ವಕ್ಪ್ ಆಸ್ತಿಗಳ ರಕ್ಷಣೆಗಾಗಿ ವಕ್ಫ್ ಮಂಡಳಿಗೆ ಹೆಚ್ಚಿನ ಅಧಿಕಾರ, ವಕ್ಫ್‌ ಆಸ್ತಿಗಳ ರಕ್ಷಣೆ, 2014ರ ಲೋಕಸಭೆ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಆಶ್ವಾಸನೆ

ಅಂದು ಇಂಚಿಂಚು ವಕ್ಫ್ ಆಸ್ತಿಯನ್ನು ಕಾಪಾಡುವುದಾಗಿ ಶಪಥ ಮಾಡಿದ್ದರು. ಇಂದು ರಾಜಕೀಯ ಕಾರಣಕ್ಕಾಗಿ ತಪ್ಪು ಸಂದೇಶ ನೀಡುತ್ತಿದ್ದಾರೆ ವಕ್ಪ್ ಆಸ್ತಿಗಳ ರಕ್ಷಣೆಗಾಗಿ ವಕ್ಫ್ ಮಂಡಳಿಗೆ ಹೆಚ್ಚಿನ ಅಧಿಕಾರ ಹಾಗೂ ವಕ್ಫ್‌ ಆಸ್ತಿಗಳ ಒತ್ತುವರಿ ತೆರವು ಕುರಿತು 2014ರ ಲೋಕಸಭೆ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಆಶ್ವಾಸನೆ ನೀಡಿದ್ದ ಸಂಗತಿ ಇದೀಗ ಬಯಲಾಗಿದೆ. ಈ ವಿಷಯವನ್ನು ಕಾಂಗ್ರೆಸ್‌ ನಾಯಕರು ಇದೀಗ ಬಹಿರಂಗಪಡಿಸಿದ್ದಾರೆ. ಕರ್ನಾಟಕದಲ್ಲಿ ವಕ್ಫ್ ಆಸ್ತಿ ನೋಟಿಸ್‌ ವಿರೋಧಿಸಿ ಪ್ರತಿಭಟನೆಗೆ ಇಳಿದಿರುವ ರಾಜ್ಯ ಬಿಜೆಪಿ ನಾಯಕರಿಗೆ 2014 ರ ಚುನಾವಣಾ […]

Continue Reading

ನರೇಗಾ ಯೋಜನೆಯಲ್ಲಿ ಅವ್ಯವಹಾರ

ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಕೊಟ್ಟಿಗೆ ನಿರ್ಮಾಣ ಮಾಡದೆ ಹಣ ಗುಳುಂ, ಪಿಡಿಒ ಸಾಥ್ ಮೈಸೂರು ಜಿಲ್ಲೆಯ ಕೆ ಆರ್ ನಗರ ತಾಲೂಕಿನ ಸಾಲಿಗ್ರಾಮ ಹೋಬಳಿಯ ಶೀಗವಳು ಗ್ರಾಮ ಪಂಚಾಯತ್ ನಲ್ಲಿ ನರೇಗಾ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಅವ್ಯವಹಾರದಲ್ಲಿ ಖುದ್ದು ಗ್ರಾಮ ಪಂಚಾಯತ್ ಸಿಬ್ಬಂದಿಯೇ ಶಾಮೀಲಾಗಿದ್ದು, ಪಿಡಿಒ ಸಾಥ್ ನೀಡಿದ್ದಾರೆ ಅನ್ನುವ ಮಾಹಿತಿ ಬಹಿರಂಗಗೊಂಡಿದೆ. ಶೀಗವಳು ಗ್ರಾಮ ಪಂಚಾಯತ್ ನಲ್ಲಿ ಅಟೆಂಡರ್ ಆಗಿರುವ, ಪ್ರಸ್ತುತ ಬಿಲ್ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ […]

