ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆ; ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಮುನಿಸು

ಚನ್ನಪಟ್ಟಣ ಉಪಚುನಾವಣೆಗೆ ಎನ್‌ಡಿಎ ಅಭ್ಯರ್ಥಿ ಹಗ್ಗಜಗ್ಗಾಟ ಮುಂದುವರಿದಿರುವ ನಡುವೆಯೇ ಚನ್ನಪಟ್ಟಣ ತಾಲೂಕು ಬಿಜೆಪಿ ಕಚೇರಿಯಲ್ಲಿ ಆರೇಳು ತಿಂಗಳುಗಳಿಂದ ರಾರಾಜಿಸುತ್ತಿದ್ದ ಜೆಡಿಎಸ್‌ ವರಿಷ್ಠರಾದ ಎಚ್‌.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿದ್ದ ಬ್ಯಾನರ್‌ನ್ನು ಏಕಾಏಕಿ ತೆರವುಗೊಳಿಸಲಾಗಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆರೇಳು ತಿಂಗಳೊಳಗಾಗಿಯೇ ಮೈತ್ರಿಯಲ್ಲಿ ಮುನಿಸು ಮನೆ ಮಾಡಿದೆ. ಎನ್‌ಡಿಎ ಅಭ್ಯರ್ಥಿ ಸಂಬಂಧ ಪೈಪೋಟಿ ಮುಂದುವರಿದಿದ್ದು ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಜೆಡಿಎಸ್‌ ನಾಯಕರ ವಿರುದ್ಧ ಆಕ್ರೋಶಗೊಂಡು, ಬಂಡಾಯ ಸ್ಫರ್ಧೆಯ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ, ತಾಲೂಕು ಬಿಜೆಪಿ […]

Continue Reading

ಅಕ್ರಮದಲ್ಲಿ ಭಾಗಿ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಜಗದೀಶ್, ಜಲ ಸಂಪನ್ಮೂಲ ಇಲಾಖೆಯ ಮನ್ಮಥಯ್ಯ ಸ್ವಾಮಿ ಅಮಾನತು

ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿರುವ ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್‌ ಗಳಾದ ಜಗದೀಶ್ ಮತ್ತು ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ಅಕ್ರಮ ಎಸಗಿರುವ ಆರೋಪ ಎದುರಿಸುತ್ತಿರುವ ಜಲ ಸಂಪನ್ಮೂಲ ಇಲಾಖೆಯ ಮನ್ಮಥಯ್ಯ ಸ್ವಾಮಿ ಎಂಬವರನ್ನು ಅಮಾನತುಗೊಳಿಸಲಾಗಿದೆ. ಜಗದೀಶ್‌ ಅವರು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಬೆಂಗಳೂರು ವಲಯದ ಮುಖ್ಯ ಎಂಜಿನಿಯರ್‌ ಹುದ್ದೆಯಲ್ಲಿದ್ದರು. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಅಡಿ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿ ಪ್ರಕರಣ […]

Continue Reading

ರಾಜ್ಯದಲ್ಲಿ ಎಚ್ ಐ ಸೋಂಕು ಗಣನೀಯ ಪ್ರಮಾಣದಲ್ಲಿ ಏರಿಕೆ

ವೃತ್ತಿಪರ ಕೋರ್ಸ್ ಅಧ್ಯಯನ ಮಾಡುವವರಲ್ಲೇ ಎಚ್ಐವಿ ಸೋಂಕು ಅಧಿಕ; ಪಿ.ಜಿಗಳಲ್ಲಿ ಎಚ್‌ಐವಿ, ಏಡ್ಸ್ ದಿನದಿಂದ ದಿನಕ್ಕೆ ಏರುತಿದೆ ಪಿ.ಜಿಗಳಲ್ಲಿ ಎಚ್‌ಐವಿ ಏಡ್ಸ್ ದಿನದಿಂದ ದಿನಕ್ಕೆ ಏರುತಿದೆ ಎಂಬ ಆತಂಕಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಎಚ್‌ಐವಿ ಹೆಚ್ಚಾಗಿದೆ. ಆಘಾತಕಾರಿಯೆಂದರೆ ಹಾಸ್ಟೆಲ್, ಪಿ.ಜಿ ಹಾಗೂ ಗೆಸ್ಟ್‌ ಹೌಸ್‌ನಲ್ಲಿ ಇರುವವರಲ್ಲಿ ಎಚ್‌ಐವಿ ಹಾಗೂ ಏಡ್ಸ್‌ ರೋಗ ಕಾಣಿಸಿಕೊಳ್ಳುತ್ತಿದ್ದು. ಈ ರೋಗ ಗಂಭೀರ ಹಂತಕ್ಕೆ ತಲುಪಿದ ಮೇಲೆ ವೈದ್ಯರ ಬಳಿಗೆ ಹೋಗುತ್ತಿದ್ದಾರೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹಾಸ್ಟಲ್‌ […]

Continue Reading

ರಾಜ್ಯದಲ್ಲಿ 215 ಬಾಲ್ಯವಿವಾಹ ಪ್ರಕರಣಗಳು; ದೇಶದಲ್ಲಿ ಕರ್ನಾಟಕವೇ ನಂಬರ್ ಒನ್.!

