ಕುಪ್ಪೆಪದವು: ಫೆಬ್ರವರಿ 8 ಕ್ಕೆ ಹೊಸ ಉಪ ಅಂಚೆ ಕಚೇರಿ ಉದ್ಘಾಟನೆ, ಹೊಸ ಪಿನ್ ಕೋಡ್

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕುಪ್ಪೆಪದವಿನಲ್ಲಿ ಹೊಸ ಅಂಚೆ ಕಚೇರಿ ಫೆಬ್ರವರಿ 8 ರಂದು ಉದ್ಘಾಟನೆಗೊಳ್ಳಲಿದ್ದು, ಆ ಬಳಿಕ ಹೊಸ ಪಿನ್ ಕೋಡ್ ಆಗಿ 574162 ಆಗಿರುತ್ತದೆ ಎಂದು ಮಂಗಳೂರು ಅಂಚೆ ವಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮೊದಲು ಕುಪ್ಪೆಪದವು, ಇರುವೈಲು, ಕೊಳವೂರು ಪ್ರದೇಶಗಳು ಗಂಜಿಮಠ ಅಂಚೆ ಕಚೇರಿಯ ಬಟವಾಡೆ ವ್ಯಾಪ್ತಿಗೆ ಒಳಪಟ್ಟಿದ್ದು, ಇಲ್ಲಿಯ ಪಿನ್ ಕೋಡ್ 574144 ಆಗಿತ್ತು. ಇರುವೈಲು ಮತ್ತು ಕೊಳವೂರು ಶಾಖಾ ಅಂಚೆ ಕಚೇರಿ ವ್ಯಾಪ್ತಿಗೆ ಒಳಪಡುವ ಎಲ್ಲ ಪ್ರದೇಶಗಳು […]

Continue Reading

ರಿವಾಲ್ವರ್ ಮಿಸ್ ಫೈರಿಂಗ್.. ಕಾಂಗ್ರೆಸ್ ಮುಖಂಡಗೆ ಗಾಯ. ಆಸ್ಪತ್ರೆಗೆ ದಾಖಲು..

ಆತ್ಮರಕ್ಷಣೆಗಾಗಿ ಪಡೆದಿದ್ದ ರಿವಾಲ್ವರ್ ಅಚಾನಕ್ಕಾಗಿ ಸಿಡಿದು ಕಾಂಗ್ರೆಸ್ ಮುಖಂಡ ಬೊಂಡಾಲ ಚಿತ್ತರಂಜನ್ ಶೆಟ್ಟಿ ಗಾಯಗೊಂಡಿದ್ದಾರೆ. ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಮಾಜಿ ಇಂಟಕ್ ಮುಖಂಡ ಬೊಂಡಾಲ ಚಿತ್ತರಂಜನ್ ಶೆಟ್ಟಿಯವರು ಇತ್ತೀಚೆಗಷ್ಟೇ ತನ್ನ ಆತ್ಮರಕ್ಷಣೆಗಾಗಿ ಪರವಾನಗಿ ಪಡೆದು ರಿವಾಲ್ವರ್ ಇಟ್ಟುಕೊಂಡಿದ್ದರು. ಇಂದು ವಿಟ್ಲ ಠಾಣಾ ವ್ಯಾಪ್ತಿಯ ಅನಂತಾಡಿ ಬಳಿ ತನ್ನದೇ ರಿವಾಲ್ವರ್ ನ ಗುಂಡು ಆಕಸ್ಮಿಕವಾಗಿ ಸಿಡಿದು ಕಾಲಿನ ಭಾಗಕ್ಕೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ. ಅನಂತಾಡಿಗೆ ಯಾವ ಉದ್ದೇಶಕ್ಕಾಗಿ ಬಂದಿದ್ದಾರೆಂಬ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಾಗಿದೆ. ಗಾಯಾಳು […]

Continue Reading

ವಿಟ್ಲ: ಅಕ್ರಮ ಪ್ರವೇಶ ಮಾಡಿ, ತಂದೆ ಹಾಗೂ 6 ವರ್ಷದ ಮಗುವಿನ ಮೇಲೆ ಹಲ್ಲೆ; ರಾಕ್ಷಸೀ ಕೃತ್ಯ ಎಸಗಿದ ಆರೋಪಿ ವಿರುದ್ಧ FIR..

