ರೈಲ್ವೇ ಖಾಸಗೀಕರಣದ ವಿರುದ್ದ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದೆದುರು ಪ್ರತಿಭಟನೆ

ದೇಶದ ಆರ್ಥಿಕತೆಯ ಜೀವಾಳ ಹಾಗೂ ಜನತೆಯ ಜೀವನಾಡಿ ರೈಲ್ವೇ ವಲಯದ ಖಾಸಗೀಕರಣ ಖಂಡಿಸಿ ರೈತ ಕಾರ್ಮಿಕರ ನೇತ್ರತ್ವದಲ್ಲಿ ಇಂದು(ನವೆಂಬರ್ 3) ದೇಶಾದ್ಯಂತ ಎಲ್ಲಾ ರೈಲ್ವೇ ನಿಲ್ದಾಣದೆದುರು ಪ್ರತಿಭಟನೆ ನಡೆಸಬೇಕೆಂಬ ತೀರ್ಮಾನದ ಮೇರೆಗೆ ಜಿಲ್ಲೆಯ ರೈತ ಕಾರ್ಮಿಕ ಹಾಗೂ ಜನಪರ ಸಂಘಟನೆಗಳ ಜಂಟಿ ನೇತ್ರತ್ವದಲ್ಲಿ ನಗರದ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದೆದುರು ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಕೇಂದ್ರದ ನರೇಂದ್ರ ಮೋದಿ ಸರಕಾರದ ಕಾರ್ಪೊರೇಟ್ ಪರ ನೀತಿಗಳ ವಿರುದ್ಧ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯನ್ನುದ್ದೇಶಿಸಿ […]

Continue Reading

ಹಿಂದೂ ಸಂಘಟನೆ ಹೆಸರಲ್ಲಿ ಖತರ್ನಾಕ್ 420 ಗಳು.! ಚೈತ್ರಾ ಬಳಿಕ ಲತೇಶ್ ಗುಂಡ್ಯ ಹಿಂದುತ್ವದ ಮರೆಯಲ್ಲಿ ಬಡ ಹಿಂದೂ ಮಹಿಳೆಗೆ ಪಂಗನಾಮ.!

ಅರೆರೆ..ಈ ಕೇಸರಿಯನ್ನು ಯಾರಿಗೂ ಅಡವಿಟ್ಟಿಲ್ಲ ಎಂದು ಹಿಂದೂಗಳೇ ಹೇಳುತ್ತಾ ಬಂದರೂ, ಕೇಸರಿ ನಮ್ಮದೇ ಒರಿಜಿನಲ್ ಅಂತ ಉದ್ದುದ್ದ ನಾಮ ಹಾಕಿ, ಕೇಸರಿ ತೊಡುವ ಹಿಂದೂ ಸಂಘಟನೆಗಳ ಕೆಲವು ನಾಯಕರು ಕೇಸರಿಯನ್ನು ಬಳಸಿಕೊಂಡು ಪಂಗನಾಮ ಹಾಕುತ್ತಿರುವ ಹಲವು ಘಟನೆಗಳು ವರದಿಯಾಗುತ್ತಿದೆ. ಪ್ರಖರ ಭಾಷಣಕಾರ್ತಿಯಾಗಿದ್ದ ಚೈತ್ರ ಕುಂದಾಪುರ ಹಿಂದುತ್ವದ ಮರೆಯಲ್ಲಿ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಕೋಟಿಗಟ್ಟಲೆ ಪೀಕಿಸಿ ಜೈಲು ಅತಿಥಿಯಾಗಿದ್ದಾಳೆ. ಇನ್ನು ಅನೇಕ ಮಂದಿ ಇದೇ ತರ ಹಿಂದುತ್ವದ ಮರೆಯಲ್ಲಿ ನಿಂತು ವಂಚನೆ ಮಾಡುವುದರಲ್ಲಿ ಎತ್ತಿದ ಕೈ. […]

Continue Reading

ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವ ಅವರ ತಂದೆ ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ನಿಧನ

ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವ ಅವರ ತಂದೆ ಮಿಜಾರುಗುತ್ತು ಆನಂದ ಆಳ್ವ ದೈವಾಧೀನರಾಗಿದ್ದಾರೆ. ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಆಳ್ವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಇವತ್ತು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತರು ಡಾ. ಮೋಹನ್ ಆಳ್ವ ಸಹಿತ ಮೂವರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಆನಂದ ಆಳ್ವರವರು ಮೂಡಬಿದಿರೆ ಪರಿಸರದಲ್ಲಿ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದರು. ಪ್ರಗತಿಪರ ಕೃಷಿಕರಾಗಿದ್ದರು. 1979 ರಿಂದ 1989 ರವರೆಗೆ ತಮ್ಮ ವಿಶಾಲವಾದ ಭತ್ತದ ಗದ್ದೆಯಲ್ಲಿ ಕಂಬಳವನ್ನು ಪ್ರವೇಶ ಟಿಕೆಟ್‌ಗಳೊಂದಿಗೆ ಆಯೋಜಿಸಿದ್ದ […]

