ಮಂಗಳೂರು ಕಮೀಷನರ್ ಅಗ್ರವಾಲ್ ಅಮಾನತಿಗೆ ಹೆಚ್ಚಿದ ಒತ್ತಡ : ಜಂಟಿ ವೇದಿಕೆಯಿಂದ ಬೃಹತ್ ಧರಣಿ

ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ಅಮಾನತಿಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಕಮೀಷನರ್ ಅಗ್ರವಾಲ್ ಅಮಾನತು ಗೊಳಿಸಬೇಕು, ಕಮಿಷನರೇಟ್ ವ್ಯಾಪ್ತಿಯಲ್ಲಿ ಈ ಹಿಂದಿನಂತ ಧರಣಿ, ಪ್ರತಿಭಟನೆಗಳಿಗೆ ಮುಕ್ತ ಅವಕಾಶ ಒದಗಿಸಬೇಕು ಎಂದು ಒತ್ತಾಯಿಸಿ ಮಂಗಳೂರು ಮಿನಿ ವಿಧಾನ ಸೌಧದ ಮುಂಭಾಗ ದ.‌ಕ‌. ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಂಘಟನೆಗಳು ಇಂದು ಹಮ್ಮಿಕೊಂಡಿದ್ದ “ಸಾಮೂಹಿಕ ಧರಣಿ” ಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಸಂಘಟನೆಗಳ ನೂರಾರು ಕಾರ್ಯಕರ್ತರು ಪಾಲ್ಗೊಂಡರು. ಕಮೀಷನರ್ ಅಮಾನತಿಗೆ ಬಲವಾಗಿ ಆಗ್ರಹಿಸಿದರು. ಸಾಮೂಹಿಕ ಧರಣಿಯನ್ನು […]

Continue Reading

ಆಂಧ್ರಪ್ರದೇಶ ಕರಾವಳಿಯ ಪಶ್ಚಿಮ ಬಂಗಾಳ ಕೊಲ್ಲಿಯ ಮೇಲಿನ ವಾಯುಭಾರ ಕುಸಿತ ಪರಿಣಾಮ

ರಾಜ್ಯದಲ್ಲಿಯೂ ಭಾರಿ ಮಳೆ ಸಾಧ್ಯತೆ.! ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲೂ ಮಳೆ ನಿರೀಕ್ಷೆ ಆಂಧ್ರಪ್ರದೇಶ ಕರಾವಳಿಯ ಪಶ್ಚಿಮ ಬಂಗಾಳ ಕೊಲ್ಲಿಯ ಮೇಲಿನ ವಾಯುಭಾರ ಕುಸಿತ ಆಗಿರುವ ಕಾರಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಾಳೆಯಿಂದ ಮೂರು ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ ಎಂದು ಹೇಳಿದೆ. ವಾಯುಭಾರ ಕುಸಿತವು ಗಂಟೆಗೆ 7 ಕಿ.ಮೀ ವೇಗದಲ್ಲಿ ಪೂರ್ವ-ಈಶಾನ್ಯಕ್ಕೆ ಚಲಿಸಿದೆ. ಚೆನ್ನೈನ ಪೂರ್ವ-ಈಶಾನ್ಯಕ್ಕೆ ಸುಮಾರು 450 ಕಿ.ಮೀ. […]

Continue Reading

ಮಮ್ತಾಜ್‌ ಅಲಿ ಕುಟುಂಬಸ್ಥರು ಸುಪ್ರೀಂ ಮೊರೆ. ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆ ಜನವರಿ 9 ರ ವರೆಗೆ ಮುಂದೂಡಿಕೆ

ಮಾಜಿ ಶಾಸಕ ಮೊದೀನ್‌ ಬಾವಾ ಅವರ ಸಹೋದರ, ಉಧ್ಯಮಿ ಮಮ್ತಾಜ್‌ ಅಲಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನೆ ನೀಡಿದ ಮೇರೆಗೆ ಬಂಧಿಸಲ್ಪಟ್ಟಿರುವ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ 2025 ಜನವರಿ 9 ರ ವರೆಗೆ ಮುಂದೂಡಿದೆ. ಇದರಿಂದಾಗಿ ಆರೋಪಿಗಳ ನ್ಯಾಯಾಂಗ ಬಂಧನವು ಮುಂದುವರಿಯಲಿದೆ. ಆಯೇಷಾ, ಗಂಡ ಶೋಹೆಬ್‌, ಅಬ್ದುಲ್ ಸತ್ತಾರ್‌ ಸಹಿತ ಇತರರು ಸೇರಿ ಹಣಕ್ಕಾಗಿ ಹನಿ ಟ್ರ್ಯಾಪ್‌ ಮಾಡಿ ಮುಮ್ತಾಝ್ ಅಲಿಯನ್ನು ಆತ್ಮಹತ್ಯೆಗೈಯ್ಯುವಂತೆ ಮಾಡಿದ್ದರು ಎಂದು ಕುಟುಂಬಸ್ಥರು ಕಾವೂರು ಪೊಲೀಸ್‌ ಠಾಣೆಯಲ್ಲಿ […]

