ಬಿಜಪಿಯನ್ನು ಹಿಮ್ಮೆಟ್ಟಿಸದೆ ಜಿಲ್ಲೆಯ ಅಭಿವೃದ್ಧಿ ಅಸಾಧ್ಯ : ಜಿಲ್ಲಾಧಿಕಾರಿ ಕಚೇರಿ ಚಲೋದಲ್ಲಿ ಸಿಪಿಐಎಂ ಆರೋಪ

ದಕ್ಷಿಣ ಕನ್ನಡ ಜಿಲ್ಲೆಯ ಜನಸಾಮಾನ್ಯರ, ದುಡಿಯುವ ಜನರು ಸೇರಿದಂತೆ ಸರ್ವಜನರ ಅಭಿವೃದ್ದಿಗೆ ಆಗ್ರಹಿಸಿ ಸಿಪಿಐಎಂ ದಕ್ಷಿಣ ದ.ಕ. ಜಿಲ್ಲಾ ಸಮಿತಿ ಹಮ್ಮಿಕೊಂಡ “ಜಿಲ್ಲಾಧಿಕಾರಿ ಕಚೇರಿ ಚಲೋ” ಕಾರ್ಯಕ್ರಮ ಮಂಗಳೂರು ನಗರದಲ್ಲಿ ಇಂದು ನಡೆಯಿತು. ಮಹಿಳೆಯರೂ ಸೇರಿದಂತೆ ಬೃಹತ್ ಸಂಖ್ಯೆಯ ಜನರು ಅಂಬೆಡ್ಕರ್ ವೃತ್ತದಿಂದ ಮೆರವಣಿಯಲ್ಲಿ ಸಾಗಿ ಮಿನಿ ವಿಧಾನ ಸೌಧದ ಮುಂಭಾಗ ಬಹಿರಂಗ ಸಭೆ ನಡೆಸಿದರು. ಒಂದು ಕಿಲೋ ಮೀಟರ್ ಗೂ ಹೆಚ್ಚು ಉದ್ದ ಇದ್ದ ಮೆರವಣಿಗೆಯಲ್ಲಿ ಕಾರ್ಯಕರ್ತರು ಬಿಜೆಪಿ ವೈಫಲ್ಯಗಳನ್ನು ತೆರೆದಿಡುವ ಘೋಷಣೆಗಳನ್ನು ಲಯಬದ್ದವಾಗಿ ಕೂಗುತ್ತಾ […]

Continue Reading

ಮಂಗಳೂರು ಲೋಕಸಭೆ: ಮಿಥುನ್ ರೈ ಸಂಭಾವ್ಯ ಅಭ್ಯರ್ಥಿ.?

ರಾಜ್ಯದ ಎಂಟು ಸಚಿವರು ಟಿಕೆಟ್ ರೇಸಿನಲ್ಲಿ.. ಆಪರೇಷನ್ ಹಸ್ತಕ್ಕೆ ಪ್ಲ್ಯಾನ್ ರೆಡಿ.! ಎಲ್ಲವೂ ಅಂದುಕೊಂಡಂತೆ ನಡೆದರೆ ಚುನಾವಣೆಯ ಮೂರು ತಿಂಗಳ ಮೊದಲೇ ಕಾಂಗ್ರೆಸ್ ಲೋಕಸಭಾ ಸಮರಕ್ಕೆ ಅಭ್ಯರ್ಥಿಗಳ ಘೋಷಣೆ ಮಾಡುವ ಸಾಧ್ಯತೆ ನಿಚ್ಚಳವಾಗಿದೆ. ಇದಕ್ಕೆ ಈಗಿಂದೀಗಲೇ ಭರದ ಸಿದ್ಧತೆ ಮಾಡಿಕೊಳ್ಳತೊಡಗಿದೆ. ರಾಜ್ಯದಲ್ಲಿ 20 ಸ್ಥಾನ ಗೆಲ್ಲುವ ಟಾರ್ಗೆಟ್ ಹೊಂದಿರುವ ಕಾಂಗ್ರೆಸ್ ಅದಕ್ಕಾಗಿ ಅಳೆದು ತೂಗಿ ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ. ಇದರ ಜೊತೆಗೆ ತಮ್ಮ ಅತ್ಯಾಪ್ತರಿಗೆ ಟಿಕೆಟ್ ನೀಡಲು ಮುಖಂಡರು ಕಸರತ್ತು ಆರಂಭಿಸಿದ್ದಾರೆ. ಇತ್ತ […]

Continue Reading

ಸೌದಿಯಲ್ಲೇ ‘ಗಾಳ’.. ಬಾವಾ ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್.!

