ಹರಿಶ್ಚಂದ್ರ ಸಾಲ್ಯಾನ್ ಅವರ ನುಡಿಮುತ್ತು ಕೃತಿ ಬಿಡುಗಡೆ : ಉತ್ತಮ ಕೃತಿಗಳಿಂದ ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ : ಡಾ.ತಲ್ಲೂರು

ಉಡುಪಿ : ಕೃತಿಗಳು ಲೇಖಕನ ಮನದಾಳದ, ಜೀವಾನಾನುಭವದ ಮಾತುಗಳಾಗಿರುತ್ತವೆ. ಆದ್ದರಿಂದ ಉತ್ತಮ ಕೃತಿಗಳಿಂದ ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಮೂಲ್ಕಿಯ ಪುನರೂರು ಟೂರಿಸ್ಟ್ ಹೋಂ ಸಭಾಂಗಣದಲ್ಲಿ ಬುಧವಾರ ನಡೆದ ಲೇಖಕ ಹರಿಶ್ವಂದ್ರ ಪಿ. ಸಾಲಿಯಾನ್ ಮೂಲ್ಕಿ ಅವರ ‘ನುಡಿ ಮುತ್ತು’ ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದು ಪುಸ್ತಕ ಓದುವವರ ಸಂಖ್ಯೆ ವಿರಳವಾಗಿದೆ ನಿಜ, ಆದರೆ ಉತ್ತಮ ಕೃತಿಗಳನ್ನು ಓದುವವರು […]

Continue Reading

ಮಂಗಳೂರು: ಲೋಕಾಯುಕ್ತ ಬೇಟೆ; ಸಿಂಗಲ್ ಸೈಟ್, ಪ್ರಾಪರ್ಟಿ ಕಾರ್ಡಿಗೆ ಲಂಚ; ಸರ್ವೆಯರ್ ನಂದೀಶ್, ದಲ್ಲಾಳಿ ದಿವಾಕರ್ ಅಂದರ್

ಜಮೀನಿನ ಸಿಂಗಲ್ ಸೈಟ್ ನಕ್ಷೆ ಹಾಗೂ ಪ್ರಾಪರ್ಟಿ ಕಾರ್ಡ್ ಮಾಡಿಸುವುದಕ್ಕಾಗಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ನಡೆಸಿದ ದಾಳಿಯ ವೇಳೆ ಸರ್ವೆಯರ್ ಮತ್ತು ದಲ್ಲಾಳಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ತನ್ನ ತಾಯಿಯ ಹೆಸರಿನಲ್ಲಿರುವ ಕಂಕನಾಡಿ ಮತ್ತು ಬಜಾಲ್ ಗ್ರಾಮದ ಜಮೀನಿನ ಸಿಂಗಲ್ ಸೈಟ್ ನಕ್ಷೆ ಹಾಗೂ ಪ್ರಾಪರ್ಟಿ ಕಾರ್ಡ್ ಮಾಡಿಸಲು 2025ರ ಫೆಬ್ರವರಿಯಲ್ಲಿ ಮಂಗಳೂರು ಯು.ಪಿ.ಒ.ಆರ್ ಕಚೇರಿಗೆ ಅರ್ಜಿ ಸಲ್ಲಿಸಲಾಗಿತ್ತು. ಬಳಿಕ ಸರ್ವೆಯರ್ ನಂದೀಶ್ 2025ರ ಎಪ್ರಿಲ್‌ನಲ್ಲಿ ಸರ್ವೆ ನಡೆಸಿ ಲಂಚಕ್ಕೆ ಬೇಡಿಕೆ ಸಲ್ಲಿಸಿದ್ದರು. 6,500 ರೂ.ವನ್ನು […]