Continue Reading

ಮಲ್ಪೆ ವಾಸುದೇವ ಸಾಮಗ ಸಂಸ್ಮರಣೆ, ಪ್ರಶಸ್ತಿ ಪ್ರದಾನ

ವಾಸುದೇವ ಸಾಮಗ ಅವರ ಬದುಕು, ಬರಹಗಳು ಯಕ್ಷಗಾನಸಕ್ತರಿಗೆ ದಾರಿದೀಪ : ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ವರದಿ: ಅನುಷಾ ಆಚಾರ್ ಪಳ್ಳಿ ಉಡುಪಿ : ಯಕ್ಷಗಾನಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿ ಮೇರು ಕಲಾವಿದರಾಗಿ ಮೆರೆದ ದಿ.ಮಲ್ಪೆ ವಾಸುದೇವ ಸಾಮಗ ಅವರ ಬದುಕು ಅವರು ರಚಿಸಿದ ಯಕ್ಷಗಾನ ಕೃತಿಗಳು ಯಕ್ಷಗಾನಾಸಕ್ತರಿಗೆ ದಾರಿ ದೀಪಗಳಾಗಿವೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಶನಿವಾರ ಕುಂದಾಪುರ ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಯಶಸ್ವೀ […]

Continue Reading

ಮಹಿಳೆಯ ಭೇಟಿಯಾಗಲು ಹೋಗಿ ಕಬಕದಲ್ಲಿ ಒದೆ ತಿಂದ ನಟೋರಿಯಸ್ ಕಾಮುಕ..

ಬೋಳಂತೂರಿನ ಆಟೋ ಚಾಲಕ ಕಿಸ್ ರಹೀಂನ ಹುಚ್ಚಾಟಕ್ಕೆ ಮಹಿಳೆಯರ ಬದುಕು ಬರ್ಬಾದ್. ಹೌದು, ಆಟೋ ಚಾಲಕರೆಂದರೆ ಜನರಿಗೆ ಪ್ರೀತಿ, ವಿಶ್ವಾಸ..ಚಾಲಕರ ಸಮಾಜಸೇವೆಗೊಂದು ಹ್ಯಾಟ್ಸಪ್ ಹೇಳಲೇಬೇಕು. ಆದರೆ ಆಟೋ ಚಾಲಕ ಬೋಳಂತೂರು ನಿವಾಸಿ ಕಿಸ್ ರಹೀಂ ಮಾತ್ರ ಆಟೋ ಚಾಲಕರ ಮೇಲಿನ ನಂಬಿಕೆ, ಪ್ರೀತಿ ಮತ್ತು ಜನತೆಯ ವಿಶ್ವಾಸಕ್ಕೆ ಕಂಠಕನಾಗಿದ್ದಾನೆ. ಆಟೋ ಚಾಲಕರ ಮಾನ-ಮರ್ಯಾದೆಯನ್ನು ಸಾರ್ವಜನಿಕ ಸಮಾಜದ ಮುಂದೆ ಹರಾಜು ಹಾಕುತ್ತಿದ್ದಾನೆ. ವರ್ಷದ ಹಿಂದೊಮ್ಮೆ ವಾಣಿಜ್ಯ ಸಂಕೀರ್ಣದ ಮೆಟ್ಟಿಲಲ್ಲಿ ನಿಂತು ಶಾಲಾ ವಿದ್ಯಾರ್ಥಿನಿಯ ಮೊಬೈಲ್ ಸಂಖ್ಯೆ ಪಡೆಯುವ ನೆಪದಲ್ಲಿ […]

