ಮಂಗಳೂರು: ಕಳೆದ ಎಂಟು ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿ, ನ್ಯಾಯಾಲಯಕ್ಕೂ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ.

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಕಳವು ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ಸಂಬಂಧಿತ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಜಾರಿಯಾಗಿದ್ದ NBW (Non-Bailable Warrant) ಗಳನ್ನು ತಪ್ಪಿಸಿಕೊಂಡು 2018ರಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಅಬೂಬಕ್ಕರ್ ಸಿದ್ದೀಕ್ @ ಕಾಪ್ರಿ ಸಿದ್ದೀಕ್, ಉಪ್ಪಳ, ಕಾಸರಗೋಡು ನಿವಾಸಿಯಾಗಿದ್ದು, ಈತನ ವಿರುದ್ಧ ಮಂಗಳೂರು ನಗರದ ಉಳ್ಳಾಲ, ಕೊಣಾಜೆ ಹಾಗೂ ಕಂಕನಾಡಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 03 NBW ವಾರಂಟ್‌ಗಳು ಬಾಕಿ […]

Continue Reading

ನ್ಯಾಯಾಲಯಕ್ಕೆ ಹಾಜರಾಗದೆ, ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ.

ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಪ್ರಕರಣದ ಅ.ಕ್ರ.ಸಂ: 260/2014 ರ ಆರೋಪಿ ಬಂಟ್ವಾಳ ಕರಿಯಂಗಳ ನಿವಾಸಿ ದುನಿಯಾ ಶರೀಫ್ @ ಮಹಮ್ಮದ್ ಶರೀಫ್ ಎಂಬಾತನು ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ದಿನಾಂಕ: 05-05-2026 ರಂದು ವಿದೇಶದಿಂದ ಊರಿಗೆ ಹಿಂದಿರುಗುತ್ತಿದ್ದಾಗ, ಮುಂಬೈ ವಿಮಾನ ನಿಲ್ದಾಣದಲ್ಲಿ ಮುಂಬೈ ಸಹರಾ ಠಾಣಾ ಪೊಲೀಸರ ಸಹಕಾರದೊಂದಿಗೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ದಸ್ತಗಿರಿ ಮಾಡಿ, ದಿನಾಂಕ: 06-05-2026 ರಂದು ಮಾನ್ಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಿರುತ್ತಾರೆ. ಮಾನ್ಯ ನ್ಯಾಯಾಧೀಶರು ಆರೋಪಿತರಿಗೆ ನ್ಯಾಯಾಂಗ […]

Continue Reading

ಸುರತ್ಕಲ್: ಮಹಿಳೆಯ ಕೊಲೆಗೈದು, 24 ಪವನ್ ಚಿನ್ನದ ಒಡವೆ ದೋಚಿದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ

ಸರಿ-ಸುಮಾರು ಹನ್ನೆರಡು ವರ್ಷಗಳ ಹಿಂದೆ (2014 ರಲ್ಲಿ ) ಕುಳಾಯಿ ಹೊಸಬೆಟ್ಟುವಿನ ಕೋರ್ದಬ್ಬು ‘ಕಲ’ದ ಬಳಿಯ ನಿವಾಸಿ ಶ್ರೀಮತಿ ಸುಮತಿ ಪ್ರಭು ಎಂಬವರ ಕುತ್ತಿಗೆಗೆ ಚೂರಿಯಿಂದ ಕೊಯ್ದು, ಕೊಲೆ ಮಾಡಿ ಮೈಮೇಲಿದ್ದ ಸರಿ-ಸುಮಾರು 3 ಲಕ್ಷದ 80 ಸಾವಿರ ರೂಪಾಯಿ ಬೆಲೆ ಬಾಳುವ, 24 ಪವನ್ ತೂಕದ ಚಿನ್ನದ ಒಡವೆಗಳನ್ನು ದೋಚಿದ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅ.ಕ್ರ.ಸಂ 44/2014 ರಂತೆ ಪ್ರಕರಣನ್ನು ದಾಖಲಿಸಿಕೊಂಡ ಸುರತ್ಕಲ್ ಪೊಲೀಸರು ಪ್ರಕರಣದ ಆರೋಪಿಗಳಾದ ಶಿವರಾಮ್, ಭರತ್ ಪುರ ಜಿಲ್ಲೆ, ರಾಜಸ್ಥಾನ. […]

Continue Reading

ಶಾಸಕ ಭರತ್ ಶೆಟ್ಟಿಯವರನ್ನು ಮಂಜೇಶ್ವರ ಚುನಾವಣಾ ಉಸ್ತುವಾರಿಯನ್ನಾಗಿಸಿ ಕೈ ಸುಟ್ಟುಕೊಂಡ ಬಿಜೆಪಿ.!

