ನನ್ನನ್ನು ಬಂಧಿಸುವಂತೆ ಸಿಬಿಐಗೆ ಬಿಜೆಪಿ ಸೂಚನೆ ನೀಡಲಾಗಿದೆ. ಸಿಬಿಐ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ: ಸಿಎಂ ಕೇಜ್ರಿವಾಲ್

ಸಿಬಿಐ ಮುಂದೆ ಹಾಜರಾಗುವ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್,ಬಿಜೆಪಿ ತನ್ನನ್ನು ಬಂಧಿಸುವಂತೆ ತನಿಖಾ ಸಂಸ್ಥೆಗೆ ಆದೇಶಿಸಿರಬಹುದು ಮತ್ತು ಅವರು ಬಹಳ ಶಕ್ತಿಶಾಲಿಗಳು ಮತ್ತು ಯಾರನ್ನಾದರೂ ಜೈಲಿಗೆ ಕಳುಹಿಸಬಹುದು ಎಂದು ಹೇಳಿದ್ದಾರೆ.ಟ್ವಿಟರ್‌ನಲ್ಲಿ ಐದು ನಿಮಿಷಗಳ ವೀಡಿಯೊ ಸಂದೇಶದಲ್ಲಿ, ಕೇಜ್ರಿವಾಲ್ ಅವರು ಅಬಕಾರಿ ಪ್ರಕರಣದಲ್ಲಿ ಸಿಬಿಐ ಕೇಳುವ ಪ್ರಶ್ನೆಗಳಿಗೆ ಸತ್ಯವಾಗಿ ಮತ್ತು ಪ್ರಾಮಾಣಿಕವಾಗಿ ಉತ್ತರಿಸುವುದಾಗಿ ಹೇಳಿದ್ದಾರೆ.ಏಕೆಂದರೆ ನನಗೆ ಮುಚ್ಚಿಡಲು ಏನೂ ಇಲ್ಲ.ಇಂದು ಸಿಬಿಐನಿಂದ ನನಗೆ ಸಮನ್ಸ್ ನೀಡಲಾಗಿದೆ ಮತ್ತು ನಾನು ಎಲ್ಲದಕ್ಕೂ ಪ್ರಾಮಾಣಿಕವಾಗಿ ಉತ್ತರಗಳನ್ನು ನೀಡುತ್ತೇನೆ. ಈ ಜನರು […]

Continue Reading

ನಡುಗಿದ ಉ.ಪ್ರ ಮಾಫಿಯಾ, ಗ್ಯಾಂಗ್‌ಸ್ಟರ್ ಅತೀಕ್ ಪುತ್ರನ ಎನ್‌ಕೌಂಟರ್.!

ಶಾಸಕ ರಾಜು ಪಾಲ್ ಹತ್ಯೆ ಪ್ರಮುಖ ಸಾಕ್ಷಿ, ಉಮೇಶ್‌ ಪಾಲ್‌ ಕೊಲೆ ಪ್ರಕರಣ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಪ್ರಶ್ನಿಸಿತ್ತು. ಇದರ ಬೆನ್ನಲ್ಲೇ ಉತ್ತರ ಪ್ರದೇಶದ ಮಾಫಿಯಾ ಗ್ಯಾಂಗ್‌ನ್ನು ನಿರ್ಣಾಮ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶಪಥ ಮಾಡಿದ ಬೆನ್ನಲ್ಲೇ ಯುಪಿ ಪೊಲೀಸರು ಉಮೇಶ್ ಪಾಲ್ ಹತ್ಯೆ ಆರೋಪಿಗಳನ್ನು ಹುಡುಕಿ ಹುಡುಕಿ ಹತ್ಯೆಗೈದಿದ್ದಾರೆ.ರಾಜು ಪಾಲ್ ಹತ್ಯೆ ಮಾಡಿದ ಅಪರಾಧಿ ಗ್ಯಾಂಗ್‌ಸ್ಟರ್ ಅತೀಕ್ ಅಹಮ್ಮದ್ ನನ್ನು ಒಂದೊಂದು ವಾರ ಒಂದೊಂದು ಜೈಲಿಗೆ ಕರೆದೊಯ್ಯಲಾಗುತ್ತಿದೆ. ಇದರ ಬೆನ್ನಲ್ಲೇ ಉಮೇಶ್ […]

