ಮಂಗಳೂರು ಮನಪಾ: ಪೌರಕಾರ್ಮಿಕರ ಅಪಾಯಕಾರಿ ದೃಶ್ಯಾವಳಿ; ಅನಾಹುತ ನಡೆದರೆ ಯಾರು ಹೊಣೆ?

ಇದು ಬುದ್ದಿವಂತರ ಜಿಲ್ಲೆಯ ನಮ್ಮ ಮಂಗಳೂರಿನ ಸ್ಮಾರ್ಟ್ ಸಿಟಿಯಲ್ಲಿ ಕಂಡುಬಂದಿರುವ ದೃಶ್ಯಾವಳಿ.! ಇದು ಬುದ್ದಿವಂತರ ಜಿಲ್ಲೆಯ ನಮ್ಮ ಮಂಗಳೂರಿನ ಸ್ಮಾರ್ಟ್ ಸಿಟಿಯಲ್ಲಿ ಕಂಡುಬಂದಿರುವ ದೃಶ್ಯಾವಳಿ.!ಮಂಗಳೂರು ಮಹಾನಗರ ಪಾಲಿಕೆಯ ಕಸವಿಲೇವಾರಿ ಮಾಡುವ ಪೌರ ಕಾರ್ಮಿಕರು ತಮ್ಮ ವಾಹನದಲ್ಲಿ ನೇತಾಡಿಕೊಂಡು ಹೋಗುತ್ತಿದ್ದು, ಅಪಾಯವನ್ನು ಆಹ್ವಾನಿಸುತ್ತಿದ್ದಾರೆ. ಅದು ಕೂಡ ಒಬ್ಬ ಮಹಿಳೆ ಈ ರೀತಿ ವಾಹನದಲ್ಲಿ ನೇತಾಡಿಕೊಂಡು ಮನೆ ಮನೆಗೆ ಕಸ ವಿಲೇವಾರಿಗೆ ತೆರಳುತ್ತಿರುವುದನ್ನು ನೋಡಿದರೆ ಮೈ ಜುಮ್ ಅನ್ನುತ್ತಿದೆ. ಇಂತಹ ದುಸ್ಸಾಹಸ, ಬೇಜಾವಾಬ್ದಾರಿಯ ಕೆಲಸದಿಂದ ಅವಘಡ ಸಂಭವಿಸಿದರೆ ಯಾರು ಹೊಣೆ.? […]

Continue Reading

ಮಂಗಳೂರು: ಅಕ್ರಮ ಮರಳುಗಾರಿಕೆಗೆ ಬಲಿಯಾಯಿತೇ.. ಪುಟ್ಟ ಜೀವಗಳು

ಅಧಿಕಾರಿಗಳೇ.. ಇನ್ನೆಷ್ಟು ಜೀವಗಳು ಬಲಿಯಾಗಬೇಕು.? ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಿರಾಂತಕವಾಗಿ ನಡೆಯುತ್ತಿದ್ದು, ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಗೆ ಎಷ್ಟೇ ದೂರು ನೀಡಿದರೂ ಲಗಾಮು ಹಾಕುತ್ತಿಲ್ಲ ಅನ್ನುವ ಆರೋಪಗಳಿವೆ. ಆಡಳಿತ ಹಾಗೂ ವಿರೋಧ ಪಕ್ಷಗಳು ಜಂಟಿಯಾಗಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರುವುದರಿಂದ ತಮ್ಮ ಆಟಾಟೋಪವನ್ನು ಸೇಫಾಗಿ ನಡೆಸುತ್ತಿದ್ದಾರೆ ಅನ್ನುವ ಮಾತುಗಳು ಇವೆ. ಅಕ್ರಮ ಮರಳುಗಾರಿಕೆಯಿಂದ ಪ್ರಾಕೃತಿಕ ಸಂಪತ್ತುಗಳಿಗೆ ವಿನಾಶದ ಜೊತೆ ಜೊತೆಗೆ, ಮರಳುಗಾರಿಕೆ ವಿರೋಧಿಸುವವರ ಮೇಲೆ ದೈಹಿಕ ಹಲ್ಲೆ ನಡೆದ ಸಾಕಷ್ಟು ಉದಾಹರಣೆಗಳು ಇದೆ. ಇದರ ಮಧ್ಯೆಯೇ ಅಕ್ರಮ […]

