ಒಂದು ಕಡೆ ತಮ್ಮದು ಗ್ಯಾರಂಟಿ ಭಾಗ್ಯಗಳ ಸರಕಾರ, ಜನಪರ ಸರಕಾರ ಅನ್ನುತ್ತಿದೆ; ಇನ್ನೊಂದು ಕಡೆ ಜನಸಾಮಾನ್ಯರನ್ನು ಅಲೆದಾಡಿಸುತ್ತಿದೆ.!

ಕಟ್ಟಡ ನಿರ್ಮಾಣ ಅನುಮೋದನೆ ಗ್ರಾ.ಪಂ, ತಾ.ಪಂ ಗಿಲ್ಲ, ಇನ್ನು ಜಿಲ್ಲಾ ಕೇಂದ್ರದ ಹೆಗಲಿಗೆ; ನಾಗರೀಕರ ಪರದಾಟಕ್ಕೆ ಸರಕಾರ ತೀರ್ಮಾನ ಇನ್ಮುಂದೆ ಗ್ರಾಮಾಂತರ ಪ್ರದೇಶಗಳಲ್ಲಿ ತಾಲೂಕು ಪಂಚಾಯತ್ ನೀಡುತ್ತಿದ್ದ ಏಕ ಹಾಗೂ ಬಹು ನಿವೇಶನ ವಿನ್ಯಾಸ ಅನುಮೋದನೆಯನ್ನು ಸರಕಾರದ ನೂತನ ನಿಯಮಾವಳಿಯಂತೆ ಜಿಲ್ಲಾ ಕೇಂದ್ರದಲ್ಲಿರುವ ನಗರ ಹಾಗೂ ಗ್ರಾಮಾಂತರ ಯೋಜನಾ ನಿರ್ದೇಶಕರ ಕಚೇರಿಯಿಂದಲೇ ಪಡೆಯಬೇಕು ಎಂಬ ನಿಯಮದ ಬಗ್ಗೆ ಸಾರ್ವಜನಿಕ ವಲಯಗಳಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಜನಸಾಮಾನ್ಯರು ಕಟ್ಟಡ ನಿರ್ಮಿಸಲು, ಮನೆ ಕಟ್ಟಲು 9|11 ದೊರೆಯಲು ಆಗಬೇಕಾದ ವಿನ್ಯಾಸವನ್ನು […]

Continue Reading

ಪೊಲೀಸ್ ವರ್ಗಾವಣೆ ಕಾಯಿದೆ ತಕ್ಷಣದಿಂದಲೇ ಜಾರಿ; ರಿಯಲ್‌ ಎಸ್ಟೇಟ್‌, ಸಿವಿಲ್‌ ವಿಚಾರಗಳಲ್ಲಿ ಪೊಲೀಸರು ಮಧ್ಯಪ್ರವೇಶ ಮಾಡಿದರೆ ತಕ್ಷಣ ಕ್ರಮ: ಗೃಹ ಸಚಿವರು

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅದಕ್ಕಿಂತ ಕೆಳ ಹಂತದ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಕನಿಷ್ಠ ಎರಡು ವರ್ಷ ಕಾಲಾವಕಾಶ ನಿಗದಿಪಡಿಸಿರುವ ‘ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕ-2024’ ಮೇಲ್ಮನೆಯಲ್ಲಿ ಅಂಗೀಕಾರಗೊಂಡಿತು. ಗೃಹ ಸಚಿವ ಡಾ.ಜಿ ಪರಮೇಶ್ವರ್ ಪರ್ಯಾಲೋಚನೆಗೆ ಕೋರಿದ ಬಳಿಕ 17 ಸದಸ್ಯರು ಚರ್ಚೆ ನಡೆಸಿದ ಬಳಿಕ ಅನುಮೋದನೆ ನೀಡಲಾಯಿತು. “ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲರ ಒಪ್ಪಿಗೆ ದೊರೆತು, ರಾಜ್ಯಪತ್ರದಲ್ಲಿ ಪ್ರಕಟವಾಗುತ್ತಿದ್ದಂತೆಯೇ ಅದು ಜಾರಿಗೆ ಬರಲಿದೆ” ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು. “ಕಾಯಿದೆ ಪ್ರಕಾರ ಕನಿಷ್ಠ […]