Continue Reading

ಬಸ್ಸಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ; ಎಡಪದವು ನಿವಾಸಿ ಉದಯ ಕುಮಾರ್ ಬಂಧನ

ಮಂಗಳೂರಿನಿಂದ ಪುತ್ತೂರಿಗೆ ಹೋಗುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸೊಂದರಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಗೆ 40ರ ಹರೆಯದ ಎಡಪದವು ನಿವಾಸಿ ಉದಯ ಕುಮಾರ್ ಲೈಂಗಿಕ ಕಿರುಕುಳ ನೀಡಿದ ಘಟನೆ ಶನಿವಾರ ನಡೆದಿದ್ದು, ಆರೋಪಿಯನ್ನು ಪುತ್ತೂರು ಮಹಿಳಾ ಠಾಣೆಯ ಪೊಲೀಸರು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾಣಿಯಿಂದ ಪುತ್ತೂರು ಕಡೆಗೆ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಹೋಗುತ್ತಿದ್ದ ಬಾಲಕಿಗೆ ಉದಯ ಕುಮಾರ್ ಎಡಪದವು ಎಂಬಾತ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಲಾಗಿದೆ. ಈ ವಿಚಾರವನ್ನು ಆಕೆ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ತಿಳಿಸಿದ್ದ ಹಿನ್ನಲೆಯಲ್ಲಿ ಪ್ರಯಾಣಿಕರು ಆತನನ್ನು ಮಾರ್ಗ ಮಧ್ಯೆ […]

Continue Reading

ಗಂಜಿಮಠ, ಬೆಳ್ಮ-ಮುನ್ನೂರು, ಬಜ್ಪೆ, ಮೂಲ್ಕಿ ಮೇಲ್ದರ್ಜೆಗೆ: ಹೊಸ ನಾಲ್ಕು ಪುರಸಭೆ ರಚನೆಗೆ ಪ್ರಸ್ತಾವನೆ

ದಕ್ಷಿಣ ಕನ್ನಡ ಜಿಲ್ಲೆಗೊಳಪಟ್ಟ ಒಟ್ಟು 4 ಸ್ಥಳೀಯಾಡಳಿತ ಸಂಸ್ಥೆಯನ್ನು ಪುರಸಭೆಯಗಳನ್ನಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಪ್ರಾಥಮಿಕ ವರದಿಯೊಂದಿಗೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಮಂಗಳೂರು ತಾಲೂಕಿನ ಬಜಪೆ ಪಟ್ಟಣ ಪಂಚಾಯತ್, ಮೂಲ್ಕಿ ತಾಲೂಕಿನ ಮೂಲ್ಕಿ ಪಟ್ಟಣ ಪಂಚಾಯತ್, ಮಂಗಳೂರು ತಾಲೂಕಿನ ಗಂಜಿಮಠ ಗ್ರಾಮ ಪಂಚಾಯತ್, ಉಳ್ಳಾಲ ತಾಲೂಕಿನ ಬೆಳ್ಮ ಹಾಗೂ ಮುನ್ನೂರು ಗ್ರಾಮ ಪಂಚಾಯತ್ ಗಳು ಮೇಲ್ದರ್ಜೆಗೇರಿಸುವ ಪ್ರಕ್ರಿಯೆಗಳು ಪ್ರಾರಂಭಗೊಂಡಿದೆ. ದ.ಕ ಜಿಲ್ಲಾ ನಗರಾಭಿವೃದ್ಧಿ ಇಲಾಖೆ, ನಗರಾಭಿವೃದ್ಧಿ ಕೋಶ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ನಗರಾಭಿವೃದ್ಧಿ ಸಚಿವಾಲಯಕ್ಕೆ ಪ್ರಸ್ತಾವನೆ ರವಾನಿಸಲಾಗಿದೆ. […]

Continue Reading

ಕರಾವಳಿ ಕೋಮುಹಿಂಸೆಯ ಹಿಂದಿರುವ ಕಾಂಗ್ರೆಸ್ ನಾಯಕರಿವರು.!

