ಮೂಡಬಿದ್ರೆ: ಇನ್ಸ್ ಪೆಕ್ಟರ್ ಸಂದೇಶ್ ಸಂಚಿಗೆ ಬಲಿಯಾದ್ರ.? ದುಷ್ಟ ಕೂಟಗಳು ಹೆಣೆಯಿತಾ ಖೆಡ್ಡಾ.!

ಕೋಮು ದ್ವೇಷಿಗಳ, ಮತೀಯವಾದಿ ಗೂಂಡಾಗಳ ನಟ್ಟು ಬೋಲ್ಟ್ ಟೈಟ್ ಮಾಡಿದ ಅಧಿಕಾರಿಗೆ ತೋಡಿದರಾ… ಖೆಡ್ಡಾ.! ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಡಕ್, ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲ ಅನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಅದು ಪೊಲೀಸ್ ಅಧಿಕಾರಿ ಆಗಿರಲಿ, ಸರಕಾರಿ ಅಧಿಕಾರಿ ಆಗಿರಲಿ ಇಲ್ಲಿ ಪ್ರಾಮಾಣಿಕ ಸೇವೆ ಮಾಡುವವರನ್ನು ಹೇಗಾದರೂ ಸಿಲುಕಿಸಿ ಮಜಾ ಕಾಣುವ ದುಷ್ಠ ಕೂಟ ಸಕ್ರೀಯವಾಗಿದೆ. ಆದರೆ ಅಡ್ಜೆಸ್ಟ್ ಮೆಂಟ್ ಅಧಿಕಾರಿಗಳಿಗೆ ಮಾತ್ರ ಇಲ್ಲಿ ಬೆಲೆ, ನೆಲೆ ಎಲ್ಲಾ ಇರುವುದು. ಒಬ್ಬ ಮಹಿಳೆ ಜೊತೆಗೆ […]

Continue Reading

ಬಂಟ್ವಾಳದಲ್ಲಿ ಕಲ್ಲಡ್ಕ ಭಟ್ರು ವರ್ಸಸ್ ನಾಯಕ್; ಯಾರ ಕೈ ಮೇಲಾಗಲಿದೆ..?

ಅಭ್ಯರ್ಥಿತನಕ್ಕೆ ಟವೆಲ್ ಹಾಕಿ ಕೂತವರು ಯಾರು ಗೊತ್ತೇ..? ಬಂಟ್ವಾಳದ ಬಿಜೆಪಿ ಚಿತ್ತ ಎತ್ತ.! ಶಿಸ್ತಿನ ಪಕ್ಷ ಎಂದು ಸ್ವಯಂಗೊಶಿಸಿಕೊಂಡಿರುವ ಬಿಜೆಪಿಯಲ್ಲಿ ಅಶಿಸ್ತು ಮೇಳೈಸುತ್ತಿದೆ. ಹಾಲಿ ಶಾಸಕರು ಇರುವಾಗಲೇ ಬಿಜೆಪಿಯಲ್ಲಿ ಮುಂದಿನ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಾ ತಿರುಗಾಡುವವರ ಸಂಖ್ಯೆ ಬೆಳೆಯುತ್ತಿದೆ. ಸಂಘ ಕಲಿಸಿದ ಶಿಸ್ತು ಮರೆಯಾಗಿ ಅಧಿಕಾರವೇ ಮುಖ್ಯವಾಯಿತಲ್ಲ ಅನ್ನುವ ಮಾತುಗಳು ಬಿಜೆಪಿಯ ನಿಷ್ಠಾವಂತರೊಳಗಡೆ ಕೇಳಿ ಬರುತ್ತಿದೆ. ಬಂಟ್ವಾಳ ಬಿಜೆಪಿ ಪಡಸಾಲೆಯಲ್ಲಿ ಮುಂದಿನ ಅಸೆಂಬ್ಲಿ ಚುನಾವಣೆ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಶಾಸಕ ರಾಜೇಶ್ ನಾಯಕರು ಈ ರಾಜಕಾರಣದ […]

Continue Reading

100 ಶೇಕಡಾ ಮತದಾನವಾದರೂ ಅಭಿವೃದ್ಧಿ ಹೊಂದದ ಬಾಂಜಾರು ಮಲೆ..! ಮಾತು ತಪ್ಪಿದ ಅಧಿಕಾರಿಗಳು..!!

