ದೇಶದಾದ್ಯಂತ ಟ್ರೆಂಡ್ ಆಗಿರುವ ‘ಯ್ಯೂ ಶೇಫ್ ಕ್ಲಾಸ್ ರೂಂ’ ಮಲಯಾಳಿ ಪ್ರಾಡಕ್ಟ್ ಅನ್ನುವವರು ಈ ಸುದ್ದಿ ಓದಿ..

1996 ರಲ್ಲಿ ಸುಳ್ಯದ ಶಿಕ್ಷಕ ಡಾ. ಚಂದ್ರಶೇಖರ ದಾಮ್ಲೆ, 2024 ರಲ್ಲಿ ದಾವಣಗೆರೆ ಶಿಕ್ಷಕಿ ನಾಗವೇಣಿ ಯ್ಯೂ ಶೇಪ್ ಕ್ಲಾಸ್ ರೂಂ ಅಳವಡಿಸಿ ಭೇಷ್ ಅನ್ನಿಸಿದ್ದರು. ರಾಜ್ಯ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯಕ್ಕೆ ಈ ವಿಶಿಷ್ಟ ಪ್ರಯೋಗ ಯಶಸ್ವಿಯಾಗಿಲ್ಲ. ದೇಶದಾದ್ಯಂತ ಟ್ರೆಂಡ್ ಆಗಿರುವ ಯ್ಯೂ ಶೇಪ್ ಕ್ಲಾಸ್ ರೂಂ ಕಾನ್ಸೆಪ್ಟ್ ಮೊದಲ ಬಾರಿಗೆ ಪ್ರಯೋಗ ಮಾಡಿದ್ದು ದಕ್ಷಿಣ ಕನ್ನಡ ಜಿಲ್ಲೆ ಅಂದರೆ ನೀವು ನಂಬುತ್ತೀರಾ.. ನಂಬಲೇಬೇಕು. ಮಲಯಾಳಿ ಸಿನೆಮಾದ ಕಾನ್ಸೆಪ್ಟ್ ಎಂದು ಪ್ರಚಾರ ಪಡೆದಿರುವ ಯ್ಯೂ ಶೇಪ್ ಮಾದರಿ […]

Continue Reading

ಡ್ರಗ್ಸ್ ದಂಧೆಯ ವಿರುದ್ಧ ಮಂಗಳೂರು ಕಮೀಷನರ್ ಸಮರ

ರಾಹುಲ್, ಜಬ್ಬಾರ್, ರಿಚರ್ಡ್ ಸೇರಿದಂತೆ 8 ವಿದ್ಯಾರ್ಥಿಗಳು ಅರೆಸ್ಟ್; ನಗರದ ಕಾಲೇಜೊಂದರ ವಿದ್ಯಾರ್ಥಿಗಳು ಮಂಗಳೂರು ಕಮೀಷನರ್ ಅನುಪಮ್ ಅಗರವಾಲ್ ಡ್ರಗ್ಸ್ ದಂಧೆ ಮಟ್ಟ ಹಾಕಲು ನಿರಂತರ ಶ್ರಮಿಸುತ್ತಿದ್ದು, ಬಹುಪಾಲು ವಿದ್ಯಾರ್ಥಿಗಳು ಡ್ರಗ್ಸ್ ದಂಧೆಯಲ್ಲಿ ಶಾಮೀಲಾಗಿರುವುದರಿಂದ ವಿದ್ಯಾರ್ಥಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಇನ್ನಾದರೂ ಸರಿಯಾಗಿ, ಕಾಲೇಜಿಗೆ ಬರುವಂತೆ ಮಾಡಬೇಡಿ ಎಂದು ವಿಡಿಯೋ ಮುಖಾಂತರ ಮನವಿ ಮಾಡಿದ್ದರು. ಇದೀಗ ಮಂಗಳೂರು ನಗರದಲ್ಲಿ ಎಂಡಿಎಂಎ ಮಾರಾಟ ಮಾಡುತ್ತಿದ್ದ 8 ವಿದ್ಯಾರ್ಥಿಗಳು ಪೊಲೀಸರ ಕೈಗೆ ತಗುಲಾಕಿಕೊಂಡಿದ್ದಾರೆ. ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ […]

