ರಾಜ್ಯದಲ್ಲಿ ಸಿಬಿಐ ಗೆ ಕಡಿವಾಣ.!ಇನ್ನು ಮುಂದೆ ಸಿಬಿಐ ತನಿಖೆ ನಡೆಸಬೇಕಾದರೆ ರಾಜ್ಯ ಸರ್ಕಾರದ ಅನುಮತಿ ಅಗತ್ಯ.

ರಾಜ್ಯದಲ್ಲಿ ಸಿಬಿಐ ಮುಕ್ತ ತನಿಖೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ಸಿಬಿಐ ಮುಕ್ತ ತನಿಖೆಗೆ ಅನುಮತಿಯನ್ನು ಹಿಂತೆಗೆದುಕೊಂಡು ಮಹತ್ವದ ತೀರ್ಮಾನ ಮಾಡಲಾಗಿದೆ. ದೆಹಲಿ ಪೊಲೀಸ್‌ ಎಸ್ಟಾಬ್ಲಿಷ್‌ಮೆಂಟ್‌ ಆಕ್ಟ್ ಅಡಿಯಲ್ಲಿ ಕರ್ನಾಟಕದಲ್ಲಿ ಸಿಬಿಐಗೆ ಮುಕ್ತ ತನಿಖೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಇದೀಗ ಈ ಹಿಂದೆ ಹೊರಡಿಸಲಾಗಿದ್ದ ಸಿಬಿಐ ಮುಕ್ತ ತನಿಖೆಯ ಅಧಿಸೂಚನೆಯನ್ನು ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇನ್ನು ಮುಂದೆ ಸಿಬಿಐ ಅಧಿಕಾರಿಗಳು ರಾಜ್ಯದಲ್ಲಿ ಯಾವುದೇ ಪ್ರಕರಣದ ತನಿಖೆ ನಡೆಸಬೇಕಾದರೆ […]

Continue Reading

ಬಿಜೆಪಿಯವರು ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಮೋಸದ ವಿಧಾನಗಳನ್ನು ಅನುಸರಿಸಿ, ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡುತ್ತಿದ್ದಾರೆ: ಕಪಿಲ್ ಸಿಬಲ್

ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ರಾಜ್ಯಪಾಲರ ಒಪ್ಪಿಗೆಯನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದ ಕ್ರಮವನ್ನು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಪ್ರತಿಕ್ರಿಯಿಸಿ, ಬಿಜೆಪಿಯನ್ನು ಟೀಕಿಸಿದ್ದಾರೆ. ಬಿಜೆಪಿಯವರು ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಮತ್ತು ಬೀಳಿಸಲು ಮೋಸದ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ರಾಜ್ಯ ಸರ್ಕಾರಗಳನ್ನು ಉರುಳಿಸಲು ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದು ಒಕ್ಕೂಟ ರಚನೆಗೆ ವಿರುದ್ಧವಾಗಿರುವುದರಿಂದ ಎಲ್ಲ ವಿರೋಧ ಪಕ್ಷಗಳು ಇದರ ವಿರುದ್ಧ ದನಿ ಎತ್ತಬೇಕು. ಈ ರೀತಿಯ ರಾಜ್ಯಪಾಲರನ್ನು ತೆಗೆದುಹಾಕಬೇಕು ಮತ್ತು ಅದರ ವಿರುದ್ಧ ರಾಷ್ಟ್ರೀಯ ಚಳವಳಿಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. […]

Continue Reading

ಸಿದ್ದರಾಮಯ್ಯ ಇನ್ನೂ ಆರೋಪಿಯೂ ಅಲ್ಲ. ಅಪರಾಧಿಯೂ ಅಲ್ಲ.

ಹೈಕೋರ್ಟ್ ಸಿದ್ದರಾಮಯ್ಯರವರ ಅರ್ಜಿ ವಜಾ ಮಾಡಿದ್ದಾರೆಯೇ ಹೊರತು ಸಿದ್ದರಾಮಯ್ಯ ಅವರು ಈ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಿಲ್ಲ. ✍️. ವೈ.ಬಿ.ಚಂದ್ರಕಾಂತ್, ವಕೀಲರು ಶಿವಮೊಗ್ಗ ಮೂಡ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಅಗತ್ಯ ಕಂಡುಬರುವುದಿಲ್ಲ. ಕಾರಣ, ರಾಜಕೀಯ ಕಾರಣಕ್ಕಾಗಿ ಖಾಸಗಿ ವ್ಯಕ್ತಿಗಳು ಮೂಡ ಪ್ರಕಣದ ವಿಚಾರದಲ್ಲಿ ರಾಜ್ಯದ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು. ಮೂಡ ಪ್ರಕರಣದ ಬಗ್ಗೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬೇಕೆಂದು ಕೋರಿದ್ದರಿಂದ ರಾಜ್ಯಪಾಲರು ಖಾಸಗಿ […]