Continue Reading

ಸಚಿವ ಭೈರತಿ ಸಹಚರರ ದಾಂಧಲೆ; ಕೇರಳ ಮೂಲದ ವ್ಯಕ್ತಿಯ ಕೊಲೆಗೆ ಸಂಚು ಆರೋಪ, ಗೃಹ ಇಲಾಖೆಗೆ ದೂರು

ಸಚಿವ ಭೈರತಿ ಸುರೇಶ್ ಗ್ಯಾಂಗ್’ನಿಂದ ಕಂಡವರ ಜಾಮೀನು ಕಬಳಿಸಲು ನೆರವು ದಂಪತಿಯನ್ನು ದೂರ ಮಾಡಿರುವ ದುರುಳರಿಗೆ ಸಚಿವರ ಆಪ್ತರ ಸಾಥ್, ಸಚಿವ ಭೈರತಿ ಸುರೇಶ್ ಗ್ಯಾಂಗ್’ನಿಂದ ಕಂಡವರ ಜಾಮೀನು ಕಬಳಿಸಲು ನೆರವು, ಬೆಂಗಳೂರಿನ ಹೆಣ್ಣೂರು ಬಳಿ ದಾಂಧಲೆ, ಏಕಾಏಕಿ ಅತಿಕ್ರಮಣ ಪ್ರವೇಶ, ನಿಷೇಧಿತ ನಾಯಿ (Rottweiler Dog) ತಂದು ದಾಳಿಗೆ ಯತ್ನ, ಕೊಲೆಗೂ ಪಿತೂರಿ, ಡಿಜಿಪಿ, ಬೆಂಗಳೂರು ಪೊಲೀಸ್ ಆಯುಕ್ತರಿಗೂ ದೂರು ಸಲ್ಲಿಕೆ. ಪೊಲೀಸರ ಸಮ್ಮುಖದಲ್ಲೇ ರೌಡಿಗಳ ಪುಂಡಾಟ ನಡೆದಿರುವ ಆರೋಪ, ಸಚಿವ ಬೈರತಿ ನಿಕಟವರ್ತಿಗಳ ಹಾಗೂ […]

Continue Reading

ಚಿತ್ರ ನಿರ್ದೇಶಕ ‘ಮಠ’ ಗುರುಪ್ರಸಾದ್ ಆತ್ಮಹತ್ಯೆ..

ಬೆಂಗಳೂರಿನ ಮಾದನಾಯಕನ ಹಳ್ಳಿಯ ಅಪಾರ್ಟ್ಮೆಂಟಲ್ಲಿ ನೇಣಿಗೆ ಶರಣು. ಚಿತ್ರ ನಿರ್ದೇಶಕ, ಮಠ ಸಿನಿಮಾ ಖ್ಯಾತಿಯ ಗುರುಪ್ರಸಾದ್ ಫ್ಯಾನಿಗೆ ನೇಣು ಬಿಗಿದು ಮಾದನಾಯಕನ ಹಳ್ಳಿಯ ಅಪಾರ್ಟ್ ಮೆಂಟಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಫ್ಯಾನಿಗೆ ನೇಣು ಬಿಗಿದು ಕೊಂಡು ತೀರಾ ಕೊಳೆತ ಸ್ಥಿತಿಯಲ್ಲಿ ಗುರುಪ್ರಸಾದ್ ಮೃತದೇಹ ಪತ್ತೆಯಾಗಿದೆ.ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್, ಎರಡನೇ ಸಲ, ರಂಗನಾಯಕ ಸಿನಿಮಾ ಸೇರಿದಂತೆ ಹಲವಾರು ಚಲನಚಿತ್ರಗಳಿಗೆ ಗುರುಪ್ರಸಾದ್ ನಿರ್ದೇಶನ ಮಾಡಿ ಪ್ರಖ್ಯಾತಿಗಳಿಸಿದ್ದರು. ಹಲವುರಿಯಾಲಿಟಿ ಶೋಗಳಲ್ಲೂ […]

Continue Reading

ಗೋಮಾತೆಯ ಸ್ಮರಣಾರ್ಥ ಪ್ರಯಾಣಿಕರ ತಂಗುದಾಣ ನಿರ್ಮಿಸಿ ಸಮಾಜಕ್ಕೆ ಕೊಡುಗೆ ನೀಡಿದ ಬಂಟ್ವಾಳದ ನ್ಯಾಯವಾದಿ.

