪ್ರಕರಣಕ್ಕೆ ಕೋಮು ಬಣ್ಣ ಬಳಿಯುವ ದುಷ್ಟ ಯತ್ನ: ವಸಂತ್ ಗಿಳಿಯಾರ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎಫ್ಐಆರ್

ಧರ್ಮಸ್ಥಳದಲ್ಲಿ ನಡೆಯುತ್ತಿದ್ದ ಅಸಹಜ ಸಾವಿನ ಪ್ರಕರಣ, ಬೆಚ್ಚಿಬೀಳಿಸುವ ಸರಣಿ ಕುಕೃತ್ಯದ ಬಗ್ಗೆ ಈ ಹಿಂದೆ ಸ್ವಚ್ಛತಾ ಕಾರ್ಮಿಕನಾಗಿ ದುಡಿಯುತ್ತಿದ್ದ ವ್ಯಕ್ತಿ ಪ್ರಾಯಶ್ಚಿತ್ತಗೊಂಡು ದೂರು ನೀಡಲು ಮುಂದೆ ಬಂದಿದ್ದು, ಒಟ್ಟಾರೆ ಘಟನೆಯ ಬಗ್ಗೆ ವಿಶೇಷ ತನಿಖಾ ತಂಡ (ಎಸ್ ಐಟಿ) ತನಿಖೆ ನಡೆಸುತ್ತಿದೆ. ಸರಾಗವಾಗಿ ತನಿಖೆ ನಡೆಯುತ್ತಿರುವ ಹೊತ್ತಿನಲ್ಲಿ ಧಾರ್ಮಿಕ ಭಾವನೆಯನ್ನು ಕೆರಳಿಸಿ ಘಟನೆಯನ್ನು ಹಿಂದೂ -ಮುಸ್ಲಿಂ ರೀತಿ ಚಿತ್ರಿಸಿ ಜಿಲ್ಲೆಯಲ್ಲಿ ಕೋಮುಗಲಭೆ ಎಬ್ಬಿಸಿ ಒಟ್ಟಾರೆ ತನಿಖೆಯ ಹಾದಿಯನ್ನು ದಿಕ್ಕು ತಪ್ಪಿಸುವ ವ್ಯವಸ್ಥಿತ ಷಡ್ಯಂತ್ರ ಕೂಡ ತೆರೆಮರೆಯಲ್ಲಿ ನಡೆಯುತ್ತಿದೆ. […]

Continue Reading

ಈ ಸಾವು ನ್ಯಾಯವೇ..?

ಡೆಡ್ಲಿ ಲೋನ್ ಆಪ್ ಗೆ ಗುರುಪುರದ ಸಲೀಂ ಬಲಿ.! ಪ್ರಾಥಮಿಕ ತನಿಖೆಯಲ್ಲಿ ಶಾಕಿಂಗ್ ವಿಚಾರ ಬಹಿರಂಗ ಸೈಬರ್ ಖದೀಮರ ವಂಚನೆಗೆ ಬಲಿಯಾಗುವ ಮುನ್ನ ಎಚ್ಚರ ವಿವಾಹವಾಗಿ ಬರೀ ಎರಡು ತಿಂಗಳು ಕಳೆದಿದೆ ಅಷ್ಟೇ. ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ತಾಯಿಯೂ ಮೃತಪಟ್ಟಿದ್ದಳು. ಇದು ಗುರುಪುರ ಸಲೀಂ ಕುಟುಂಬದ ದುರಂತ ಕಥೆ. ಡೆಡ್ಲಿ ಲೋನ್ ಆಪ್ ನಂಬಿ ಸಾಲ ಶೋಲ ಮಾಡಿ ಬರೋಬ್ಬರಿ 17 ಲಕ್ಷ ಲಪಟಾಯಿಸಿದ ಸೈಬರ್ ವಂಚಕರ ದರೋಡೆಗೆ ಸಿಲುಕಿ ಕಂಡಕ್ಟರ್ ಸಲೀಂ ಗುರುಪುರ ಸಮೀಪದ ದೋಣಿಂಜೆಗುತ್ತು […]