Continue Reading

ಖ್ಯಾತ ಪತ್ರಕರ್ತ, ಉತ್ತಮ ನಿರೂಪಕ ಮನೋಹರ ಪ್ರಸಾದ್ ವಿಧಿವಶ

ಖ್ಯಾತ ಪತ್ರಕರ್ತ, ಉತ್ತಮ ಕತೆಗಾರ ಹಾಗೂ ಕವಿ ಮನೋಹರ ಪ್ರಸಾದ್(64) ಇಂದು ಮುಂಜಾನೆ ನಿಧನರಾಗಿದ್ದಾರೆ. ಮೂಲತಃ ಕಾರ್ಕಳ ತಾಲೂಕಿನವರಾದ ಮನೋಹರ ಪ್ರಸಾದ್ ಮಂಗಳೂರಿನಲ್ಲಿ ಕಾಲೇಜು ಪದವಿ ಶಿಕ್ಷಣ ಪೂರ್ತಿಗೊಳಿಸಿ “ನವ ಭಾರತ’ ಪತ್ರಿಕೆಯಲ್ಲಿ ಪತ್ರಿಕಾ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ “ಉದಯವಾಣಿ’ಗೆ ಮಂಗಳೂರು ವರದಿಗಾರರಾಗಿ ಸೇರ್ಪಡೆಗೊಂಡಿದ್ದರು. ಪ್ರಸ್ತುತ ಸಹಾಯಕ ಸಂಪಾದಕರ ಹುದ್ದೆಯವರೆಗೆ ಸತತ 36 ವರ್ಷಗಳ ಸೇವೆ ಸಲ್ಲಿಸಿ ಕಳೆದ ಎರಡು ವರ್ಷದ ಹಿಂದೆ ನಿವೃತ್ತಿಗೊಂಡಿದ್ದರು. ಖ್ಯಾತ ಪತ್ರಕರ್ತ, ರಂಗಭೂಮಿ ಹಾಗೂ ಚಲನಚಿತ್ರ ನಟ, ಕಾರ್ಯಕ್ರಮ ನಿರೂಪಕ […]

Continue Reading

ದಂಪತಿಗಳಿಂದ ಮೋಸ; ನಕಲಿ ಚಿನ್ನ ಅಡವಿಟ್ಟು ವಂಚನೆ, ಆರೋಪಿ ಪತಿಯ ಬಂಧನ

ಪಡುಬಿದ್ರಿ ಕಂಚಿನಡ್ಕ ರಾಘವೇಂದ್ರ ಮಠದ ಬಳಿಯ ದಂಪತಿ ತಾಮ್ರಕ್ಕೆ ಚಿನ್ನ ಲೇಪಿಸಿದ ನಕಲಿ ಚಿನ್ನದ ಆಭರಣಗಳನ್ನು ಪಡುಬಿದ್ರಿ ಆಸುಪಾಸಿನ ಮೂರು ವಿವಿಧ ಬ್ಯಾಂಕುಗಳಲ್ಲಿ ಅಡವಿಟ್ಟು 29.94 ಲಕ್ಷ ರೂಪಾಯಿ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಪತಿ ರಾಜೀವ್ ನನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ರಾಜೀವ್ ಗೆ ಮಾರ್ಚ್ 7 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆತನ ಪತ್ನಿ ಸ್ನೇಹಲತಾಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಪಡುಬಿದ್ರಿಯ ಸೌತ್ ಕೆನರಾ ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಬ್ಯಾಂಕ್ […]

Continue Reading

ಪ್ರಧಾನಿ ಇನ್ನಷ್ಟು ಆಳಕ್ಕೆ ಹೋಗಿದ್ದರೆ ಭಾರತದ ಸಮಸ್ಯೆಯಾದರೂ ತಿಳಿಯುತ್ತಿತ್ತು: ಪ್ರಕಾಶ ರೈ

ಕಲಾವಿದ ಮೌನವಾದರೆ ಸಮಾಜವೇ ಮೌನವಾಗುತ್ತದೆ. ಈ ಹಿಂದೆ ಗುಹೆಗೆ, ಈಗ ನೀರಿಗೆ, ಮುಂದಿನ ಬಾರಿ ಚಂದ್ರನಲ್ಲಿಗೆ: ಪ್ರಕಾಶ ರೈ ನಮ್ಮ ದೇಶದಲ್ಲೊಬ್ಬ ನಟನಿದ್ದಾನೆ. 2019 ರಲ್ಲಿ ಗುಹೆಗೆ ಹೋಗಿದ್ದರು. ಈ ಬಾರಿ ನೀರಿಗೆ ಹೋದರು. ಮುಂದಿನ ಬಾರಿ ಚಂದ್ರನ ಮೇಲೆ ನಿಲ್ಲುತ್ತಾರೆ. ಇನ್ನಷ್ಟು ಆಳಕ್ಕೆ ಇಳಿದರೆ ಭಾರತದ ಸಮಸ್ಯೆಗಳು ಕಾಣುತ್ತಿದ್ದವು ಎಂದು ಬಹುಬಾಷಾ ನಟ ಪಕ್ರಾಶ್ ರೈ ಮೋದಿ ಹೆಸರೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಮಂಗಳೂರಿನ ತೊಕ್ಕೂಟ್ಟಿನ ಯುನಿಟಿ ಹಾಲ್‌ನ ಮೈದಾನದಲ್ಲಿ ಫೆಬ್ರವರಿ 27 ರಂದು ನಡೆದ […]