ಮಾಜಿ ಶಾಸಕ ಮೊಯಿದ್ದೀನ್ ಬಾವಾ ಸೌದಿಯಲ್ಲಿ ಗಾಳ ಹಾಕಿ ಮೀನು ಹಿಡಿಯುವ ವಿಡಿಯೋ ವೊಂದು ಇತ್ತೀಚೆಗೆ ಭಾರೀ ವೈರಲ್ ಆಗಿತ್ತು. ಸೌದಿ ಅರೇಬಿಯಾದಲ್ಲಿ ಕುಳಿತು ಕಾಂಗ್ರೆಸ್ ಪ್ರಮುಖ ಮುಖಂಡರೊಬ್ಬರು ಹಾಗೂ ಮಂಗಳೂರು ಮೂಲದ ಪ್ರಮುಖ ಉದ್ಯಮಿಯೊಬ್ಬರ ಮೂಲಕ ಮತ್ತೆ ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ ಅನ್ನುವ ಮಾತುಗಳು ಇದೀಗ ರಾಜಕೀಯ ವಲಯಗಳಿಂದ ಕೇಳಿ ಬರುತ್ತಿದೆ. ಕೆಲವೇ ತಿಂಗಳ ಹಿಂದೆ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಸಮುದಾಯದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ ಮೊಹಿದ್ದೀನ್ ಬಾವಾ ಕಳೆದ ವಿಧಾನಸಭಾ ಚುನಾವಣೆಯಲ್ಲಿ […]

Continue Reading

ಭೀಮಲ್ ಕಾಂಕ್ರಿಟ್ ಮಿಕ್ಸಿಂಗ್ ಪ್ಲಾಂಟ್ ಗೆ ಬೀಗ ಜಡಿದ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ

ಬಜ್ಪೆ ಪೇಟೆಯ ಮುಖ್ಯ ರಸ್ತೆಯ ಕಾಮಗಾರಿ ನೆಪದಲ್ಲಿ ಲೋಕೋಪಯೋಗಿ ಇಲಾಖೆಯೊಂದಿಗೆ ಶಾಮೀಲಾಗಿ ಕಾಂಕ್ರಿಟ್ ಪ್ಲಾಂಟನ್ನು ಆರಂಭಿಸಿದ ಗುತ್ತಿಗೆದಾರರು,ಬಜ್ಪೆಯ ಒಂದು ಕಿ.ಮೀಟರ್ ಉದ್ದದ ಮುಖ್ಯರಸ್ತೆಯ ಕಾಮಗಾರಿಗೆ ಒಂದೂವರೆ ವರ್ಷ ತೆಗೆದುಕೊಂಡು, ಬೇರೆ ಊರಿನಲ್ಲಿ ಸಿಕ್ಕಿದ ಗುತ್ತಿಗೆಗೆ ಇಲ್ಲಿಂದಲ್ಲೇ ಕಾಂಕ್ರಿಟ್ ಮಿರ್ಸಿಂಗ್ ಸಾಗಿಸಿ ಬಜ್ಪೆ ನಾಗರಿಕರ ಕನಸನ್ನು ನುಚ್ಚು ನೂರು ಮಾಡಿದ ಲೋಕೋಪಯೋಗಿ ಇಲಾಖೆ ಮತ್ತು ಕಣ್ಣಿದ್ದರೂ ಕುರುಡರಂತೆ ವರ್ತಿಸಿದ ಬಜ್ಪೆ ಪಟ್ಟಣ ಪಂಚಾಯತಿನ ಅಧಿಕಾರಿಗಳು. ಜನನಿಬಿಡ ಪ್ರದೇಶದಲ್ಲಿ ನಿರ್ಮಿಸಿದ ಈ ಕಾರ್ಖಾನೆಯನ್ನು ಮುಚ್ಚಬೇಕು ಎಂದು ಲೋಕಾಯುಕ್ತ ಇಲಾಖೆ ಸಾರ್ವಜನಿಕರ […]