Continue Reading

ಮುಚ್ಚಲಿದೆ ಭಾರತದ ಮತ್ತೊಂದು ಬ್ಯಾಂಕ್

ದೇಶದಲ್ಲಿ ವಿತ್ತ ವಲಯದಲ್ಲಿ ಸಾಕಷ್ಟು ಸಂಚಲನ ಆಗುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಸರ್ಕಾರಿ ಬ್ಯಾಂಕುಗಳು ಖಾಸಗಿಕರಣಗೊಳ್ಳಲಿವೆ. ಇದೇ ಹಿನ್ನಲೆಯಲ್ಲಿ ಮತ್ತೊಂದು ದೊಡ್ಡ ಬ್ಯಾಂಕ್ ಕೂಡ ಖಾಸಗಿಕರಣಗೊಳ್ಳುತ್ತಿದೆ.ಮೂಲಗಳ ಪ್ರಕಾರ ಬಂದಿರುವ ಮಾಹಿತಿಯ ಅನುಸಾರ ಐಡಿಬಿಐ ಬ್ಯಾಂಕ್ ನ ಖಾಸಗಿಕರಣ ಈಗಾಗಲೇ ಕ್ಷಿಪ್ರಗತಿಯಲ್ಲಿ ಸಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಕೆಲವು ದಿನಗಳಿಂದ ಐಡಿಬಿಐ ಬ್ಯಾಂಕಿನ ಹೂಡಿಕೆಯ ಪ್ರಕ್ರಿಯೆಯನ್ನು ಮುಂದೂಡಲಾಗುತ್ತದೆ ಎಂಬುದಾಗಿ ಹೇಳಲಾಗುತ್ತಿತ್ತು.ಸದ್ಯಕ್ಕೆ ಐಡಿಬಿಐ ಬ್ಯಾಂಕಿನ 61% ಪಾಲನ್ನು ಎಲ್ಐಸಿ ಹೊಂದಿದೆ ಎಂಬುದಾಗಿ ತಿಳಿದು ಬಂದಿದೆ. ಬ್ಯಾಂಕಿನ ಖಾಸಗಿಕರಣದ ಬಿಡ್ಡಿಗಾಗಿ ಈಗಾಗಲೇ ವರ್ಷದ […]

Continue Reading

ಅಮೃತಪಾಲ್ ಸಿಂಗ್ ಆಪ್ತ ಸಹಾಯಕ ಪಾಪಲ್ಪ್ರೀತ್ ಸಿಂಗ್ ನನ್ನು ಹೋಶಿಯಾರ್ಪುರದಲ್ಲಿ ಬಂಧನ

ಚಂಡೀಗಡ:ಮೂಲಭೂತವಾದಿ ಬೋಧಕ ಅಮೃತಪಾಲ್ ಸಿಂಗ್ ಅತನ ಆಪ್ತ ಸಹಾಯಕ ಪಾಪಲ್ಪ್ರೀತ್ ಸಿಂಗ್ ಅವರನ್ನು ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಬಂಧಿಸಲಾಗಿದೆ.ಪಂಜಾಬ್ ಪೊಲೀಸರ ಕಾರ್ಯಾಚರಣೆಯಲ್ಲಿ ಪಾಪಲ್‌ಪ್ರೀತ್‌ ಸಿಂಗ್ ನನ್ನು ಬಂಧಿಸಲಾಯಿತು.ಪಾಪಲ್‌ಪ್ರೀತ್‌ ಅಮೃತ್ ಪಾಲ್ ಸಿಂಗ್ ರವರ ಮಾರ್ಗದರ್ಶಕ ಎಂದು ಪರಿಗಣಿಸಲಾಗಿದ್ದು,ಪಾಕಿಸ್ತಾನದ ಐಎಸ್‌ಐ ಜತೆ ನೇರ ಸಂಪರ್ಕದಲ್ಲಿದ್ದ ಎನ್ನಲಾಗಿದೆ.ಮಾರ್ಚ್ 18 ರಿಂದ ಪಂಜಾಬ್ ಪೊಲೀಸರು ಖಲಿಸ್ತಾನ್ ಪರ ಸಹಾನುಭೂತಿ ಹೊಂದಿದ,ಮತ್ತು ಆತನ ಸಹಾಯಕರ ವಿರುದ್ಧದ ಕಾರ್ಯಚರಣೆಗೆ ಇಳಿದಾಗ ಅಮೃತಪಾಲ್ ಮತ್ತು ಪಾಪಲ್ಪ್ರೀತ್ ಪರಾರಿಯಾಗಿದ್ದರು. ಅಮೃತಪಾಲ್ ಸಿಂಗ್ ಮಾರ್ಚ್ 18 ರಂದು ಜಲಂಧರ್ ಜಿಲ್ಲೆಯಲ್ಲಿ […]