Continue Reading

ಕುಂದಾಪುರ: ದೇವರ ಮೇಲಿನ ಚಿನ್ನಾಭರಣ ಕಳವು ಪ್ರಕರಣ; ಅರ್ಚಕ ನರಸಿಂಹ ಭಟ್ಟನ ಬಂಧನ

264 ಗ್ರಾಂ ತೂಕದ ಚಿನ್ನಾಭರಣವನ್ನು ಕಳವುಗೈದಿರುವ ದೇವಳದ ಅರ್ಚಕ ನರಸಿಂಹ ಭಟ್ ಗಂಗೊಳ್ಳಿ ಗ್ರಾಮದ ಖಾರ್ವಿಕೇರಿ ಶ್ರೀ ಮಹಾಂಕಾಳಿ ದೇವಸ್ಥಾನದ ಭಕ್ತರು ಅರ್ಪಿಸಿದ ಸರಿ-ಸುಮಾರು 264 ಗ್ರಾಂ ತೂಕದ ಚಿನ್ನಾಭರಣವನ್ನು ಕಳವುಗೈದಿರುವ ದೇವಳದ ಅರ್ಚಕ ನರಸಿಂಹ ಭಟ್ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಂಗೊಳ್ಳಿ ಶ್ರೀ ಮಾಹಾಂಕಾಳಿ ಅಮ್ಮನವರ ದೇವಳದಲ್ಲಿ ಅರ್ಚಕರಾಗಿ ಕೆಲಸವನ್ನು ನಿರ್ವಹಿಸಲು ಮಾಸಿಕ ಸಂಬಳದ ಜೋತೆ ವಾಸಕ್ಕೆ ಬಾಡಿಗೆ ಮನೆಯನ್ನು ನೀಡಿ ಅರ್ಚಕ ನರಸಿಂಹ ಭಟ್ ರವರನ್ನು ದೇವಸ್ಥಾನದ ಆಡಳಿತ ಮಂಡಳಿ […]

Continue Reading

ಸಿಎಂ ಸಹಿ ಫೋರ್ಜರಿ ಆರೋಪ; ರೇರ ಅಧ್ಯಕ್ಷ ರಾಕೇಶ್ ಸಿಂಗ್ ವಿರುದ್ಧ ಹೈಕೋರ್ಟ್ ಮೇಲ್ವಿಚಾರಣೆಯಲ್ಲೇ ತನಿಖೆಗೆ ನಿರ್ದೇಶನ ಕೋರಿ ರಾಜ್ಯಪಾಲರಿಗೆ ಸಿಟಿಜನ್ ರೈಟ್ಸ್ ಫೌಂಡೇಶನ್ ದೂರು.

ಬೆಂಗಳೂರು: ಸಾವಿರಾರು ಕೋಟಿ ರೂ ಮೌಲ್ಯದ ಜಮೀನನ್ನು ಅಧಿಕಾರಿಗಳು ಮುಖ್ಯಮಂತ್ರಿ ಸಹಿ ಫೋರ್ಜರಿ ಮೂಲಕ ಡಿನೋಟಿಫೈ ಮಾಡಿದ್ದಾರೆ ಎಂಬ ಆರೋಪ ಬಗ್ಗೆ ಹೈಕೋರ್ಟ್ ಪರಿವೀಕ್ಷಣೆಯಲ್ಲಿ ಸಿಬಿಐ ತನಿಖೆಗೆ ನಿರ್ದೇಶನ ನೀಡಬೇಕೆಂದು ಕೋರಿ ಸಿಟಿಜನ್ ರೈಟ್ಸ್ ಫೌಂಡೇಶನ್ ರಾಜ್ಯಪಾಲರಿಗೆ ದೂರು ನೀಡಿದೆ. ಸಾರ್ವಜನಿರ ಸಮಸ್ಯೆಗಳಿಗೆ ಸ್ಪಂಧಿಸುತ್ತಾ, ಜನರ ಹಿತಾಸಕ್ತಿ ಸಂಬಂಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ, ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಕಾನೂನು ಹೋರಾಟ ನಡೆಸುತ್ತಾ ಸಾಮಾಜಿಕ ಹಿತಾಸಕ್ತಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ‘ಸಿಟಿಜನ್ ರೈಟ್ಸ್ ಫೌಂಡೇಷನ್’, ಇದೀಗ ರಾಜ್ಯ ಸರ್ಕಾರದ ಅಧಿಕಾರಿಗಳು […]

Continue Reading

ಬೆಳಗಾವಿ ಪಾಲಿಕೆಗೆ ಚಾಟಿ ಬೀಸಿದ ಹೈಕೋರ್ಟ್; ಹೈಕೋರ್ಟ್ ನಿರ್ದೇಶನದಂತೆ ಭೂ ಮಾಲಕರಿಗೆ ಜಾಗ ಹಸ್ತಾಂತರ