ರಾತ್ರಿ ಹೊತ್ತು ಮನೆಯಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿದ್ದ ಪುಟಾಣಿ ಹಾಗೂ ತಂದೆಯ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ರಾಕ್ಷಸೀ ಕೃತ್ಯ ಎಸಗಿದ ಘಟನೆಯೊಂದು ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಮೈರ ಎಂಬಲ್ಲಿ ನಡೆದಿದೆ. ವೀರಕಂಬ ಗ್ರಾಮದ ಮೈರ ನಿವಾಸಿ ಯತೀಶ ಎಮ್. ಸಿ ಎಂಬವರು ಜ. 31ರಂದು ರಾತ್ರಿ 8:00 ಗಂಟೆ ಸುಮಾರಿಗೆ ಮನೆಯ ಅಂಗಳದಲ್ಲಿ ಮಗುವಿನ ಜೊತೆ ಆಟವಾಡುತ್ತಿದ್ದರು. ಆ ಸಂದರ್ಭ ಏಕಾಏಕಿ ಮನೆಯಂಗಳಕ್ಕೆ ನುಗ್ಗಿದ ಮೋಹನ ಗೌಡ ಎಂಬಾತ ಅವಾಚ್ಯ […]

Continue Reading

ರಾಮಸೇನೆ ಮುಖಂಡನ ವಾಮಾಚಾರಕ್ಕೆ ಬಿಗ್ ಟ್ವಿಸ್ಟ್; ಪ್ರಸಾದ್ ಅತ್ತಾವರ ಪತ್ನಿ ಉಡುಪಿ ಮಹಿಳಾ ಠಾಣೆ ಪಿಎಸ್ಐ ಸುಮಾ ಆಚಾರ್ಯ ಪಾತ್ರ.!

ರಾಮಸೇನೆ ಮುಖ್ಯಸ್ಥ ಪ್ರಸಾದ್ ಅತ್ತಾವರ ಎಂಬವರ ಪತ್ನಿ, ಉಡುಪಿ ಮಹಿಳಾ ಪೊಲೀಸ್ ಠಾಣೆಯ ಪಿಎಸ್‌ಐ ಸುಮಾ ಆಚಾರ್ಯ ಅವರ ಹೆಸರೂ ಕೂಡ ವಾಮಾಚಾರ ಪ್ರಕರಣದಲ್ಲಿ ಬಯಲಾಗಿದೆ. ಇತ್ತೀಚೆಗೆ ಪ್ರಸಾದ್ ಅತ್ತಾವರ ಮತ್ತು ಸಹಚರರಿಂದ ಮಂಗಳೂರಿನ ಸ್ಪಾ ಮತ್ತು ಪಾರ್ಲರ್ ಮೇಲಿನ ದಾಳಿ ಪ್ರಕರಣದಲ್ಲಿ ರಾಮಸೇನೆ ಮುಖ್ಯಸ್ಥ ಪ್ರಸಾದ್ ಅತ್ತಾವರ ಎಂಬವರನ್ನು ಬಂಧಿಸಲಾಗಿತ್ತು. ಪ್ರಕರಣದ ತನಿಖೆಯ ಭಾಗವಾಗಿ ಪೊಲೀಸರು ಅತ್ತಾವರ ಮೊಬೈಲ್ ಪರಿಶೀಲಿಸಿದಾಗ, ಸ್ನೇಹಮಯಿ ಕೃಷ್ಣ ಹಾಗೂ ಗಂಗರಾಜು ಅವರಿಗೆ ಬಲ ತುಂಬಲು 5 ಕುರಿಗಳನ್ನು ಕಾಳಿದೇವಿಗೆ ಬಲಿ […]

Continue Reading

ರಾಮಸೇನೆ ಮುಖಂಡ ಅತ್ತಾವರ ಮೊಬೈಲ್ ನಲ್ಲಿತ್ತು ವಾಮಚಾರದ ವಿಡಿಯೋ.. ಬಿತ್ತು ಮತ್ತೊಂದು ಕೇಸು.!

ಮಂಗಳೂರಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯ ಕಲರ್ಸ್ ಯುನಿಸೆಕ್ಸ್ ಮಸಾಜ್ ಸೆಂಟರ್ ಗೆ ತನ್ನ ಹುಡುಗರ ಮೂಲಕ ದಾಳಿ ನಡೆಸಿ ಮಸಾಜ್ ಪುಡಿಗೈದ ಆರೋಪದಲ್ಲಿ ಪೊಲೀಸರು ಪ್ರಸಾದ್ ಅತ್ತಾವರ ಸೇರಿದಂತೆ ಹದಿನಾಲ್ಕು ಮಂದಿಯನ್ನು ಬಂಧಿಸಿದ್ದರು. ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸುದ್ದಿ ಮಾಡಿದ್ದ ಪಬ್, ಹೋಂ ಸ್ಟೇ ದಾಳಿಯ ರೀತಿಯಲ್ಲೇ ಖಾಸಗಿ ಕ್ಯಾಮರಾಮೆನ್ ಒಬ್ಬರನ್ನು ಕರೆದುಕೊಂಡು ಹೋಗಿ ದಾಳಿ ನಡೆಸಿ, ಸ್ವತಃ ಆ ವಿಡಿಯೋ ಗಳನ್ನು ಬಿಡುಗಡೆಗೊಳಿಸಿದ್ದರು. ಈ ದಾಳಿಯ ಬಗ್ಗೆ ಜಿಲ್ಲೆಯಲ್ಲಿ ಪರ-ವಿರೋಧ ಚರ್ಚೆಗಳು ನಡೆದಿತ್ತು. ಅನೈತಿಕ ಪೊಲೀಸ್ […]

Continue Reading

ಜನಾಕ್ರೋಶಕ್ಕೂ ಮಣಿಯದ ಬಿಜೆಪಿ ಪಾಲಿಕೆ ಆಡಳಿತದಿಂದ ಸಾಮಾನ್ಯ ಸಭೆಯಲ್ಲಿ ಟಿಡಿಆರ್ ಹಗರಣದ ಫೈಲ್ ಪಾಸ್.!

ವಿಪಕ್ಷದ ಆಕ್ಷೇಪ ನಡುವೆಯೂ ಮಂಜೂರು; ರಾಜ್ಯ ಕಾಂಗ್ರೆಸ್ ಸರಕಾರ ಈಗೇನು ಮಾಡುತ್ತದೆ: ಮುನೀರ್ ಕಾಟಿಪಳ್ಳ ಪ್ರಶ್ನೆ ಮಂಗಳೂರು ನಗರ ಪಾಲಿಕೆಯ ಬಿಜೆಪಿ ಆಡಳಿತ ನಿರ್ಲಜ್ಜತೆಯ ಚರಮ ಸೀಮೆ ತಲುಪಿದೆ. ಐದು ವರ್ಷಗಳ ಆಡಳಿತದ ಕೊನೆಯ ತಿಂಗಳಿನಲ್ಲಿಯೂ ಭ್ರಷ್ಟಾಚಾರದಲ್ಲಿ ಮುಳುಗಿದೆ. ಪದವು ಗ್ರಾಮದ 3.50 ಎಕರೆ ಜಮೀನಿನ ಟಿ‌.ಡಿ.ಆರ್ ಹಗರಣವನ್ನು ನಾವು ನಿನ್ನೆಯಷ್ಟೆ ಬಯಲು ಪಡಿಸಿದ್ದೆವು. ಪೂರ್ವಾನ್ವಯ ಮಂಜೂರಾತಿ ನೀಡಿ ಹತ್ತಾರು ಕೋಟಿ ಮೌಲ್ಯದ ಟಿ.ಡಿ.ಆರ್ ನೀಡಿರುವುದು, ವಿಪಕ್ಷ ಕಾಂಗ್ರೆಸ್ ಪಾಲಿಕೆ ಸದಸ್ಯರು ಮೌನವಹಿಸಿರುವುದನ್ನು ಪ್ರಶ್ನಿಸಿದ್ದೆವು. ಇಂದು ನಡೆದ […]

