ವಿಟ್ಲದಲ್ಲಿ ಮತ್ತೆ ಮನೆ ಕಳ್ಳರು ಆಕ್ಟಿವ್. ಹಾಡಹಗಲೇ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ.

ವಿಟ್ಲ : ಕೆಲದಿನಗಳಿಂದ ತೆಪ್ಪಗಾಗಿದ್ದ ಮನೆಕಳ್ಳರು ವಿಟ್ಲ ಪರಿಸರದಲ್ಲಿ ಮತ್ತೆ ಆಕ್ಟಿವ್ ಆಗಿದ್ದು ಉರಿಮಜಲು ಬಳಿ ಹಾಡಹಗಲೇ ಕಳ್ಳತನ ನಡೆದಿದೆ. ವಿಟ್ಲ-ಪುತ್ತೂರು ರಸ್ತೆಯ ಉರಿಮಜಲು ಸಮೀಪದ ದೇವಸ್ಯ ಮುಖ್ಯರಸ್ತೆ ಬದಿಯ ಗಣೇಶ್ ಗೌಡರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯವರೆಲ್ಲ ಹೊರಗಡೆ ಹೋಗಿದ್ದಾಗ ಮಧ್ಯಾಹ್ನದ ಸಮಯ ಮನೆಯ ಮುಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಳ್ಳತನ ನಡೆಸಿದ್ದಾರೆ. ಕಪಾಟಿನ ಬಾಗಿಲು ಮುರಿದು ಒಳಗಡೆ ಇಟ್ಟಿದ್ದ ಏಳೂವರೆ ಪವನ್ ಚಿನ್ನಾಭರಣ ಕಳ್ಳತನ ನಡೆಸಿದ್ದಾರೆ. ಮನೆಯವರು ಮರಳಿ ಬಂದಾಗ ಕಳ್ಳರ ಕೃತ್ಯ ಕಂಡು […]

Continue Reading

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇಂಜಿನಿಯರ್ ಗಳ ವಿದ್ಯಾರ್ಹತೆಗೆ ಅನುಗುಣವಾಗಿ ಮೌಲ್ಯಮಾಪನಕ್ಕೆ ಜವಾಬ್ದಾರಿ.

ಹೊಸ ಕರಡು ನೀತಿ ಜಾರಿ; ಎಂಜಿನಿಯರ್ ಸಂಘಟನೆಗಳ ವಿರೋಧ, ಮರುಪರಿಶೀಲನೆಗೆ ಒತ್ತಾಯ ಮಂಗಳೂರು ಮಹಾನಗರಪಾಲಿಕೆಯ ಪರಿಷತ್ತಿನ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೊಂಡಿದ್ದ ‘ಮಂಗಳೂರು ಮಹಾನಗರ ಪಾಲಿಕೆ ಕಟ್ಟಡ ಉಪವಿಧಿಗಳು 2025’ರ ಕರಡಿಗೆ ಸರ್ಕಾರವು ಅನುಮೋದನೆ ನೀಡುವಾಗ ಕೆಲವೊಂದು ಅಂಶಗಳನ್ನು ಮಾರ್ಪಾಡು ಮಾಡಿದೆ. 2024 ರ ನವೆಂಬರ್ 28 ರಂದು ನಡೆದ ಕೌನ್ಸಿಲ್ ಸಭೆಯಲ್ಲಿ ಅಂಗೀಕರಿಸಲಾಗಿತ್ತು. ಇದಕ್ಕೆ ಸರಕಾರವು 2025 ರ ಫೆಬ್ರವರಿ 5 ರಂದು ಅನುಮೋದನೆ ನೀಡಿತ್ತು. 2025 ರ ಫೆಬ್ರವರಿ 27 ರಂದು ನಡೆದ ಪಾಲಿಕೆ ಕೌನ್ಸಿಲ್ […]

Continue Reading

BIG EXCLUSIVE’ ಫೆಬ್ರವರಿ 25 ಕ್ಕೆ ವಿಚಾರ ಗೊತ್ತಾಗುತ್ತೆ’.. ವಾಟ್ಸಾಪ್ ಸಂದೇಶ ರವಾನಿಸಿದ್ದ ದಿಗಂತ್..ಅವತ್ತೆ ನಿಗೂಢ ನಾಪತ್ತೆ..!

