ಬೆಂಗಳೂರು: ರೌಡಿಗಳೊಂದಿಗೆ ಪೊಲೀಸರ ಸಾಥ್ ಆರೋಪ; ಕಮೀಷನರ್ ಖುದ್ದು ಹಾಜರಿಗೆ ಕೋರ್ಟ್ ಸಮನ್ಸ್

ಬೆಂಗಳೂರು: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬೆಂಗಳೂರಿನ ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿನ ಪ್ರಕರಣವೊಂದರಲ್ಲಿ ಸ್ಥಳೀಯ ಪೊಲೀಸರ ಕರ್ತವ್ಯಲೋಪ ಪ್ರಕರಣದಲ್ಲಿ ಖುದ್ದು ಹಾಜರಾಗುವಂತೆ ನಗರ ಪೊಲೀಸ್ ಆಯುಕ್ತರಿಗೆ ಬೆಂಗಳೂರಿನ ನ್ಯಾಯಾಲಯವು ಸಮನ್ಸ್ ಹೊರಡಿಸಿದೆ. ಬೆಂಗಳೂರಿನ ಹೆಣ್ಣೂರು ಠಾಣಾವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆ ಕೇರಳ ಮೂಲದ ವ್ಯಕ್ತಿಯ ಕೌಟುಂಬಿಕ ವ್ಯಾಜ್ಯದ ನಡುವೆ ಕೆಲವು ರೌಡಿಗಳು ಸಜಿ ಜೋಸೆಫ್ ಎಂಬವರ ಜಮೀನಿಗೆ ನುಗ್ಗಿ ದಾಂದಲೆ ನಡೆಸಿದ್ದ ಘಟನೆ ಭಾರೀ ಸುದ್ದಿಯಾಗಿತ್ತು. ತಾವು ಸಚಿವ ಭೈರತಿ ಸುರೇಶ್ ಸಹಚರರೆಂದು ಹೇಳಿ ಸ್ಥಳೀಯ ರೌಡಿಗಳು ಜಮೀನು ಬಿಟ್ಟುಕೊಡುವಂತೆ […]

Continue Reading

ಕೆಐಎಡಿಬಿ ಹಗರಣ; ED ತನಿಖಾ ಪ್ರಕ್ರಿಯೆ ಹಿನ್ನೆಲೆ ಎಚ್ಚತ್ತುಕೊಂಡ ಸಿದ್ದು ಸರ್ಕಾರ; ತನಿಖೆಗೆ ನಿರ್ದೇಶನ

ಬೆಂಗಳೂರು: ರಾಜ್ಯದ ಆಡಳಿತ ವರ್ಗದಲ್ಲಿ ಸಂಚಲನ ಸೃಷ್ಟಿಸಿರುವ ಕೆಐಎಡಿಬಿ ಹಗರಣ ಆರೋಪ ಕುರಿತಂತೆ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖಾ ಪ್ರಕ್ರಿಯೆಯನ್ನು ಆರಂಭಿಸಿದೆ. ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಭೂ ಪರಿಹಾರ ವಿತರಣೆ ಕುರಿತಂತೆ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಸಲ್ಲಿಸಿರುವ ದೂರಿನ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೆಐಎಡಿಬಿ ಕಾರ್ಯನಿರ್ವಹಣಾಧಿಕಾರಿಗಳಿಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಿರ್ದೇಶನ ನೀಡಿದ್ದಾರೆ. ಏನಿದು ಆರೋಪ? ದೇವನಹಳ್ಳಿ ಸುತ್ತಮುತ್ತ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಪರಿಹಾರ ಹಣ ವಿತರಣೆಯಲ್ಲಿ ಅವ್ಯವಹಾರ […]

Continue Reading

ದೇವಸ್ಥಾನದ ಗರ್ಭಗುಡಿಯೊಳಗೆ ಅರ್ಚಕರಿಬ್ಬರ ಪರಸ್ಪರ ಬಡಿದಾಟ

ಅರ್ಚಕರಿಬ್ಬರು ದೇವಸ್ಥಾನದ ಗರ್ಭ ಗುಡಿಯೊಳಗೆ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಕಲಬುರಗಿಯ ಗಾಣಗಾಪುರದಲ್ಲಿ ನಡೆದಿದೆ. ಗಾಣಗಾಪುರದ ಶ್ರೀ ಗುರು ದತ್ತಾತ್ರೇಯ ದೇವಸ್ಥಾನದ ಭಕ್ತರಿಗೆ ದರ್ಶನದ ಲೈನ್ ಬಿಡೋ ವಿಚಾರದಲ್ಲಿ ಅರ್ಚಕರಾದ ಕಿರಣ್ ಭಟ್ ಪೂಜಾರಿ ಮತ್ತು ವಲ್ಲಭಟ್ ಪೂಜಾರಿ ಎಂಬುವವರ ಮಧ್ಯೆ ಪೈಟಿಂಗ್ ನಡೆದಿದೆ. ಇಬ್ಬರ ಅರ್ಚಕರ ಮಧ್ಯೆ ತಮ್ಮ ಕಡೆಯವರ ಭಕ್ತರಿಗೆ ಮೊದಲು ಬಿಡಬೇಕು.. ಇಲ್ಲಾ ನಮ್ಮ ಕಡೆಯವರ ಭಕ್ತರಿಗೆ ಮೊದಲು ಬಿಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿ ಇಬ್ಬರ ಮಧ್ಯೆ ಜಗಳ ಶುರುವಾಗಿ ಪರಸ್ಪರ ಹೊಡೆದಾಟ ನಡೆಸಿದ್ದಾರೆ. […]