ಹೀನಾಯವಾಗಿ ಸೋತ ಬಿಜೆಪಿ; ಸ್ಥಳೀಯ ಬಿಜೆಪಿ ನಾಯಕರೊಳಗೆ ಭುಗಿಲೆದ್ದ ಆಕ್ರೋಶ. ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅನುಭವಿಸಿದ ಹೀನಾಯ ಸೋಲಿನ ಬಳಿಕ ಪಕ್ಷದೊಳಗೆ ವ್ಯಾಪಕ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತವಾಗುತ್ತಿದೆ. ಚುನಾವಣಾ ಉಸ್ತುವಾರಿಯಾಗಿ ಮಂಗಳೂರು ಉತ್ತರದ ಶಾಸಕ ಭರತ್ ಶೆಟ್ಟಿಯವರನ್ನು ನೇಮಕ ಮಾಡಿರುವ ನಿರ್ಧಾರವೇ ಪಕ್ಷಕ್ಕೆ ಹಿನ್ನಡೆಯಾಗಿದ್ದು, ಇದು ಈಗ ಕ್ಷೇತ್ರದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸ್ಥಳೀಯ ಮಟ್ಟದಲ್ಲಿ ಕ್ರೈಸ್ತ ಮತದಾರರು ಬಿಜೆಪಿಯಿಂದ ದೂರ ಸರಿದಿರುವುದು ಸೋಲಿನ ಪ್ರಮುಖ ಕಾರಣವೆಂದು ವಿಶ್ಲೇಷಣೆಗಳು ಸೂಚಿಸುತ್ತಿವೆ. ಕ್ಷೇತ್ರದಲ್ಲಿ ಕ್ರೈಸ್ತ ಸಮುದಾಯದ […]

Continue Reading

ಬಂಟ್ವಾಳ ಪೊಲೀಸರ ಯಶಸ್ವಿ ಕಾರ್ಯಾಚರಣೆ; ಬೃಹತ್ ಪ್ರಮಾಣದ MDMA ವಶ, ಮಾಲು ಸಹಿತ ಆರೋಪಿಗಳ ಬಂಧನ

ಬಂಟ್ವಾಳ ಪೊಲೀಸರು ಮಾದಕ ವಸ್ತುಗಳ ವಿರೋಧಿ ಅಭಿಯಾನದ ಭಾಗವಾಗಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿರುತ್ತಾರೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ವಿಶೇಷ ಪೊಲೀಸ್ ತಂಡವು, ಅಕ್ರಮವಾಗಿ ಅಮಲು ಪದಾರ್ಥಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮಾರಕ MDMA ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಹೊರರಾಜ್ಯದಿಂದ ನಿಷೇಧಿತ ಡ್ರಗ್ಸ್ ತಂದು ಸ್ಥಳೀಯ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಯುವಜನತೆಗೆ ಪೂರೈಸುವ ಜಾಲದಲ್ಲಿ ತೊಡಗಿದ್ದರು ಎನ್ನಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈ […]

Continue Reading

ಪುತ್ತೂರು ಕಮ್ಯೂನಿಟಿ ಸೆಂಟರ್ ನ ಸುಮಾರು 108 ವಿದ್ಯಾರ್ಥಿಗಳು ಈ ಬಾರಿ ನೀಟ್ ಪರೀಕ್ಷೆ ಬರೆಯುತ್ತಿದ್ದಾರೆ