Continue Reading

ಮೂಡಿಗೆರೆ ಮಾಳಿಗನಾಡು ಹೆಬ್ಬಾರ್ ಮನೆ ದರೋಡೆ ಪ್ರಕರಣದ ಆರೋಪಿಗಳ ಬಂಧನ; 5 ಲಕ್ಷ ರೂ ನಗದು, ಚಿನ್ನದ ಸರ ವಶ

ಮೂಡಿಗೆರೆ : ಜಾವಳಿ ಸಮೀಪದ ಜೆ.ಹೊಸಹಳ್ಳಿಯಲ್ಲಿ ಫೆ.೧೫ರ ಗುರುವಾರ ರಾತ್ರಿ ಸುಮಾರು ೮ ಗಂಟೆ ಸಮಯದಲ್ಲಿ ದರೋಡೆಕೋರರು ಒಂಟಿಮನೆಯ ಅನಂತರಾಮ್ ಹೆಬ್ಬಾರ್ ಎಂಬುವವರ ಮನೆಗೆ ನುಗ್ಗಿದ ನಾಲ್ವರು ಅಪರಿಚಿತ ಯುವಕರು ತಂಡ ಮನೆಯ ಮೇಲೆ ದಾಳಿ ನಡೆಸಿ ಮನೆ ಮಾಲೀಕನ ಕುತ್ತಿಗೆಗೆ ಹರಿತವಾದ ಲಾಂಗ್ ಇಟ್ಟು ಬೆದರಿಸಿ ಮನೆಯಲ್ಲಿದ್ದ ಸುಮಾರು ರೂ ೫ಲಕ್ಷ ನಗದು ಸೇರಿದಂತೆ ಚಿನ್ನದ ಸರ ದರೋಡೆ ಮಾಡಿ ಪರಾರಿಯಾಗಿದ್ದರು. ಈ ವೇಳೆ ಮನೆಯ ಕೆಲಸದವರಾದ ಶ್ರೀನಿವಾಸ ಮೂರ್ತಿ ದರೋಡೆಗೆ ಅಡ್ಡಿ ಪಡಿಸಿದಾಗ ಅವರ […]

Continue Reading

ಖಾಸಗಿ ಆಸ್ಪತ್ರೆಗಳು ಸಾರ್ವಜನಿಕರಿಗೆ, ರೋಗಿಗಳಿಗೆ ಕಾಣುವ ರೀತಿಯಲ್ಲಿ ದರ ಪಟ್ಟಿ ಪ್ರಕಟಿಸುವುದು ಕಡ್ಡಾಯ: ಆರೋಗ್ಯ ಸಚಿವರು

ಖಾಸಗಿ ಆಸ್ಪತ್ರೆಗಳು ಸಾರ್ವಜನಿಕರು ಅಥವಾ ರೋಗಿಗಳಿಗೆ ಕಾಣುವ ರೀತಿಯಲ್ಲಿ ಹೊರಭಾಗದಲ್ಲಿ ದರ ಪಟ್ಟಿ ಪ್ರಕಟಿಸುವುದನ್ನು ಕಡ್ಡಾಯ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಆದೇಶ ಪಾಲನೆ ಮಾಡದ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ನೀಡಿ ಸೀಜ್ ಮಾಡುವ ಬಗ್ಗೆಯೂ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಈಗಾಗಲೇ ಯಾವ ಚಿಕಿತ್ಸೆಗೆ ಎಷ್ಟು ದರ ಎಂಬುದು ನಿಗದಿಯಾಗಿದೆ. ಅದರ ಬಗ್ಗೆ ಆಸ್ಪತ್ರೆಯ ಆವರಣದಲ್ಲಿ ಸಾರ್ವಜನಿಕರಿಗೆ ತೋರುವ ರೀತಿಯಲ್ಲಿ ಬೋರ್ಡ್ ಹಾಕಬೇಕು ಎಂದು ನಿರ್ದೇಶನ ನೀಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಂದ […]

Continue Reading

ಅಪ್ರಾಪ್ತ ಮಗಳ ಮೇಲೆಯೇ ತಂದೆಯಿಂದ ನಿರಂತರ ನಾಲ್ಕು ವರ್ಷಗಳ ಕಾಲ ಅತ್ಯಾಚಾರ; ಬಾಲಕಿ ಗರ್ಭಿಣಿ, ತಂದೆಯ ಬಂಧನ