ದ.ಕ ಜಿಲ್ಲೆಯ ಹೆಬ್ಬಾಗಿಲು ಎಂದೇ ಕರೆಯಲಾಗುವ ಬಾಂಜಾರು ಮಲೆಕುಡಿಯ ಕಾಲೋನಿ ಇನ್ನೂ ಅಭಿವೃದ್ಧಿ ವಂಚಿತಗೊಂಡಿದೆ. ಆದರೂ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಲು ಇಲ್ಲಿ ಚುನಾವಣೆಯಲ್ಲಿ 100% ಮತದಾನ ಗ್ಯಾರಂಟಿ. ಇಲ್ಲಿ ಇಲ್ಲಗಳೇ ಸಾಮ್ರಾಜ್ಯವಾಗಿ ಬೆಳೆಯುತ್ತಿದೆ ಇದು ಮಾತ್ರ ವ್ಯವಸ್ಥೆಯ ದುರಂತ. ಬೆಳ್ತಂಗಡಿ ತಾಲೂಕು ಕೇಂದ್ರದಿಂದ ಸುಮಾರು 45 ಕಿಮೀ ದೂರದಲ್ಲಿರುವ, ದ.ಕ ಮತ್ತು ಚಿಕ್ಕಮಗಳೂರು ಜಿಲ್ಲೆಯ ಗಡಿಭಾಗದ ದಟ್ಟ ಅರಣ್ಯದ ನಡುವೆ ಕಂಗೊಳಿಸುವ ಪ್ರಕೃತಿ ಸೌಂದರ್ಯದ ನಡುವೆ ಬಾಂಜಾರು ಮಲೆಕುಡಿಯ ಕಾಲೋನಿ ಇದೆ. ಇಲ್ಲಿ ಜಿಲ್ಲಾಧಿಕಾರಿಗಳ ಗೌರವದ ದ್ಯೋತಕವಾಗಿ […]

Continue Reading

ಬಂಟ್ವಾಳ ರಾಜಕೀಯದಲ್ಲಿ ಬದಲಾವಣೆಯ ಕೂಗು: ಮಾಜಿ ಸಚಿವರ ವಿರುದ್ಧ ಸ್ವಜಾತಿಯಲ್ಲೇ ಅಸಮಾಧಾನ

ಬಂಟ್ವಾಳ ಕ್ಷೇತ್ರದ ರಾಜಕೀಯದಲ್ಲಿ ಬದಲಾವಣೆಯ ಮಾತುಗಳು ಜೋರಾಗುತ್ತಿವೆ. ಹಲವು ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯವಾಗಿರುವ ಮಾಜಿ ಸಚಿವರನ್ನು ಈಗ ಅವರದೇ ಸಮುದಾಯದ ಕೆಲ ನಾಯಕರು ಹಾಗೂ ಕಾರ್ಯಕರ್ತರು ಒಪ್ಪಿಕೊಳ್ಳಲು ಇಷ್ಟಪಡುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇತರ ಸಮುದಾಯದ ಮತದಾರರನ್ನು ಮನವೊಲಿಸಿ ರಾಜಕೀಯವಾಗಿ ಮುನ್ನಡೆದಿದ್ದರೂ, ತಮ್ಮ ಸಮುದಾಯದ ನಾಯಕರಿಗೆ ಅವಕಾಶ ನೀಡಿಲ್ಲ ಎಂಬ ಅಸಮಾಧಾನ ಒಳಗೊಳಗೆ ಮೂಡಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂಬ ಒತ್ತಾಯವೂ ಹೆಚ್ಚಾಗಿದೆ. ಬಿಲ್ಲವ […]

Continue Reading

ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಾಧ್ಯವಾಗದಿದ್ದರೆ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿ “ರಾಜೀನಾಮೆ ನೀಡಿ ಅಥವಾ ವರ್ಗಾವಣೆ ಕೋರಿ: ಅಲಹಾಬಾದ್ ಹೈಕೋರ್ಟ್

ನವದೆಹಲಿ: ಸಂಭಾಲ್‌ನಲ್ಲಿರುವ ಮಸೀದಿಯಲ್ಲಿ ನಮಾಜ್ ಮಾಡುವ ಜನರ ಸಂಖ್ಯೆಯನ್ನು ನಿರ್ಬಂಧಿಸುವ ಉತ್ತರ ಪ್ರದೇಶ ಆಡಳಿತದ ನಿರ್ಧಾರವನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸಾಧ್ಯವಾಗದಿದ್ದರೆ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿ “ರಾಜೀನಾಮೆ ನೀಡಿ ಅಥವಾ ವರ್ಗಾವಣೆಯನ್ನು ಕೋರಬೇಕು” ಎಂದು ಕೇಳಿದೆ. ನ್ಯಾಯಮೂರ್ತಿಗಳಾದ ಅತುಲ್ ಶ್ರೀಧರನ್ ಮತ್ತು ಸಿದ್ಧಾರ್ಥ್ ನಂದನ್ ಅವರ ಪೀಠವು ಮುನಜೀರ್ ಖಾನ್ ಅವರ ಅರ್ಜಿಯನ್ನು ವಿಚಾರಣೆ ನಡೆಸುತ್ತಿತ್ತು, ಅವರು ಮಸೀದಿ ಇರುವ ಗಟಾ ಸಂಖ್ಯೆ 291 ರಂದು ರಂಜಾನ್ ಸಮಯದಲ್ಲಿ ಪ್ರಾರ್ಥನೆ […]