Continue Reading

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ

ಬಜಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದರೋಡೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಜೋಕಟ್ಟೆ ತೋಕೂರು ನಿವಾಸಿ ಇಮ್ರಾನ್ ಹಾಗೂ 2021 ನೇ ಇಸವಿಯಲ್ಲಿ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಅಪಘಾತ ನಡೆಸಿ, ಗಾಯಾಳು ಮೃತ ಪಡಲು ಕಾರಣಕರ್ತನಾದ ಅಪರಾಧಿಕ ಮಾನವ ಹತ್ಯೆ ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು ವಿಚಾರಣೆಯ ವೇಳೆ ನ್ಯಾಯಾಲಯಕ್ಕೆ ಹಾಜರಾಗದೆ, ವಾಸ ಸ್ಥಳವನ್ನು ಬದಲಿಸಿ ಸುಮಾರು 2 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉತ್ತರ ಪ್ರದೇಶ ಗೋರಕಪುರ ನಿವಾಸಿ […]

Continue Reading

ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ದತೆಯಲ್ಲಿರುವ ಬಿಜೆಪಿ; ಫೆಬ್ರವರಿ 29ರಂದು ಮೊದಲ ಪಟ್ಟಿ ಬಿಡುಗಡೆ ಸಾಧ್ಯತೆ, ರಾಜ್ಯದ ಹಾಲಿ ಸಂಸದರಿಗೆ ಟಿಕೆಟ್

ದ.ಕ ಜಿಲ್ಲೆಯಿಂದ ಬಹುತೇಕ ಹಾಲಿ ಸಂಸದ ಕಟೀಲು.! ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ದತೆ ನಡೆಸಿರುವ ಬಿಜೆಪಿ ಕೇಂದ್ರದಲ್ಲಿ ಮೂರನೇ ಬಾರಿಗೆ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿದ್ದು, ಫೆಬ್ರವರಿ 29ರಂದು ಪ್ರಕಟಗೊಳ್ಳಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ರಾಜ್ಯದ 10ಕ್ಕೂ ಹೆಚ್ಚು ಹಾಲಿ ಸಂಸದರಿಗೆ ಟಿಕೆಟ್ ಘೋಷಣೆಯಾಗುವ ಸಾಧ್ಯತೆ ಇದೆ. ಫೆಬ್ರವರಿ 29ರಂದು ನವದೆಹಲಿಯಲ್ಲಿ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಅಂದು ಪಕ್ಷವು ಸುಮಾರು 150ಕ್ಕೂ ಹೆಚ್ಚು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. […]

Continue Reading

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಆದಿರಾ ಕೇರಳದಲ್ಲಿ ಮದುವೆಯಾಗಿ ಪತ್ತೆ

ಮೂಡುಬಿದಿರೆಯ ಆಳ್ವಾಸ್ ವಿದ್ಯಾ ಸಂಸ್ಥೆಯ ಬಿ.ಪಿ.ಟಿ ಪ್ರಥಮ ವರ್ಷದ ವಿದ್ಯಾರ್ಥಿನಿ ಆದಿರಾ ಎಂಬಾಕೆ ಫೆ. 23 ರಿಂದ ನಾಪತ್ತೆಯಾಗಿದ್ದು ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಉಡುಪಿ ಜಿಲ್ಲೆ ಕೊಲ್ಲೂರಿನವಳಾಗಿರುವ ಆದಿರಾ ಆಳ್ವಾಸ್ ನಲ್ಲಿ ಕಲಿಯುತ್ತಿದ್ದು ವಿದ್ಯಾಗಿರಿಯಲ್ಲಿರುವ ಶಾಂಭವಿ ಹಾಸ್ಟೆಲ್ ನ ಸಿ. ವಿಭಾಗದಲ್ಲಿ ವಾಸ್ತವ್ಯವಿದ್ದಳು. ಫೆಬ್ರವರಿ 23 ಶುಕ್ರವಾರದಂದು ಬೆಳಿಗ್ಗೆ 7-45 ಕ್ಕೆ ಹಾಸ್ಟೆಲ್ ನಿಂದ ಆಳ್ವಾಸ್ ಬಸ್ ನಲ್ಲಿ ಬಂದು ಮೂಡುಬಿದಿರೆ ಕನ್ನಡಭವನದ ಬಳಿ ಇಳಿದು ಹೋದಾಕೆ ಕಾಲೇಜಿಗೂ ಹೋಗದೆ, ಹಾಸ್ಟೆಲ್ ಗೂ […]