Continue Reading

ಸರಕು ಸಾಗಣೆ ವಾಹನ ಅಪಘಾತಕ್ಕೀಡಾಗಿ ಅದರಲ್ಲಿದ್ದ ಪ್ರಯಾಣಿಕ ಗಾಯಗೊಂಡರೆ, ಮೃತಪಟ್ಟರೆ ವಾಹನ ಮಾಲೀಕನೇ ಜವಾಬ್ದಾರಿ, ಆತನೇ ಪರಿಹಾರ ಪಾವತಿಸಬೇಕು: ಹೈಕೋರ್ಟ್ ಮಹತ್ವದ ಆದೇಶ

ಸರಕು ಸಾಗಣೆ ವಾಹನ ಅಪಘಾತಕ್ಕೀಡಾಗಿ ಅದರಲ್ಲಿದ್ದ ಪ್ರಯಾಣಿಕ ಗಂಭೀರ ಗಾಯಗೊಂಡರೆ ಅಥವಾ ಮೃತಪಟ್ಟ ವೇಳೆ ಆ ವಾಹನದ ಮಾಲೀಕರು ಸಂತ್ರಸ್ತರಿಗೆ ಪರಿಹಾರ ಪಾವತಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಅಲ್ಲದೇ, ಅಪಘಾತಕ್ಕೀಡಾದ ವಾಹನ ವಿಮೆ ಪಡೆದಿದ್ದ ವಿಮಾ ಕಂಪೆನಿಯನ್ನು ಹೊಣೆಗಾರನನ್ನಾಗಿ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಸರಕು ಸಾಗಣೆ ವಾಹನ ಅಪಘಾತಕ್ಕೀಡಾಗಿ ಗಾಯಗೊಂಡವರಿಗೆ ಪರಿಹಾರ ನೀಡುವಂತೆ ಆದೇಶಿಸಿದ್ದ ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣ (ಎಂಎಸಿಟಿ) ಆದೇಶ ಪ್ರಶ್ನಿಸಿ ಸರಕು ಸಾಗಣೆ ವಾಹನಕ್ಕೆ ವಿಮೆ ನೀಡಿದ್ದ ‘ದಿ ನ್ಯಾಷನಲ್ ಇನ್ಸೂರೆನ್ಸ್ ಕಂಪೆನಿ’ […]

Continue Reading

ಎಸ್ಐಟಿ ತನಿಖೆಯ ದಿಕ್ಕುತಪ್ಪಿಸಲು ಬಿಜೆಪಿ ಎಡಪಂಥೀಯರ ವಿರುದ್ಧ ಕಪೋಲಕಲ್ಪಿತ ಆರೋಪಗಳೊಂದಿಗೆ ರಂಗಕ್ಕೆ ಬಂದಿದೆ. ಸಿಪಿಐಎಂ ತಿರುಗೇಟು

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳು, ಹೆಣ ಹೂತು‌ ಹಾಕಿರುವ ಪ್ರಕರಣದಲ್ಲಿ ಎಸ್ಐಟಿ ಪ್ರಭಾವಗಳಿಗೆ ಮಣಿಯದೆ ತನಿಖೆ ನಡೆಸುತ್ತಿರುವುದು ಬಿಜೆಪಿ ಪಕ್ಷವನ್ನು ಹತಾಶೆಗೆ ತಳ್ಳಿದೆ. ಈ ಹತಾಶೆಯ ಪರಿಣಾಮವಾಗಿ ಎಸ್ಐಟಿ ತನಿಖೆ ಹಾಗು ಜನಾಕ್ರೋಶದ ದಿಕ್ಕನ್ನು ತಪ್ಪಿಸಲು ಬಿಜೆಪಿ ಪಕ್ಷದ ಶಾಸಕರು, ನಾಯಕರುಗಳು ಮೌನ ಮುರಿದು ಏಕಾಏಕಿ ರಂಗ ಪ್ರವೇಶ ಮಾಡಿದ್ದಾರೆ. ಹೋರಾಟಗಾರರ ಮೇಲೆ ಕೆಸರೆರಚಲು ತೊಡಗಿದ್ದಾರೆ. ಧರ್ಮಸ್ಥಳ ಗ್ರಾಮದಲ್ಲಿ ದೌರ್ಜನ್ಯಗಳ ಎದುರಾಗಿ ದಶಕಗಳಿಂದ ಹೋರಾಟ ನಡೆಸುತ್ತಿರುವ ಎಡಪಂಥೀಯ ಪಕ್ಷಗಳ ಎದುರಾಗಿ ಸುಳ್ಳು ಕತೆಗಳನ್ನು ಕಟ್ಟಿ ಧರ್ಮ […]