Continue Reading

ಬಂಟ್ವಾಳ: ತಾಲೂಕು ಆಡಳಿತ ಸೌಧದ ಮುಂಭಾಗದಲ್ಲೇ ಅಕ್ರಮ ವಾಣಿಜ್ಯ ಕಟ್ಟಡ.. ಬೇಲಿಯೇ ಎದ್ದು ಹೊಲ ಮೇಯ್ದರೆ..!

‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಅನ್ನುವ ಗಾದೆ ಮಾತು ಬಂಟ್ವಾಳಕ್ಕೆ ಒಪ್ಪುವಂತದ್ದು. ಇಲ್ಲಿನ ಸರಕಾರದ ಶಕ್ತಿ ಕೇಂದ್ರವಾದ ತಾಲೂಕು ಆಡಳಿತ ಸೌಧದ ಮುಂದೆಯೇ ಅಕ್ರಮ ಕಟ್ಟಡ ತಲೆ ಎತ್ತಿ ನಿಂತಿದ್ದು, ಪ್ರಸ್ತುತ ಕಟ್ಟಡದಲ್ಲಿಯೇ ಸರಕಾರಿ ಸಂಸ್ಥೆಯೊಂದು ಅದೇ ರೀತಿ ಪ್ರೆಸ್ ಕ್ಲಬ್ ಕೂಡ ತಲೆ ಎತ್ತಿ ನಿಂತಿದೆ. ಪ್ರಶ್ನಿಸಬೇಕಾದವರೇ ಆ ಕಟ್ಟಡದಲ್ಲಿ ಕಚೇರಿ ತೆರೆದು ಕೂತಿರುವುದು ಬಂಟ್ವಾಳದ ದುರ್ದೈವ ಎಂದೇ ಹೇಳಬೇಕು. ಬಡವನೊಬ್ಬ ಸಣ್ಣ ಮನೆಯೊಂದನ್ನು ನಿರ್ಮಿಸಿದರೆ ಗ್ರಾಮ ಪಂಚಾಯತ್ ನಿಂದ ನೀರು ಸರಬರಾಜು ಮಾಡಲು ಹಾಗೂ […]

Continue Reading

ರಾಜಾರೋಷವಾಗಿ ನಡೆಯುತ್ತಿದೆ ಗ್ಯಾಮ್ಲಿಂಗ್ ಕೋಳಿ ಅಂಕ, ಜೂಜುಕೋರರಿಗೆ ಮುಲ್ಕಿ ಪೊಲೀಸರು ಸಾಥ್.!

ಇದು ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ನ ಪಂಜಿನಡ್ಕದ ಕಥೆ. ಜಿಲ್ಲೆಯಲ್ಲಿ ಈ ರೀತಿ ಎಲ್ಲೂ ನಡೆಯದ ಗ್ಯಾಮ್ಲಿಂಗ್ ಕೋಳಿ ಅಂಕ ಪಂಜಿನಡ್ಕದ ಕ್ರಿಕೆಟ್ ಮೈದಾನದಲ್ಲಿ ಬೃಹತ್ ಶಾಮಿಯಾನ ಹಾಕಿ ಪ್ರಭಾವೀಗಳು ಮುಂದೆ ನಿಂತು ಕೋಳಿ ಅಂಕ ನಡೆಸುತ್ತಿದ್ದಾರೆ. ಧಾರ್ಮಿಕ ಕಾರ್ಯಕ್ರಮ ಇದ್ದಾಗ ಸ್ಥಳೀಯರ ಮನವಿ ಮೇರೆಗೆ ಅಲ್ಲಲ್ಲಿ ಕೋಳಿ ಅಂಕ ನಡೆಯುವುದು ಸಾಮಾನ್ಯ. ಅದು ಕಾರ್ಯಕ್ರಮದ ನಿಮಿತ್ತ ಒಂದೋ ಅಥವಾ ಎರಡು ದಿನ ನಡೆಯುತ್ತದೆ. ಆದರೆ ಪಂಜಿನಡ್ಕದಲ್ಲಿ […]