ಜನ್ಮದಾತನೇ ತನ್ನ ಅಪ್ರಾಪ್ತ ಮಗಳ ಮೇಲೆಯೇ ನಿರಂತರ ನಾಲ್ಕು ವರ್ಷಗಳ ಕಾಲ ಅತ್ಯಾಚಾರ ಎಸಗಿ ಇದೀಗ ಬಾಲಕಿ ಗರ್ಭಿಣಿಯಾಗಿರುವ ಹೇಯ ಕೃತ್ಯ ಮುಂಬೈನಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಸಂತ್ರಸ್ತೆ ಬಾಲಕಿಯ ಹೇಳಿಕೆ ಪ್ರಕಾರ, 2020 ರಿಂದ 2023ರ ನಡುವೆ ತನ್ನ ತಾಯಿ ಕೆಲಸಕ್ಕಾಗಿ ಹೊರಗಡೆ ಹೋದಾಗ ತಂದೆ ತನ್ನ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ ಎಂದು ಹೇಳಿದ್ದಾಳೆ. ಬಾಲಕಿಯನ್ನು ವೈದ್ಯರನ್ನು ಭೇಟಿ ಮಾಡಿದ ಬಳಿಕ ಆಕೆ 5 ತಿಂಗಳ ಗರ್ಭಿಣಿ ಎಂದು ತಿಳಿಸಿದ್ದಾರೆ. ಈ ಸಂಬಂಧ […]

Continue Reading

ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ವಿಧಾನಸಭೆಯಲ್ಲಿ ನೀಡಿದ ಹೇಳಿಕೆಯಿಂದ ಭಜರಂಗದಳ ಕಲಿಯಬೇಕಾಗಿರೋದು ಸಾಕಷ್ಟಿದೆ.

ಭಜರಂಗದಳದ ಯುವಕರೇ ಓದಿ… ಇದು ನಿಮ್ಮದೇ ಆತ್ಮಕತೆ..! ✍️. ನವೀನ್ ಸೂರಿಂಜೆ, ಪತ್ರಕರ್ತ “ನಾನು ಗೃಹ ಸಚಿವನಾಗಿದ್ದಾಗ ನನಗೂ ಇಂತದ್ದೇ ಪರಿಸ್ಥಿತಿ ಬಂದಿತ್ತು. ಮಂಗಳೂರಿನ ಪಬ್ ನಲ್ಲಿ ಭಜರಂಗದಳದ ಕಾರ್ಯಕರ್ತರು ನುಗ್ಗಿ ಹೆಣ್ಣು ಮಕ್ಕಳಿಗೆ ಹೊಡೆದ್ರು ಅಂತ ಇದೇ ಸದನದಲ್ಲಿ ದೊಡ್ಡ ಗಲಾಟೆಯಾಯಿತು. ವಿಧಾನಸಭೆ, ವಿಧಾನಪರಿಷತ್ ನೊಳಗೆ ಧರಣಿ ಆಯ್ತು. ಆ ಸಂದರ್ಭದಲ್ಲಿ ನಾನು ಹಿಂದೆ ಮುಂದೆ ನೋಡಲಿಲ್ಲ. ನನಗೂ ಬಹಳ ಒತ್ತಡ ಇತ್ತು. ಆದರೂ ಭಜರಂಗದಳದ ಕಾರ್ಯಕರ್ತರ ಮೇಲೆ ಗೂಂಡಾ ಅ್ಯಕ್ಟ್ ಹಾಕಿದೆ. ಆ ರೀತಿಯ […]

Continue Reading

ಕರ್ನಾಟಕ ವೃತ್ತಿಪರ ಸಿವಿಲ್‌ ಎಂಜಿನಿಯರುಗಳ ಪರಿಷತ್ತ್ ರಚನೆಗೆ, ಕರ್ನಾಟಕ ವೃತ್ತಿಪರ ಸಿವಿಲ್‌ ಎಂಜಿನಿಯರ್‌ಗಳ ಮಸೂದೆ-2024 ಅಂಗೀಕಾರ