Continue Reading

ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ 11 ರಾಜ್ಯಗಳಲ್ಲಿ ಕೊಟ್ಯಾಂತರ ರೂ. ವಂಚನೆ. 30ಕ್ಕೂ ಹೆಚ್ಚು ಸೈಬರ್‌ ಪ್ರಕರಣದ ಆರೋಪಿಯ ಹೆಡೆಮುರಿ ಕಟ್ಟಿದ ಕಾರವಾರ ಪೊಲೀಸರು

ಮಾದಕ ವಸ್ತು ಪಾರ್ಸಲ್‌ ಬಂದಿದ್ದು, ನಿಮ್ಮನ್ನು ಬಂಧಿಸಬೇಕಾಗುತ್ತದೆ ಎಂದು ವಾಟ್ಸ್‌ಆಯಪ್‌ ವೀಡಿಯೋ ಕಾಲ್‌ ಮಾಡಿ, ನಾವು ಪೊಲೀರು ಎಂದು ಬೆದರಿಸಿ ಅಮಾಯಕರಿಂದ ಹಣ ವಸೂಲಿ ಮಾಡುತ್ತಿದ್ದ ಬಿಹಾರ ಮೂಲದ ವಂಚಕ ಹರ್ದೀಪ್‌ ಸಿಂಗ್‌ ಎಂಬಾತನನ್ನು ಕಾರವಾರ ಸೈಬರ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಕಾರವಾರದ ವಿಲ್ಸನ್‌ ಫೆರ್ನಾಂಡಿಸ್‌ಗೆ ವೀಡಿಯೋ ಕರೆ ಮಾಡಿ ಹೆದರಿಸಿ 3.80 ಲಕ್ಷ ರೂ. ವಸೂಲಿ ಮಾಡಿದ್ದ ಈ ಆಸಾಮಿ. ಇದರ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು ಬಿಹಾರಕ್ಕೆ ಹೋದಾಗ ಪಾಟ್ನಾದ […]

Continue Reading

ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮಹಿಳೆಯಿಂದ ಲೈಂಗಿಕ ದೌರ್ಜನ್ಯ ದೂರು, ಪ್ರಕರಣ ದಾಖಲು

ಮಹಿಳೆಯ ಗಂಡ ಹಾಗೂ ಕಾವೂರು ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಬಂಧನ ದಿನಾಂಕ: 15-07-2025 ರಂದು ಕಂಕನಾಡಿ ನಗರ ಠಾಣಾ ವ್ಯಾಪ್ತಿಯ ಸಂತ್ರಸ್ತ ಮಹಿಳೆಯೊರ್ವರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ನೀಡಿದ್ದು, ತನ್ನ ಗಂಡನು ಹಣಕ್ಕಾಗಿ ಒತ್ತಾಯಪೂರ್ವಕವಾಗಿ ಬೇರೊಬ್ಬ ಪುರುಷನೊಂದಿಗೆ ದೈಹಿಕ ಸಂಪರ್ಕ ನಡೆಸುವಂತೆ ಮಾಡಿ, ಅದರ ವಿಡಿಯೋವನ್ನು ಚಿತ್ರೀಕರಣ ಮಾಡಿ, ಇತರರೊಂದಿಗೆ ದೈಹಿಕ ಸಂಪರ್ಕ ನಡೆಸುವಂತೆ ಇಲ್ಲವಾದಲ್ಲಿ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಯ ಬಿಡುವುದಾಗಿ ಬೆದರಿಸಿರುವುದಾಗಿ ದೂರು ನೀಡಿರುತಾರೆ. ಸಂತ್ರಸ್ತ ಮಹಿಳೆಯು ತನಗೆ ಪರಿಚಯವಿರುವ ಕಾವೂರು ಪೊಲೀಸ್ […]