Continue Reading

ಸುರತ್ಕಲ್ ನಿರುಪಯುಕ್ತ ಟೋಲ್ ಗೇಟ್ ತಕ್ಷಣ ತೆರವುಗೊಳಿಸಿ, ಇಲ್ಲವೆ ತೀವ್ರ ಪ್ರತಿಭಟನೆ ಎದುರಿಸಿ : ಹೋರಾಟ ಸಮಿತಿ ಎಚ್ಚರಿಕೆ

ಸುರತ್ಕಲ್ ಟೋಲ್ ಗೇಟ್ ನಲ್ಲಿ ಟೋಲ್ ಸಂಗ್ರಹ ರದ್ದತಿಗಾಗಿ ಹೋರಾಟ ಸಮಿತಿ ಏಳು ವರ್ಷಗಳ ಕಾಲ ಸತತ ಹೋರಾಟ ನಡೆಸಬೇಕಾಯ್ತು‌. ಆ ಸಂದರ್ಭದಲ್ಲೂ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ ಟೋಲ್ ಗುತ್ತಿಗೆದಾರರ ಪರವಾಗಿಯೇ ನಿಂತಿದ್ದರು, ಟೋಲ್ ಗೇಟ್ ಮುಚ್ಚುವ ಜನಾಗ್ರಹವನ್ನು ಲಘುವಾಗಿಸಲು ಯತ್ನಿಸಿದರು. ಜನತೆಯ ಸಂಘಟಿತ ಹೋರಾಟಗಳು ಮಾತ್ರ ಜನಪ್ರತಿನಿಧಿಗಳ ಕುಟಿಲತೆಯನ್ನು ವಿಫಲಗೊಳಿಸಿತ್ತು. ಟೋಲ್ ಸಂಗ್ರಹ ರದ್ದತಿ ಆದೇಶದ ಮುಂದೆ ನಿರುಪಯುಕ್ತ ಟೋಲ್ ಗೇಟ್ ಅವಶೇಷಗಳ ತೆರವು ತೀರಾ ಸಣ್ಣ ಕೆಲಸವಾಗಿದೆ. ಸಂಸದ, […]

Continue Reading

ಶಿರಸಿಯಲ್ಲಿ ಭೀಕರ ಅಪಘಾತ; ಗುರುಪುರ-ಕೈಕಂಬದ ಒಂದೇ ಕುಟುಂಬದ ಐವರ ದುರ್ಮರಣ

ಬಸ್ ಹಾಗೂ ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಐವರು ಮೃತಪಟ್ಟ ಘಟನೆ ಕುಮಟಾ-ಶಿರಸಿ ಹೆದ್ದಾರಿ ಬಳಿ ನಡೆದಿದೆ. ಕಾರಿನಲ್ಲಿದ್ದವರು ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರ- ಕೈಕಂಬ ಪ್ರದೇಶದ ಕಿನ್ನಿಕಂಬಳದ ಒಂದೇ ಕುಟುಂಬದ ನಾಲ್ವರು ಹಾಗೂ ಚೆನ್ನೈ ಮೂಲದ ಕಾರು ಚಾಲಕ ಮೃತಪಟ್ಟಿದ್ದಾರೆ. ಮಂಗಳೂರು ತಾಲೂಕಿನ ಗುರುಪುರ ಕೈಕಂಬ ಬಳಿಯ ಕಿನ್ನಿಕಂಬಳ ನಿವಾಸಿ ರಾಮಕೃಷ್ಣರಾವ್ ಬಾಬುರಾವ್ ಅವರ ಪತ್ನಿ ವಿದ್ಯಾಲಕ್ಷ್ಮೀ, ಪುಷ್ಪಾ ಮೋಹನ ರಾವ್, ಸುಹಾಸ್ ಗಣೇಶ್ ರಾವ್, ಹಾಗೂ ಚೆನ್ನೈನ ಅರವಿಂದ ಮೃತಪಟ್ಟಿದ್ದಾರೆ. ಮೃತ ಸುಹಾಸ್ […]