ಕರ್ನಾಟಕ ವೃತ್ತಿಪರ ಸಿವಿಲ್‌ ಎಂಜಿನಿಯರುಗಳು ಪರಿಷತ್ತನ್ನು ರಚಿಸುವುದಕ್ಕಾಗಿ ಕರ್ನಾಟಕ ವೃತ್ತಿಪರ ಸಿವಿಲ್‌ ಎಂಜಿನಿಯರ್‌ಗಳ ಮಸೂದೆ-2024ಕ್ಕೆ ವಿಧಾನಸಭೆಯಲ್ಲಿ ಬುಧವಾರ ಅಂಗೀಕಾರ ನೀಡಲಾಯಿತು. ಇನ್ನು ಮುಂದೆಕ್ಕೆ ವೃತ್ತಿಪರ ಸಿವಿಲ್‌ ಎಂಜಿನಿಯರ್‌ಗಳು ಈ ಪರಿಷತ್ತಿನಡಿ ನೋಂದಾಯಿತರಾಗಬೇಕು.ಪ್ರಮಾಣಪತ್ರ ಹೊಂದಿದ ಎಂಜಿನಿಯರ್‌ಗಳು ಪ್ರಮಾಣೀಕರಿಸಿದ ವಿನ್ಯಾಸ, ಕಟ್ಟಡಗಳನ್ನು ಮಾತ್ರ ಅಧಿಕೃತ ಎಂದು ಪರಿಗಣಿಸಲಾಗುತ್ತದೆ. ಕೇವಲ ಸಿವಿಲ್‌ ಎಂಜಿನಿಯರಿಂಗ್‌ ಕ್ಷೇತ್ರದ ಅನುಭವ ಆಧರಿಸಿ ಕಾರ್ಯ ನಿರ್ವಹಿಸುವಂತಿಲ್ಲ. ಹಾಗೊಂದು ವೇಳೆ ಮಾಡಿದ್ದೇ ಆದರೆ, ಅಂತಹ ಆರೋಪ ಸಾಬೀತಾದರೆ 6 ತಿಂಗಳವರೆಗೆ ಜೈಲುಶಿಕ್ಷೆ ಮತ್ತು 50 ಸಾವಿರ ರೂ.ವರೆಗೆ ಜುಲ್ಮಾನೆ […]

Continue Reading

ರಾಜ್ಯದಲ್ಲಿ ಬಿಜೆಪಿಗೆ ಬಿಗ್ ಶಾಕ್ ನೀಡಲಿರುವ ಇಬ್ಬರು ಶಾಸಕರು; ಕಾಂಗ್ರೆಸ್ ಸೇರ್ಪಡೆಗೆ ರೆಡಿ.!

ಲೋಕಸಭಾ ಚುನಾವಣೆ ವೇಳೆ ರಾಜ್ಯ ಬಿಜೆಪಿಗೆ ದೊಡ್ಡ ಆಘಾತ ಎದುರಾಗಿದೆ. ಇಬ್ಬರು ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷದ ಕದ ತಟ್ಟುತ್ತಿದ್ದು, ಪಕ್ಷಕ್ಕೆ ಸೇರಲು ಎಲ್ಲಾ ತಯಾರಿ ರೆಡಿ ಆಗಿದೆ ಎನ್ನಲಾಗುತ್ತಿದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಬಳಿಕ ಕಾಂಗ್ರೆಸ್ ಪರ ಅಲೆ ಜೋರಾಗಿದೆ ಎನ್ನುವ ಲೆಕ್ಕಾಚಾರದೊಂದಿಗೆ ಇಬ್ಬರು ಬಿಜೆಪಿಯ ಪ್ರಮುಖ ಶಾಸಕರು ಕಾಂಗ್ರೆಸ್‌ಗೆ ವಾಪಸ್ ಮರಳಲು ಪ್ಲಾನ್ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಅವರಿಬ್ಬರ ಮನವೊಲಿಸಲು ಪ್ರಯತ್ನಿಸಿದ್ದು, ಅದು ಏನೂ ಪ್ರಯೋಜನ ನೀಡಿಲ್ಲ ಎಂದು ತಿಳಿದುಬಂದಿದೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದ […]

Continue Reading

ದಲಿತರ ಭೂ ದಾಖಲೆಗಳ ನಾಶ, ಅಕ್ರಮ ಒತ್ತುವರಿ ತೆರವು ಆಗ್ರಹಿಸಿ, ಭೂ ಸಂಘರ್ಷ ಸಮಿತಿ ವತಿಯಿಂದ ಪೆ. 22,23 ರಂದು ಅಹೋರಾತ್ರಿ ಧರಣಿ: ಸಂಚಾಲಕ ಬಿ.ರುದ್ರಯ್ಯ