Continue Reading

”ಜನಪರ’ ಖ್ಯಾತಿಯ ದರ್ಶನ್ ಎಚ್.ವಿ, ದ.ಕ ಜಿಲ್ಲಾಧಿಕಾರಿ

ಖಡಕ್ ಐಪಿಎಸ್ ಇದ್ದರೆ ಸಾಕಾ..ದಕ್ಷ ಐಎಎಸ್ ಬೇಡವೇ ಎಂಬ ಬಗ್ಗೆ ಮೊದಲ ಬಾರಿ ವರದಿ ಮಾಡಿದ್ದೆ ಸ್ಪೆಷಲ್ ನ್ಯೂಸ್ ಮಂಗಳೂರಿನಲ್ಲಿ ನಡೆಯುತ್ತಿದ್ದ ನಿರಂತರ ಕೋಮು ಹಿಂಸೆ, ದ್ವೇಷ ಭಾಷಣ ಮಟ್ಟ ಹಾಕಲು ರಾಜ್ಯ ಸರಕಾರ ಪೊಲೀಸ್ ಇಲಾಖೆಯಲ್ಲಿ ಖಡಕ್ ಆಫೀಸರ್ಸ್ ಗಳನ್ನು ತಂದು ಫೀಲ್ಡಿಗೆ ಇಳಿಸಿತ್ತು. ಆದರೆ ಜಿಲ್ಲಾಧಿಕಾರಿಗಳನ್ನು ಬದಲಾವಣೆ ಮಾಡದೆ ಹಾಗೆಯೇ ಉಳಿಸಿತ್ತು. ಸ್ಪೆಷಲ್ ನ್ಯೂಸ್ ವೆಬ್ ಮೀಡಿಯಾ ಈ ಬಗ್ಗೆ ಜೂನ್ 9 ರಂದು ಸಮಗ್ರ ವರದಿಯನ್ನು ಪ್ರಕಟಿಸಿತ್ತು. ಬಹುಶಃ ಜಿಲ್ಲೆಯಲ್ಲಿ ದಕ್ಷ ಐಎಎಸ್ […]

Continue Reading

ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಗರ್ಭಿಣಿ ಮೃತಪಟ್ಟ ಪ್ರಕರಣ: ವೈದ್ಯಕೀಯ ನಿರ್ಲಕ್ಷ ಮತ್ತು ಸೇವಾ ನ್ಯೂನ್ಯತೆ, ಹತ್ತು ಲಕ್ಷ ರೂ. ಪರಿಹಾರಕ್ಕೆ ಆದೇಶ: ದ ಕ ಜಿಲ್ಲಾ ಗ್ರಾಹಕರ ನ್ಯಾಯಾಲಯ

ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯ ನಂತರ ಗರ್ಭಿಣಿ ಮೃತಪಟ್ಟ ಪ್ರಕರಣದಲ್ಲಿ ದ ಕ ಜಿಲ್ಲಾ ಗ್ರಾಹಕರ ನ್ಯಾಯಾಲಯ, ವೈದ್ಯರಿಂದ ಮತ್ತು ಆಸ್ಪತ್ರೆಯಿಂದ ವೈದ್ಯಕೀಯ ನಿರ್ಲಕ್ಷ ಮತ್ತು ಸೇವಾ ನ್ಯೂನ್ಯತೆ ಸಂಭವಿಸಿದೆ ಎಂದು ತೀರ್ಪು ನೀಡಿ, ದೂರುದಾರ (ಮೃತಳ ಗಂಡ) ರವರಿಗೆ ವೈದ್ಯರು ಮತ್ತು ಆಸ್ಪತ್ರೆ 10 ಲಕ್ಷ ಪರಿಹಾರ ನೀಡಬೇಕೆಂದು ಆದೇಶಿಸಿದೆ. ವ್ಯಾಜ್ಯ ವೆಚ್ಚವಾಗಿ ರೂ.30 ಸಾವಿರ ನೀಡುವಂತೆ ಆದೇಶ ನೀಡಿದೆ. ಅದೇ ರೀತಿ 10 ಲಕ್ಷದ ಮೊತ್ತದ ಜೊತೆಗೆ 6 ಶೇಕಡಾ ಬಡ್ಡಿಯನ್ನು ಪ್ರಕರಣ ದಾಖಲಾತಿ […]

Continue Reading

ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ಕರುನಾಡ ಸೇವಾ ಕಣ್ಮಣಿ ರಾಜ್ಯ ಪ್ರಶಸ್ತಿ’