Continue Reading

ಮಾದಕ ವ್ಯಸನಕ್ಕೆ ಬಲಿಯಾದ ಅಪ್ರಾಪ್ತ ಬಾಲಕಿ, ಹಲವು ಪುರುಷರೊಂದಿಗೆ ಲೈಂಗಿಕ ಸಂಬಂಧ, ಸುಮಾರು19 ಜನರಿಗೆ ಏಡ್ಸ್

ಮಾದಕ ವ್ಯಸನಕ್ಕೆ ಬಲಿಯಾದ 17 ವರ್ಷದ ಬಾಲಕಿಯೊಬ್ಬಳು ಹಲವಾರು ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿ, ಸರಿ-ಸುಮಾರು19 ಜನರಿಗೆ ಎಚ್ಐವಿ ಹರಡಿಸಿದ್ದಾಳೆ. ಉತ್ತರಾಖಂಡದ ರಾಮನಗರ ಪಟ್ಟಣದ ಗುಲರ್‌ಘಟ್ಟಿ ಪ್ರದೇಶದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಈ ಬಾಲಕಿ ಆರ್ಥಿಕವಾಗಿ ತೀರಾ ಹಿಂದುಳಿದ ಕುಟುಂಬದಿಂದ ಬಂದವಳಾಗಿದ್ದು, ಡ್ರಗ್ಸ್ ಸೇವನೆಗೆ ತನ್ನ ಲೈಂಗಿಕ ಸಂಪರ್ಕದಿಂದ ಬಂದ ಹಣವನ್ನು ಖರ್ಚು ಮಾಡುತ್ತಿದ್ದಳು ಎನ್ನಲಾಗಿದೆ. ಆಕೆಯೊಂದಿಗೆ ಸಂಪರ್ಕ ಹೊಂದಿದವರಲ್ಲಿ ವಿವಾಹಿತ ಪುರುಷರೂ ಸೇರಿದ್ದಾರೆ. ಆಕೆಗೆ ಎಚ್‌ಐವಿ ಇದೆ ಎಂದು ಅವರಿಗೆ ತಿಳಿದಿರಲಿಲ್ಲ […]

Continue Reading

ಧರ್ಮಸ್ಥಳ: ಪತ್ರಕರ್ತರ ಮೇಲೆ ಪುಂಡರು ನಡೆಸಿದ ಹಲ್ಲೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದ ಅತ್ಯಾಚಾರವಾಗಿದೆ.

ಎಸ್ಐಟಿ ತನಿಖೆಯನ್ನು ದಾರಿ ತಪ್ಪಿಸಲು ಹಾಗೂ ಸರ್ಕಾರದ ಮೇಲೆ ಒತ್ತಡ ಹೇರುವ ಹುನ್ನಾರ: ಶೇಖರ್ ಲಾಯಿಲ ಧರ್ಮಸ್ಥಳ ಗ್ರಾಮದ ಪಾಂಗಳ ಎಂಬಲ್ಲಿ ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಸಹಜ ಸಾವುಗಳ ಬಗ್ಗೆ ವರದಿ ಮಾಡುತ್ತಿದ್ದ ಯೂಟ್ಯೂಬರ್ ಗಳ ಮೇಲೆ ಪುಂಡರು ನಡೆಸಿದ ಹಲ್ಲೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದ ಅತ್ಯಾಚಾರವಾಗಿದೆ. ಇಂತಹ ಕಾನೂನು ಬಾಹಿರ ಗೂಂಡಾಗಿರಿ ನಡೆಸಿದ ಎಲ್ಲ ಪುಂಡರರನ್ನು ತಕ್ಷಣ ಬಂದಿಸಬೇಕು. ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಸಾವಿರಾರು ಅಸಹಜ ಸಾವುಗಳ ಶವಗಳನ್ನು ಕಾನೂನು ಬಾಹಿರವಾಗಿ ಹೂತಿರುವ ಪ್ರಕರಣದ […]

Continue Reading

ಸುರತ್ಕಲ್ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ; 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಶಹನ್ವಾಝ್ ಅರೆಸ್ಟ್

ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಸುರತ್ಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಉತ್ತರ ಪ್ರದೇಶ ರಾಮ್ ಪುರ ನಿವಾಸಿ ಶಹನ್ವಾಝ್ ಯಾನೆ ಶಾನು ಎಂದು ಗುರುತಿಸಲಾಗಿದೆ. ಘಟನೆಯ ವಿವರ 2014 ಫೆಬ್ರವರಿ 8 ರಂದು ಕುಳಾಯಿ ಹೊಸಬೆಟ್ಟುವಿನ ಕೋರ್ದಬ್ಬು ಕಲ ದ ನಿವಾಸಿ ಸುಮತಿ ಪ್ರಭು ಎಂಬವರ ಕುತ್ತಿಗೆಗೆ ಚೂರಿ ಇರಿದು ಕೊಲೆ ಮಾಡಿರುವ ಘಟನೆ ನಡೆದಿತ್ತು. ಕೊಲೆಗೈದ ಆರೋಪಿಗಳು ಆಕೆಯ ಮೈ ಮೇಲಿದ್ದ 24 ಪವನ್ ಚಿನ್ನಾಭರಣವನ್ನು […]

Continue Reading

ಎರಡು-ಮೂರು ತಿಂಗಳೊಳಗೆ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ

ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಇನ್ನು ಎರಡು ತಿಂಗಳಲ್ಲಿ ನೋಟಿಫಿಕೇಶನ್ ಹೊರಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಮೀಸಲಾತಿ ಪ್ರಕ್ರಿಯೆ ನಡೆಯುತ್ತಿದ್ದು, ಎರಡು-ಮೂರು ತಿಂಗಳಲ್ಲಿ ಚುನಾವಣೆಗೆ ನೋಟಿಫಿಕೇಶನ್ ಹೊರಡಿಸಲಾಗುವುದು. ಬಿಜೆಪಿ ಅಧಿಕಾರದಲ್ಲಿದ್ದಾಗ ಜಿ.ಪಂ. ಮತ್ತು ತಾ.ಪಂ. ಚುನಾವಣೆಯನ್ನು ಮುಂದೂಡುತ್ತಲೆ ಬಂದಿದೆ. ಆದರೆ, ಈ ಬಾರಿ ನಾವು ಚುನಾವಣೆ ನಡೆಸುವುದು ಖಚಿತ ಎಂದರು. ಇತ್ತೀಚೆಗೆ ಮಾನ್ಯ ಕರ್ನಾಟಕ ಹೈಕೋರ್ಟ್ ಈ ಬಗ್ಗೆ ಎಚ್ಚರಿಕೆಯನ್ನು […]

Continue Reading

ಧರ್ಮಸ್ಥಳ ಫೈಲ್ಸ್ ಮೇಜರ್ ಟ್ವಿಸ್ಟ್; ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ಎರಡು ಹೊಸ ಯು‌.ಡಿ.ಆರ್ ಪ್ರಕರಣ ಎಸ್.ಐ.ಟಿ ಹೆಗಲಿಗೆ

ದೇಶದಾದ್ಯಂತ ಭಾರೀ ಸಂಚಲನ ಸೃಷ್ಟಿಸಿರುವ ಧರ್ಮಸ್ಥಳ ಫೈಲ್ಸ್ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ರಾಜ್ಯ ಸರಕಾರ ಪ್ರಕರಣವನ್ನು ಎಸ್ ಐಟಿ ತಂಡಕ್ಕೆ ವರ್ಗಾಯಿಸಿತ್ತು. ಅನಾಮಿಕ ತೋರಿಸಿದ 13 ಸ್ಥಳಗಳಲ್ಲಿ ಉತ್ಖನನ ಕಾರ್ಯ ನಡೆಯುತ್ತಿರುವ ಹೊತ್ತಿನಲ್ಲಿ ಮತ್ತೆರಡು ಹೊಸ ಪ್ರಕರಣಗಳನ್ನು ಎಸ್ ಐಟಿ ಹೆಗಲಿಗೆ ವಹಿಸಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅ.ಕ್ರ: 39/2025 ಕಲಂ:211 (ಎ) BNS ಪ್ರಕರಣವನ್ನು ಜುಲೈ 19 ರಂದು ರಾಜ್ಯ ಸರಕಾರ ವಿಶೇಷ ತನಿಖಾ ತಂಡ (SIT) ಕ್ಕೆ ವರ್ಗಾಯಿಸಲಾಗಿತ್ತು. ಜುಲೈ 31 […]

Continue Reading