Continue Reading

ಸಮಾನ ಶಿಕ್ಷಣ ನೀತಿ ಜಾರಿ ಮುಖ್ಯ, ಹೊಸ ಶಿಕ್ಷಣ ನೀತಿಯ ಬಗ್ಗೆ ಚರ್ಚೆಯಾಗಬೇಕು: ಜಸ್ಟೀಸ್ ಎಚ್. ಎನ್. ನಾಗಮೋಹನದಾಸ್

ನಿರುದ್ಯೋಗ ಸಮಸ್ಯೆಗೂ ಕೋಮುವಾದಕ್ಕೂ ಇರುವ ಲಿಂಕ್ ಸರ್ಕಾರ ಅರ್ಥಮಾಡಿಕೊಳ್ಳಬೇಕು ನಿರುದ್ಯೋಗ ಯುವಜನರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಐವತ್ತು ವರ್ಷಗಳಲ್ಲಿ ದೇಶ ಕಾಣದ ನಿರುದ್ಯೋಗ ಪ್ರಮಾಣ ಪ್ರಸ್ತುತ ದೇಶದಲ್ಲಿದೆ. ನಮ್ಮಲ್ಲಿ ವಿದ್ಯೆ ಇದೆ, ಪದವಿ ಇದೆ ಆದರೆ ಉದ್ಯೋಗವಿಲ್ಲ. ನಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗವು ಸಿಗುತ್ತಿಲ್ಲ. ಪದವಿ ಇದ್ದರೂ ಏನು ಪ್ರಯೋಜನವಿಲ್ಲದಂತಾಗಿದೆ. ಎಲ್ಲ ವಲಯದಲ್ಲಿ ಅರ್ಹ ಅಭ್ಯರ್ಥಿಗಳಿಲ್ಲ. ಅಸಂಪೂರ್ಣೋದ್ಯೋಗ (under employment) ಕೂಡಾ ಒಂದು ಸಮಸ್ಯೆ ಆಗಿದೆ ಎಂದು ಜಸ್ಟೀಸ್ ಎಚ್. ಎನ್. ನಾಗಮೋಹನದಾಸ್ ಹೇಳಿದರು. ನಗರದ ಕಲ್ಲಾಪಿನಲ್ಲಿರುವ ಯುನಿಟಿ […]

Continue Reading

ಸಾಲ ಮರುಪಾವತಿಸದ್ದಕ್ಕೆ ಧರ್ಮಸ್ಥಳ ಸಂಘದವರಿಂದ ಹಲ್ಲೆ, ನಿಂದನೆ; ಮನನೊಂದ ಮಹಿಳೆ ಆತ್ಮಹತ್ಯೆ

ಶೃಂಗೇರಿ: ಸಾಲದ ಕಂತು ಮರು ಪಾವತಿಸದ ಹಿನ್ನೆಲೆಯಲ್ಲಿ ಧರ್ಮಸ್ಥಳಸಂಘದವರು ಮನೆಗೆ ಬಂದು ಗಲಾಟೆಮಾಡಿ ನಿಂದಿಸಿದ ಕಾರಣಕ್ಕೆ ಮನನೊಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಶುಕ್ರವಾರ ವರದಿಯಾಗಿದೆ. ಶೃಂಗೇರಿ ಪಟ್ಟಣದ ಹನುಮಂತ ನಗರದ ನಿವಾಸಿ 29 ವರ್ಷ ಪ್ರಾಯದ ಅರ್ಪಿತಾ ಮೃತ ಮಹಿಳೆ. ಅರ್ಪಿತಾ ಕಳೆದ 6 ತಿಂಗಳ ಹಿಂದೆ ಧರ್ಮಸ್ಥಳ ಸಂಘದಲ್ಲಿಒಂದು ಲಕ್ಷ ರೂ. ಸಾಲ ಪಡೆದಿದ್ದು, ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡದ ಕಾರಣದಿಂದಸಂಘದ ಸದಸ್ಯರು ಶುಕ್ರವಾರ ಬೆಳಗ್ಗೆ ಅರ್ಪಿತಾ ಮನೆ ಬಳಿ […]

Continue Reading