ಉಡುಪಿ : ಬೆಂಗಳೂರಿನ ವಂದೇ ಮಾತರಂ ಲಲಿತ ಕಲಾ ಅಕಾಡೆಮಿ ವತಿಯಿಂದ ‘ರಂಗ ದಿಬ್ಬಣ- 2025′ ಕಾರ್ಯಕ್ರಮದಡಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದ ನಯನ ಸಭಾಂಗಣದಲ್ಲಿ ಸೋಮವಾರ ನಡೆದ ನಾಡು, ನುಡಿ, ನೆಲ, ಜಲ, ಕಲೆ ಭಾಷೆ, ಸಂಸ್ಕೃತಿ ಹಾಗೂ ಸಮಾಜ ಸೇವೆ ಮಾಡಿದ ನಾಡಿನ ಸಾಧಕರಿಗೆ ನೀಡುವಕರುನಾಡ ಸೇವಾ ಕಣ್ಮಣಿ ರಾಜ್ಯ ಪ್ರಶಸ್ತಿ’ ಯನ್ನು ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾಜಿ ಲೋಕಾಯುಕ್ತ ಜಸ್ಟಿಸ್ […]

Continue Reading

ಸವಣಾಲು ಕೂಡುಜಾಲು ಸಮೀಪದ ನದಿಯಲ್ಲಿ ಯುವಕರಿಬ್ಬರು ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿ, ಸಿನಿಮೀಯ ರೀತಿಯಲ್ಲಿ ಬದುಕಿ ಉಳಿದ ಘಟನೆ ನಡೆದಿದೆ

ಸವಣಾಲು ಗ್ರಾಮದ ಮಂಜದಬೆಟ್ಟುವಿನಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಿತ್ತಿಲಪೇಲ ಪ್ರದೇಶವನ್ನು ಸಂಪರ್ಕಿಸುವ ಕೂಡುಜಾಲು ಎಂಬಲ್ಲಿ ಹರಿಯುತ್ತಿರುವ ಹಿತ್ತಿಲಪೇಲ ಪ್ರದೇಶದ ಕೆಳಗಿನ ಪೇಲ ಎಂಬಲ್ಲಿನ ನಿವಾಸಿ ಕರಿಯ ಮಲೆಕುಡಿಯ ಎಂಬವರ ಮಗ ಸತೀಶ್ ಮತ್ತು ಸಹ ಸವಾರ ಸುಳ್ಯೋಡಿ ನಿವಾಸಿ ಸಂಜೀವ ಪೂಜಾರಿ ಎಂಬವರು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಈ ನದಿಯನ್ನು ಬೈಕ್ ಸಮೇತ ದಾಟುವ ಸಂದರ್ಭದಲ್ಲಿ ನದಿ ನೀರಿನಲ್ಲಿ ಕೊಚ್ಚಿ ಹೋಗಿರುತ್ತಾರೆ. ಅದೃಷ್ಟವಶಾತ್ ಬೈಕ್ ನದಿ ಬದಿಯಲ್ಲಿ ಸಿಲುಕಿದ್ದು , ಯುವಕರಿಬ್ಬರು ಯಾವುದೋ ಬಳ್ಳಿಯ ಸಹಾಯದಿಂದ […]

Continue Reading

ಶಿಥಿಲಾವಸ್ಥೆಯಲ್ಲಿರುವ ಮೂರು ದಶಕಗಳ ನೀರಿನ ಟ್ಯಾಂಕ್. ಕುಸಿದು ಬೀಳುವ ಭೀತಿಯಲ್ಲಿ ಬಡ ಕುಟುಂಬಗಳು. ಸಾಲೆತ್ತೂರು ಗ್ರಾಮ ಪಂಚಾಯತ್ ನಿರ್ಲಕ್ಷ್ಯ.