Continue Reading

ಸರಕಾರದ ವಿರುದ್ದ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಘೋಷಣೆ:ಸಚಿನ್‌ ಪೈಲಟ್‌

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ಭಿನ್ನಾಭಿಪ್ರಾಯ ಮತ್ತೊಮ್ಮೆ ಬೀದಿಗೆ ಬಂದಿದೆ.ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧದ ಆರೋಪಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಗೆಹ್ಲೋಟ್‌ಗೆ ಮನವಿ ಮಾಡಿದ್ದೆ ಆದರೆ ಯಾವುದೇ ಉತ್ತರ ಸಿಕ್ಕಿಲ್ಲ.ಎಂದು ಸಚಿನ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಭ್ರಷ್ಟಾಚಾರ ವಿರೋಧಿಸಿ ನಾನು ಏಪ್ರಿಲ್‌ 11ರಂದು ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳುವೆ ಎಂದು ಅವರು ಹೇಳಿದ್ದಾರೆ.ನಾವು ಒಟ್ಟಾಗಿ ವಸುಂಧರಾ ಅವರ ಸರ್ಕಾರದ ವಿರುದ್ಧ ಆ ಆರೋಪಗಳನ್ನು ಮಾಡಿದ್ದೇವೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ […]

Continue Reading

ಕೇರಳದ ಆಧಿವಾಸಿ ಮಧು ಹತ್ಯೆ ಪ್ರಕರಣದಲ್ಲಿ 14 ಮಂದಿ ತಪ್ಪಿತಸ್ಥರು; ಇಂದು ಶಿಕ್ಷೆ ಪ್ರಕಟ

2018ರ ಫೆ.22ರಂದು ಮಧು ಎಂಬ ಆದಿವಾಸಿ ಯುವಕನೊಬ್ಬನನ್ನು ಗುಂಪೊಂದು ದಾಳಿ ಮಾಡಿ ಬಲಿತೆಗೆದುಕೊಂಡಿತು.ಮಾನಸಿಕ ಅಸ್ವಸ್ಥನಾಗಿದ್ದ ಮಧು ತನ್ನ ಕುಟುಂಬದಿಂದ ದೂರವಿರುವ ಕಾಡಿನ ಗುಹೆಯಲ್ಲಿ ವಾಸಿಸುತ್ತಿದ್ದ. ಜನರ ಗುಂಪೊಂದು ಮಧುವನ್ನು ಕಳ್ಳ ಎಂದು ಆರೋಪಿಸಿ ಕಾಡಿನಿಂದ ಹಿಡಿದು ಊರಿಗೆ ಕರೆತಂದಿತ್ತು ಕಳ್ಳನೆಂದು ಆರೋಪಿಸಿ ಜನರು ಹೊಡೆದು ಕೊಂದರು.ಈ ಹತ್ಯೆ ಪ್ರಕರಣದಲ್ಲಿ 14 ಮಂದಿ ತಪ್ಪಿತಸ್ಥರೆಂದು ತೀರ್ಮಾನಿಸಿದ ನ್ಯಾಯಾಲಯ ಶಿಕ್ಷೆಯನ್ನು ಇಂದು ಪ್ರಕಟಿಸಲಿದೆ. ಇಬ್ಬರನ್ನು ಖುಲಾಸೆ ಮಾಡಲಾಯಿತು. ಈ ಪ್ರಕರಣದಲ್ಲಿ 4ನೇ ಮತ್ತು 11ನೇ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಪ್ರಕರಣದಲ್ಲಿ 16 […]