ಲಿಂಗ ಪರಿವರ್ತನೆ ಜಾಲಕ್ಕೆ ಸಿಲುಕಿದನಾ ದಿಗಂತ್..? ಬಗೆದಷ್ಟು ಬಿಚ್ಚಿಡುತ್ತಿದೆ ನಿಗೂಢ ನಾಪತ್ತೆ ಪ್ರಕರಣ ಕರಾವಳಿಯಲ್ಲಿ ಪಿಯುಸಿ ವಿದ್ಯಾರ್ಥಿ ದಿಗಂತ್ ದಿಢೀರ್ ನಾಪತ್ತೆ ಪ್ರಕರಣ ರಾಜ್ಯದಾದ್ಯಂತ ಸಂಚಲನ ಸೃಷ್ಟಿಸಿದೆ. ವಿಧಾನಸಭಾ ಅಧಿವೇಶನದಲ್ಲೂ ದಿಗಂತ್ ನಾಪತ್ತೆ ಪ್ರಕರಣ ಚರ್ಚೆಗೆ ಬಂದಿದೆ. ಇಂದಿಗೆ ವಾರ ಕಳೆದರೂ ದಿಗಂತ್ ಎಲ್ಲಿದ್ದಾನೆ ಅನ್ನುವ ಸಣ್ಣ ಕ್ಲೂ ಯಾರಿಗೂ ಸಿಕ್ಕಿಲ್ಲ. ಪೊಲೀಸ್ ಇಲಾಖೆ ಏಳು ತಂಡ ರಚನೆ ಮಾಡಿ ತನಿಖೆಗೆ ಇಳಿದಿದೆ. ಆದರೂ ದಿಗಂತ್ ಪತ್ತೆಯೇ ಇಲ್ಲ. ಅಷ್ಟಕ್ಕೂ ದಿಗಂತ್ ನಾಪತ್ತೆ ಹಿಂದೆ ರೋಚಕ ಸಂಗತಿ […]

Continue Reading

ವಿಟ್ಲದಲ್ಲಿ ಗಣಿ ಮಾಫಿಯಾದ ಅಟ್ಟಹಾಸ. ಭಾರಿ ಪ್ರಮಾಣದಲ್ಲಿ ಸ್ಫೋಟಕ ಸಿಡಿದು ನಲುವತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿ.‌

ಮುತ್ತಿಗೆ ಹಾಕಿ ಅಧಿಕಾರಿಗಳ ಚಳಿ ಬಿಡಿಸಿದ ಗ್ರಾಮಸ್ಥರು. ವಿಟ್ಲ : ಕ್ವಾರಿಯಲ್ಲಿ ಕಲ್ಲು ಬಂಡೆಗಳನ್ನು ಸ್ಫೋಟಿಸಲು ಅಕ್ರಮವಾಗಿ ಗುಡ್ಡದಲ್ಲಿ ದಾಸ್ತಾನು ಇರಿಸಿದ್ದ ಭಾರಿ ಪ್ರಮಾಣದ ಸ್ಫೋಟಕಗಳು ಸಿಡಿದು ವಿಟ್ಲ ಸುತ್ತಮುತ್ತ ಹತ್ತು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸ್ಫೋಟದ ಸದ್ದಿನೊಂದಿಗೆ ಕಂಪನ ಸಂಭವಿಸಿ ಐವತ್ತಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿವೆ. ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಡತ್ತಡ್ಕ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ಭಾರಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ವಿಟ್ಲ ಸುತ್ತಮುತ್ತ ಹತ್ತು ಕಿಲೋ ಮೀಟರ್ ವ್ಯಾಪ್ತಿಯಲ್ಲಿ […]

Continue Reading

ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ -15 ಸಮಾರೋಪ…!