ಮೂವತ್ತು ವರ್ಷ ಹಿಂದಿನ ಶಿಥಿಲಾವಸ್ಥೆಯಲ್ಲಿರುವ ನೀರಿನ ಟ್ಯಾಂಕ್ ಕುಸಿಯುವ ಹಂತದಲ್ಲಿದ್ದರೂ ಸಾಲೆತ್ತೂರು ಗ್ರಾಮ ಪಂ.ಪಿ.ಡಿ.ಒ.ಎಚ್ಚೆತ್ತುಕೊಳ್ಳದ ಕಾರಣ ಜನ ಭೀತಿಯಲ್ಲಿ ಬದುಕುವಂತಾಗಿದೆ.ಇಲ್ಲಿನ ಪಾಲ್ತಾಜೆ ಹೊಸ ಕಾಲೋನಿಯಲ್ಲಿ ಮೂವತ್ತು ವರ್ಷಗಳ ಹಿಂದೆ ವಿಶ್ವಬ್ಯಾಂಕ್ ಯೋಜನೆಯಲ್ಲಿ ನಿರ್ಮಾಣವಾಗಿದ್ದ ಕುಡಿಯುವ ನೀರಿನ ಟ್ಯಾಂಕ್ ಇದೀಗ ಕುಸಿಯುವ ಹಂತದಲ್ಲಿದೆ. ಸುಮಾರು ನಲುವತ್ತು ಅಡಿ ಎತ್ತರದಲ್ಲಿರುವ ಟ್ಯಾಂಕಿನ ಆಧಾರ ಸ್ತಂಭಗಳು ಶಿಥಿಲಗೊಂಡು ಒಳಭಾಗದ ಕಬ್ಬಿಣದ ಸರಳುಗಳು ತುಕ್ಕು ಹಿಡಿದು ಅಸ್ತಿಪಂಜರದಂತೆ ಕಂಡುಬರುತ್ತಿವೆ. ಮೇಲ್ಭಾಗದಲ್ಲಿ ನೀರು ಸೋರುತ್ತಿದೆ. ಟ್ಯಾಂಕಿಗೆ ಹತ್ತುವ ಕಾಂಕ್ರೀಟ್ ಕಂಬದ ಮೆಟ್ಟಿಲುಗಳು ಯಾವುದೇ ಕ್ಷಣ […]

Continue Reading

ಮಸೀದಿಯ ಅಂಗಳಕ್ಕೆ ಬಂದು ಹಿಂದೂ ಬಾಂಧವರಿಂದ ರಕ್ತದಾನ. ಮಳಲಿ ಮಸೀದಿ, SKSSF ಯೂನಿಟ್ ‘ಸೌಹಾರ್ದ ರಕ್ತದಾನ ಶಿಬಿರ’ ದ ಝಲಕ್.!

ಐಕ್ಯತೆ ಒಡೆದು ದ್ವೇಷ ಹರಡಲು ಮುಂದಾಗಿದ್ದ ಸ್ವಯಂಘೋಷಿತ ಕೋಮುವಾದಿ ನಾಯಕರಿಗೆ ಮುಖಭಂಗ.! ಅದು ಮಂಗಳೂರು ತಾಲೂಕಿನ ಗಂಜಿಮಠ ಬಳಿಯ ಮಳಲಿ ಅನ್ನುವ ಪ್ರದೇಶ. ಯಾವುದೇ ಕೋಮು ಸೋಂಕು ಹರಡದೆ ಹಿಂದೂ -ಮುಸ್ಲಿಮರು ಪರಸ್ಪರ ಸೌಹಾರ್ದತೆಯಿಂದ ಇದ್ದ ಊರದು. ಇಲ್ಲಿನ ಸೌಹಾರ್ದತೆಗೆ ಯಾರದ್ದೋ ಕಣ್ಣು ಕುಕ್ಕಿತ್ತೋ ಗೊತ್ತಿಲ್ಲ. ಪರಸ್ಪರ ಸೌಹಾರ್ದತೆಯಿಂದಿದ್ದ ಊರಿನಲ್ಲಿ ದ್ವೇಷದ ಬೆಳೆ ಬಿತ್ತಲು ಕೆಲವರು ಹವಣಿಸಿದರು. ಶತಮಾನಗಳಷ್ಟು ಇತಿಹಾಸವಿರುವ ಪುರಾತನ ಮಸೀದಿ ಹಿಂದೂಗಳ ದೇವಾಲಯವಾಗಿತ್ತು ಅನ್ನುವ ಪುಕಾರು ಹಬ್ಬಿಸಿ ಸೌಹಾರ್ದದ ಊರಿನಲ್ಲಿ ಅಶಾಂತಿಯ ಕಿಡಿ ಹಬ್ಬಿಸಿದರು. […]

