ಬಂಧಿಸುವ ಉದ್ದೇಶವಾಗಿದ್ದರೆ ಪೊಲೀಸರು ಮನೆಗೆ ಬರುತ್ತಿದ್ದರು: ಅಮೃತಪಾಲ್

ಸಿಖ್‌ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತಪಾಲ್‌ ಸಿಂಗ್ ಅವರದ್ದು ಎನ್ನಲಾದ ಹೊಸ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೊದಲ್ಲಿ ಕಪ್ಪು ಪೇಟ, ಶಾಲು ಧಿರಿಸಿನಲ್ಲಿ ಕಾಣಿಸಿಕೊಂಡ ಅಮೃತಪಾಲ್, ತಮ್ಮ ಸಹಚರರನ್ನು ಬಂಧಿಸಿರುವುದಕ್ಕೆ ಪಂಜಾಬ್ ಪೊಲೀಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪಂಜಾಬ್ ಸರ್ಕಾರವು ತಮ್ಮನ್ನು ಬಂಧಿಸುವ ಉದ್ದೇಶ ಹೊಂದಿದ್ದರೆ ನನ್ನ ಮನೆಗೆ ಬರಬಹುದಿತ್ತು. ನಾನು ಶರಣಾಗುತ್ತಿದ್ದೆ ಎಂದು ಹೇಳಿದ್ದಾರೆ. ಆದರೆ ಲಕ್ಷಾಂತರ ಪೊಲೀಸರ ಪ್ರಯತ್ನವನ್ನು ದೇವರು ವಿಫಲಗೊಳಿಸಿದ್ದಾನೆ ಎಂದು ತಿಳಿಸಿದ್ದಾರೆ. ಅಮೃತಪಾಲ್ ಶರಣಾಗುವ ಸಾಧ್ಯತೆಯಿದೆ ಎಂಬ ವರದಿಗಳ ನಡುವೆ […]

Continue Reading

ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದಿಂದ ಮುಂಬೈ ಪೊಲೀಸ್ ಇಲಾಖೆಗೆ ದಯಾನಾಯಕ್ ವರ್ಗಾವಣೆ.

ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತರಾಗಿರುವ ಕಾರ್ಕಳ ಮೂಲದ ಇನ್ಸ್‌ಪೆಕ್ಟರ್ ದಯಾನಾಯಕ್ ಅವರನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದಿಂದ ಮುಂಬೈ ಪೊಲೀಸ್ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.ದಯಾ ನಾಯಕ್ ಮತ್ತು ಇತರ ಏಳು ಮಂದಿ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಗೆ ಸಂಬಂಧಿಸಿದ ಆದೇಶವನ್ನು ಮಹಾರಾಷ್ಟ್ರ ಪೊಲೀಸ್‌ನ ಹೆಚ್ಚುವರಿ ಮಹಾನಿರ್ದೇಶಕರು ಹೊರಡಿಸಿದ್ದಾರೆ. ದಯಾ ನಾಯಕ್ ಇನ್ಸ್‌ಪೆಕ್ಟರ್‌ಗಳಾದ ಜ್ಞಾನೇಶ್ವರ್ ವಾಘ್ ಮತ್ತು ದೌಲತ್ ಸಾಳ್ವೆ ಅವರನ್ನೂ ಎಟಿಎಸ್‌ನಿಂದ ಮುಂಬೈ ಪೊಲೀಸ್ ಇಲಾಖೆಗೆ ವರ್ಗಾಯಿಸಲಾಗಿದೆ. ATSನಲ್ಲಿದ್ದಾಗ, ದಯಾ ನಾಯಕ್ ಅವರು 2021 ರಲ್ಲಿ ಥಾಣೆ ಉದ್ಯಮಿ ಮನ್ಸುಖ್ […]

Continue Reading

ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸಕ್ರಿಯ ರಾಜಕಾರಣಕ್ಕೆ,ಬಿಜೆಪಿ ಕಾನೂನು ಘಟಕದಲ್ಲಿ ಸ್ಥಾನ