ಬೆಂಗಳೂರು ಫಾಲ್ಕನ್ ಕಾಲೇಜು, ಬೀದರ್ ಶಾಹೀನ್, ಶೆಪರ್ಡ್ ಶಾಹೀನ್ ಬೆಂಗಳೂರು, ಬರಕ ಕಾಲೇಜು, ಆಕಾಶ್, ಅಲೆನ್, ಬ್ರಿಲಿಯಂಟ್ ಪಾಲ, ಎಕ್ಸೆಲ್, ಎಕ್ಸ್ಪರ್ಟ್ ಮುಂತಾದ ಹೆಸರಾಂತ ಇಂಟಿಗ್ರೇಟೆಡ್ ಪಿಯು ಕಾಲೇಜು ಮತ್ತು ಲಾಂಗ್ ಟರ್ಮ್ ನೀಟ್ ಕೋಚಿಂಗ್ ಸೆಂಟರ್ ನಲ್ಲಿ ಈ ವಿದ್ಯಾರ್ಥಿಗಳು ತರಬೇತಿ ಪಡೆದವರು. ಕಳೆದ ನಾಲ್ಕು ವಾರ್ಷಿಕ ಅವಧಿಯಲ್ಲಿ ಸೆಂಟರ್ ಮೂಲಕ 229 ವಿದ್ಯಾರ್ಥಿಗಳು ನೀಟ್ ಬರೆದಿದ್ದರು. ಅವರಲ್ಲಿ 79 ವಿದ್ಯಾರ್ಥಿಗಳು MBBS, 25 ವಿದ್ಯಾರ್ಥಿಗಳು BDS, 26 ವಿದ್ಯಾರ್ಥಿಗಳು BAMS ಸೇರಿದಂತೆ ವಿವಿಧ ಮೆಡಿಕಲ್ […]

Continue Reading

ಯುವ ಸಮೂಹದ ಭವಿಷ್ಯ, ಸಾಮಾಜಿಕ ಕಾಳಜಿ ಬೆಳೆಸುವುದರಲ್ಲಿ ಪುತ್ತೂರು ಕಮ್ಯೂನಿಟಿ ಸೆಂಟರ್ ಸೇವೆ ಅನನ್ಯ: ಜಿಲಾನಿ ಎಚ್. ಮೊಖಾಷಿ

ಕಮ್ಯೂನಿಟಿ ಸೆಂಟರ್ ನ ಪದ್ದತಿ ಮತ್ತು ನೀತಿಗಳು ರಾಜ್ಯದ ಪ್ರತಿಯೊಂದು ಸಂಘ ಸಂಸ್ಥೆಗಳಿಗೂ ಮಾದರಿಯಾಗಿದೆ. ವಿಧ್ಯಾರ್ಥಿಗಳಿಗೆ ಶೈಕ್ಷಣೈಕ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ಅವರನ್ನು ಸಮಾಜಮುಖಿ ಕೆಲಸದಲ್ಲಿ ತೊಡಗಿಸುವ ಸಂಸ್ಥೆಯ ಪ್ರಯತ್ನ ಶ್ಲಾಘನೀಯ ಎಂದು ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಶ್ರೀ ಜಿಲಾನಿ H ಮೊಖಾಷಿ ಅವರು ಅಭಿಪ್ರಾಯ ಪಟ್ಟರು. ಇತ್ತಿಚೆಗೆ ಅವರು ಮಂಗಳೂರಿನಲ್ಲಿ ಇರುವ ಪುತ್ತೂರು ಕಮ್ಯೂನಿಟಿ ಸೆಂಟರ್ ನ ಕಚೇರಿಗೆ ಭೇಟಿ ನೀಡಿ ಸಂಸ್ಥೆಯ ಕಾರ್ಯಚಟುವಟಿಕೆ ಪರಿಶೀಲಿಸಿದರು. ಪುತ್ತೂರು ಎಂಬ ತಾಲೂಕು ಮಟ್ಟದಲ್ಲಿ ಆರಂಭವಾದ […]

Continue Reading

ಬಿಜೆಪಿಯಲ್ಲಿ ಬಂಟರಿಗೆ ಬ್ರೇಕ್; ಬಿಲ್ಲವ ಪಾರಮ್ಯಕ್ಕೆ ವೇದಿಕೆ ಸಜ್ಜು

ಹೀಗೊಂದು ಮಾತು ಕರಾವಳಿಯ ಬಿಜೆಪಿ ರಾಜಕೀಯ ಪಡಸಾಲೆಯಲ್ಲಿ ಭಾರೀ ಜೋರಾಗಿ ಕೇಳಿ ಬರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವ ಬ್ಯಾರಿಗಳದ್ದೇ ದೊಡ್ಡ ಪ್ರಭಾವವಿದೆ. ಬಿಲ್ಲವ ಮತದಾರರು ಬಿಜೆಪಿ ಜೊತೆ ಗುರುತಿಸಿಕೊಂಡರೆ, ಬ್ಯಾರಿ ಮತದಾರರು ಕಾಂಗ್ರೆಸ್ ಜೊತೆಯಲ್ಲಿದ್ದಾರೆ. ವಿಚಿತ್ರವೆಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವ, ಬ್ಯಾರಿಗಳ ಪ್ರಭಾವ ಜಾಸ್ತಿಯಿದ್ದರೂ ಅಧಿಕಾರ ಮಾತ್ರ ಬಂಟರ ಕೈಯಲ್ಲಿ. ಅದು ಕಾಂಗ್ರೆಸ್, ಬಿಜೆಪಿಯಾಗಲಿ ಕರಾವಳಿ ರಾಜಕಾರಣವನ್ನು ಆಳುತ್ತಿರುವುದು ಬಂಟರು ಮಾತ್ರ. ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ಬಿಲ್ಲವರಿಗೆ ಚೊಂಬು ಕೊಟ್ಟು ಬಂಟರು ಅಧಿಕಾರಕ್ಕೆ ಏರುತ್ತಿದ್ದಾರೆ […]