Continue Reading

ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿದ ಮ್ಯಾಜಿಸ್ಟ್ರೇಟ್ ಜಿಲ್ಲಾ ನ್ಯಾಯಾಧೀಶರಾಗಿ ಬಡ್ತಿ

ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿದ ಸೂರತ್ ಮ್ಯಾಜಿಸ್ಟ್ರೇಟ್ ಹರೀಶ್ ಹಸ್ಮುಖ್ ವರ್ಮಾ ಅವರಿಗೆ ಬಡ್ತಿ ನೀಡಲಾಗಿದೆ. ವರ್ಮಾ ಅವರು ಜಿಲ್ಲಾ ನ್ಯಾಯಾಧೀಶರಾಗಿ ಬಡ್ತಿ ಪಡೆದಿದ್ದಾರೆ.ಮೋದಿ ಸಮುದಾಯಕ್ಕೆ ಮಾನಹಾನಿ ಮಾಡಿದ ಪ್ರಕರಣದಲ್ಲಿ ರಾಹುಲ್‌ಗೆ ಸೂರತ್ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ತೀರ್ಪಿನ ನಂತರ 15,000 ರೂ.ಗಳ ಬಾಂಡ್ ಮೇಲೆ ಜಾಮೀನು ನೀಡಲಾಯಿತು. ಕರ್ನಾಟಕದ ಕೋಲಾರದಲ್ಲಿ 2019 ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಲಾಯಿತು.ಕಳ್ಳರೆಲ್ಲರಿಗೂ ಮೋದಿ ಎಂಬ ಉಪನಾಮ ಹೇಗೆ ಬಂತು.? […]

Continue Reading

ನನ್ನನ್ನು ಬೆತ್ತಲೆ ಮಾಡಲು ಯತ್ನಿಸಿದರು, ತಮ್ಮ ಜೀವನದಲ್ಲಾದ ಕಹಿ ಘಟನೆಯನ್ನು ಬಿಚ್ಚಿಟ್ಟ ಜಿಲ್ಲಾಧಿಕಾರಿ

ಕೇರಳ ರಾಜ್ಯದ ಪಟ್ಟಣಂತಿಟ್ಟ ಹಿಲ್ಲೆಯ ಜಿಲ್ಲಾಧಿಕಾರಿ ದಿವ್ಯಾ ಎಸ್ ಅಯ್ಯರ್ ತಮ್ಮ ಜೀವನದಲ್ಲಿ ಆಗಿರುವ ಕರಾಳ ಘಟನೆಯೊಂದನ್ನು ಮಾಧ್ಯಮದ ಮುಂದೆ ಬಿಚ್ಚಿಟ್ಟಿದ್ದಾರೆ. ತಾನು ಆರನೇ ವಯಸ್ಸಿನಲ್ಲಿದ್ದಾಗ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದನ್ನು ಹಾಗೂ ಆ ನೋವಿನಿಂದ ಹೊರಬಂದಿದ್ದು ಹೇಗೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ದೌರ್ಜನ್ಯಕ್ಕೊಳಗಾಗಿರುವ ಮಕ್ಕಳ ಕುರಿತು ವರದಿ ಮಾಡುವ ವೇಳೆ ಗಮನಿಸಬೇಕಾದ ಮುಖ್ಯ ಅಂಶಗಳ ಬಗ್ಗೆ ಮಾಧ್ಯಮಗಳಿಗೆ ಎಚ್ಚರಿಕೆ ನೀಡಲು ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ದಿವ್ಯಾ ಎಸ್ ಅಯ್ಯರ್ ಉದ್ಘಾಟಿಸಿ ಮಾತನಾಡಿದರು. […]

Continue Reading

ಹೆಣ್ಣಳ್ಳ ಗಂಡು ಮಹಿಳೆಯಂತೆ ಕಾಣುವ ಪುರುಷ.!