ವಿದೇಶಾಂಗ ವ್ಯವಹಾರ ಖಾತೆ ಮಾಜಿ ಸಚಿವೆ, ದಿ.ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್ ಅವರನ್ನು ದೆಹಲಿಯ ಬಿಜೆಪಿ ಕಾನೂನು ಘಟಕದ ಸಹ ಸಂಚಾಲಕರನ್ನಾಗಿ ನೇಮಕ ಮಾಡುವ ಮೂಲಕ ಬಾನ್ಸುರಿ ರಾಜಕೀಯಕ್ಕೆ ಕಾಲಿಟ್ಟಂತಾಗಿದೆ.ಬಾನ್ಸುರಿ ಅವರು ಪ್ರಸ್ತುತ ಹರ್ಯಾಣದಲ್ಲಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಾನ್ಸುರಿ ವಾರ್ವಿಕ್ ಯೂನಿರ್ವಸಿಟಿಯಲ್ಲಿ ಇಂಗ್ಲಿಷ್ ಲಿಟರೇಚರ್ (ಇಂಗ್ಲಿಷ್ ಸಾಹಿತ್ಯ)ನಲ್ಲಿ ಪದವಿ ಪಡೆದಿದ್ದು, ಲಂಡನ್ ನ ಬಿಪಿಪಿ ಲಾ ಸ್ಕೂಲ್ ನಲ್ಲಿ ಕಾನೂನು ಪದವಿ ಪಡೆದಿದ್ದಾರೆ. ಆಕ್ಸ್ ಫರ್ಡ್ ಯೂನಿರ್ವಸಿಟಿಯಲ್ಲಿ ಬ್ಯಾರಿಸ್ಟರ್ ಲಾ ಹಾಗೂ […]

Continue Reading

ಕೇಂದ್ರ ಸಚಿವ ನಿತಿನ್‌ ಗಡ್ಕರಿಗೆ ಹಿಂಡಲಗಾ ಜೈಲಿನಿಂದ ಎರಡನೇ ಬಾರಿ ಬೆದರಿಕೆ ಕರೆ.!

ಕೆಲ ವಾರಗಳ ಹಿಂದೆ ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಕರೆ ಬಂದಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿರುವಾಗಲೇ,ಅದೇ ಸ್ಥಳದಿಂದ ಗಡ್ಕರಿ ಅವರ ಕಚೇರಿಗೆ ಮತ್ತೊಂದು ಬೆದರಿಕೆ ಕರೆ ಬಂದಿದೆ. ಎರಡನೇ ಬಾರಿಗೆ ಸಚಿವರ ಕಚೇರಿಗೆ ದೂರವಾಣಿ ಕರೆ ಮಾಡಿದ ಹಿನ್ನೆಲೆಯಲ್ಲಿ ಗುರುವಾರ ತಡರಾತ್ರಿ ಮಹಾರಾಷ್ಟ್ರದ ಪೊಲೀಸ್ ಅಧಿಕಾರಿಗಳ ತಂಡ ಹಿಂಡಲಗಾ ಕಾರಾಗೃಹದಲ್ಲಿ ತಪಾಸಣೆ ನಡೆಸಿತು. ಮೂಲಗಳ ಪ್ರಕಾರ, ಕರೆ ಮಾಡಿದವರು ಗಡ್ಕರಿ ಅವರ ಕಚೇರಿಗೆ ಕರೆ ಮಾಡಿ ಕೋಟ್ಯಂತರ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. […]

Continue Reading

ಟೋಲ್ ಪ್ಲಾಜಾ ರದ್ದು,ಆರು ತಿಂಗಳಲ್ಲಿ ಹೊಸ ವ್ಯವಸ್ಥೆ ಜಾರಿ;ಹೆದ್ದಾರಿಗಳಲ್ಲಿ ಜಿಪಿಎಸ್ ಅಧಾರಿತ ಟೋಲ್ ವ್ಯವಸ್ಥೆ:ನಿತಿನ್ ಗಡ್ಕರಿ

ದೇಶದಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಹೆದ್ದಾರಿ ಟೋಲ್ ಪ್ಲಾಜಾಗಳನ್ನು ಬದಲಿಸಿ, ಆರು ತಿಂಗಳಲ್ಲಿ ಹೊಸ ತಂತ್ರಜ್ಞಾನವನ್ನೊಳಗೊಂಡ ಜಿಪಿಎಸ್‌ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.ಈ ಹೊಸ ವ್ಯವಸ್ಥೆಯು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಹಾಗೂ ಹೆದ್ದಾರಿಗಳಲ್ಲಿ ಪ್ರಯಾಣಿಸಿದ ನಿಖರ ದೂರಕ್ಕೆ ಶುಲ್ಕವನ್ನು ವಿಧಿಸುವ ಗುರಿಯನ್ನು ಹೊಂದಿದೆ ಎಂದೂ ಅವರು ತಿಳಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್ಎಐ) ಟೋಲ್‌ನಿಂದ ಸಂಗ್ರಹವಾಗುವ ಆದಾಯವು ₹.40,೦೦೦ ಕೋಟಿಯಷ್ಟು […]

Continue Reading

ಸಚಿವಾಲಯ ಅಧಿಸೂಚನೆ; ರಾಹುಲ್ ಗಾಂಧಿ ಸದಸ್ಯತ್ವದಿಂದ ಅನರ್ಹ.

ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿ ಲೋಕಸಭೆ ಸಚಿವಾಲಯ ಅಧಿಸೂಚನೆ ಶುಕ್ರವಾರ ಹೊರಡಿಸಿದೆ. ಸೂರತ್‌ನ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರಿಗೆ ಶಿಕ್ಷೆ ವಿಧಿಸಿದ ಪರಿಣಾಮವಾಗಿ, ಕೇರಳದ ವಯನಾಡ್ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯರಾದ ಶ್ರೀ ರಾಹುಲ್ ಗಾಂಧಿ ಅವರು ಅಪರಾಧ ಸಾಬೀತಾದ ದಿನಾಂಕದಿಂದ ಲೋಕಸಭೆಯ ಸದಸ್ಯತ್ವದಿಂದ ಅನರ್ಹರಾಗಿದ್ದಾರೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖವಾಗಿದೆ. ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಕೋಲಾರದಲ್ಲಿ ಮಾತನಾಡಿದ್ದ ರಾಹುಲ್‌, ನೀರವ್‌ ಮೋದಿಯಾಗಿರಲಿ, ಲಲಿತ್‌ […]

Continue Reading

ಇದು ಯಾರ ದರ್ಗಾ.? ಈ ದರ್ಗಾ ಕೆಡವದಿದ್ದರೆ ಇದೇ ಜಾಗದಲ್ಲಿ ಗಣಪತಿ ದೇವಸ್ಥಾನ ಕಟ್ಟುತ್ತೇನೆ; ರಾಜ್ ಠಾಕ್ರೆ

ರಾಜ್ ಠಾಕ್ರೆ ವಾರ್ನಿಂಗ್ ನೀಡಿದ 24 ಗಂಟೆಯೊಳಗೆ ದರ್ಗಾ ಕೆಡವಿದ ಮುಂಬೈ ಪೊಲೀಸ್ ಮುಂಬೈನ ಮಾಹಿಮ್ ಸಮುದ್ರದಲ್ಲಿ ಅಕ್ರಮ ದರ್ಗಾ ಕಟ್ಟಲಾಗಿದೆ.ಈ ದರ್ಗಾವನ್ನು ಕೆಡವದಿದ್ದರೆ ಇದೇ ಜಾಗದಲ್ಲಿ ಗಣಪತಿ ದೇವಸ್ಥಾನ ಕಟ್ಟುತ್ತೇನೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ. ಗುಡಿ ಪಾಡ್ವಾ ಅಂಗವಾಗಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜ್ ಠಾಕ್ರೆ, ಮುಂಬೈನ ಮಾಹಿಮ್ ಸಮುದ್ರದಲ್ಲಿ ಒಂದು ದರ್ಗಾ ಕಾಣಿಸುತ್ತಿದೆ. ಇದು ಯಾರ ದರ್ಗಾ.? ಇದು ಮೀನಿನದ್ದೇ.? ಇದು ಒಂದೆರಡು ವರ್ಷಗಳ […]

Continue Reading