ಹೌದು..ಇದೊಂದು ರಾಜ್ಯದಲ್ಲಿ ಮಾತ್ರವಲ್ಲ. ದೇಶದಲ್ಲೇ ಪ್ರಪ್ರಥಮ ಅಪರೂಪದ ಸೇವಾ ಕಾರ್ಯ ಎಂದರೂ ಅತಿಶಯೋಕ್ತಿಯಲ್ಲ. ಹಿರಿಯರ ಹೆಸರಲ್ಲೋ, ಹೋರಾಟಗಾರರ ಹೆಸರಲ್ಲೋ, ಅಥವಾ ಸಮಾಜಕ್ಕೆ ಕೊಡುಗೆ ನೀಡಿದ ವ್ಯಕ್ತಿಗಳ ಹೆಸರಲ್ಲೋ ಸವಿನೆನಪಿಗಾಗಿ ತಂಗುದಾಣ ನಿರ್ಮಿಸಿ ಸಮಾಜಕ್ಕೆ ಕೊಡುಗೆ ನೀಡುವುದು ಪ್ರತಿನಿತ್ಯ ನೋಡುತ್ತಿದ್ದೇವೆ. ಆದರೆ ಬಂಟ್ವಾಳದಲ್ಲಿ ನ್ಯಾಯವಾದಿಯಾಗಿರುವ ಶ್ರೀಮತಿ ಚೇತನಾ ರಾಮಚಂದ್ರ ಶೆಟ್ಟಿಯವರು ತಮ್ಮ ಪ್ರೀತಿಯ ಗೋಮಾತೆ ಗೌರಿಯ ಸ್ಮರಣಾರ್ಥ ಅದ್ಧೂರಿಯಾಗಿ ಪ್ರಯಾಣಿಕರ ತಂಗುದಾಣ ನಿರ್ಮಿಸಿ ಸಾಮಾಜಕ್ಕೆ ಕೊಡುಗೆ ನೀಡುವ ಮೂಲಕ ಅಗಲಿದ ಗೋಮಾತೆಗೆ ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ. ಮೂಡುನಡುಗೋಡು […]

Continue Reading

ಲಂಚ ಪ್ರಕರಣ: ವೈಟ್ ಫೀಲ್ಡ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ರನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರಿಂದ 25 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ವೈಟ್ ಫೀಲ್ಡ್ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ಗಂಗಾಧರಯ್ಯ ಎಂಬವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 24 ರಂದು ವರ್ತೂರು ಬಳಿಯ ನಿವಾಸಿ ಅಂಬರೀಶ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಎಫ್‌ಐಆರ್ ನಲ್ಲಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಮತ್ತು ಇತರರನ್ನು ಹೆಸರಿಸಲಾಗಿದೆ. ಆರೋಪಿಗಳಿಗೆ ನ್ಯಾಯಾಲಯ ಈಗಾಗಲೇ ಜಾಮೀನು […]