Continue Reading

ಚನ್ನಪಟ್ಟಣ: ಸಟ್ಟಾ ಬಜಾರ್ ನಲ್ಲಿ ಯಾರ ‘ಕೈ’ ಮೇಲು..? ‘ಸಿಂಪತಿ’ ಮತ ಚಕ್ರವ್ಯೂಹ ಭೇದಿಸುತ್ತಾ..? ಮುಸ್ಲಿಂ ಏರಿಯಾಗಳಲ್ಲಿ ರೆಕಾರ್ಡ್ ಓಟಿಂಗ್.!

ಕರ್ನಾಟಕದ ಮೂರು ವಿಧಾನಸಭಾ ಉಪ ಚುನಾವಣೆಗಳ ಪೈಕಿ ಜಿದ್ದಾಜಿದ್ದಿನ ಹಣಾಹಣಿಗೆ ಕಾರಣವಾಗಿದ್ದ ಚನ್ನಪಟ್ಟಣದಲ್ಲಿ ಯಾರು ಗೆಲ್ಲುತ್ತಾರೆ ಅನ್ನುವ ಬಗ್ಗೆ ಬೆಟ್ಟಿಂಗ್ ದಂಧೆ ಬಲು ಜೋರಾಗಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕಿಂತ ಇಲ್ಲಿ ಡಿಕೆಶಿ ಬ್ರದರ್ಸ್ ವರ್ಸಸ್ ಕುಮಾರಸ್ವಾಮಿ ಫ್ಯಾಮಿಲಿ ನಡುವಿನ ಪ್ರತಿಷ್ಠೆಯ ಕಣವಾಗಿ ಪರಿವರ್ತನೆಯಾಗಿತ್ತು. ಇದೀಗ ಚುನಾವಣೆ ಮುಗಿದಿದೆ. ನವೆಂಬರ್ 23 ಕ್ಕೆ ಫಲಿತಾಂಶ ಹೊರಬೀಳಲಿದೆ. ಈ ನಡುವೆಯೇ ಕ್ಷೇತ್ರದಲ್ಲಿ ಸೋಲು ಗೆಲುವಿನ ಬಗ್ಗೆ ಲೆಕ್ಕಾಚಾರಗಳು ರಣೋತ್ಸಾಹ ಮೂಡಿಸಿದೆ. ಕರ್ನಾಟಕ, ತಮಿಳುನಾಡು, ಆಂಧ್ರ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ […]

Continue Reading

ಧರ್ಮ, ಜಾತಿ ಹೆಸರಿನಲ್ಲಿ ನಿಂದನೆ ಆರೋಪ, ಪುನೀತ್ ಕೆರೆಹಳ್ಳಿಗೆ 14 ದಿನಗಳ ನ್ಯಾಯಾಂಗ ಬಂಧನ

ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಜಮೀರ್ ಅಹ್ಮದ್ ಖಾನ್ ಕಾಲಿಯಾ ಎಂಬ ಪದ ಬಳಕೆ ಮಾಡಿದ್ದು ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ವಿಚಾರವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಪುನೀತ್ ಕೆರೆಹಳ್ಳಿ ವಿರುದ್ಧ ಧರ್ಮ, ಜಾತಿ ಹೆಸರಿನಲ್ಲಿ ನಿಂದನೆ ಆರೋಪ ಮಾಡಲಾಗಿತ್ತು, ಅಲ್ಲದೆ ಎಫ್​ಐಆರ್ ಕೂಡ ದಾಖಲಿಸಿ ರಾತ್ರೋರಾತ್ರಿ ಬಂಧನ ಮಾಡಲಾಗಿದೆ.ಸಚಿವ ಜಮೀರ್ ಅಹಮದ್ ಖಾನ್ ಅವರ ಆಪ್ತ ಸಹಾಯಕ ಬಿ. ಎಸ್. ಅಶೋಕ್ ಅವರು ಪುನೀತ್ ಕೆರೆಹಳ್ಳಿ […]

Continue Reading

ಕೋವಿಡ್ ಹಗರಣ: ಸತ್ತಿದ್ದು 1,57,914 ಮಂದಿ, 37,206 ಮಂದಿ ಸಾವನ್ನಪ್ಪಿರುವ ಲೆಕ್ಕ.