ಕೆರೆಮನೆ ಶಂಭು ಹೆಗಡೆ ಯಕ್ಷಗಾನ ಕಲಾ ಸೌರಭವನ್ನು ಜಗದಗಲಕ್ಕೆ ಪಸರಿಸಿದ ಮಹಾನ್ ಕಲಾವಿದ : ಡಾ.ತಲ್ಲೂರು ಉಡುಪಿ : ಯಕ್ಷಗಾನ ಕಲಾ ಸೌರಭವನ್ನು ಜಗದಗಲಕ್ಕೆ ಪಸರಿಸಿ ಈ ಮೂಲಕ ತನ್ನ ಸಾಧನೆಗೆ ರಾಷ್ಟ್ರೀಯ ಪ್ರಶಸ್ತಿ ಪಡೆದ ಕೆರೆಮನೆ ಶಂಭು ಹೆಗಡೆ ಪ್ರಾತ: ಸ್ಮರಣೀಯರು. ಅವರ ಸಾಧನೆಯ ಹಾದಿಯನ್ನೇ ಅನುಸರಿಸಿಕೊಂಡು ಯಕ್ಷಗಾನ ಕಲೆಯ ಉಳಿವು ಬೆಳವಣಿಗೆಗೆ ತನ್ನದೇ ಕೊಡುಗೆಯನ್ನು ಮಂಡಳಿಗೆ ವಿಶ್ವ ಮಾನ್ಯತೆಯನ್ನು ತಂದಿರುವ ಕೆರೆಮನೆ ಶಿವಾನಂದ ಹೆಗಡೆ ಹಾಗೂ ಅವರ ಕುಟುಂಬ ಅಭಿನಂದನಾರ್ಹರು ಎಂದು ಕರ್ನಾಟಕ ಯಕ್ಷಗಾನ […]

Continue Reading

“ಸುರತ್ಕಲ್ – ನಂತೂರು ಹೆದ್ದಾರಿ ಡಾಮರೀಕರಣಕ್ಕೆ ಟೆಂಡರ್” ಸಂಸದರ ಹೇಳಿಕೆ ಸ್ವಾಗತಾರ್ಹ

ಕೂಳೂರು ಸೇತುವೆ, ನಂತೂರು ಮೇಲ್ಸೇತುವೆ ಕಾಮಗಾರಿ ಕುರಿತು ಮೌನ ಯಾಕೆ.? ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಪ್ರಶ್ನೆ. ಸಂಪೂರ್ಣ ಹದಗೆಟ್ಟಿರುವ ಸುರತ್ಕಲ್ – ನಂತೂರು ರಾಷ್ಟ್ರೀಯ ಹೆದ್ದಾರಿಯನ್ನು ಪೂರ್ಣ ಪ್ರಮಾಣದಲ್ಲಿ ದುರಸ್ತಿಗೊಳಿಸಲು ಆಗ್ರಹಿಸಿ ‘ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ’ ಹಲವು ಸುತ್ತಿನ ಹೋರಾಟಗಳನ್ನು ನಡೆಸಿ ಸಂಸದರೂ ಸೇರಿದಂತೆ ಸಂಬಂಧ ಪಟ್ಟವರಿಗೆ ಮನವಿಗಳನ್ನು ಸಲ್ಲಿಸಿತ್ತು. ಈಗ ಸಂಸದ ಬ್ರಿಜೇಶ್ ಚೌಟರು ಸುರತ್ಕಲ್ – ನಂತೂರು ರಾಷ್ಟ್ರೀಯ ಹೆದ್ದಾರಿ ಡಾಮರೀಕರಣಕ್ಕೆ ಟೆಂಡರ್ ಕರೆದಿರುವುದಾಗಿ ಹೇಳಿಕೆ ನೀಡಿದ್ದಾರೆ. ಟೋಲ್ […]