ಭಾರತದಲ್ಲಿ ಬಾಲ್ಯ ವಿವಾಹ ನಿಷೇಧ ಕಾನೂನು ಚಾಲ್ತಿಯಲ್ಲಿದ್ದರೂ 2022 ರಲ್ಲಿ ಒಟ್ಟಾರೆ ಸಾವಿರಕ್ಕೂ ಅಧಿಕ ಬಾಲ್ಯ ವಿವಾಹ ಪ್ರಕರಣಗಳು ಜರುಗಿವೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ ಸಿಪಿಆರ್) ವರದಿಯನ್ನು ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿರುವ ಅಂಕಿಅಂಶಗಳ ಪೈಕಿ ಕರ್ನಾಟಕದಲ್ಲಿ ಅತ್ಯಧಿಕ ಬಾಲ್ಯ ವಿವಾಹ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಕರ್ನಾಟಕದಲ್ಲಿ ಒಟ್ಟು 215 ಬಾಲ್ಯ ವಿವಾಹಗಳು ನಡೆದಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವೇ ನಂಬರ್ ಒನ್ ಸ್ಥಾನದಲ್ಲಿದೆ. ಭಾರತದಲ್ಲಿ ಬಾಲ್ಯ ವಿವಾಹ ನಿಷೇಧ […]

Continue Reading

ಮೈಸೂರು ಸ್ಯಾಂಡಲ್​ ಸೋಪ್​ ಫ್ಯಾಕ್ಟರಿಯಲ್ಲಿ ಭಾರಿ ಅಕ್ರಮ; 40 ಲಕ್ಷ ಲಂಚ ಕೊಡುವ ವೇಳೆ ಸಿಕ್ಕಿಬಿದ್ದಿದ್ದ ಕಂಪನಿಯೊಂದಕ್ಕೆ ಬಹುಕೋಟಿ ಟೆಂಡರ್​

ಮೈಸೂರು ಸ್ಯಾಂಡಲ್​ ಸೋಪ್​ ಫ್ಯಾಕ್ಟರಿಯ ಟೆಂಡರ್​ ಅಕ್ರಮಕ್ಕಾಗಿ ಬಹುಕೋಟಿ ಲಂಚ ವಸೂಲಿ ಪ್ರಕರಣ ಸುದ್ದಿಯಾಗಿದ್ದ ಬೆನ್ನಲ್ಲೇ ಮತ್ತೊಂದು ಸ್ಫೋಟಕ ಆರೋಪ ಹೊರಬಿದ್ದಿದೆ. ಟೆಂಡರ್ ಅಕ್ರಮಕ್ಕಾಗಿ 40 ಲಕ್ಷ ರೂಪಾಯಿ ಲಂಚ ಕೊಡುವ ವೇಳೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದ ಕಂಪನಿಯೊಂದಕ್ಕೆ ಮತ್ತೆ ಬಹುಕೋಟಿ ಟೆಂಡರ್​ ನೀಡಲಾಗಿದೆ. ಟೆಂಡರ್​ ನಿಯಮಗಳನ್ನು ಗಾಳಿಗೆ ತೂರಿ ಈ ಕಂಪನಿಗೆ ಸ್ಯಾಂಡಲ್​ವುಡ್​ ಆಯಿಲ್​ ಮತ್ತು ನೂಡಲ್ಸ್​ ಪೂರೈಕೆಯ ಗುತ್ತಿಗೆ ನೀಡಲಾಗಿದ್ದು, ಬಾರೀ ಕಿಕ್​ಬ್ಯಾಕ್​ನ ಆರೋಪ ಕೇಳಿ ಬಂದಿದೆ. ಮಾರುಕಟ್ಟೆ ದರಕ್ಕಿಂತ ಎರಡರಷ್ಟು ಹೆಚ್ಚಿನ […]