Continue Reading

ಟೀಸರ್ ನಲ್ಲೇ ಕ್ರಿಕೆಟ್ ಪ್ರೇಮಿಗಳನ್ನು ತನ್ನತ್ತ ಸೆಳೆದ ಗಜಾನನ ಕ್ರಿಕೆಟರ್ಸ್

ಭಾರತದಲ್ಲಿ ಕ್ರಿಕೆಟ್ ಅಂದರೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಕರಾವಳಿಯಲ್ಲಿ ಅಂಡರ್ ಆರ್ಮ್ ಕ್ರಿಕೆಟ್ ಎಂದರೆ ಒಂದು ಆರಾಧನೆಯಾಗಿದೆ. ಅದೇ ಅಂಡರ್ ಆರ್ಮ್ ಕ್ರಿಕೆಟ್ ನ ಕಥೆ ತುಳು ಸಿನಿಮಾದಲ್ಲಿ ಬರುತ್ತಿದೆ ಎಂದರೆ ಅಭಿಮಾನಿಗಳಿಗೆ ಒಂದು ಹಬ್ಬ. ಹೌದು ಭಾರತದಲ್ಲಿ ಪ್ರಪ್ರಥಮ ಬಾರಿಗೆ ಅಂಡರ್ ಆರ್ಮ್ ಕ್ರಿಕೆಟ್ ಕಥೆಯನ್ನು ಗಜಾನನ ಕ್ರಿಕೆಟರ್ಸ್ ಸಿನಿಮಾದ ಮೂಲಕ ತೆರೆದಿಡಲಾಗಿದೆ. ಈ ಚಿತ್ರದ ಮೊದಲ ನೋಟ ಬಿಡುಗಡೆಯಾಗಿದ್ದು ಚಿತ್ರ ಪ್ರೇಮಿಗಳೆಲ್ಲ ಹುಬ್ಬೇರಿಸಿ ನೋಡುತ್ತಿದ್ದಾರೆ. ಈ ಚಿತ್ರದ ತಾರಾಗಣದಲ್ಲಿ ವಿನೀತ್ ಕುಮಾರ್, ಅನ್ವಿತಾ ಸಾಗರ್, […]

Continue Reading

ಚೆಕ್ ಅಮಾನ್ಯ ಪ್ರಕರಣ: ಸಾಮಾಜಿಕ ಕಾರ್ಯಕರ್ತ ಹಕೀಂ ಕೂರ್ನಡ್ಕ ಖುಲಾಸೆ

2021 ಜನವರಿ ತಿಂಗಳಲ್ಲಿ ಯುವತಿಯೊಬ್ಬಳು ಮಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಲಿವರ್ ನ ಸಮಸ್ಯೆಯಿಂದಾಗಿ ಒಳ ರೋಗಿಯಾಗಿ ದಾಖಲಾಗಿ ಸುಮಾರು ಹತ್ತು ದಿನದ ನಂತರ ಚಿಕಿತ್ಸೆ ಫಲಕಾರಿಯಾಗದೆ ಆ ಯುವತಿಯು ಮರಣ ಹೊಂದಿದ್ದು, ಯುವತಿಯ ಚಿಕಿತ್ಸೆಗೆ ತಗಲಿರುವ ವೆಚ್ಚ ಸರಿ ಸುಮಾರು 1,25,000 ರೂಪಾಯಿ ಸದ್ರಿ ಚಿಕಿತ್ಸಾ ವೆಚ್ಚವನ್ನು ನಾನು ಪಾವತಿಸುತ್ತೇನೆ ಎಂದು ಹಕೀಂ ಕೂರ್ನಡ್ಕ ಮೃತ ಯುವತಿಯ ಕುಟುಂಬದ ಪರವಾಗಿ ಖಾಸಗಿ ಆಸ್ಪತ್ರೆಗೆ ತನ್ನ ಚೆಕ್ಕನ್ನು ನೀಡಿರುತ್ತಾರೆ ಎಂದು ಆರೋಪಿಸಿ ಮಾನ್ಯ 9ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ಆಸ್ಪತ್ರೆಯವರು ಹಕೀಂ ಕೂರ್ನಡ್ಕ […]

Continue Reading