ಕಾಂಗ್ರೆಸ್ ನಾಯಕರ ಸೈದ್ದಾಂತಿಕ ಬದ್ಧತೆ ಕೊರತೆಯೇ ಕರಾವಳಿಯ ಈ ಸ್ಥಿತಿಗೆ ಕಾರಣ. ✍️. ಸಂಜಯ ಮಂಗಳೂರು ಹುಲಿವೇಷ ಕುಣಿತ ಎಂಬುದು ಕರಾವಳಿಯ ಶ್ರೀಮಂತ ಸಂಸ್ಲೃತಿಗಳಲ್ಲಿ ಒಂದು. ಎಲ್ಲರನ್ನೂ ಒಟ್ಟುಗೂಡಿಸುವ ಹುಲಿಕುಣಿತವನ್ನೂ ಆರ್ ಎಸ್ ಎಸ್ ಸಾಂಸ್ಕೃತಿಕ ರಾಜಕಾರಣಕ್ಕೆ ಬಳಸಿಕೊಂಡಿದೆ. ಹಿಂದೂ ಸಂಘಟನೆಗಳ ಹಫ್ತಾ ವಸೂಲಿಗೂ ಪಿಲಿ ಟೀಮ್ ಬಳಕೆಯಾಗುತ್ತದೆ. ಕೋಮುವಾದಿ ತಂಡಗಳು ಮನೆಮನೆ ತಲುಪಲು ಹುಲಿಕುಣಿತವನ್ನೂ ಸಂಘಪರಿವಾರ ವಾಹಕವನ್ನಾಗಿಸಿಕೊಂಡಿದೆ. ‘ಪಿಲಿ’ ತಂಡದ ಮೂಲಕವೇ ನಾಯಕರಾದವರು ಕರಾವಳಿಯ ಸಾಮಾಜಿಕ, ರಾಜಕೀಯ ಅಜೆಂಡಾವನ್ನು ನಿರ್ಧರಿಸುತ್ತಿದ್ದಾರೆ. ಯಾವ ಸರ್ಕಾರ ಬಂದರೂ ಬದಲಾಗದ […]

Continue Reading

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆಪ್ತ ರವಿ ಚಕ್ಕಿತ್ತಾಯ ಕೊರಳಲ್ಲಿ ಹುಲಿ ಪೆಂಡೆಂಟ್; ಕ್ರಮಕ್ಕೆ ಹನೀಫ್ ಸಾಹೇಬ್ ಪಾಜಪಳ್ಳ ಆಗ್ರಹ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹುಲಿ ಉಗುರು, ಲಾಕೆಟ್ ಭರ್ಜರಿ ಸದ್ದು ಮಾಡುತ್ತಿರುವ ಹೊತ್ತಿನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉದ್ಯಮಿ ರವಿ ಚಕ್ಕಿತ್ತಾಯ ಹುಲಿ ಪೆಂಡೆಂಟ್ ಧರಿಸಿದ ಪೋಟೋ ವೈರಲ್ ಆಗಿದೆ. ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹುಲಿ ಪೆಂಡೆಂಟ್ ಧರಿಸಿದ ಕಾರಣಕ್ಕೆ ಅರಣ್ಯಾಧಿಕಾರಿಗಳು ಬಿಗ್ ಬಾಸ್ ಮನೆಗೆ ತೆರಳಿ ವರ್ತೂರು ಪ್ರಕಾಶ್ ರನ್ನು ಬಂಧಿಸಿದ್ದರು. ಇದಾದ ನಂತರ ರಾಜ್ಯದ ಖ್ಯಾತನಾಮರು, ಚಲನಚಿತ್ರ ನಟರು, ಉದ್ಯಮಿಗಳು, ರಾಜಕೀಯ ನಾಯಕರ ಪುತ್ರರು ಹುಲಿ ಲಾಕೆಟ್ ಧರಿಸಿದ […]

Continue Reading

ಬ್ಯಾರಿ ಅಕಾಡೆಮಿ ‘ಅಧ್ಯಕ್ಷ ಗಾದಿ: ‘ಕಾಕಮಾರೋ ಕೋಲುಕಲಿ.!’