Continue Reading

ಮಂಗಳೂರು: ಮೂಡ ನಗರೀಕರಣ ದಾಖಲೆಗಳು ಆಕ್ರಮ: ಆಯುಕ್ತರು ಅಭಿಲೇಖಾಲಯದಿಂದ ಪಲ್ಲಟವಾದ ಒಟ್ಟು ಕಡತಗಳ ಸಂಖ್ಯೆ ಬಹಿರಂಗ ಪಡಿಸಲಿ.

ಅಕ್ರಮ ಕಟ್ಟಡ, ನಕಲಿ ಭೂ ಗಡಿ ಗುರುತು, ಅಕ್ರಮ ತಿದ್ದುಪಡಿ, ಕಡತ ನಾಶ ಇದರ ಬಗ್ಗೆ ಸಮಗ್ರ ತನಿಖೆಗೆ ಸೂಕ್ತವಾದ ತನಿಖಾ ಆಯೋಗವನ್ನು ರಚಿಸಿ ಮಂಗಳೂರು: ಕಳೆದ ಹಲವಾರು ವರ್ಷಗಳಿಂದ ಮೂಡ ತನ್ನ ವ್ಯಾಪ್ತಿಯಲ್ಲಿ ‘ ಅನುಮೋದನೆ ‘ ಗೊಳಿಸಿದ ಭೂನಗರೀಕರಣ ದಾಖಲೆಗಳಾದ ಏಕ ನಿವೇಶನ ಅನುಮೋದನೆ ಪತ್ರ, ವಲಯ ಅನ್ಯಕ್ರಾಂತ ನಿರಾಕ್ಷೇಪಣಾ ಪತ್ರಗಳ ಕಚೇರಿ ಕಡತಗಳನ್ನು ತನ್ನ ಕಚೇರಿಯ ಅಭಿಲೇಖಾಲಯದಲ್ಲಿ ಕನಿಷ್ಠ ಪಕ್ಷ ಮುಂದಿನ ಮೂವತ್ತು ವರ್ಷದ ಅವಧಿಗೆ ಕಾಯ್ದಿರಿಸಿ ಕೊಂಡು ಬರಬೇಕಾದುದು ಸರಕಾರಿ ನಿಯಮ. […]

Continue Reading

ಮಂಗಳೂರು ನಗರದಲ್ಲಿ ಅನಧಿಕೃತ ಬ್ಯಾನರ್ -ಫ್ಲೆಕ್ಸ್ ಗೆ ಬಿತ್ತು ಕಡಿವಾಣ.. ಮನಪಾ ಅಧಿಕಾರಿಗಳಿಗೆ ಬಿತ್ತು ಮೂಗುದಾರ.!

ನಿರ್ಬಂಧಿತ ಪ್ರದೇಶದಲ್ಲಿ ಬ್ಯಾನರ್ ಅಳವಡಿಸಿದರೆ ಬೀಳುತ್ತೆ ಬಾರಿ ದಂಡ; ಆರೋಗ್ಯ ನಿರೀಕ್ಷಕ ಶೆಟ್ಟರ ಪವರ್ ಕಟ್ ಮನಪಾ ನೂತನ ಆಯುಕ್ತ ರವಿಚಂದ್ರ ನಾಯಕ್ ದಿಟ್ಟ ಕ್ರಮ ಶುರು.. ಹಂಡಾಲೆದ್ದು ಹೋಗಿದ್ದ ಮಂಗಳೂರು ಮಹಾನಗರ ಪಾಲಿಕೆಗೆ ನೂತನ ಆಯುಕ್ತ ರವಿಚಂದ್ರ ನಾಯಕ್ ಸರ್ಜರಿ ನಡೆಸಲು ಮುಂದಾಗಿದ್ದಾರೆ. ಬ್ರೋಕರ್ ಗಳ ಅಡ್ಡೆ, ಲಂಚದ ಸಾಮ್ರಾಜ್ಯವಾಗಿ ಪರಿವರ್ತಿತವಾಗಿದ್ದ ಮಹಾನಗರ ಪಾಲಿಕೆಗೆ ದಕ್ಷ ಅಧಿಕಾರಿಯ ಎಂಟ್ರಿ ಹಲವಾರು ಲಂಚಬಾಕ ಅಧಿಕಾರಿಗಳ ಎದೆಯಲ್ಲಿ ಡವ ಡವ ಮೂಡಲು ಶುರುವಾಗಿದೆ. ಈ ಹಿಂದಿನ ಆಯುಕ್ತರಾಗಿದ್ದ ಆನಂದ್ […]