Continue Reading

ಬಂಟ್ವಾಳ ಪೊಲೀಸರ ಕಾರ್ಯಾಚರಣೆ: ಹತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯ ಬಂಧನ

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಅಕ್ರ: 90/2016ರ ಪ್ರಕರಣದಲ್ಲಿ ಸರಿ ಸುಮಾರು ಹತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಪ್ರಿನ್ಸ್ ಟಿ ಜೆ ಜೋಶ್, ಕುಟ್ಟಿಂಚಾಲ್ ಎರ್ನಾಕುಲಂ ಎಂಬಾತನನ್ನು ಬಂಟ್ವಾಳ ಪೊಲೀಸರು ದಿನಾಂಕ:13-03-2026 ರಂದು ಕೇರಳ ರಾಜ್ಯದ ಕುಟ್ಟಂಪುಝ ಎಂಬಲ್ಲಿ ದಸ್ತಗಿರಿ ಮಾಡಿ ಮಾನ್ಯ ACJ &JMFC ನ್ಯಾಯಾಲಯ ಬಂಟ್ವಾಳ ನ್ಯಾಯಾಧೀಶರ ಮುಂದೆ ಹಾಜರು‌ ಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಬಂಟ್ವಾಳ ASP ಯಶ್ ಕುಮಾರ್ ಶರ್ಮಾ IPS ರವರ ನಿರ್ದೇಶನದಂತೆ ಪೊಲೀಸ್ […]

Continue Reading

ಪುತ್ತೂರು: ಸರ್ಕಾರದ ಯೋಜನೆಯ ದುರುಪಯೋಗ ಪಡಿಸಿದ ಪ್ರಕರಣ; ಆರೋಪಿಗಳಿಗೆ ಶಿಕ್ಷೆ

ಪುತ್ತೂರು ತಾಲೂಕು ಆರ್ಯಾಪು ಗ್ರಾಮದಲ್ಲಿ, ಸರ್ಕಾರದ ಯೋಜನೆ ಅಡಿಯಲ್ಲಿ ಮನೆ ಮಂಜೂರಾತಿಗಾಗಿ ಕೊಡಲ್ಪಡುವ 1,50,000 ರೂ. ಹಣವನ್ನು ನಕಲಿ‌ ದಾಖಲೆಗಳನ್ನು ಸಲ್ಲಿಸುವ ಮೂಲಕ ಹಣ ಪಡೆದುಕೊಂಡ ಆರೋಪಿರುಗಳಾದ ಬಾಬು ಮೇರಾ, ಜ್ಯೋತಿ ಹಾಗೂ ತನಿಯ ಮೇರಾ ಎಂಬವರುಗಳ ವಿರುದ್ದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ, ಅ ಕ್ರ ಸಂಖ್ಯೆ: 57/2019 ರಂತೆ ಪ್ರಕರಣ ದಾಖಲಿಸಲಾಗಿತ್ತು. ಸದ್ರಿ ಪ್ರಕರಣವನ್ನು ಅ ಸಮಯದಲ್ಲಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಪ ನಿರೀಕ್ಷಕರುಗಳಾಗಿದ್ದ ಉದಯರವಿ ಮತ್ತು ಸಕ್ತಿವೇಲು ರವರು ತನಿಖೆ ನಡೆಸಿ, […]