Continue Reading

ಬೆಳ್ತಂಗಡಿಯಲ್ಲಿ ಪ್ರಪ್ರಥಮ ಬಾರಿಗೆ ಡಿಪ್ಲೋಮಾ, ಪಿಜಿ ಡಿಪ್ಲೋಮಾ, ತಾಂತ್ರಿಕ ಮತ್ತು ವೃತ್ತಿಪರ ತರಬೇತಿ ಸಂಸ್ಥೆ ಕಾರ್ಯಾರಂಭ

ಬೆಳ್ತಂಗಡಿಯಲ್ಲಿ ಮೊಟ್ಟ ಮೊದಲ ಭಾರಿ ಮೈಫ್ಸ್ MIFSE (Mangalore Institute of Fire and Safety Engineering) ಮತ್ತು ಅನುಗ್ರಹ ಟ್ರೈನಿಂಗ್ ಕಾಲೇಜು ಜಂಟಿ ಸಹಯೋಗದಲ್ಲಿ ಬೆಳ್ತಂಗಡಿಯಲ್ಲಿ ಡಿಪ್ಲೊಮಾ, ಪಿ ಜಿ ಡಿಪ್ಲೋಮಾ ಹಾಗೂ ತಾಂತ್ರಿಕ ಮತ್ತು ವೃತ್ತಿಪರ ತರಬೇತಿ ಸಂಸ್ಥೆ ಬೆಳ್ತಂಗಡಿಯ ಸಂತೆಕಟ್ಟೆ ಶ್ರೀರಾಮ ಕಾಂಪ್ಲೆಕ್ಸ್ ನಲ್ಲಿ ಪ್ರಾರಂಭ. ಶ್ರೀ. ತಲ್ ಹತ್ ಎಂ ಜಿ ಸವಣಾಲು ಇವರು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಅನುಗ್ರಹ ಎಜುಕೇಶನ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ (ರಿ) ಇದರ ಅಂಗ ಸಂಸ್ಥೆಯಾದ […]

Continue Reading

ತೇಜಸ್ವಿನಿ‌ ಆಸ್ಪತ್ರೆಯ ನಿರ್ಲಕ್ಷ್ಯವೇ ಪಂಜಿಮೊಗರು ನಿವಾಸಿ ಹಾಮದ್ ಸಾವಿಗೆ ಕಾರಣ: ಸಂತೋಷ್ ಬಜಾಲ್

ತೇಜಸ್ವಿನಿ ಆಸ್ಪತ್ರೆಯ ವೈದ್ಯಕೀಯ ನಿರ್ಲಕ್ಷ್ಯಕ್ಕೆ ಒಳಗಾಗಿ ಸಾವನ್ನಪ್ಪಿದ ಪಂಜಿಮೊಗರು ನಿವಾಸಿ ಹಾಮದ್ ಎಂಬವರ ಸಾವಿಗೆ ನ್ಯಾಯ ಒದಗಿಸುವ ಮತ್ತು ಸಂತ್ರಸ್ತ ಕುಟುಂಬಕ್ಕೆ ಗರಿಷ್ಠ ಪ್ರಮಾಣದ ಪರಿಹಾರ ಒದಗಿಸಲು ಒತ್ತಾಯಿಸಿ ಡಿವೈಎಫ್ಐ ಪಂಜಿಮೊಗರು ಘಟಕ ನೇತೃತ್ವದಲ್ಲಿ ಇಂದು ಮಿನಿವಿಧಾನಸೌಧದ ಮುಂಭಾಗ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿದರು. ಡಿಸೆಂಬರ್ 21ರಂದು ಅಪಘಾತಗೊಳಗಾದ ಹಾಮದ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರೂ ಗಂಭೀರ ಗಾಯಗಳನ್ನು ಗುರುತಿಸಿ ಚಿಕಿತ್ಸೆ ನೀಡುವಲ್ಲಿ ತೇಜಸ್ವಿನಿ ಆಸ್ಪತ್ರೆ ಬೇಜಾವಾಬ್ದಾರಿ ವರ್ತನೆ […]