ಭೂಸ್ವಾಧೀನ ಮಾಡಿಕೊಳ್ಳದೇ, ಪರಿಹಾರ ನೀಡದೆ ಖಾಸಗಿ ಜಮೀನಿನಲ್ಲಿ ರಸ್ತೆ ಬೆಳಗಾವಿ ನಗರದಲ್ಲಿ ರಸ್ತೆ ಅಗಲೀಕರಣದಲ್ಲಿ ಭೂಸ್ವಾಧೀನ ಮಾಡಿಕೊಳ್ಳದೇ ರಸ್ತೆ ನಿರ್ಮಿಸಿರುವುದು ಹಲವು ವಿವಾದಕ್ಕೆ ಕಾರಣವಾಗಿತ್ತು. ಪಾಲಿಕೆಗೆ ಹೈ ಕೋರ್ಟ್ ಚಾಟಿ ಬೀಸಿದ ಬಳಿಕ ಜಾಗವನ್ನು ಮತ್ತೆ ಭೂ ಮಾಲೀಕರಿಗೆ ಹಸ್ತಾಂತರ ಮಾಡುವ ಮೂಲಕ ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಿದ್ದಾರೆ. ಈ ಮೊದಲು ಜಾಗದ ವಿವಾದದ ವಿಚಾರಣೆ ಹೈಕೋರ್ಟಿನಲ್ಲಿ ನಡೆಯುತ್ತಿರುವಾಗ ನ್ಯಾಯಾಲಯ ಪರಿಹಾರ ಕೊಡಲು 20 ಕೋಟಿ ರೂ ಗಳನ್ನು ಉಪ ವಿಭಾಗಾಧಿಕಾರಿಗಳ ಬಳಿ ಡಿಪಾಜಿಟ್ ಮಾಡುವಂತೆ […]

Continue Reading

ಹೈಕೋರ್ಟಿನ ನ್ಯಾಯಮೂರ್ತಿ ಶ್ರೀಶಾನಂದ‌ ರವರ ಹೇಳಿಕೆ ವಿವಾದ; ಜಾಗೃತ ನಾಗರಿಕರು ಕರ್ನಾಟಕ ಮತ್ತು ವಕೀಲರ ಸಂಘಟನೆಯಿಂದ ಸಿ.ಜೆ ಗೆ ಪತ್ರ

ಹೈಕೋರ್ಟಿನ ನ್ಯಾಯಮೂರ್ತಿಗಳಾದ ವಿ. ಶ್ರೀಶಾನಂದ‌ ಅವರು ನ್ಯಾಯಾಲಯದ ಕಲಾಪದ ವೇಳೆ ನಿರ್ದಿಷ್ಟ ಸಮುದಾಯ ಮತ್ತು ಮಹಿಳಾ ವಕೀಲರನ್ನು ಉದ್ದೇಶಿಸಿ ಮಾಡಿರುವ ಹೇಳಿಕೆಗಳಿಗೆ ವಿವಾದದ ಕಿಡಿ ಹೊತ್ತಿಕೊಂಡಿದೆ. ಈಗಾಗಲೇ ಈ ಬಗ್ಗೆ ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿಗಳ ನೇತೃತ್ವದ ಪೀಠ ಸ್ವಯಂಪ್ರೇರಿತ ವಿಚಾರಣೆಗೆ ಚಾಲನೆ ನೀಡಿದೆ. ಈ ನಡುವೆ ʼಜಾಗೃತ ನಾಗರಿಕರು ಕರ್ನಾಟಕʼ ಸಂಘಟನೆ ಹಾಗೂ ರಾಜ್ಯ ವಕೀಲರ ಸಂಘಗಳು ನ್ಯಾಯಮೂರ್ತಿಗಳ ಹೇಳಿಕೆಗೆ ಆತಂಕ ವ್ಯಕ್ತಪಡಿಸಿವೆ. ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ನಗರದ ಮುಸ್ಲಿಂ ಸಮುದಾಯ ಹೆಚ್ಚಾಗಿ ಇರುವ ಸ್ಥಳವನ್ನು ಭಾರತವಲ್ಲ ಪಾಕಿಸ್ತಾನ […]

Continue Reading

ಸಾರ್ವಜನಿಕರ ಭೇಟಿ, ಅವರ ಕುಂದುಕೊರತೆ ನಿವಾರಿಸುವುದು ಕಡ್ಡಾಯ. ಅ ಸಮಯಲ್ಲಿ ಯಾವುದೇ ಸಭೆಗಳನ್ನು ನಡೆಸದಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಖಡಕ್ ಆದೇಶ