Continue Reading

ಡಾ: ಕೆ. ಎಂ. ರಾಘವ ನಂಬಿಯಾರ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

ಉಡುಪಿ: ಕರ್ನಾಟಕ ಯಕ್ಷಗಾನ ಅಕಾಡೆಮಿಯ 2025ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಯಕ್ಷಗಾನ ಸಂಶೋಧಕ, ಪ್ರಸಂಗಕರ್ತ ಹಾಗೂ ಭಾಗವತ ಉಡುಪಿ ಇಂದ್ರಾಳಿಯ ಡಾ.ಕೆ. ಎಂ. ರಾಘವ ನಂಬಿಯಾರ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿ 1 ಲಕ್ಷ ರೂ., ಪ್ರಶಸ್ತಿ ಫಲಕ ಹಾಗೂ ಪ್ರಮಾಣಪತ್ರ ಒಳಗೊಂಡಿದೆ. ಮೇ 3ರಂದು ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದಲ್ಲಿ ನಡೆಯಲಿರುವ 2025ನೇ ಸಾಲಿನ ಗೌರವ ಪ್ರಶಸ್ತಿ, ಯಕ್ಷಸಿರಿ ವಾರ್ಷಿಕ ಪ್ರಶಸ್ತಿ, ದತ್ತಿನಿಧಿ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ನಂಬಿಯಾರ್ ಅವರನ್ನು ಸನ್ಮಾನಿಸಲಾಗುವುದು […]

Continue Reading

ಪುತ್ತೂರಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿ ಆದಿಲ್ ಹುಸೈನ್ ಎಂಬವರಿಗೆ KSRTC ಬಸ್ ನಿಲ್ದಾಣದ ಬಳಿ ಹಲ್ಲೆ

ಬೆಳ್ತಂಗಡಿ: ಖಾಸಗಿ ಕಾಲೇಜೊಂದರಲ್ಲಿ ವಿದ್ಯಾರ್ಥಿ, ಬೆಳ್ತಂಗಡಿ ನಿವಾಸಿ ಆದಿಲ್ ಹುಸೈನ್ ಎಂಬವರು ದಿನಾಂಕ:22-04-2026 ರಂದು ಸಂಜೆ ಕಾಲೇಜಿನಿಂದ ತನ್ನ ಸ್ನೇಹಿತರಾದ ಸುಹೇಲ್ ಮತ್ತು ಅಝಾರ್ ಎಂಬವರೊಂದಿಗೆ ಪುತ್ತೂರು ಕಸಬಾ ಗ್ರಾಮದ ಆರ್ ಟಿ ಸಿ ಬಸ್ ನಿಲ್ದಾಣದ ಬಳಿ ಚಹಾ ಕುಡಿಯುತ್ತಿರುವಾಗ, ಪರಿಚಯಸ್ಥರಾದ ಬಿ. ಕೆ ಮೊಯಿನುದ್ದೀನ್, ಮೋಹದ್ ಹಾಗೂ ಇತರ 5 ಜನರು ಬಂದು ವಿಧ್ಯಾರ್ಥಿ ಆದಿಲ್ ಹುಸೈನ್ ಗೆ ಹಲ್ಲೆ ನಡೆಸಿರುತ್ತಾರೆ. ಜೊತೆಯಲ್ಲಿದ್ದ ಸ್ನೇಹಿತರು ಹಲ್ಲೆಯ ಬಗ್ಗೆ ಪ್ರಶ್ನಿಸಿದಾಗ ಅವರಿಗೂ ಅರೋಪಿಗಳು ಜೀವ ಬೆದರಿಕೆ […]

Continue Reading