Continue Reading

ಅಪ್ರಾಪ್ತ ಹುಡುಗಿಯ ಹುಚ್ಚಾಟ; 20 ಮಂದಿ HIV ಸೋಂಕಿಗೆ ಒಳಗಾಗಿರುವ ಆಘಾತಕಾರಿ ಘಟನೆ

ಡ್ರಗ್ಸ್ ಖರೀದಿಗಾಗಿ ಪುರುಷರನ್ನು ತನ್ನ ಬುಟ್ಟಿಗೆ ಹಾಕಿಕೊಂಡು, ಲೈಂಗಿಕ ಸುಖ ನೀಡಿ, ಉಚಿತ HIV ನೀಡಿದ ಅಪ್ರಾಪ್ತೆ ರಾಜ್ಯದಲ್ಲಿ ಎಚ್ ಐ ವಿ ಸೋಂಕು ಮತ್ತೆ ಜನರನ್ನು ಕಾಡುತ್ತಿದ್ದು, ಸೋಂಕಿನ ಸುಳಿಗೆ ಸುಶಿಕ್ಷಿತರು ಹಾಗೂ ಯುವ ಜನಾಂಗ ಹೆಚ್ಚಾಗಿ ಸಿಲುಕಿರುವುದು ಕಂಡುಬಂದಿದೆ. ಇತ್ತೀಚೆಗೆ ಅಪ್ರಾಪ್ತ ವಯಸ್ಸಿನ ಹುಡುಗಿಯ ಹುಚ್ಚಾಟಕ್ಕೆ ಸರಿ ಸುಮಾರು 20 ಮಂದಿ HIV ಸೋಂಕಿಗೆ ಒಳಗಾಗಿರುವ ಆಘಾತಕಾರಿ ಘಟನೆ ರಾಮನಗರದ ನೈನಿತಾಲ್ ಎಂಬ ಪ್ರದೇಶದಲ್ಲಿ ನಡೆದಿದೆ. ಈ ಹುಡುಗಿ ಡ್ರಗ್ಸ್ ಚಟಕ್ಕೆ ದಾಸಳಾಗಿದ್ದಳು. ಡ್ರಗ್ಸ್ […]

Continue Reading

ಮೌಲ್ಯ ಕಳೆದುಕೊಳ್ಳುತ್ತಿರುವ ರಾಜ್ಯೋತ್ಸವ ಪ್ರಶಸ್ತಿ!

ಅನರ್ಹರ ಸಾಲಲ್ಲಿ ಅರ್ಹರು ಸೇರಿಕೊಂಡಾಗ ಅವರಿಗೆ ಮುಜುಗರವಾಗುವುದು ಸಹಜ ಮೌಲ್ಯ ಕಳೆದುಕೊಳ್ಳುತ್ತಿರುವ ರಾಜ್ಯೋತ್ಸವ ಪ್ರಶಸ್ತಿ! ಹೌದು ರಾಜ್ಯೋತ್ಸವ ‌ಪ್ರಶಸ್ತಿ ಮೌಲ್ಯ ಕಳೆದುಕೊಳ್ಳುತ್ತಿವೆ. ಅದಕ್ಕೆ ಕಾರಣ ನೂರಾರು. ಅನರ್ಹರ ಸಾಲಲ್ಲಿ ಅರ್ಹರು ಸೇರಿಕೊಂಡಾಗ ಅವರಿಗೆ ಮುಜುಗರವಾಗುವುದು ಸಹಜ. ರಾಜ್ಯಮಟ್ಟದಲ್ಲಿ ನೀಡುವ ಪ್ರಶಸ್ತಿಯ ಜೊತೆ ಹಣ+ಚಿನ್ನವಿದೆ‌. ಜಿಲ್ಲಾ ಮಟ್ಟದಲ್ಲಿ ನೀಡುವ ಈ ಪ್ರಶಸ್ತಿಯ ಜೊತೆ ನಯಾಪೈಸೆಯಿಲ್ಲ. ಆದರೂ ಈ ಪ್ರಶಸ್ತಿಯನ್ನು ದಕ್ಕಿಸಿಕೊಳ್ಳಲು ನಡೆಸುವ ಪ್ರಯತ್ನ ಅಚ್ಚರಿ ಹುಟ್ಟಿಸಿವೆ. ಈ ಬಾರಿ‌ ಜಿಲ್ಲಾ ಮಟ್ಟದಲ್ಲಿ ನೀಡುವ ಪ್ರಶಸ್ತಿಯ ಹೆಸರನ್ನು ಬದಲಾಯಿಸಲಾಗಿದೆ. ಜಿಲ್ಲಾ […]