Continue Reading

7 ವರ್ಷ ಮೇಲ್ಪಟ್ಟ ಮಕ್ಕಳ ಬಯೋಮೆಟ್ರಿಕ್ ನೀಡದಿದ್ದರೆ ಆಧಾರ್ ಕಾರ್ಡ್ ರದ್ದು: ಯುಡಿಎಐ ಎಚ್ಚರಿಕೆ

7 ವರ್ಷ ತುಂಬಿದ ಮಕ್ಕಳ ಬಯೋಮೆಟ್ರಿಕ್ ಆಪ್ ಡೇಟ್ ಮಾಡಿಸದಿದ್ದರೆ ಅವರ ಆಧಾರ್ ಕಾರ್ಡ್ ಅನ್ನು ನಿಷ್ಕ್ರೀಯಗೊಳಿಸಲಾಗುವುದು ಎಂದು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಡಿಎಐ) ಎಚ್ಚರಿಸಿದೆ. ಜತೆಗೆ, ಅಂತಹವರ ಸಂಖ್ಯೆಗಳಿಗೆ ರಿಮೈಂಡರ್ ಸಂದೇಶಗಳನ್ನೂ ಕಳಿಸತೊಡಗಿದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾಗ ಆಧಾರ್ ಕಾರ್ಡ್ ಮಾಡಿಸಲಾದ ಮಕ್ಕಳಿಗೆ 7 ವರ್ಷ ಆಗುತ್ತಿದ್ದಂತೆ ಬೆರಳಚ್ಚು, ಪೋಟೋ ಸೇರಿದಂತೆ ಇತರೆ ಬಯೋಮೆಟ್ರಿಕ್ ಗಳನ್ನು ಆಪ್ ಡೇಟ್ ಮಾಡಿಸುವುದು ಕಡ್ಡಾಯ. ಮಕ್ಕಳ ಬಯೋಮೆಟ್ರಿಕ್ ಡೇಟಾದ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು ಇದರ […]

Continue Reading

ಹಿರಿಯ ನಾಟಕ ಕಲಾವಿದ, ಪಕ್ಕಲಡ್ಕ ಯುವಕ ಮಂಡಲದ ಸಕ್ರೀಯ ಸದಸ್ಯ, ಸಂಗಾತಿ ಕೆ. ರಾಘವ ಬಂಗೇರ ಇನ್ನಿಲ್ಲ.

ಖ್ಯಾತ ನಾಟಕ ಕಲಾವಿದರೂ, ಪಕ್ಕಲಡ್ಕ ಯುವಕ ಮಂಡಲದ ಸಕ್ರೀಯ ಸದಸ್ಯರಾಗಿದ್ದ ಪ್ರಸ್ತುತ ಅಸೈಗೋಳಿಯಲ್ಲಿ ವಾಸವಾಗಿರುವ ಸಂಗಾತಿ ಕೆ ರಾಘವ ಬಂಗೇರ (78)ರವರು ವಯೋಸಹಜ ಕಾಯಿಲೆಯಿಂದಾಗಿ ಇಂದು ಅಸೈಗೋಳಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು. ಬಜಾಲ್ ಪಕ್ಕಲಡ್ಕದ ಪರಿಸರದಲ್ಲಿ ಹುಟ್ಟಿ ಬೆಳೆದ ರಾಘವರವರು ಎಳೆಯ ಪ್ರಾಯದಲ್ಲೇ ಎಡಪಂಥೀಯ ವಿಚಾರಧಾರೆಯಿಂದ ಆಕರ್ಷಿತರಾಗಿ ಆ ಮೂಲಕ ಪಕ್ಕಲಡ್ಕ ಯುವಕ ಮಂಡಲದಲ್ಲಿ ಸಕ್ರೀಯ ಸದಸ್ಯರಾಗಿದ್ದರು. ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರವಾದ ಈ ಯುವಕ ಮಂಡಲದಲ್ಲಿ ತನ್ನಲ್ಲಿರುವ ಪ್ರತಿಭೆಯನ್ನು ಬೆಳೆಸಲು ಸಂಪೂರ್ಣವಾಗಿ ತೊಡಗಿಸಿಕೊಂಡ ರಾಘವರವರು ವಾರ್ಷಿಕೋತ್ಸವದ […]