Continue Reading

ಸುರತ್ಕಲ್: ಬೆನ್ನಟ್ಟಿದ ಟ್ರಾಫಿಕ್ ಪೊಲೀಸ್; ಅಪಘಾತದಲ್ಲಿ ಬೈಕ್ ಸವಾರ ಮೃತ್ಯು

ಹೆಲ್ಮೆಟ್ ಧರಿಸದ ಕಾರಣಕ್ಕೆ ದ್ವಿಚಕ್ರ ವಾಹನ ಸವಾರನೊಬ್ಬನನ್ನು ಬೆನ್ನಟ್ಟಿದ ಟ್ರಾಫಿಕ್ ಪೊಲೀಸರನ್ನು ಕಂಡು ವೇಗವಾಗಿ ಚಲಿಸಿದ ವಾಹನ ಸವಾರ ರಸ್ತೆ ಅಪಘಾತಕ್ಕೊಳಗಾಗಿ ಮೃತಪಟ್ಟ ದುರ್ಘಟನೆ ಶುಕ್ರವಾರ ರಾತ್ರಿ ಸುರತ್ಕಲ್ ಸಮೀಪದ ಕಾನ ಎಂಬಲ್ಲಿ ಸಂಭವಿಸಿದೆ. ಕುಳಾಯಿಯಲ್ಲಿ ಟ್ಯೂಶನ್ ಗೆ ತೆರಳಿದ್ದ ಮಗನನ್ನು ಕರೆ ತರಲು ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ ಸವಾರ ಕಾನ ಬಳಿ ವಾಹನ ತಪಾಸಣೆಯಲ್ಲಿ ನಿರತರಾಗಿದ್ದ ಮಂಗಳೂರು ಉತ್ತರ ಸಂಚಾರ ಪೊಲೀಸರು ಕಂಡು ವೇಗವಾಗಿ ಚಲಿಸಿ ಪರಾರಿಯಾಗಿದ್ದ. ಈ ಸಂದರ್ಭದಲ್ಲಿ ಬೆನ್ನಟ್ಟಿದ ಪೊಲೀಸರನ್ನು […]

Continue Reading

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಿಗಳನ್ನು ಪ್ರಕರಣ ದಾಖಲಾದ 60 ದಿನಗಳ ಬಳಿಕ ಪೊಲೀಸ್‌ ವಶಕ್ಕೆ ನೀಡಲಾಗದು: ಹೈಕೊರ್ಟ್

ಮುಮ್ತಾಜ್‌ ಅಲಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ; ತನಿಖಾಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಜಾ ಹತ್ತು ವರ್ಷಗಳಿಗೂ ಕಡಿಮೆ ಅವಧಿಯ ಶಿಕ್ಷೆ ವಿಧಿಸಬಹುದಾಗಿರುವ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಿಗಳನ್ನು ಪ್ರಕರಣ ದಾಖಲಾದ 60 ದಿನಗಳ ಬಳಿಕ ಪೊಲೀಸ್‌ ವಶಕ್ಕೆ ನೀಡಲಾಗದು ಎಂದು ಹೇಳಿರುವ ಕರ್ನಾಟಕ ಹೈಕೋರ್ಟ್‌, ಮಾಜಿ ಶಾಸಕ ಮೊಯ್ದಿನ್‌ ಬಾವಾ ಸಹೋದರ ಬಿ.ಎಂ. ಮುಮ್ತಾಜ್‌ ಅಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡುವಂತೆ ತನಿಖಾಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಪ್ರಕರಣ ದಾಖಲಾದ 60 ದಿನಗಳ ಬಳಿಕ […]

Continue Reading

ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರವೀಣ್ ನೆಟ್ಟಾರ್ ಹತ್ಯಾ ಆರೋಪಿ ಮುಹಮ್ಮದ್ ಶರೀಫ್ ಅರೆಸ್ಟ್

ಇಡೀ ರಾಜ್ಯಾದಾದ್ಯಂತ ಸಂಚಲನ ಸೃಷ್ಟಿಸಿದ್ದ ಪ್ರವೀಣ್ ನೆಟ್ಟಾರ್ ಹತ್ಯಾ ಪ್ರಕರಣದ ಆರೋಪಿಯಾದ ಮುಹಮ್ಮದ್ ಶರೀಫ್ ಎಂಬಾತನನ್ನು ಎನ್ ಐಎ ಅಧಿಕಾರಿಗಳು ಬಂಧಿಸಿರುವುದಾಗಿ ವರದಿಯಾಗಿದೆ. ಪ್ರವೀಣ್ ನೆಟ್ಟಾರ್ ಆರೋಪಿ ಯಾಗಿದ್ದ ಮುಹಮ್ಮದ್ ಶರೀಫ್ ಕೋಡಾಜೆ ನಿವಾಸಿಯಾಗಿದ್ದು, ನೆಟ್ಟಾರ್ ಹತ್ಯೆ ಬಳಿಕ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ. ಈತನ ಬಂಧನಕ್ಕೆ ಎನ್ ಐಎ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು. ಇದೀಗ ದಿಲ್ಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.