Continue Reading

ಪುನೀತ್ ಕೆರೆಹಳ್ಳಿ ಬೆಳ್ತಂಗಡಿಯ ಅತಿಥಿಯಾಗೋದು ಸಿರಿ-ಜುಮಾದಿಗೆ ಅವಮಾನ: ನವೀನ್ ಸೂರಿಂಜೆ

ಕಾಂತುಪೂಂಜಾ, ದೇವು ಪೂಂಜಾರಿಂದ ಹರೀಶ್ ಪೂಂಜಾ ಕಲಿಯಬೇಕಿರೋದೇನು.? ಮಹಿಳೆಯನ್ನು ವೇಶ್ಯಾವಾಟಿಕೆಗೆ ದೂಡುವ ವ್ಯಕ್ತಿಯನ್ನು ಕರಾವಳಿಯ ನೆಲದಲ್ಲಿ ಮೆರೆದಾಡಿಸಬಹುದೇ? ಬೆಳ್ತಂಗಡಿಯ ಜನ ಸಿರಿ- ಜುಮಾದಿ ಹಾಕಿಕೊಟ್ಟ ನೈತಿಕತೆಯ ಗೆರೆಯನ್ನು ಮೀರಲಾರರು ಎಂಬ ನಂಬಿಕೆಯನ್ನು ನಿಜಗೊಳಿಸಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಅಕ್ಟೋಬರ್ 31 ರಂದು ನಡೆಯುವ ದೀಪಾವಳಿ ಹಬ್ಬದ ಗೋಪೂಜಾ ಕಾರ್ಯಕ್ರಮಕ್ಕೆ ಪುನೀತ್ ಕೆರೆಹಳ್ಳಿಯನ್ನು ಕರೆಸಲಾಗುತ್ತಿದೆ. ಶಾಸಕ ಹರೀಶ್ ಪೂಂಜಾ ಅವರೇ ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದು, ಈ ಹಿಂದೆ ವೇಶ್ಯಾವಾಟಿಕೆಯ ಆರೋಪಿಯಾಗಿದ್ದ ಪುನೀತ್ ಕೆರೆಹಳ್ಳಿಗೆ ಸ್ವಾಗತ ಕೋರುತ್ತಿದ್ದಾರೆ. […]

Continue Reading

ಯಾರ ಶಾಪವೋ.. ಮತ್ತೆ ಅನಾಥ ಕಾರವಾರ ಕ್ಷೇತ್ರ.!

ವಸಂತ ಅಸ್ನೋಟಿಕರ್ ಹತ್ಯೆ, ಆನಂದ್ ಅನರ್ಹತೆ, ಸೈಲ್ ಜೈಲು.! ಬೆಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್ ಗೆ ಜೈಲು ಶಿಕ್ಷೆಯಾಗಿದ್ದರಿಂದ ಶಾಸಕ ಸ್ಥಾನವೂ ರದ್ದಾಗುತ್ತಿದೆ. ಕ್ಷೇತ್ರ ಮತ್ತೊಮ್ಮೆ ಶಾಸಕರಿಲ್ಲದೆ ಅತಂತ್ರ ಸ್ಥಿತಿ ಎದುರಿಸುವಂತಾಗಿದೆ. 2009-10 ರ ಅವಧಿಯಲ್ಲಿ ಬಳ್ಳಾರಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ 11,312 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು 2010 ರಲ್ಲಿ ಬೆಲೆಕೇರಿ ಬಂದರಿನಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಆದರೆ, ಆರೋಪಿಗಳು ಅಧಿಕಾರಿಗಳೊಂದಿಗೆ ಶಾಮೀಲಾಗಿ ಚೀನಾಗೆ ಕಳ್ಳಸಾಗಣೆ ಮಾಡಿದ ಪ್ರಕರಣ […]

Continue Reading