Continue Reading

ಸುರತ್ಕಲ್ ಪೊಲೀಸರ ಕಾರ್ಯಾಚರಣೆ: ವಾಹನಗಳ ಬಿಡಿಭಾಗಗಳ ಕಳವು ಆರೋಪಿಯ ಬಂಧನ, ಸ್ವತ್ತು ವಶ

ಸುರತ್ಕಲ್: ರಾತ್ರಿ ಸಮಯದಲ್ಲಿ ಲಾರಿವೊಂದರಲ್ಲಿ ಬಂದ ಚಾಲಕನೊಬ್ಬ ಹೊಸಬೆಟ್ಟು ರಾಷ್ಟ್ರೀಯ ಹೆದ್ದಾರಿಯ ಬಳಿಯಲ್ಲಿರುವ ಫ್ರೆಂಡ್ಸ್ ಗ್ಯಾರೇಜ್ ನ ಬಳಿ ಲಾರಿಯನ್ನು ಪಾರ್ಕ್ ಮಾಡಿ ಗ್ಯಾರೇಜ್ ನಲ್ಲಿ ದುರಸ್ತಿಗಾಗಿ ನಿಲ್ಲಿಸಿದ್ದ ಎರಡು ಘನ ವಾಹನದ ಬಿಡಿಭಾಗಗಳನ್ನು ಕಳವು ಮಾಡಿಕೊಂಡು ಈ ಬಗ್ಗೆ ಗ್ಯಾರೇಜ್ ಮಾಲೀಕರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಕೈಗೆತ್ತಿಗೊಂಡ ಸುರತ್ಕಲ್ ಪೊಲೀಸರು, ಪ್ರಕರಣದಲ್ಲಿ ಭಾಗಿಯಾದ ಲಾರಿ ಚಾಲಕ ಮುಖೇಶ್ ದಾಸ್, ಶ್ರೀನಿವಾಸ ನಗರ, ಬನಶಂಕರಿ, ಬೆಂಗಳೂರು. ಖಾಯಂ ವಾಸ: ಜೋದ್ ಪುರ್, ರಾಜಸ್ಥಾನ […]

Continue Reading

ವಿಟ್ಲ: ಬಂಟ್ವಾಳ ನೇರಳಕಟ್ಟೆ ಮನೆಯೊಂದರಲ್ಲಿ MDMA ಪತ್ತೆ; ನಾಲ್ವರು ಆರೋಪಿಗಳ ಬಂಧನ. ಪ್ರಕರಣ ದಾಖಲು

ಬಂಟ್ವಾಳ ನೇರಳಕಟ್ಟೆ ಇಂದಿರಾ ನಗರ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿರುವ ಅಶ್ರಪ್ ಜಿ ಎಂಬಾತನು ತನ್ನ ಮನೆಯಲ್ಲಿ ಮಾದಕ ವಸ್ತು MDMA ಅನ್ನು ಸ್ವಾಧೀನದಲ್ಲಿಟ್ಟುಕೊಂಡು ಗಿರಾಕಿಗಳಿಗೆ ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ, ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಬಂಟ್ವಾಳ, ನೆಟ್ಲ ಮುಡ್ನೂರು ಗ್ರಾಮದ ಭಗವಂತ ಕೋಡಿ ಎಂಬಲ್ಲಿ, ಬಂಟ್ವಾಳ ನಿವಾಸಿ ಅಶ್ರಫ್‌ ಜಿ ಎಂಬಾತನು ವಾಸವಿದ್ದ ಮನೆಗೆ ತೆರಳಿದಾಗ, ಸದ್ರಿ ಆರೋಪಿಗಳಾದ ಹಫೀಝ್‌ ಯಾನೆ ಅಪ್ಪಿ, ಅಫ್ವಾನ್‌ ಮತ್ತು ಅಶ್ರಫ್‌ರವರೊಂದಿಗೆ […]

Continue Reading

ಕಾವೂರು ಪೊಲೀಸರ ಕಾರ್ಯಾಚರಣೆ: 24 ಗಂಟೆಯೊಳಗೆ ಮನೆ ಕಳ್ಳತನ ಮಾಡಿದ ಆರೋಪಿಯ ಬಂಧನ. ಕಳವು ಮಾಡಿದ ಎಲ್ಲಾ ಸ್ವತ್ತುಗಳ ವಶ

ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಸ್ ನಗರದಲ್ಲಿ ಮನೆಯೊಂದಕ್ಕೆ ದಿನಾಂಕ: 07-03-2026 ರಂದು ಮದ್ಯಾಹ್ನ 12-00 ಗಂಟೆ ಅವಧಿಯಲ್ಲಿ ಯಾರು ಇಲ್ಲದ ವೇಳೆ ಮನೆಯ ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿ, ಸರಿ ಸುಮಾರು ರೂ 4,80,000 ಸಾವಿರ ಮೌಲ್ಯದ 39 ಗ್ರಾಂ ಚಿನ್ನಾಭರಣ, 182 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ ಬಗ್ಗೆ ನೀಡಿದ ದೂರಿನಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು. ಮನೆ ಕಳ್ಳತನ ಪ್ರಕರಣದ ಪತ್ತೆಯ ಕುರಿತು ಕಾವೂರು ಪೊಲೀಸ್ […]

Continue Reading