ಇನ್ಮುಂದೆ ಸಾರ್ವಜನಿಕರನ್ನು ಭೇಟಿ ಮಾಡಲು, ಅವರ ಕುಂದುಕೊರತೆಯನ್ನು ನಿವಾರಿಸುವುದು ಕಡ್ಡಾಯವಾಗಿದೆ. ಈ ಸಮಯಲ್ಲಿ ಯಾವುದೇ ಸಭೆಗಳನ್ನು ನಡೆಸದಂತೆ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಖಡಕ್ ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ಸುತ್ತೋಲೆ ಹೊರಡಿಸಿರುವಂತ ಅವರು,ಜನಸ್ಪಂದನ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ನಾಗರೀಕರು ಅವರ ಅಹವಾಲುಗಳೊಂದಿಗೆ ಬರುತ್ತಿರುವುದರಿಂದ ಹಿರಿಯ ಅಧಿಕಾರಿಗಳು ಎಲ್ಲಾ ಹಂತಗಳಲ್ಲಿ ಅರ್ಜಿದಾರರಿಗೆ ನಿಯಮಿತವಾಗಿ ಆಲಿಸಿದರ ಮಾತ್ರ ಕುಂದುಕೊರತೆಗಳನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಾಗುವುದು ಎಂದಿದ್ದಾರೆ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು / ಪ್ರಧಾನ ಕಾರ್ಯದರ್ಶಿಗಳು […]

Continue Reading

ರೈಸ್ ಪುಲ್ಲಿಂಗ್ ಚೆಂಬು ತೋರಿಸಿ ಉದ್ಯಮಿಗೆ ಎಕರೆಗಟ್ಟಲೇ ಜಮೀನು ವಂಚನೆ; ಸಿಸಿಬಿಯಲ್ಲಿ ದೂರು ದಾಖಲು

ರೈಸ್ ಪುಲ್ಲಿಂಗ್ ಚೆಂಬು ತೋರಿಸಿ ಉದ್ಯಮಿಗೆ ಎಕರೆಗಟ್ಟಲೇ ಜಮೀನು ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು 6 .58 ಎಕರೆ ಜಮೀನು ಬರೆಸಿಕೊಂಡು ಬೋರ್ ವೆಲ್ ಉದ್ಯಮಿ ಕಾಂತರಾಜು ಎಂಬವರಿಗೆ ವಂಚಸಿದ್ದಾರೆ. ನಾಗರತ್ನ, ರಾಮಚಂದ್ರ, ಸುಕುಮಾರ್ ಹಾಗೂ ನಟೇಶ್ ಎಂಬುವವರಿಂದ ವಂಚನೆ ವಂಚನೆ ಸಂಬಂಧ ಸಿಸಿಬಿಯಲ್ಲಿ ಉದ್ಯಮಿ ಕಾಂತರಾಜು ದೂರು ದಾಖಲಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಉದ್ಯಮಿ ಕಾಂತರಾಜುರವರನ್ನು ನಂಬಿಸಿದ ಆರೋಪಿಗಳು ಹಂತ ಹಂತವಾಗಿ ಜಮೀನು ಬರೆಸಿಕೊಂಡಿರುತ್ತಾರೆ. ಉದ್ಯಮಿ ಕಾಂತರಾಜು ಅಂಡರ್ ವಾಟರ್ ಹಾಗೂ ಕ್ರೂಡಾಯಿಲ್ ಪತ್ತೆ […]

Continue Reading

ಮೈಸೂರು: ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಅಥ್ಲೆಟಿಕ್ ಕ್ರೀಡಾಕೂಟದ 400 ಮೀಟರ್ ಹರ್ಡಲ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಉಜಿರೆ ಎಸ್ ಡಿ ಎಮ್ ಕಾಲೇಜಿನ ವಿಧ್ಯಾರ್ಥಿನಿ ಚಂದ್ರಿಕಾ

ಮೈಸೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 400 ಮೀಟರ್ ಹರ್ಡಲ್ಸ್ ನಲ್ಲಿ ಉಜಿರೆ ಎಸ್ ಡಿ ಎಮ್ ಕಾಲೇಜ್ ನ ವಿಧ್ಯಾರ್ಥಿನಿ ಚಂದ್ರಿಕಾ ಇವರು ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಅಂಕಾಜೆ ನಿವಾಸಿ ದಿ.ಮೋಹನ್ ಪೂಜಾರಿ ಮತ್ತು ಯಶೋಧ ದಂಪತಿಗಳ ಪ್ರಥಮ ಪುತ್ರಿ ಚಂದ್ರಿಕಾ ಇವರು ಪ್ರಾಥಮಿಕ ಶಾಲಾ ಹಂತದಲ್ಲಿಯೇ ಹಲವಾರು ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇವರು 2022-23 ಸಾಲಿನ ಕೇರಳ ಕೊಚ್ಚಿಯಲ್ಲಿ […]

Continue Reading