Continue Reading

ಪರಂಗಿಪೇಟೆ: ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ: ನಾಳೆ ಪರಂಗಿಪೇಟೆ ಬಂದ್ ಗೆ ಕರೆ.

ಮನೆಯ ಪಕ್ಕದಲ್ಲಿರುವ ರೈಲ್ವೆ ಹಳಿ ಬಳಿ ಆತನ ಪಾದರಕ್ಷೆಗಳು ಹಾಗೂ ಮೊಬೈಲ್‌ ಪತ್ತೆ. ಸರಿ ಸುಮಾರು ಮೂರು ದಿನದಿಂದ ನಾಪತ್ತೆಯಾಗಿರುವ ಕಪಿತಾನಿಯೋ ಕಾಲೇಜಿನ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಫರಂಗಿಪೇಟೆಯ ಪ್ರದೇಶದ ವಿದ್ಯಾರ್ಥಿಯ ಕುರಿತು ಯಾವುದೇ ಸುಳಿವು ಸಿಗದಿದ್ದರೂ ಸಾಕಷ್ಟು ಜಟಿಲವಾಗಿರುವ ಜತೆಗೆ ಅನುಮಾನಗಳನ್ನೂ ಸೃಷ್ಟಿಸಿದೆ. ಪೊಲೀಸರು ಆತನ ಪತ್ತೆಗೆ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಮುಂದುವರಿಸಿದ್ದು, ಗುರುವಾರ ಬೆಳಗ್ಗೆ ಸ್ಥಳೀಯ ಮುಖಂಡರು ಫರಂಗಿಪೇಟೆಯಲ್ಲಿ ಪ್ರತಿಭಟನೆ ನಡೆಸಿ ಪ್ರಕರಣವನ್ನು ಶೀಘ್ರ ಭೇದಿಸಿ ವಿದ್ಯಾರ್ಥಿಯನ್ನು ಪತ್ತೆ ಮಾಡುವಂತೆ ಆಗ್ರಹಿಸಿದರು. ಫೆ. […]

Continue Reading

ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನಿಂದ ವಿದ್ಯಾರ್ಥಿ ವೇತನ ವಿತರಣೆ

ಫೆ. 26: ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ಮಂಗಳೂರು ಶಾಖೆಯಿಂದ ಸಿಎಸ್‌ಆರ್ ಯೋಜನೆಯಡಿ ಜಿಲ್ಲೆಯ ಸರಕಾರಿ ಶಾಲೆಗಳ 462 ಕಾಲೇಜು ವಿದ್ಯಾರ್ಥಿನಿಯರಿಗೆ 37.28 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬುಧವಾರ ನಡೆಯಿತು. ‘ಶಿಕ್ಷಣ ಸಬಲೀಕರಣ, ಮಹಿಳಾ ಸಬಲೀಕರಣ’ ಎಂಬ ಧ್ಯೇಯ ವಾಕ್ಯದಡಿ ನಡೆದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಂಗಳೂರು ಸ್ಟೋರ್ ಮುಖ್ಯಸ್ಥ ಶರತ್‌ ಚಂದ್ರನ್, ಸಂಸ್ಥೆಯು ತನ್ನ ಲಾಭಾಂಶದ ಶೇ. 5ರಷ್ಟನ್ನು ಪ್ರತಿವರ್ಷ ಸಿಎಸ್‌ಆರ್ ಯೋಜನೆಯಡಿ ವಿವಿಧ […]

Continue Reading