Continue Reading

ದೇವನಹಳ್ಳಿ ಕೆಐಎಡಿಬಿ ಭೂಹಗರಣ ಆರೋಪ; ಸಮಗ್ರ ತನಿಖೆಗೆ ಬಿಜೆಪಿ ಶಾಸಕ ಸಿ.ಟಿ.ರವಿ ಆಗ್ರಹ

ಚಿತ್ರದುರ್ಗ: ದೇವನಹಳ್ಳಿ ಕೆಐಎಡಿಬಿ ಕರ್ಮಕಾಂಡ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಬಿಜೆಪಿ ಆಗ್ರಹಿಸಿದೆ. ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ರಾಜ್ಯ ಸರ್ಕಾರದ ಭೂ ಕರ್ಮಕಾಂಡಗಳ ಬಗ್ಗೆ ಆಕ್ರೋಶ ಹೊರಹಾಕಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿ KIADB ಭೂ ಸ್ವಾದೀನ ಪ್ರಕ್ರಿಯೆಯಲ್ಲಿ ಹಗರಣ ನಡೆದಿದ್ದು, ಈ ಬಗ್ಗೆ ಸಿಟಿಜನ್ ರೈಟ್ಸ್ ಫೌಂಡೇಷನ್’ ಅಧ್ಯಕ್ಷ ಕೆ.ಎ.ಪಾಲ್ ಎಂಬವರು ಲೋಕಾಯುಕ್ತರಿಗೆ ದೂರು ನೀಡಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದರು. 1984 ರಲ್ಲಿ ಇದೇ ಭೂಮಿಯನ್ನು […]

Continue Reading

ಸಿದ್ದರಾಮಯ್ಯ ಸರ್ಕಾರಕ್ಕೆ ಮತ್ತೊಂದು ಕಾನೂನು ಕುಣಿಕೆ;

KIADBಯಲ್ಲಿ ಬಹುಕೋಟಿ ಹಗರಣ; ಲೋಕಾಯುಕ್ತಕ್ಕೆ ಸಲ್ಲಿಕೆಯಾಯ್ತು ಮತ್ತೊಂದು ದೂರು.. ಸಿಎಂ ಸಿದ್ದರಾಮಯ್ಯ, ಸಚಿವ ಎಂ.ಬಿ.ಪಾಟೀಲ್ ಸುತ್ತ ಅನುಮಾನಗಳ ಹುತ್ತ..! ಬೆಂಗಳೂರು: ವಾಲ್ಮಿಕಿ ನಿಗಮ ಕರ್ಮಕಾಂಡ, ಮುಡಾ ಸೈಟ್ ಅಕ್ರಮ ಹಗರಣದಲ್ಲಿ ಸಂಕಷ್ಟ ಎದುರಿಸುತ್ತಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಇದೀಗ ಕೆಐಎಡಿಬಿ ಭೂ ಅವ್ಯವಹಾರದ ಉರುಳು ಕೂಡಾ ಸುತ್ತಿಕೊಂಡಿದೆ. ಸರ್ಕಾರಿ ಜಮೀನನ್ನೇ ಬೇರೆಯವರ ಹೆಸರಲ್ಲಿ ಪರಿಗಣಿಸಿ ಪರಿಹಾರ ವಿತರಿಸಿರುವ ಭಾರೀ ಅಕ್ರಮ ಆರೋಪ ಕುರಿತಂತೆ ಲೋಕಾಯುಕ್ತರಿಗೆ ದೂರು ಸಲ್ಲಿಕೆಯಾಗಿದೆ. “ಸಿಟಿಜನ್ ರೈಟ್ಸ್ ಫೌಂಡೇಷನ್” ಪರವಾಗಿ ಅಧ್ಯಕ್ಷ ಕೆ.ಎ.ಪಾಲ್ ನೀಡಿರುವ ಈ […]

Continue Reading

ಹುಬ್ಬಳ್ಳಿಯಲ್ಲೂ ವಿಡಿಯೋ, ಅಡಿಯೋ ಮಾಡಿ ಹನಿಟ್ರ್ಯಾಪ್ ಮಾಡುತ್ತಿದ್ದ ಟೀಂ

ಹಣ ಮಾಡಬೇಕು ಎಂಬ ಆಸೆಗೆ ಬಿದ್ದು ಮಾಡಬಾರದ ಕೆಲಸ ಮಾಡುತ್ತಿದ್ದ ತಂಡವೊಂದರ ಹಿಸ್ಟರಿ ಕೇಳಿದರೆ ನೀವು ಬೆಚ್ಚಿಬೀಳುತ್ತೀರಿ. ಹುಬ್ಬಳ್ಳಿಯ ಡಾಕಪ್ಪ ಸರ್ಕಲ್ ನಿವಾಸಿ ಸಯ್ಯದ ಎಂಬಾತ ಹಣವಂತರನ್ನು ಗುರುತಿಸಿ ತನ್ನ ಪ್ರಿಯತಮೆಯನ್ನೆ ಅವರ ಬಳಿ ಬಿಟ್ಟು ಮಲಗಿಸಿ, ವಿಡಿಯೋ ಅಥವಾ ಅಡಿಯೋ ಮಾಡಿಕೊಂಡು ಅವರ ಬಾಗಿಲು ಬಡಿಯುವ ಹನಿಟ್ರ್ಯಾಪ್ ಟೀಂ ಒಂದನ್ನು ಹುಬ್ಬಳ್ಳಿಯ ಸಿಸಿಬಿ ಪೋಲೀಸರು ಹೆಡಮುರಿ ಕಟ್ಟಿದ್ದಾರೆ. ಹುಬ್ಬಳ್ಳಿಯ ಬಾಂಡೆ ಅಂಗಡಿ ವ್ಯಾಪಾರಿಯೊಬ್ಬನಿಗೆ ಹನಿಟ್ರ್ಯಾಪ್ ಮಾಡಿ ಹಣಕ್ಕಾಗಿ ಈ ಟೀಂ ಬೇಡಿಕೆ ಇಟ್ಟಿತ್ತು.ಇವರಿಂದ ಬೇಸತ್ತ ವ್ಯಾಪಾರಿ […]