ಮೂಡಿಗೆರೆ : ದಲಿತರ ಭೂ ಮಂಜೂರಾತಿ ದಾಖಲೆಗಳನ್ನು ನಾಶಪಡಿಸಿರುವುದರ ಬಗ್ಗೆ ತನಿಖೆ ಆಗುವಂತೆ, ದಲಿತರ ಮಂಜೂರಾತಿ ಭೂಮಿಯ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಲು ಜನಪ್ರತಿನಿದಿಗಳು ಹಾಗೂ ಆಡಳಿತ ನಿರ್ಲಕ್ಷವಹಿಸಿದ್ದು ಮತ್ತು ಹತ್ತು ಹಲವಾರು ಹಕ್ಕೋತ್ತಾಯಗಳನ್ನು ಒತ್ತಾಯಿಸಿ ಭೂ ಸಂಘರ್ಷ ಸಮಿತಿವತಿಯಿಂದ ಪೆ.22,23ರಂದು ಅಹೋರಾತ್ರಿ ಧರಣಿ ನಡೆಸುವುದಾಗಿ ಸಮಿತಿಯ ಸಂಚಾಲಕ ಬಿ.ರುದ್ರಯ್ಯ ತಿಳಿಸಿದ್ದಾರೆ. ಈ ಬಗ್ಗೆ ಪತ್ರಕರ್ತರಿಗೆ ಮಾಹಿತಿ ನೀಡಿದ ಅವರು. ಡಾ.ಬಿ.ಆರ್ ಅಂಬೇಡ್ಕರ್‌ರವರ ಪ್ರಕಾರ ಭೂಮಿಯನ್ನು ರಾಷ್ಟ್ರೀಕರಿಸಿ ಉಳುವವರಿಗೆ ಊಳಬಹುದಾದ ಭೂಮಿಯನ್ನು ನೀಡಬೇಕು ಎಂಬ ಆಶಯದಂತೆ ರೈತ ಬಂಡಾಯಗಳು, […]

Continue Reading

ದಲಿತ ಸಂಘರ್ಷ ಸಮಿತಿ ಮತ್ತು ವಕೀಲರ ನಡುವೆ ಮಾತಿನ ಚಕಮಕಿ ಐಜೂರು ಪಿಎಸೈ ತನ್ವೀರ್ ಹುಸೇನ್ ಅಮಾನತ್ತಿಗೆ ಒತ್ತಾಯ.

ಇತ್ತೀಚೆಗೆ ರಾಮನಗರದಲ್ಲಿ ವಕೀಲರ ಸಂಘದ ಕಚೇರಿಗೆ ಬೇಟಿ ನೀಡಿದ ದಲಿತ ಸಂಘರ್ಷ ಸಮಿತಿಯ ಕೆಲವು ಪಧಾಧಿಕಾರಿಗಳ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆಂದು 40 ಮಂದಿ ವಕೀಲರ ವಿರುದ್ದ ದಲಿತ ದೌರ್ಜನ್ಯದಡಿಯಲ್ಲಿ ರಾಮನಗರದ ಐಜೂರು ಪೊಲೀಸ್ ಠಾಣೇಯಲ್ಲಿ ಪ್ರಕರಣ ದಾಖಲಿಸುವಂತೆ ದೂರು ಸಲ್ಲಿಸಿದ್ದರು. ಆದರೇ ದಿಢೀರ್ ಪ್ರಕರಣ ದಾಖಲಿಸದ ಪಿಎಸೈ ತನ್ವೀರ್ ಹುಸೇನ್ ವಿರುದ್ದ ದಲಿತ ಸಂಘರ್ಷ ಸಮಿತಿ ರಾಮನಗರ ಎಸ್ ಪಿ ಗೆ ದೂರು ಸಲ್ಲಿಸಿದ್ದರು. ಎಸ್ ಪಿ ಮಾರ್ಗದರ್ಶನದಲ್ಲಿ ರಾಮನಗರದ ವಕೀಲರ ಸಂಘದ ಕಚೇರಿಯಲ್ಲಿದ್ದ 40 […]

Continue Reading