ರಾಜ್ಯದಲ್ಲಿ ಬ್ಯಾರಿ ಭಾಷೆಯ ಅಭಿವೃದ್ಧಿ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಸ್ಥಾಪನೆಯಾದ ಬ್ಯಾರಿ ಸಾಹಿತ್ಯ ಅಕಾಡೆಮಿ ಇದೀಗ ರಾಜಕೀಯ ಚದುರಂಗದಾಟಕ್ಕೆ ಸಿಲುಕಿ ತನ್ನ ಮೂಲ ಉದ್ದೇಶಕ್ಕೆ ಕೊಡಲಿಪೆಟ್ಟು ಬಿದ್ದಿದೆ ಎಂದು ಸಾರ್ವಜನಿಕವಾಗಿ ಚರ್ಚೆಗೊಳಗಾಗುತ್ತಿದೆ. ಭಾಷಾ ಸಾಹಿತ್ಯ ಅಕಾಡೆಮಿಗಳು ರಾಜಕೀಯ ರಹಿತವಾಗಿರಬೇಕು ಎನ್ನುವುದು ಹೇಳಲಷ್ಟೆ ಚೆಂದ. ಯಾವ ಸರಕಾರ ಬಂದರೂ ಆ ಪಕ್ಷದ ನಾಯಕರು ಅಧ್ಯಕ್ಷಗಾದಿಗೆ ಲಾಬಿ ನಡೆಸುವುದು ಮಾಮೂಲಿಯಾಗಿ ಬಿಟ್ಟಿದೆ. ಆದರೆ ಬ್ಯಾರಿ ಭಾಷೆ, ಸಾಹಿತ್ಯಕ್ಕೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಕವಿಗಳು, ಸಾಹಿತಿಗಳು ಅಲ್ಲೇ ಬಾಕಿಯಾಗಿದ್ದಾರೆ. ಯಾರು ಹೆಚ್ಚು […]

Continue Reading

ಬಂಟ್ವಾಳ: ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ಕಳ್ಳತನ; ಕೆಲಸದಾತನ ಕೃತ್ಯ, ಪೋಲೀಸ್ ಠಾಣೆಗೆ ದೂರು

ಹೆಸರಾಂತ ಬಿಲ್ಡರ್ ಓರ್ವರ ಮನೆಯ ಕೆಲಸಕ್ಕಿದ್ದ ವ್ಯಕ್ತಿಯೋರ್ವ ಲಕ್ಷಾಂತರ ರೂ ಮೌಲ್ಯದ ನಗ ಹಾಗೂ ನಗದನ್ನು ಕಳುವು ಮಾಡಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆಯಲ್ಲಿ ನಡೆದಿದೆ. ಪುದು, ಕೋಡಿಮಜಲು ನಿವಾಸಿ ಇಮಾದ್ ಬಿಲ್ಡರ್ ಮಾಲಕ ಮೊಹಮ್ಮದ್ ಝಫರುಲ್ಲಾ ಎಂಬವರ ಮನೆಯ ಕಪಾಟಿನೊಳಗೆ ಇರಿಸಲಾಗಿದ್ದ ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ಸಹಿತ ನಗದನ್ನು ಮನೆಯ ಕೆಲಸದಾತನೇ ಕದ್ದುಕೊಂಡು ಹೋಗಿರುವುದಾಗಿ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸುಮಾರು 27 ಲಕ್ಷದ 50, ಸಾವಿರ […]

Continue Reading

ದ.ಕ ಜಿಲ್ಲೆಯಲ್ಲಿ ನಮ್ಮದೇ ಸಾಮ್ರಾಜ್ಯ ಅಂದ ಸಂಘಿಗಳು.. ಅಲ್ಪಸಂಖ್ಯಾತರಿಗೆ ಅನ್ಯಾಯವಾದರೂ ಕಾಂಗ್ರೆಸ್ ಮೌನ .!

ಇಲ್ಲಿ ಆಡಳಿತ, ವಿರೋಧ ಪಕ್ಷ ಎಂಬುದೇ ಇಲ್ಲ.. ಎಲ್ಲದಕ್ಕೂ ಕಮ್ಯುನಿಸ್ಟರೇ ಮುಂದು.! ವರ್ಷದ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹೇಗೆ ಇತ್ತೋ,ವರ್ಷ ಕಳೆದು ಇದೀಗ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದರೂ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಅದೇ ರೀತಿ ಇದೆ. ಇಲ್ಲಿ ಯಾವುದೇ ಸರಕಾರ ಅಸ್ತಿತ್ವಕ್ಕೆ ಬಂದರೂ ಎಲ್ಲವೂ ಸಂಘಪರಿವಾರದ ಸಂಘಟನೆಗಳ ಹಿಡಿತದಲ್ಲಿದೆ ಅನ್ನುವುದಕ್ಕೆ ಸಾಲು ಸಾಲು ನಡೆದ ಘಟನೆಗಳೇ ಸಾಕ್ಷಿ. ಬಿಜೆಪಿ ಧರ್ಮಾಧಾರಿತವಾಗಿ ತನ್ನ ಕಸುಬನ್ನು ಯಥಾವತ್ತಾಗಿ ಜಾರಿಗೊಳಿಸುತ್ತಿದೆ. ಅದನ್ನು […]

Continue Reading