Continue Reading

ಮೂರು ಸಾವಿರ ಎಕರೆ ಭೂಮಿ, ಚಿನ್ನದ ಗಣಿ, ಸಮಸ್ತ ಆಸ್ತಿಯನ್ನು ಮಠಕ್ಕೆ ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ ಓಸ್ವಾಲ್ ಜೈನ್

ಚಿನ್ನದ ಅದಿರು ಗಣಿ ಮಾಲೀಕ ರಾಜಸ್ಥಾನ ಮೂಲದ ಪಿ.ಬಿ.ಓಸ್ವಾಲ್ ಜೈನ್ ರವರು ತನ್ನ ಒಡೆತನದ ಗಣಿಗಾರಿಕೆ ಪ್ರದೇಶದ 3 ಸಾವಿರ ಎಕರೆ ಭೂಮಿ ಮತ್ತು ಇತರ ಸಮಸ್ತ ಆಸ್ತಿಯನ್ನು ದಾನವಾಗಿ ಪಾಲನಹಳ್ಳಿ ಮಠದ ಸಂಸ್ಥಾಪಕ ಅಧ್ಯಕ್ಷ ಡಾ. ಸಿದ್ದರಾಜು ಸ್ವಾಮೀಜಿ ಅವರಿಗೆ ಹಸ್ತಾಂತರಿಸಿದ್ದಾರೆ. ಕಳೆದ 20 ವರ್ಷಗಳಿಂದ ಪಾಲನಹಳ್ಳಿ ಶನೇಶ್ಚರ ಸ್ವಾಮಿ ಮಠಾಧ್ಯಕ್ಷರಾದ ಡಾ. ಸಿದ್ದರಾಜು ಸ್ವಾಮೀಜಿ ಅವರ ಜನೋಪಯೋಗಿ, ಸೇವಾ ಕೈಂಕರ್ಯಗಳನ್ನು ಹತ್ತಿರದಿಂದ ಗಮನಿಸಿ, 78 ವರ್ಷಪ್ರಾಯದ ಇವರು ಜೈನ ಧರ್ಮದ ತತ್ವಗಳ ಅನುಸಾರ ಅಹಿಂಸಾ […]

Continue Reading

ಲೋಕಾಯುಕ್ತ ವಿಶೇಷ ನ್ಯಾಯಾಲಯವು ಹಲವು ಪ್ರಕರಣಗಳಲ್ಲಿ ಕೆಟ್ಟ ರೀತಿಯಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಖುಲಾಸೆಗೊಳಿಸಿದೆ

ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧಿಕಾರಿಗಳು ಪ್ರಮುಖ ಪ್ರಕರಣಗಳಲ್ಲಿ ‘ಬಿ’ ರಿಪೋರ್ಟ್ ಸಲ್ಲಿಸುವಷ್ಟು ದಿಟ್ಟತನ ತೋರಿದ್ದಾರೆ: ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ಲೋಕಾಯುಕ್ತ ವಿಶೇಷ ನ್ಯಾಯಾಲಯವು ಹಲವಾರು ಪ್ರಕರಣಗಳಲ್ಲಿ ಕೆಟ್ಟ ರೀತಿಯಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧಿಕಾರಿಗಳು ಪ್ರಮುಖ ಪ್ರಕರಣಗಳಲ್ಲಿ ‘ಬಿ’ ರಿಪೋರ್ಟ್ ಸಲ್ಲಿಸುವಷ್ಟು ದಿಟ್ಟತನ ತೋರಿದ್ದಾರೆ ಎಂದು ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ಅಭಿಪ್ರಾಯ ಪಟ್ಟಿದ್ದಾರೆ. ಪ್ರಮುಖ ಆರೋಪಿಗಳು ಮತ್ತು ಪ್ರಭಾವಿ ಅಧಿಕಾರಿಗಳ ಪರವಾಗಿ […]

Continue Reading