Continue Reading

ಹಲವು ಪ್ರಕರಣಗಳಲ್ಲಿ ಭಾಗಿಯಾಗಿ, ವಿಚಾರಣೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ಸೆರೆಹಿಡಿದ ಸುರತ್ಕಲ್ ಪೊಲೀಸರು

ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆ ಸಮಯ ಹಾಜರಾಗದೇ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ಸುರತ್ಕಲ್ ಪೊಲೀಸರು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ಮಂಗಳೂರು ನಗರ, ಉಡುಪಿ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ, ಧಾರವಾಡ ಹಾಗೂ ವಿವಿಧ ಕಡೆಗಳಲ್ಲಿ ಕೊಲೆ ಯತ್ನ, ಕಳವು, ಹಲ್ಲೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ವಿಚಾರಣೆ ಸಮಯ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿ ರಾಜೇಶ್ ನಾಯ್ಕ್ @ ರಾಜ್ @ ರಾಜು ಪಮಾಡಿ, ಉಡುಪಿ. ಹಾಲಿ ವಾಸ: ಟೋಲ್ ನಾಕ, […]

Continue Reading

ಅಮಿತ್ ಶಾ ದೋಸ್ತ್ ಡಿಕೆಶಿ ಬಿಜೆಪಿ ಸೇರ್ತರಾ..? ರಾಜ್ಯ ರಾಜಕಾರಣದಲ್ಲಿ ಬಿಗ್ ಸಂಚಲನ.!

ಎಸ್ ಎಂ ಕೃಷ್ಣ ಹಾದಿಯತ್ತ ಅವರ ಪಟ್ಟಾ ಶಿಷ್ಯ.! ರಾಜ್ಯ ರಾಜಕಾರಣದ ಪಡಸಾಲೆಯಲ್ಲಿ ಸ್ಪೋಟಕ ಸುದ್ದಿಯೊಂದು ಹೊರಬರುತ್ತಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಿಜೆಪಿ ಸೇರ್ತಾರೆ ಅನ್ನುವ ಸೆನ್ಸೇಷನಲ್ ಸುದ್ದಿ ಅದು. ಈ ಸುದ್ದಿ ಇಂದು ನಿನ್ನೆ ಹುಟ್ಟಿದ್ದಲ್ಲ. ಹಲವು ಸಮಯದಿಂದಲೂ ಇಂತಹದ್ದೊಂದು ಸುದ್ದಿ ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿದೆ. ಆದರೆ ಈ ಬಾರಿಯಂತೂ ಪಕ್ಕಾ ಅನ್ನುವಷ್ಟರ ಮಟ್ಟಿಗೆ ಸುದ್ದಿ ರಿವೀಲ್ ಆಗುತ್ತಿದೆ. ಕಾಂಗ್ರೆಸ್ ಗೆ ಗುಡ್ ಬೈ ಹೇಳಲು ಡಿಕೆಶಿ ಮಾನಸಿಕವಾಗಿ ತಯಾರಿ ನಡೆಸುತ್ತಿದ್ದಾರೆ ಅನ್ನುವ ವರದಿಗಳು ಕೇಳಿ […]

Continue Reading

ವ್ಯವಹಾರದ ನೆಪದಲ್ಲಿ ಮಲ್ಲೂರಿನ ಮನೆಗೆ ಕರೆಯಿಸಿ ಕೂಡಿಹಾಕಿ ಗಂಭೀರ ಥಳಿತ; ಲಕ್ಷಾಂತರ ರೂಪಾಯಿ ಸುಲಿಗೆ: ಪ್ರಕರಣ ದಾಖಲು