1,20,708 ಮಂದಿ ಸಾವಿನ ಬಗ್ಗೆ ಶಂಕೆ ಇದ್ದು, ಇದು ಮಹಾಪರಾಧ ಅಂತ ಆಯೋಗ ಹೇಳಿದೆ. ಬಿ ಎಸ್‌ ಯಡಿಯೂರಪ್ಪ ನೇತ್ರತ್ವದ ಬಿಜೆಪಿ ಸರ್ಕಾರವಿದ್ದಾಗ ಕೋವಿಡ್ ವೇಳೆಯಲ್ಲಿ ಭಾರೀ ಹಗರಣ ನಡೆಸಿದೆ ಅಂತ ಆರೋಪವಿದ್ದು, ಈಗಾಗಲೇ ಅದರ ತನಿಖೆಗೆ ನ್ಯಾ.ಕುನ್ಹಾ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿ ಸಮಿತಿಯು ಮಧ್ಯಂತರ ವರದಿಯನ್ನು ನೀಡಿದೆ. ಸರಿ-ಸುಮಾರು 1,57,914 ಮಂದಿ ಕೋವಿಡ್ ಅವಧಿಯಲ್ಲಿ ಸಾವನ್ನಪ್ಪಿರುವ ಬಗ್ಗೆ ಸಾಂಖ್ಯಿಕ ನಿರ್ದೇಶನಾಲಯದ ಮಾಹಿತಿ ನೀಡಿದೆ. ಆದರೆ ಅದನ್ನು ಬಚ್ಚಿಟ್ಟು 37,206 ಮಂದಿ ಸಾವನ್ನಪ್ಪಿರುವ ಲೆಕ್ಕ ನೀಡಿರುವ […]

Continue Reading

ರೇವ್ ಪಾರ್ಟಿ ಪ್ರಕರಣ: ಸಿಸಿಬಿ ಪೊಲೀಸರ ವಿರುದ್ಧ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಮಾನವ ಹಕ್ಕುಗಳ ಆಯೋಗವು ಆದೇಶ

ಹೆಬ್ಬಗೋಡಿಯಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣದ ಸಂಬಂಧ ಸಿಸಿಬಿ ಪೊಲೀಸರ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮಾನವ ಹಕ್ಕುಗಳ ಆಯೋಗವು ಆದೇಶಿಸಿದೆ.ಪ್ರಕರಣದ ಆರೋಪಿ ವಿಜಯ್ ಡೆನ್ನಿಸ್ ಎಂಬವರು ಮಾನವ ಹಕ್ಕುಗಳು ಆಯೋಗಕ್ಕೆ ದೂರು ನೀಡಿದ್ದರು.ದೂರು ಆಧರಿಸಿ ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ ಅವರಿಗೆ ಆಯೋಗವು ಸೂಚನೆ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ವಿಚಾರಣೆ ನಡೆಸಿ ನವಂಬರ್ 21ರ ಒಳಗೆ ವರದಿ ಸಲ್ಲಿಸುವಂತೆ ಆಯೋಗ ಸೂಚನೆ ನೀಡಿದೆ. ಹೆಬ್ಬಗೋಡಿ ಠಾಣೆಯಲ್ಲಿ ‌ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ […]

Continue Reading

ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಅಂತರಾಜ್ಯ ದರೋಡೆಕೋರರು.

ಮಂಜೇಶ್ವರ ಠಾಣಾ ವ್ಯಾಪ್ತಿಯ ದೈಗೋಳಿಯಲ್ಲಿ ಸ್ಥಳೀಯರ ಕಾರ್ಯಾಚರಣೆ. ಕರ್ನಾಟಕ-ಕೇರಳ ಗಡಿಭಾಗದ ಸುಂಕದಕಟ್ಟೆ ದೈಗೋಳಿ ಎಂಬಲ್ಲಿ ರವಿವಾರ ಮುಂಜಾನೆ ಕುಖ್ಯಾತ ಅಂತರಾಜ್ಯ ದರೋಡೆಕೋರರು ಸ್ಥಳೀಯರು ಕೈಗೆ ಸಿಕ್ಕಿಬಿದ್ದಿದ್ದಾರೆ. ಮುಂಜಾನೆ ಮೂರು ಗಂಟೆಯ ಸುಮಾರಿಗೆ ಮನೆಯೊಂದಕ್ಕೆ ನುಗ್ಗಲು ಯತ್ನಿಸಿದಾಗ ಎಚ್ಚರಗೊಂಡ ಮಹಿಳೆಯೊಬ್ಬರು ಬೊಬ್ಬೆ ಹೊಡೆದಿದ್ದಾರೆ. ತಕ್ಷಣವೇ ಸ್ಥಳೀಯರು ಜಮಾಯಿಸುತ್ತಿದ್ದಂತೆ ದರೋಡೆಕೋರರು ತಮ್ಮ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಸ್ಥಳೀಯರ ಬುದ್ಧಿವಂತಿಕೆಯ ಮುಂದೆ ದರೋಡೆಕೋರರ ಯತ್ನ ವಿಫಲವಾಗಿದೆ. ದರೋಡೆಕೋರರ ಕಾರನ್ನು ಬೆನ್ನಟ್ಟಿದ ಸ್ಥಳೀಯರು ಸುಂಕದಕಟ್ಟೆ ದೈಗೋಳಿ ಎಂಬಲ್ಲಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆ ಸಂದರ್ಭ […]