Continue Reading

ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(CITU) ದ.ಕ. ಜಿಲ್ಲಾ ಸಮಿತಿಯ ನೇತ್ರತ್ವದಲ್ಲಿ ಪ್ರತಿಭಟನೆ

ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(CITU) ದ.ಕ.ಜಿಲ್ಲಾ ಸಮಿತಿಯ ನೇತ್ರತ್ವದಲ್ಲಿ 19-22-2024ರಂದು ಮಂಗಳೂರು ಮಿನಿ ವಿಧಾನ ಸೌಧದ ಮುಂದುಗಡೆ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು. ಪ್ರತಿಭಟನೆಯನ್ನು ಉದ್ಘಾಟಿಸುತ್ತಾ ಸಂಘದ ಜಿಲ್ಲಾಸಮಿತಿಯ ಗೌರವ ಅಧ್ಯಕ್ಷರಾದ ಪದ್ಮಾವತಿ ಶೆಟ್ಟಿಯವರು ಕಾಂಗ್ರೆಸ್ ಸರಕಾರ ಚುನಾವಣಾ ಪೂರ್ವದಲ್ಲಿ ಘೋಷಿಸಿರುವಂತೆ ಬಿಸಿಯೂಟ ನೌಕರರಿಗೆ ಮಾಸಿಕ ವೇತನ ರೂ, 6000 ಕೂಡಲೇ ಏರಿಸಬೇಕು. ನಿವೃತ್ತ ನೌಕರರಿಗೆ ಒಪ್ಪಿಕೊಂಡಂತೆ ಇಡಿಗಂಟು ವಿತರಣೆ ಮಾಡಬೇಕು. 2014ರಿಂದ ಕೇಂದ್ರ ಸರಕಾರ ಅನುದಾನವನ್ನೇ ನೀಡದಿರುವುದು ಖಂಡನೀಯವೆಂದ ಅವರು ರಾಜ್ಯ ಮತ್ತು ಕೇಂದ್ರ […]

Continue Reading

ಕಾರ್ಮಿಕ ವರ್ಗಕ್ಕೆ ದ್ರೋಹವೆಸಗಿದ ಯಾವುದೇ ಸರಕಾರಗಳು ಉಳಿದಿಲ್ಲ: ಸುನಿಲ್ ಕುಮಾರ್ ಬಜಾಲ್

ಸಮಾಜದ ಅಭಿವೃದ್ಧಿಯಲ್ಲಿ ಕಾರ್ಮಿಕ ವರ್ಗದ ಪಾತ್ರವೇ ಪ್ರಧಾನವಾದುದ್ದು. ಅಂತಹ ಕಾರ್ಮಿಕ ವರ್ಗದ ಉತ್ತಮ ಬದುಕಿಗಾಗಿ ಅವಿಶ್ರಾಂತವಾಗಿ ಶ್ರಮಿಸಬೇಕಾದ ಆಳುವ ವರ್ಗಗಳು ನಿತ್ಯ ನಿರಂತರವಾಗಿ ಬಂಡವಾಳಶಾಹಿಗಳ ಹಿತಾಸಕ್ತಿಗಳನ್ನು ಕಾಪಾಡಲು ಹಾತೊರೆಯುತ್ತಿದೆ. ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಕಾರ್ಮಿಕ ವರ್ಗಕ್ಕೆ ದ್ರೋಹವೆಸಗಿದ ಯಾವುದೇ ಸರಕಾರಗಳು ಇವತ್ತಿನವರೆಗೆ ಉಳಿದಿಲ್ಲ, ಜೊತೆಗೆ ಮಣ್ಣು ಮುಕ್ಕಿದೆ ಎಂದು CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಅಭಿಪ್ರಾಯ ಪಟ್ಟರು. ಅವರು ನಗರದಲ್ಲಿಂದು(18-12-2024) CITU ನೇತ್ರತ್ವದಲ್ಲಿ ಜರುಗಿದ ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸುತ್ತಾ ಈ‌ ಮಾತುಗಳನ್ನು […]

Continue Reading