ಬಿಟ್ ಕಾಯಿನ್ ದಂಧೆಯ ವಾಸನೆ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಲ್ಲೂರಿನ ಮನೆಯೊಂದಕ್ಕೆ ಕೇರಳ ಮೂಲದ ನಾಲ್ವರನ್ನು ಕರೆಯಿಸಿ ಕೂಡಿಹಾಕಿ ತಂಡವೊಂದು ಗಂಭೀರ ಹಲ್ಲೆ ನಡೆಸಿ ಲಕ್ಷಾಂತರ ರೂಪಾಯಿ ದೋಚಿದ ಪ್ರಕರಣ ಬೆಳಕಿಗೆ ಬಂದಿದ್ದು, ಸುಮಾರು ಹತ್ತರಷ್ಟು ಮಂದಿಯ ವಿರುದ್ಧ ದೂರು ದಾಖಲಾಗಿದೆ. ಕೋಝಿಕ್ಕೋಡ್ ನಿವಾಸಿ ಅಬ್ದುಲ್ ಮನಾಫ್ ಹಾಗೂ ಅವರ ಸ್ನೇಹಿತರಾದ ಅರ್ಶಕ್ ಅಹಮ್ಮದ್, ಯಾಸರ್ ಅರಾಫತ್, ಮುಹಮ್ಮದ್ ಸಾಹಿರ್ ದುಬೈನಲ್ಲಿ ವ್ಯವಹಾರ ಮಾಡಿಕೊಂಡಿದ್ದು, ಇತ್ತೀಚೆಗೆ ಊರಿಗೆ ಬಂದು ನೆಲೆಸಿದ್ದರು. ಮಂಗಳೂರಿನ ಸರ್ಫಾರಾಝ್ ಎಂಬಾತನೊಂದಿಗೆ ಕೇರಳದ […]

Continue Reading

ಪುತ್ತೂರಿನ ಬೊಳ್ವಾರಿನಲ್ಲಿ ದುಷ್ಕೃತ್ಯ, ಆರೋಪಿ ಬಂಧನ; ಹಾಡಹಗಲೇ ತಲವಾರು ಝಳಪಿಸಿ ಸಾರ್ವಜನಿಕರಿಗೆ ಬೆದರಿಕೆ.

ಪುತ್ತೂರು ಕಸ್ಬಾ ಗ್ರಾಮದ, ಬೊಳುವಾರು ಎಂಬಲ್ಲಿ, ವ್ಯಕ್ತಿಯೋರ್ವ ತನ್ನ ಕೈಯಲ್ಲಿ ತಲವಾರನ್ನು ಹಿಡಿದುಕೊಂಡು ಸಾರ್ವಜನಿಕರಿಗೆ ತೋರಿಸುತ್ತಾ ಬೆದರಿಕೆ ಒಡ್ಡಿದ್ದಾನೆ. ತಕ್ಷಣವೇ ಸಾರ್ವಜನಿಕರು ಆತನನ್ನು ಹಿಡಿದು ಪುತ್ತೂರು ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಸಾರ್ವಜನಿಕರ ಸಹಕಾರದಿಂದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಮೂಲತಃ ಹಾಸನ ಮೂಲದವನಾಗಿದ್ದು ಪ್ರಸ್ತುತ ಬಂಟ್ವಾಳ ನಿವಾಸಿಯಾಗಿರುವ ರಾಜು (45) ಬಂಧಿತ ಆರೋಪಿ. ಆರೋಪಿಯನ್ನು ವಶಕ್ಕೆ ಪಡೆದ ನಗರ ಠಾಣಾ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ಬಗ್ಗೆ ಪುತ್ತೂರು ನಗರ ಪೊಲೀಸ್ […]

Continue Reading