Continue Reading

ವಕ್ಫ್ ಭೂಮಿ ಹೆಸರಿನಲ್ಲಿ ಕೋಲಾಹಲ ಎಬ್ಬಿಸಿ ವಿವಾದವಾದ ಆದೇಶಕ್ಕೆ ಇದೀಗ ಸರ್ಕಾರ ಮಹತ್ವದ ಆದೇಶ; ಕಟ್ಟು ನಿಟ್ಟಿನ ಕ್ರಮಕ್ಕೆ ಸೂಚನೆ: ಸಿ.ಎಂ

ರಾಜ್ಯಾದ್ಯಂತ ವಕ್ಫ್ ಭೂಮಿ ಹೆಸರಿನಲ್ಲಿ ಕೋಲಾಹಲ ಎಬ್ಬಿಸಿ ವಿವಾದವಾದ ಆದೇಶಕ್ಕೆ ಇದೀಗ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು, ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ಮಹತ್ವದ ಸೂಚನೆ ನೀಡಿದೆ. ಕೆಲವು ರೈತರು ಹಾಗೂ ಇತರ ಆಸ್ತಿಗಳನ್ನು ವಕ್ಫ್ ಹೆಸರಿಗೆ ಖಾತೆ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಸಭೆ ನಡೆಸಿ ಸೂಚನೆ ನೀಡಿದ್ದನ್ನು ಈ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮ್ಯುಟೇಷನ್ ಮಾಡಲು ಯಾವುದೇ ಕಚೇರಿ ಅಥವಾ ಯಾವುದೇ ಪ್ರಾಧಿಕಾರದಿಂದ (ವಕ್ಫ್) […]

Continue Reading

ಉಪ ಚುನಾವಣೆ: ಆಂತರಿಕ ಸಮೀಕ್ಷೆಯ ವರದಿ, ಗುಪ್ತಚರ ಸಮೀಕ್ಷೆಯ ವರದಿ ನೋಡಿ ಬೆಚ್ಚಿಬಿದ್ದ ಕಾಂಗ್ರೆಸ್ ಪಕ್ಷದ ನಾಯಕರು

ಉಪ ಚುನಾವಣಾ ಕಣ ರಂಗೇರಿದ್ದು. ಚುನಾವಣೆಗೆ ಮುನ್ನ ಕಾಂಗ್ರೆಸ್​​ ಪಕ್ಷದ ಆಂತರಿಕ ಸಮೀಕ್ಷೆಯ ವರದಿ ಮತ್ತು ಗುಪ್ತಚರ ಸಮೀಕ್ಷೆಯ ವರದಿ ಕಾಂಗ್ರೆಸ್​ ಪಕ್ಷದ ನಾಯಕರ ಕೈ ಸೇರಿದ್ದು. ವರದಿಯನ್ನು ನೋಡಿದ ಸಿಎಂ ಮತ್ತು ಡಿಸಿಎಂ ಬೆಚ್ಚಿಬಿದ್ದಿದ್ದಾರೆ ಎನ್ನಲಾಗಿದೆ. ಚುನಾವಣಾ ಪೂರ್ವ ಸಮೀಕ್ಷೆಯ ಆಂತರಿಕ ವರದಿಯಲ್ಲಿ ಕಾಂಗ್ರೆಸ್​​ ಎರಡು ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದ್ದು. ಒಂದು ಕ್ಷೇತ್ರದಲ್ಲಿ ಸೋಲುತ್ತದೆ ಎಂದು ವರದಿಯನ್ನು ನೀಡಲಾಗಿದೆ. ಶಿಗ್ಗಾಂವ್​​ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ರಾಜ್ಯ ಕಾಂಗ್ರೆಸ್​​ ನಾಯಕರು ಸೋತಿದ್ದು. ಕಾಂಗ್ರೆಸ್​​ ಅಭ್ಯರ್ಥಿ […]

Continue Reading