ಕೊಲ್ಲಂ ಜಿಲ್ಲೆಯಲ್ಲಿ ನಡೆಯುವ ಕೊಟ್ಟಕುಳಂಗರ ಚಾಮಾಯವಿಲಿಕ್ಕು ಉತ್ಸವದಲ್ಲಿ ಮಹಿಳೆಯಂತೆ ರೂಪಾಂತರಗೊಳ್ಳುವ ಸ್ಪರ್ಧೆಯಲ್ಲಿ, ಈ ವ್ಯಕ್ತಿಯು ಪ್ರಥಮ ಬಹುಮಾನಗಳಿಸಿದ್ದಾರೆ. ಚಿತ್ರದಲ್ಲಿ ಕಾಣು ವ್ಯಕ್ತಿ ಹೆಣ್ಣಳ್ಳ,ಗಂಡು ಎಂದರೆ ಅಚ್ಚರಿಯಾಗಬಹುದು. ಕೇರಳದಲ್ಲಿ ನಡೆಯುವ ಈ ವಿಶಿಷ್ಟ ಪದ್ದತಿಯ ಉತ್ಸವದಲ್ಲಿ ಇಂಥದೊಂದು ಸಂಪ್ರದಾಯವಿದೆ. ಮಾರ್ಚ್‌ ಉತ್ತರಾರ್ಧದಲ್ಲಿ ಮಲಯಾಳದ ಮೀನ ಮಾಸದ 10-11ನೇ ದಿನದಲ್ಲಿ, ಅಲ್ಲಿನ ದೇವಿ ದೇವಸ್ಥಾನ ಒಂದರಲ್ಲಿ ಈ ಉತ್ಸವ ನಡೆಯುತ್ತದೆ. ಈ ಉತ್ಸವದಲ್ಲಿ ಪ್ರತಿ ವರ್ಷದಂತೆ, ಈ ವರ್ಷ ನಡೆದ ಮಹಿಳಾ ಮೇಕಪ್ ಸ್ಪರ್ಧೆಯಲ್ಲಿ ಮಹಿಳೆಯಂತೆ ವೇಷ ಧರಿಸಿ ಮೊದಲ […]

Continue Reading

ಕೇಂದ್ರದ ವಿರುದ್ಧ 2 ದಿನಗಳ ಧರಣಿ ಆರಂಭಿಸಿದ ಮಮತಾ, ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ಪಕ್ಷಗಳಿಗೆ ಮನವಿ

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕು ಮತ್ತು ಭಾರತೀಯ ಪ್ರಜಾಪ್ರಭುತ್ವವನ್ನು ಉಳಿಸಲು ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ದೇಶದ ಎಲ್ಲಾ ರಾಜಕೀಯ ಪಕ್ಷಗಳಿಗೆ ಒತ್ತಾಯಿಸಿದ್ದಾರೆ.ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರೂ ಆಗಿರುವ ಬ್ಯಾನರ್ಜಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ರಾಜ್ಯಕ್ಕೆ ತಾರತಮ್ಯ ಧೋರಣೆ ತೋರುತ್ತಿರುವುದನ್ನು ವಿರೋಧಿಸಿ ಹಗಲಿನಲ್ಲಿ ಎರಡು ದಿನಗಳ ಧರಣಿ ಸತ್ಯಾಗ್ರಹ ಆರಂಭಿಸಿದರು. 2024 ರ ಸಂಸತ್ ಚುನಾವಣೆಯು ದೇಶದ ನಾಗರಿಕರು ಮತ್ತು ಬಿಜೆಪಿ […]

Continue Reading