Continue Reading

ಸಾರ್ವಜನಿಕರ ಹಣ ಲೂಟಿ ಮಾಡಿ ಪರಾರಿ; ರಾಯಲ್ ತ್ರಿವಂಕೂರ್ ಕಂಪೆನಿ ವಿರುದ್ಧ ಪ್ರತಿಭಟನೆ, ವಂಚಕರ ಬಂಧಿಸಿ ಆಸ್ತಿ ಮುಟ್ಟುಗೋಲಿಗೆ ಆಗ್ರಹ

ಮಂಗಳೂರು : ನಗರದ ಪಿವಿಎಸ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ರಾಯಲ್ ತ್ರಿವಂಕೂರು ಎಂಬ ಹಣಕಾಸು ಸಂಸ್ಥೆಯು ಸಾರ್ವಜನಿಕರಿಂದ ಪಿಗ್ಮಿ, ವಿವಿಧ ಠೇವಣಿಗಳ ಮೂಲಕ ಕೋಟ್ಯಂತರ ಹಣ ವಂಚನೆ ಕಚೇರಿಗೆ ಬೀಗ ಹಾಕಿ ಪರಾರಿಯಾಗಿದೆ. ರೈತರ ಹೆಸರಿನಲ್ಲಿ ಕೇರಳ ಕರ್ನಾಟಕ ತಮಿಳುನಾಡು, ಆಂಧ್ರಪ್ರದೇಶ, ಪುದುಚೇರಿ, ದೇಶದ ಮತ್ತಿತರ ರಾಜ್ಯಗಳಲ್ಲಿ ಶಾಖೆಗಳನ್ನು ತೆರೆದು ಸಣ್ಣ ಆದಾಯದ ಜನ ವಿಭಾಗವನ್ನೇ ಗುರಿಯಾಗಿಟ್ಟು ಕೊಂಡು ವಂಚನೆ ಮಾಡಿದೆ. ಮಂಗಳೂರಿನಲ್ಲಿ ಕೂಲಿ ಕಾರ್ಮಿಕರು, ಬೀದಿ ವ್ಯಾಪಾರಿಗಳು,ಸಣ್ಣ ಸಣ್ಣ ವ್ಯಾಪಾರಸ್ಥರು ಪ್ರತಿನಿತ್ಯ ಪಿಗ್ಮಿಯ ಹೆಸರಿನಲ್ಲಿ ಈ ಹಣಕಾಸು […]

Continue Reading

ಅನಧಿಕೃತ ಕ್ಲಿನಿಕ್, ವೈದ್ಯರಿಗೆ ಬಿತ್ತು ಮೂಗುದಾರ

ಹಂಪನಕಟ್ಟೆ, ವಾಮಂಜೂರು, ಮೂಡುಶೆಡ್ಡೆಯಲ್ಲಿ ಅನಧಿಕೃತ ಕ್ಲಿನಿಕ್ ಗೆ ಬೀಗಮುದ್ರೆ. ಗುರುಪುರ ಕೈಕಂಬದಲ್ಲೂ ನಕಲಿ ವೈದ್ಯರು.! ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿ ನಿಂತಿರುವ ಅನಧಿಕೃತ ಕ್ಲಿನಿಕ್, ನಕಲಿ ವೈದ್ಯರ ಮೇಲೆ ಬಿಸಿ ಮುಟ್ಟಿಸುವ ಕೆಲಸ ಆರಂಭವಾಗಿದ್ದು, ಲೈಸೆನ್ಸ್ ಇಲ್ಲದೆ ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದ ಕ್ಲಿನಿಕ್ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ವರದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಕ್ಲಿನಿಕ್, ಪ್ರಯೋಗಾಲಯಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಆರೋಗ್ಯ ಇಲಾಖೆ ಅಧಿಕಾರಿಗಳು, ಅವುಗಳನ್ನು […]

Continue Reading