Continue Reading

ಉಡುಪಿ: ಮಹಿಳಾ ಪೀಡಕ ಅಧಿಕಾರಿ ಎತ್ತಂಗಡಿ.!

ಈ ಬಗ್ಗೆ ಸ್ಪೆಷಲ್ ನ್ಯೂಸ್ ಮೀಡಿಯಾ ಸಮಗ್ರ ವರದಿ ಪ್ರಕಟಿಸಿತ್ತು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಆಗಿರುವ ಡಾ. ಅಶೋಕ್ ಹೆಚ್ ಇವರು ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪ ಸಾಬೀತಾಗಿ ದಂಡನೆಗೆ ಒಳಗಾಗಿದ್ದರು. ಆದರೆ ರಾಜ್ಯ ಕಾಂಗ್ರೆಸ್ ಸರಕಾರ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶಿಫಾರಸ್ಸು ಮೇರೆಗೆ ಅವರಿಗೆ ಭಡ್ತಿ ನೀಡಲಾಗಿತ್ತು. ಡಾ. ಅಶೋಕ್ ಹೆಚ್ ಎನ್ ಎಂ ಸಿ ಇಲ್ಲವೇ ಎಂಸಿಐ ಯಿಂದ ಮಾನ್ಯತೆ ಪಡೆದ ಕ್ಲಿನಿಕಲ್ […]

Continue Reading

ಮಂಗಳೂರು ನಗರ ಪಾಲಿಕೆಯ ಬಿಜೆಪಿ ಆಡಳಿತದಲ್ಲಿ ಮತ್ತೊಂದು ಟಿ.ಡಿ.ಆರ್ ಹಗರಣ: ಮುನೀರ್ ಕಾಟಿಪಳ್ಳ

ಮಂಗಳೂರು ನಗರ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ, ನಗರ ಪಾಲಿಕೆ ಯಾವತ್ತೂ ಕಾಣದ ಭ್ರಷ್ಟಾಚಾರ, ಹಗರಣ, ದುರಾಡಳಿತದ ಮೂಲಕ ತನ್ನ ಐದು ವರ್ಷದ ಅವಧಿಯನ್ನು ಪೆಬ್ರವರಿ ಕೊನೆಯಲ್ಲಿ ಪೂರೈಸುತ್ತಿದೆ. ನಗರದ ಅಭಿವೃದ್ದಿಯ ಅಗತ್ಯಕ್ಕೆ ಬಳಸುವ ಟಿ.ಡಿ.ಆರ್ ಈ ಐದು ವರ್ಷದ ಅವಧಿಯ ಉದ್ದಕ್ಕೂ ನಗರ ಪಾಲಿಕೆಯ ಸಂಪತ್ತನ್ನು ಲೂಟಿ ಹೊಡೆಯಲು ಸತತವಾಗಿ ಬಳಕೆಯಾಗಿದೆ. ನಗರ ಪಾಲಿಕೆಯಲ್ಲಿ ಟಿ.ಡಿ.ಆರ್ ಎಂಬ ಪದ ಕೇಳಿದರೆ ಸಾಕು ಬ್ರಹ್ಮಾಂಡ ಭ್ರಷ್ಟಾಚಾರ, ಹಗರಣ ಎಂದು ಜನ ಭಾವಿಸುವಷ್ಟು ದುರುಪಯೋಗ ನಡೆದಿದೆ. ಬಹಳಷ್ಟು ಆಕ್ರೋಶ, […]

Continue Reading